ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ನಂತರ ರಾಜ್ಯ ಸಂಪುಟ ವಿಸ್ತರಣೆ

By Staff
|
Google Oneindia Kannada News

 BJP win minimum 24 Lok Sabha seats
ಬೆಂಗಳೂರು, ಏ. 9 : ಲೋಕಸಭೆ ಚುನಾವಣೆ ರಾಜ್ಯದ ಸಚಿವರಿಗೆ ಅಗ್ನಿ ಪರೀಕ್ಷೆಯಾಗಿದೆ. ಸಚಿವರ ಕಾರ್ಯನಿರ್ವಹಣೆ ಮತ್ತು ಸಾಧನೆ ಅಳತೆಗೆ ಮಾನದಂಡವಾಗಿದೆ. ಅದರ ಆಧಾರದಲ್ಲಿ ಸಚಿವರ ಭವಿಷ್ಯ ನಿರ್ಧಾರವಾಗಲಿದೆ. ಇದು ಪಕ್ಷೇತರ ಸಚಿವರಿಗೂ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ನಂತರ ಸಂಪುಟ ಪುನರ್ ರಚನೆ ಮಾಡುವ ಸುಳಿವು ನೀಡಿದರು.

ವಿರೋಧ ಪಕ್ಷಗಳ ಅಸಹಕಾರದ ನಡುವೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನವಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಭಾರತೀಯ ಜನತಾ ಪಕ್ಷ ಈ ಚುನಾವಣೆಯಲ್ಲಿ ದಾಖಲೆ ಜಯಗಳಿಸಲಿದೆ. ಕನಿಷ್ಠ 24 ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂದರು.

ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಯಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವರು ಆಸಕ್ತಿಯಿಂದ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ನಾವು ನೋಡುತ್ತಿದ್ದೇವೆ. ಉತ್ತಮ ಕಾರ್ಯನಿರ್ವಹಣೆ ತೋರಿಸದ ಸಚಿವರಿಗೆ ಕೊಕ್ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಆಪರೇಷನ್ ಕಮಲ ಎಂದು ಬೆರಳು ತೋರಿಸುತ್ತಾರೆ. ಕಾಂಗ್ರೆಸ್ ವಲಸೆಗಾರರ ಪಕ್ಷ ಅಲ್ಲವೇ? ಸಿದ್ದರಾಮಯ್ಯ, ದೇಶಪಾಂಡೆ, ಉಗ್ರಪ್ಪ ಸೇರಿ ಅನೇಕರು ಎಲ್ಲಿಂದ ಬಂದವರು ಎಂಬುದನ್ನು ನೆನಪಿಸಿಕೊಂಡು ಆರೋಪ ಮಾಡಬೇಕು ಎಂದು ಯಡಿಯೂರಪ್ಪ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿರುವ ವಿ ಸೋಮಣ್ಣ ಅವರು ಸಂಪುಟ ಸಚಿವರಾಗುವ ಸಾಧ್ಯತೆಗಳಿವೆ. ಸಿಪಿ ಯೋಗೀಶ್ವರ ಗೆದ್ದರೆ ದೆಹಲಿಗೆ, ಸೋತರೆ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X