ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಪೋಷಿಸುವ ವ್ಯವಸ್ಥೆ ನಮ್ಮದು, ಸಂತೋಷ ಹೆಗ್ಡೆ

By Staff
|
Google Oneindia Kannada News

Santhosh Hegde
ಬೆಂಗಳೂರು, ನ. 27 : ಲೋಕಾಯುಕ್ತ ಕಚೇರಿಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಡಾ ಎನ್ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆ ಬಗ್ಗೆ ಸರಕಾರಕ್ಕೆ 1,600 ಪುಟಗಳ ವರದಿ ನೀಡಲಾಗಿದ್ದು, ಕ್ರಮಕೈಗೊಳ್ಳಲು ಸರಕಾರದ ಮೀನುಮೇಷಕ್ಕೆ ತೀವ್ರ ಆಕ್ಷೇಪಡಿಸಿದರು.

ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಉತ್ತಮ ಆಡಳಿತ' ವಿಷಯ ಕುರಿತು ಗುರುವಾರ ನಡೆದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ಎಸಗುವ ಅಧಿಕಾರಿಗಳನ್ನು ರಕ್ಷಿಸೋ ವ್ಯವಸ್ಥೆ ನಮ್ಮದು. ಹಾಗಾಗಿ, ಭ್ರಷ್ಟಾಚಾರ ಎಲ್ಲೆಡೆ ಇದೆ ಎಂದು ಹೇಳಿದರು. ಸಾಸಿವೆ ತರಲು ಸಾವಿಲ್ಲದ ಮನೆಯನ್ನು ಹುಡುಕಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಭ್ರಷ್ಟಾಚಾರ ರಹಿತ ಸರಕಾರಿ ಇಲಾಖೆಗಳನ್ನು ಹುಡುಕಲಾಗದು ಎನ್ನುತ್ತಿದ್ದಂತೆಯೇ, ಹಿಂದಿನ ಸಾಲಿನ ವಿದ್ಯಾರ್ಥಿಯೊಬ್ಬ ಲೋಕಾಯುಕ್ತ ಕಚೇರಿಯಲ್ಲಿ ?' ಎಂದು ಮೆಲುದನಿ ಯಲ್ಲಿ ಕೇಳಿದ. ತಕ್ಷಣ ಲೋಕಾಯುಕ್ತರು, ನಮ್ಮ ಕಚೇರಿಯನ್ನೂ ಬಿಟ್ಟಿಲ್ಲ' ಎಂದು ಒಪ್ಪಿಕೊಂಡರು.

ಸರಕಾರದ ವಿರುದ್ಧ ಅಸಮಾಧಾನ : ಅಕ್ರಮ ಗಣಿಗಾರಿಕೆ ಕುರಿತು ತಾವು ನೀಡಿರುವ ವರದಿ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ರಾಜ್ಯ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ನಡವಳಿಕೆಯನ್ನೂ ಆಕ್ಷೇಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ಕುರಿತ ವರದಿಯನ್ನು ಸರಕಾರಕ್ಕೆ ನೀಡಿದ್ದೇನೆ. ಅದರಲ್ಲಿ ಏನಿದೆ ಎಂಬುದನ್ನು ಮೊದಲು ನೋಡಲಿ. ಅದನ್ನು ಬಿಟ್ಟು, ಬೇರೆ-ಬೇರೆ ತನಿಖೆಗೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು.

ಗಣಿಗಾರಿಕೆ ಮೂಲಕ ಸಂಪತ್ತು ಲೂಟಿ ಆಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಳ್ಳುವಾಗ, ಇದನ್ನು ಒಳ್ಳೆಯ ಆಡಳಿತ ಎಂದು ಹೇಗೆ ಕರೆಯುವುದು ? ನೆರೆ ಪೀಡಿತ ಜಿಲ್ಲೆಗಳಲ್ಲಿ ಪುನರ್ವಸತಿ ಕಲ್ಪಿಸಲು ಆಡಳಿತ ಪಕ್ಷದ ಶಾಸಕರೇ ಇರುವುದಿಲ್ಲ. ಕೇಳಿದ್ರೆ, ಗ್ರಾಮೀಣ ಅಭಿವೃದ್ಧಿಗೆ ಹೈದ್ರಾಬಾದ್‌ಗೆ ಹೋಗಿದ್ದೇವೆ ಎನ್ನುತ್ತಾರೆ. ಇದು ಆಡಳಿತವೇ ?' ಎಂದು ಪ್ರಶ್ನಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X