ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸ್ ಪ್ರೆಸ್ ವೇಗೆ ಚಾಲನೆ, ಟೆಕ್ಕಿಗಳಿನ್ನೂ ನಿರಾಳ

By Mrutyunjaya Kalmat
|
Google Oneindia Kannada News

Elevated Express way to E-city to lift techies sprit
ಬೆಂಗಳೂರು, ಜ. 22 : ದೇಶದಲ್ಲಿಯೇ ದ್ವಿತೀಯ ಹಾಗೂ ರಾಜ್ಯದ ಪ್ರಥಮ ಅತಿದೊಡ್ಡ ಮೇಲ್ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಮೇಲ್ಸೇತುವೆ ಇಂದು ಅಧಿಕೃತವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕೇಂದ್ರದ ಭೂಸಾರಿಗೆ ಸಚಿವ ಖಾತೆ ಕಮಲ್ ನಾಥ್ ಫ್ಲೈಓವರ್ ಗೆ ಚಾಲನೆ ನೀಡಿದರು.

ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿಗರಿಗೆ ಮಾತ್ರವಲ್ಲ ಜಗತ್ತಿನ ಸಾಫ್ಟ್ ವೇರ್ ಉದ್ಯಮದಲ್ಲಿ ಚಿರಪರಿಚತ ಹೆಸರು. ಈ ಪ್ರದೇಶದಲ್ಲಿ ಸಾಫ್ಟ್ ವೇರ್ ಕಂಪನಿಗಳು ತುಂಬಿಕೊಂಡಿವೆ. ಕಚೇರಿ ಆರಂಭದ ಸಮಯ ಮತ್ತು ಕಚೇರಿ ಬಿಡುವ ಸಮಯದಲ್ಲಿ ಹೊಸೂರು ರಸ್ತೆಯಲ್ಲಿ ಪ್ರಯಾಣಿಸುವುದೆಂದರೆ ಚಕ್ರವ್ಯೂಹ ಬೇಧಿಸಿದಂತೆ ಸರಿ. ಬೆಂಗಳೂರಿನಲ್ಲಿರುವ ಬಹುತೇಕ ಪ್ರತಿಷ್ಠಿತ ಕಂಪನಿಗಳು ಹೊಸೂರು ರಸ್ತೆಯ ಅಕ್ಕಪಕ್ಕದಲ್ಲೇ ಇರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಹೇಳತೀರದಾಗಿತ್ತು. ಬೆಳಗ್ಗೆ 8 ರಿಂದ 10 ಸಂಜೆ 6 ರಿಂದ 8 ಗಂಟೆವರೆಗೆ ಕಂಪನಿಗಳ ಖಾಸಗಿ ವಾಹನಗಳ ಜೊತೆಗೆ ಬಿಎಂಟಿಸಿ ಬಸ್ಸುಗಳು, ಕಾರುಗಳು, ಬೈಕ್ ಗಳು, ಭಾರಿ ವಾಹನಗಳು ರಸ್ತೆಗಿಳಿಯುತ್ತಿದ್ದವು. ಇದರಿಂದ ಈ ರಸ್ತೆ ಫುಲ್ ಪ್ಯಾಕ್. ಆಕಸ್ಮಾತಾಗಿ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದ್ದರಂತೂ ಅಂದಿನ ಕತೆ ಮುಗಿದೇ ಹೋಯಿತು.

ಈ ಎಲ್ಲದರ ಪರಿಣಾಮವಾಗಿ ಸಾಫ್ಟ್ ವೇರ್ ದಿಗ್ಗಜರು ಸೇರಿ ಸಾರ್ವಜನಿಕರಿಂದ ರಾಜ್ಯ ಸರಕಾರಕ್ಕೆ ಫ್ಲೈ ಓವರ್ ನಿರ್ಮಿಸಲು ತೀವ್ರ ಒತ್ತಡ ಶುರುವಾಯಿತು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅನುಮೋದನೆ ದೊರೆಯಿತು. ನಾಲ್ಕು ವರ್ಷಗಳ ನಂತರ ಕೊನೆಗೂ 9.5 ಕಿಮೀ ಉದ್ದದ ಮೇಲ್ಸೇತುವೆ ನಿರ್ಮಾಣಗೊಳ್ಳವಂತಾಯಿತು. ಈ ಮೇಲ್ಸುತುವೆಗೆ ಟೋಲ್ ಫೀ ಅಳವಡಿಸಲಾಗಿದೆ. ಆದರೆ, ಒಂದು ತಿಂಗಳು ಮಾತ್ರ ಯಾವುದೇ ಟೋಲ್ ಫೀ ತೆಗೆದುಕೊಳ್ಳುವುದಿಲ್ಲ ಎಂದು ಹೆದ್ದಾರಿ ಇಲಾಖೆ ಹೇಳಿದೆ.

ಮೇಲ್ಸೇತುವೆ ರಸ್ತೆಯು ನಾಲ್ಕು ಲೈನ್ ಹೊಂದಿದ್ದು, ರಸ್ತೆಯ ಕೆಳಭಾಗದಲ್ಲಿ ಮೂರು ಲೈನ್ ರಸ್ತೆ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಯಾವುದೇ ರೀತಿ ಅಪಘಾತ ಸಂಭವಿಸಬಾರದೆಂಬ ಉದ್ದೇಶದಿಂದ ವೇಗ ನಿಯಂತ್ರಣ ಅಳವಡಿಸಲಾಗಿದೆ. ಆದರೆ, ಎಷ್ಟೇ ವೇಗವಾಗಿ ಚಲಿಸಿದರೂ 80 ಕಿಮೀ ಮೇಲೆ ವಾಹನ ಓಡದಂತೆ ವೇಗ ನಿಯಂತ್ರಕ ಅಳವಡಿಸಲಾಗಿದೆ. ಅಪಘಾತ ತಡೆಗಟ್ಟಲು ಸರ್ವೆಲನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಒಂದು ವೇಳ ಸಂಚಾರಿ ನಿಯಮ ಉಲ್ಲಂಘಿಸಿದರೆ ಕ್ಯಾಮರಾ ಸಹಾಯದಿಂದ ಕಂಡು ಹಿಡಿಯುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಸತ್ಯಂ ಸಹೋದರ ಸಂಸ್ಥೆ ಮೇತಾಸ್, ಬಿಇಟಿಎಲ್, ನಾಗಾರ್ಜುನ ಕನ್ ಸ್ಟ್ರಕ್ಷನ್ ಕಂಪನಿಗಳು ಖಾಸಗಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೇಲ್ಸೇತುವೆಯನ್ನು ಪೂರ್ಣಗೊಳಿಸಿದೆ. ಸುಮಾರು 765 ಕೋಟಿ ರುಪಾಯಿಗಳ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಿದೆ.

ಎಕ್ಸ್ ಪ್ರೆಸ್ ವೇ ಆರಂಭವಾಯಿತು ಇನ್ನೇನು 45 ನಿಮಿಷದಲ್ಲಿ ಮನೆ ಸೇರಬಹುದು ಎಂಬ ಕನಸು ಹೊತ್ತ ಅನೇಕರಿಗೆ ಮತ್ತೊಂದು ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಉದ್ಘಾಟನಾ ದಿನವಾದ ಇಂದು ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸಬೇಕು ಎಂದು ಕುತೂಹಲದಿಂದ ಜನರು ಎಕ್ಸ್ ಪ್ರೆಸ್ ವೇ ನಲ್ಲಿ ನುಗ್ಗಿದ ಕಾರಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಜಂಕ್ಷನ್ ನಲ್ಲಿ ಟ್ರಾಫಿಕ್ ಉಂಟಾಗಿದೆ. ಇದು ಇವತ್ತೊಂದು ದಿನದ ಸಮಸ್ಯೆಯಾದರೆ ಸಹಿಸಿಕೊಳ್ಳಬಹುದು. ಆದರೆ, ಪ್ರತಿದಿನವೂ ಇದೇ ಸಮಸ್ಯೆ ಸಂಚಾರಿಗಳ ಪಾಲಿಗೆ ನರಕವೇ ಸರಿ. ಸಿಲ್ಕ್ ಬೋರ್ಡ್ ಮುಂದೆ ಟ್ರಾಫಿಕ್ ಹನುಮಂತ ಬಾಲದಂತಿತ್ತು.

ಟೋಲ್ ಫೀ ಇಂತಿದೆ...(ಪ್ರತಿ ದಿನಕ್ಕೆ)

ದ್ವಿಚಕ್ರ ವಾಹನ- 15 ರುಪಾಯಿ
ಕಾರು - 30 ರುಪಾಯಿ
ಬಸ್, ಲಾರಿಗಳು- 70 ರುಪಾಯಿ
ಲಘು ವಾಹನ- 40 ರುಪಾಯಿ
ಭಾರಿ ವಾಹನ- 140 ರುಪಾಯಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X