ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!

By Staff
|
Google Oneindia Kannada News

Radio Mirchi-Sunfeast World Expo
ಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.

ಮ್ಯಾರಥಾನ್ ವಿವರ : ಸನ್ ಫೀಸ್ಟ್ ಮ್ಯಾರಥಾನ್ ಓಟವು ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಲಿದೆ. ಪಾಲ್ಗೊಳ್ಳುವರು ಸಂಬಂಧಿತ ಸಲಕರಣೆಗಳು, ಕಿಟ್‌ಗಳನ್ನು ಪಡೆಯಬೇಕಿದೆ. ಮ್ಯಾರಥಾನ್‌ನಲ್ಲಿ 10ಕೆ - ಪುರುಷರಿಗೆ ಓಟ, ವ್ಹೀಲ್ ಚೇರ್ ಓಟ, ಹಿರಿಯನಾಗರಿಕರ ಓಟ, ವರ್ಲ್ಡ್ 10ಕೆ ಮಹಿಳಾ ಓಟ, ಓಪನ್ 10ಕೆ ಓಟ, ಮಜ್ಜಾ ಓಟ ವಿವಿಧ ವಿಭಾಗಳು ಇರುತ್ತವೆ. ಮ್ಯಾರಥಾನ್ ಓಟದಲ್ಲಿ ತಾರೆಗಳಾದ ದೀಪಿಕಾ ಪಡುಕೋಣೆ, ಗೋಲ್ಡನ್ ಸ್ಟಾರ್ ಗಣೇಶ್, ಮಿಲಿಂದ್ ಸೋಮನ್ ಪಾಲ್ಗೊಳ್ಳಲಿದ್ದಾರೆ. ಓಟದ ಅಂದಿನ ಕ್ಷಣಕ್ಷಣದ ಮಾಹಿತಿಗಳನ್ನು ರೇಡಿಯೊ ಮಿರ್ಚಿ 98.3 ಎಫ್ ಎಂ ಮೂಲಕ ಪಡೆಯಬಹದು.

ಮಾರಾಟ ಮೇಳ : ರೇಡಿಯೋ ಮಿರ್ಚಿ ಇದೇ ಸಂದರ್ಭದಲ್ಲಿ 'ಸನ್ ಫೀಸ್ಟ್ ಗೆಟ್ ಆಕ್ಟಿವ್ ವರ್ಲ್ಡ್ 10ಕೆ ಎಕ್ಸ್‌ಪೊ 2009' ಎಂಬ ಪ್ರದರ್ಶನ ಮಾರಾಟ ಮೇಳವನ್ನು ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ. ಮೇಳದ ಉದ್ಘಾಟನೆಯು ಮೇ 27ರಂದು ಬುಧವಾರದಂದು ಜರುಗಿತು. ಪ್ರದರ್ಶನ ಮಳಿಗೆಗಳಲ್ಲಿ ನಿಕೆ,ಎಫ್-ಚಿಸೆಲ್, ಮಣಿಪಾಲ್ ಕ್ಯೂರ್ ಎಂಡ್ ಕೇರ್, ಬ್ರಿಟಿಷ್ ನ್ಯೂಟ್ರೀಷನ್ಸ್ ಮುಂತಾದ ಪ್ರಖ್ಯಾತ ಬ್ರಾಂಡ್‌ಗಳ ಆರೋಗ್ಯವರ್ಧಕ ವಸ್ತುಗಳು ಲಭ್ಯವಿವೆ. ಈ ಸೇವೆಯನ್ನು ಓಟಗಾರರು ಬಳಸಿಕೊಳ್ಳಬಹದು. ಮಳಿಗೆಗಳು ಮೇ 30ರವರೆಗೆ ಇರಲಿವೆ. ಎಕ್ಸ್‌ಪೊ 2009ರಲ್ಲಿ ಮನರಂಜನಾ ಕಾರ್ಯಕ್ರಮಗಳೂ ಇರುತ್ತವೆ. ಡಿಜೆ ನೈಟ್ಸ್, ಫ್ಯಾಷನ್ ನೈಟ್ಸ್, ರಾಕ್ ಬ್ಯಾಂಡ್‌ಗಳ ಕಾರ್ಯಕ್ರಮ, ಪೈಂಟ್ ಬಾಲ್ ಇತ್ಯಾದಿಗಳಿರುತ್ತವೆ.

ಉದ್ಘಾಟನೆ :
ಸನ್ ಪಿಯೆಸ್ಟ್ ಎಕ್ಸ್‌ಪೊ 2009 ಪ್ರದರ್ಶನ ಮಾರಾಟ ಮೇಳವನ್ನು ಕನ್ನಡ ಸಿನಿಮಾದ ಖ್ಯಾತ ನಟ ಪ್ರೇಮ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಸಾರಿಗೆ ಸಚಿವರಾದ ಆರ್. ಆಶೋಕ್ , ಜವಳಿ ಮತ್ತು ಕ್ರೀಡಾಖಾತೆ ಸಚಿವರಾದ ಜಿ.ಡಿ.ಶೇಖರ್ ಪಾಲ್ಗೊಂಡಿದ್ದರು. "ಸನ್‌ಫೀಸ್ಟ್ ನಂತಹ ಅರ್ಥಪೂರ್ಣ, ಭವ್ಯ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ" ಎಂದು ಪ್ರೇಮ್ ಹರ್ಷವ್ಯಕ್ತಪಡಿಸಿದರು.

ರೇಡಿಯೋ ಮಿರ್ಚಿ ಸಹಯೋಗ :
ಕೇರಳ-ಕರ್ನಾಟಕ ಕ್ಲಸ್ಟರ್ ಬಿಜಿನೆಸ್ ಮುಖ್ಯಸ್ಥ ರಾಹುಲ್ ಬಲ್ಯಾನ್ ಇದೇ ಸಂದರ್ಭದಲ್ಲಿ ಮಾತನಾಡಿ, ರೇಡಿಯೊ ಮಿರ್ಚಿ 'ಸನ್‌ಫಿಯೆಸ್ಟ್ 10ಕೆ ಓಟ' ಸಹಭಾಗಿಯಾಗಲು ಸಾಧ್ಯವಾಗಿರುವುದು ಸಂತೋಷ. ಸನ್‌ಫಿಯೆಸ್ಟ್ ಓಟಕ್ಕಾಗಿ ಮಿರ್ಚಿಯ ಕರೆಗಳಿಗೆ ಜನರ ವ್ಯಾಪಕ ಪ್ರತಿಕ್ರಿಯೆ ನೀಡಿದ್ದಾರೆ. ರೇಡಿಯೋ ಮಿರ್ಚಿಯ ರೇಡಿಯೋ ಜಾಕಿಗಳು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ನಗರವಾಸಿಗಳೆಲ್ಲರೂ ಮ್ಯಾರಥಾನ್‌ನಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

ರೇಡಿಯೊ ಮಿರ್ಚಿ :
2001ರಲ್ಲಿ ಇಂದೋರ್ ನಗರದಲ್ಲಿ ರೇಡಿಯೊ ಮಿರ್ಚಿ ತನ್ನ ಮೊದಲ ಪ್ರಸಾರ ನಿಲಯ ಆರಂಭಿಸಿತು. ಬಳಿಕ 2003ರಲ್ಲಿ ಇಎನ್‌ಐಎಲ್ 6 ಕೇಂದ್ರಗಳನ್ನು ಸ್ಥಾಪಿಸಿತು. ಇಂದು ಖಾಸಗಿರೇಡಿಯೋ ಹಂದರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ರೇಡಿಯೋ ಮಿರ್ಚಿ ಇದೀಗ 32 ನಗರದಲ್ಲಿ ಪ್ರಸಾರ ನಿರತವಾಗಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಚೆನ್ನೈ, ಇಂದೋರ್, ಅಹಮ್ಮದಾಬಾದ್, ಪುಣೆ, ಹೈದರಾಬಾದ್, ಬೆಂಗಳೂರು, ಜೈಪುರ, ಪಟ್ನಾ, ಜಲಂಧರ್, ಗೋವಾ, ಬರೋಡಾ, ಭೋಪಾಲ್, ಕಾನ್ಪುರ, ರಾಜ್‌ಕೋಟ್, ನಾಸಿಕ್, ವಾರಣಾಸಿ, ಔರಂಗಬಾದ್, ಲಕ್ನೊ, ಸೂರತ್, ಕೊಲ್ಹಾಪುರ, ಮಧುರೈ, ನಾಗ್ಪುರ, ವಿಶಾಖಪಟ್ಟಣಂ, ಕೊಯಂಬತ್ತೂರು, ಮಂಗಳೂರು, ವಿಜಯವಾಡ, ರಾಯ್ಪುರ, ತಿರುವನಂತಪುರ, ಹಾಗೂ ಜಬಲ್ಪುರಗಳಲ್ಲಿ ರೇಡಿಂಯೋ ಮಿರ್ಚಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X