ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಂ ಕೃಷ್ಣಗೆ ಒಲಿದ ವಿದೇಶಾಂಗ ಸಚಿವ ಖಾತೆ

By Staff
|
Google Oneindia Kannada News

SM Krishna gets External Affairs
ನವದೆಹಲಿ, ಮೇ 23 : ನಿರೀಕ್ಷೆಯಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಪ್ರಮುಖ ಹುದ್ದೆಯಾಗಿರುವ ವಿದೇಶಾಂಗ ಖಾತೆ ಸಚಿವ ಸ್ಥಾನವನ್ನು ನೀಡಲಾಗಿದೆ.

ಮುಂಬೈ ದಾಳಿಯ ನಂತರ ಗೃಹ ಖಾತೆಯನ್ನು ವಹಿಸಿಕೊಂಡಿದ್ದ ಪಿ. ಚಿದಂಬರಂ ಅವರು ಅದೇ ಖಾತೆಯನ್ನು ಉಳಿಸಿಕೊಂಡಿದ್ದಾರೆ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ಹಣಕಾಸು ಖಾತೆಯ ಪ್ರಮುಖ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ ಎಂದು ರಾಷ್ಟ್ರಪತಿ ಭವನದ ವಕ್ತಾರ ತಿಳಿಸಿದ್ದಾರೆ.

ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ 19 ಸಂಪುಟ ದರ್ಜೆಯ ಸಚಿವರಲ್ಲಿ ಆರು ಸಚಿವರಿಗೆ ಮಾತ್ರ ಖಾತೆಗಳನ್ನು ಹಂಚಲಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ಅವರಿಗೆ ಹಿಂದಿನ ಸರಕಾರದಲ್ಲಿ ಲಾಲೂ ಪ್ರಸಾದ್ ಯಾದವ್ ವಹಿಸಿಕೊಂಡಿದ್ದ ರೈಲ್ವೆ ಖಾತೆ ನೀಡಲಾಗಿದೆ. ಎಕೆ ಆಂಟನಿ ಅವರಿಗೆ ರಕ್ಷಣಾ ಖಾತೆ ಮತ್ತು ಎನ್ ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕೃಷಿ ಮತ್ತು ಆಹಾರ ಸರಬರಾಜು ಖಾತೆಯನ್ನು ನೀಡಲಾಗಿದೆ.

ಉಳಿದ ಖಾತೆಗಳ ಹಂಚಿಕೆ ಸಂಪುಟ ವಿಸ್ತರಣೆಯ ನಂತರ ಮಂಗಳವಾರ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X