ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಯಾ ವಿರುದ್ಧ ಹೋರಾಟಕ್ಕೆ ಬಹುಗುಣ

By Staff
|
Google Oneindia Kannada News

Sunderlal Bahuguna
ಹಾಸನ, ಡಿ. 22 : ಗುಂಡ್ಯ ಜಲವಿದ್ಯುತ್ ವಿರೋಧಿ ಚಳವಳಿಯಲ್ಲಿ ಪಾಲ್ಗೊಳ್ಳುವುದಾಗಿ ಎಂದು ಖ್ಯಾತ ಪರಿಸರ ಹೋರಾಟಗಾರ ಸುಂದರ್ ಲಾಲ್ ಬಹುಗುಣ ಭರವಸೆ ನೀಡಿದ್ದಾರೆ.

ಹೊಂಗಡಹಳ್ಳದ ಸಮುದಾಯಭವನದಲ್ಲಿ ಸೋಮವಾರ ನಡೆದ ಗುಂಡ್ಯ ಜಲವಿದ್ಯುತ್ ಯೋಜನೆ ವಿರೋಧಿ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಜಯದ ಹಾದಿಯಲ್ಲಿ ಎಲ್ಲ ಕಠಿಣ ಸವಾಲುಗಳು ಬಂದರೂ ಸತ್ಯಕ್ಕೆ ಗೆಲುವು ಖಚಿತ. ಪರಿಸರ ಪರ ಹೋರಾಟವೂ ಸತ್ಯಕ್ಕಾಗಿನ ಹೋರಾಟವೇ ಆಗಿದ್ದು, ಇದಕ್ಕಾಗಿ ನಾನು ಜೈಲುವಾಸವನ್ನೂ ಅನುಭವಿಸಿದ್ದೇನೆ. ಸತ್ಯವನ್ನು ಉಳಿಸಿ, ಅದೇ ನನ್ನ ಪ್ರಾರ್ಥನೆ ಎಂದರು.

ಪಶ್ಚಿಮಘಟ್ಟದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾದ ಸಕಲೇಶಪುರ ಬಳಿಯ ಬೆಟ್ಟದಕುಮರಿ ಪ್ರದೇಶವನ್ನು ಸುಂದರಲಾಲ್ ಬಹುಗುಣ ವೀಕ್ಷಿಸಿ, ದಕ್ಷಿಣ ಭಾರತಕ್ಕೆ ಮುಕುಟಪ್ರಾಯವಾದ ಪಶ್ಚಿಮಘಟ್ಟದಂಥ ಸೂಕ್ಷ್ಮ ಪ್ರದೇಶದಲ್ಲಿ ಗುಂಡ್ಯ ಜಲವಿದ್ಯುತ್ ಯೋಜನೆಯನ್ನು ಜಾರಿಗೆ ತಂದರೆ ಮಾರಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಇದರ ಬದಲು ಸೌರ ವಿದ್ಯುತ್ ಇಲ್ಲವೇ ಗಾಳಿ ವಿದ್ಯುತ್ ಯೋಜನೆಗಳನ್ನೇಕೆ ಮಾಡಬಾರದು? ಲಕ್ಷಾಂತರ ವರ್ಷದಲ್ಲಿ ರೂಪುಗೊಂಡ ಪಶ್ಚಿಮಘಟ್ಟವನ್ನು ಕೆಲವೇ ವರ್ಷಗಳಲ್ಲಿ ನಾಶಮಾಡಬಹುದು. ಆದರೆ ಮತ್ತೆ ಬೇಕೆಂದರೆ ಇದನ್ನೆಲ್ಲ ಸೃಷ್ಟಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದರು.

ನೇತ್ರಾವತಿ ತಾಂತ್ರಿಕವಾಗಿಯೂ ಅಸಂಭವ ನೇತ್ರಾವತಿ ತಿರುವು ಯೋಜನೆ ಎಲ್ಲ ದೃಷ್ಟಿಯಿಂದಲೂ ಪರಿಸರವಿರೋಧಿ, ಪ್ರಕೃತಿಗೆ ವಿರುದ್ಧವಾದ ನಿರ್ಧಾರ. ಅದು ತಾಂತ್ರಿಕವಾಗಿಯೂ ಅಸಂಭವವಾದ ಯೋಜನೆ ಎಂದು ಅಪ್ಪಿಕೊ ಚಳವಳಿಯ ರೂವಾರಿ ಪಾಂಡುರಂಗ ಹೆಗಡೆ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು,ದೇಶದಲ್ಲಿ ಪ್ರಸ್ತಾವನೆಯಲ್ಲಿರುವ ನದಿ ತಿರುವು ಯೋಜನೆಗಳನ್ನು ರಾಹುಲ್ ಗಾಂಧಿ ಕೂಡ ವಿರೋಧಿಸಿರುವುದರಿಂದ ಇಂಥ ಪ್ರಸ್ತಾವಗಳು ಜೀವ ಪಡೆದುಕೊಳ್ಳಲಾರವು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X