ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯ ಉದಯಿಸುವ ನಾಡಲ್ಲಿ ಹಬ್ಬವೋ ಹಬ್ಬ

By Mahesh
|
Google Oneindia Kannada News

FIFA WC 2010, Holland, Japan enter knock-out stage
ಕೇಪ್ ಟೌನ್\ರುಸ್ಟೆನ್ ಬರ್ಗ್, ಜೂ.25: ಫೀಫಾ ವಿಶ್ವಕಪ್ ನ ಈ ಗುಂಪಿನ ಮಹತ್ವದ ಪಂದ್ಯದಲ್ಲಿ ಡೆನ್ಮಾರ್ಕ್ ಗೆ ಸೋಲಿಸಿದ ಜಪಾನ್ ತಂಡದವರು16 ಹಂತ ತಲುಪಿದ ಸಾಧನೆ ಮೆರೆದರು. ಇನ್ನೊಂದು ಪಂದ್ಯದಲ್ಲಿ ಕೆಮರೂನ್ ಅನ್ನು ಸೋಲಿಸಿದ ಹಾಲೆಂಡ್ ಕೂಡ ನಾಕೌಟ್ ಹಂತಕ್ಕೆ ಕಾಲಿರಿಸಿದೆ.

ಪಂದ್ಯದ 17 ನೇ ನಿಮಿಷದಲ್ಲಿ ಕೈಸುಕಿ ಹೋಂಡಾ ಅದ್ಭುತ ಫ್ರೀಕಿಕ್ ಮೂಲಕ ಗೋಲುಗಳಿಸಿ, ಗೆಲುವಿಗೆ ಅಡಿಪಾಯ ಹಾಕಿದರು. ನಂತರ 29 ನೇ ನಿಮಿಷದಲ್ಲಿ ಎಂಡೋ ಮತ್ತೊಂದು ಗೋಲು ಬಾರಿಸಿ ಡೆನ್ಮಾರ್ಕ್ ಗೆ ನಡುಕ ಹುಟ್ಟಿಸಿದರು. ದ್ವಿತೀಯಾರ್ಧದಲ್ಲಿ ಮೈಚಳಿ ಬಿಟ್ಟು ಆಡಲು ಶುರುಮಾಡಿದ ಡೆನ್ಮಾರ್ಕ್ ಮೊದಲ ಗೋಲು ಹೊಡೆಯಲು 80 ನೇ ನಿಮಿಷದವರೆಗೂ ಕಾಯಬೇಕಾಯಿತು.

ಆಗಲೇ, ಗೆಲುವಿನ ಓಟ ಓಡುತ್ತಿದ್ದ ಜಪಾನ್ ಸಮುರಾಯ್ ಗಳು 87 ನೇನಿಮಿಷದಲ್ಲಿ ಮತ್ತೊಂದು ಗೋಲುಗಳಿಸಿ 16 ಹಂತಕ್ಕೆ ಅರ್ಹತೆ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ 'ಈ' ಗುಂಪಿನ ಅಗ್ರಸ್ಥಾನ ಪಡೆದಿರುವ ಹಾಲೆಂಡ್, ಅಫ್ರಿಕನ್ ಎದುರಾಳಿ ಕೆಮರೂನ್ ವಿರುದ್ಧ 2-1 ಅಂತರದಲ್ಲಿ ಗೆಲುವು ಸಾಧಿಸಿತು.ಹಾಲೆಂಡ್ ಪರ36ನೇ ನಿಮಿಷದಲ್ಲಿ ವಾನ್ ಪರ್ಸಿ, 83ನೇ ನಿಮಿಷದಲ್ಲಿ ಹಂಟೆಲಾರ್ ಗೋಲುಗಳಿಸಿದರು.

ನೈಜಿರಿಯಾದಂತೆ ಕೆಮರೂನ್ ಗೆ ಕೂಡ ಈ ಬಾರಿಯ ವಿಶ್ವಕಪ್ ದುಃಸ್ವಪ್ನವಾಗಿ ಕಾಡಲಿದೆ. ಸ್ಯಾಮುಯಲ್ ಎಟೋನಂತಹ ಸಮರ್ಥ ಆಟಗಾರನ ಸಾರಥ್ಯವಿದ್ದರೂ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಕೆಮರೂನ್ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಿತು.

16 ರ ಹಂತದ ಪಂದ್ಯಗಳು :'ಈ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಜಪಾನ್ ಜೂನ್. 29 ರಂದು ಪರುಗ್ವೆ ವಿರುದ್ಧ ಸೆಣಸಲಿದೆ. ಜೂ.28 ರಂದು ಹಾಲೆಂಡ್, ಸ್ಲೊವಾಕಿಯಾ ವಿರುದ್ಧ ಆಡಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X