ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ನಿಷೇಧ: ಫ್ರಾನ್ ನಂತರ ಕೆನಡಾ ಸರದಿ

By Mahesh
|
Google Oneindia Kannada News

Burka ban in Canada
ಟೊರಾಂಟೋ,ಮಾ. 29: ಉದ್ದೇಶಿತ ಬುರ್ಖಾ ನಿಷೇಧ ಪ್ರಸ್ತಾವವನ್ನು ಕೆನಡಾ ದೇಶದ ಜನತೆ ಅವಿರೋಧವಾಗಿ ಬೆಂಬಲಿಸಿದ್ದಾರೆ. ಇದರೊಂದಿಗೆ ಫ್ರಾನ್ಸ್‌ನ ಬಳಿಕ ಬುರ್ಖಾ ನಿಷೇಧಿಸಿದ ದೇಶವೆಂದು ಕೆನಡಾ ಗುರುತಿಸಿಕೊಳ್ಳಲಿದೆ.

ಮೊಂಟ್ರಿಯಲ್‌ನಲ್ಲಿನ ಫ್ರೆಂಚ್ ತರಗತಿಯಲ್ಲಿ ಈಜಿಪ್ಟ್‌ನಿಂದ ವಲಸೆ ಬಂದ ಮಹಿಳೆಯೊಬ್ಬಳು ಬುರ್ಖಾ ತೆಗೆಯಲು ನಿರಾಕರಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆನಡಾ, ಯಾರು ಬುರ್ಖಾ ತೆಗೆಯಲು ಒಪ್ಪುವುದಿಲ್ಲವೋ ಅಂತಹವರಿಗೆ ಸರಕಾರಿ ಸೇವೆ, ಶಾಲೆ-ಕಾಲೇಜು, ಆರೋಗ್ಯ ಕೇಂದ್ರಗಳಲ್ಲಿ ಪ್ರವೇಶ ನೀಡಲಾಗದೆಂದು ಘೋಷಿಸಿದೆ.

ಕಳೆದ ವಾರಾಂತ್ಯಕ್ಕೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಬುರ್ಖಾ ನಿಷೇಧಕ್ಕೆ ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳು ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಬುರ್ಖಾ ಸಮಾಜದ ಉದಾರ ಮತ್ತು ಸೆಕ್ಯುಲರ್ ಮೌಲ್ಯಗಳಿಗೆ ವಿರುದ್ಧ ಎಂಬುದಾಗಿ ವಿವಾದ ಉಂಟಾದ ಕ್ಯೂಬೆಕ್ ಪ್ರಾಂತದ ಶೇ.95ಕ್ಕೂ ಅಧಿಕ ಮಂದಿ ಅಭಿಪ್ರಾಯಪಟ್ಟಿದ್ದರು.

10ಪ್ರಾಂತ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಕೆನಡಾದಲ್ಲಿ ಪ್ರತಿ 5ಮಂದಿಗೆ ನಾಲ್ವರಂತೆ ಬುರ್ಖಾ ನಿಷೇಧವನ್ನು ಸಮರ್ಥಿಸಿದ್ದು, ಯಾವುದೇ ವಿಷಯದಲ್ಲಿ ಶೇ.80ರಷ್ಟು ಕೂಡಾ ಸಹಮತ ತೋರದಿರುವ ಕೆನಡಿಯನ್ನರು ಈ ವಿಷಯದಲ್ಲಿ ಸರ್ವಾನುಮತ ಹೊಂದಿರುವುದು ಅಚ್ಚರಿ ತಂದಿದೆ ಎಂದು ಸಮೀಕ್ಷೆ ನಡೆಸಿದ ಮಾಂಟ್ರಿಯಲ್ ಗಜೆಟ್ ಪತ್ರಿಕೆಗಾಗಿ ಸಮೀಕ್ಷೆ ನಡೆಸಿದ ಆಂಗೂಸ್ ರೀಡ್ ವರದಿಯಲ್ಲಿ ಹೇಳಲಾಗಿದೆ.

ಆದರೆ ಮಾಂಟ್ರಿಯಲ್‌ನ ಮುಸ್ಲಿಂ ಕೌನ್ಸಿಲ್‌ನ ಸಲಾಮ್ ಏಳ್ಮೆನಿಯಾವಿ , ಸಮೀಕ್ಷೆಯ ಫಲಿತಾಂಶ ಬುರ್ಖಾ ವಿವಾದದಸುತ್ತ ಹೊಂದಿರುವ ಭಾವನಾತ್ಮಕ ವಾತಾವರಣವೊಂದರಲ್ಲಿ ಮೂಡಿಬಂದಿದೆ. ಇದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ. ಆದಾಗ್ಯೂ ಕೆನಡಾದಲ್ಲಿನ ಬಹುತೇಕ ಮುಸ್ಲಿಂ ಮಹಿಳೆಯರು ಬುರ್ಖಾ ಅಥವಾ ಶಿರವಸ್ತ್ರ ಧರಿಸುವುದಿಲ್ಲ.ಕೆನಡಾದಲ್ಲಿ 1 ಮಿಲಿಯನ್ ಗೂ ಅಧಿಕ ಮುಸ್ಲಿಮರಿದ್ದು ಅವರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳದಿಂದ ಜನಸಂಖ್ಯಾ ಸಮತೋಲನದಲ್ಲಿ ಏರುಪೇರಾಗುವ ಅಪಾಯವಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X