ಬಾಷ್ ಕಂಪೆನಿ ಘಟಕ ಲಾಕೌಟ್
ಬೆಂಗಳೂರು,
ಮಾ 10 : ನಗರದ ನಾಗನಾಥಪುರದಲ್ಲಿರುವ ಘಟಕವನ್ನು ಮಾರ್ಚ್ 8ರಾತ್ರಿ 10 .30 ರಿಂದ ಅನ್ವಯವಾಗುವಂತೆ ಲಾಕ್ಔಟ್ ಎಂದು ಬಾಷ್ ಇಂಡಿಯಾ ಲಿಮಿಟೆಡ್ ಘೋಷಿಸಿದೆ. ಈ ಘಟಕದ ಕಾರ್ಮಿಕರ ಬೆದರಿಕೆ ಹಾಗೂ ಮುಷ್ಕರದಿಂದಾಗಿ ಯಂತ್ರ ಮತ್ತು ಸಲಕರಣೆಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ವಿಶ್ವದ ಪ್ರತಿಷ್ಠಿತ 25 ಆಟೋಮೋಟಿವ್ ಕಂಪೆನಿಗಳಲ್ಲಿ ಬಾಷ್ ಇಂಡಿಯಾ(ಮೈಕೋ) ಕೂಡ ಸೇರಿದೆ. id="toptextpromo">ಕಂಪೆನಿಯ
ಕಾರ್ಮಿಕರು ವ್ಯವಸ್ಥಾಪಕರಿಗೆ ದೈಹಿಕ ಬೆದರಿಕೆ ಹಾಕಿ ವೇತನ ಪರಿಷ್ಕರಣೆಗೆ ಆಗ್ರಹಿಸಿ ಟೂಲ್ ಡೌನ್ ಮುಷ್ಕರ ಘೋಷಿಸಿದ್ದರು. ಈ ಮುಷ್ಕರದಿಂದಾಗಿ ಘಟಕಗಳಲ್ಲಿರುವ ಯಂತ್ರಗಳ ಸಾಮರ್ಥ್ಯಕ್ಕೆ ಹೋಲಿಸಿದರೆ ಕಳೆದ ಫೆಬ್ರವರಿ ತಿಂಗಳಲ್ಲಿ ಸುಮಾರು ಆರು ಕೋಟಿ ರೂಪಾಯಿ ಆದಾಯ ಕಡಿಮೆ ಗಳಿಸಿದೆ. ಇದರಿಂದ ಕಾರ್ಮಿಕರು ಕೂಡ ಭತ್ಯೆ ಮತ್ತು ಇತರ ಸೌಲಭ್ಯಗಳನ್ನೂ ಕಳೆದು ಕೊಂಡಿದ್ದರೂ ತಮ್ಮ ಮುಷ್ಕರವನ್ನು ಮುಂದುವರಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಇಲ್ಲಿನ
ಘಟಕದ ಕಾರ್ಮಿಕರು ದೇಶದಲ್ಲಿರುವ ತನ್ನ ಇತರ ಘಟಕಗಳಲ್ಲಿನ ಕಾರ್ಮಿಕರಿಗಿಂತ ಅಧಿಕ ವೇತನ ಪಡೆಯುತ್ತಿದ್ದಾರೆ. ನಾಗನಾಥಪುರ ಘಟಕದ ಕಾರ್ಮಿಕನ್ನೊಬ್ಬನ ಸರಾಸರಿ ತಿಂಗಳಿಗೆ 37 ಸಾವಿರ ವೇತನ ಪಡೆಯುತ್ತಿದ್ದಾರೆ ಎಂದು ಆಡಳಿತ ಮಂಡಳಿಸ್ಪಷ್ಟೀಕರಣ ನೀಡಿದೆ.











Click it and Unblock the Notifications