ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗದಿಯಂತೆ ಐಪಿಎಲ್ ಪಂದ್ಯಗಳು ಆರಂಭ, ಕೇಂದ್ರ

By Staff
|
Google Oneindia Kannada News

IPL gets green signal but with a few changes
ನವದೆಹಲಿ, ಮಾ. 13 : ಲೋಕಸಭೆ ಚುನಾವಣೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕೆಲ ಮಾರ್ಪಾಡು ಮಾಡುವ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ 2 ಟೂರ್ನಿಯನ್ನು ನಿಗದಿತ ದಿನಾಂಕದಂದು ನಡೆಸಲು ಕೇಂದ್ರದ ಗೃಹ ಸಚಿವಾಲಯ ಹಸಿರು ನಿಶಾನೆ ತೋರಿದೆ. ಇಂದು ನವದೆಹಲಿಯಲ್ಲಿ ಗೃಹ ಸಚಿವಾಲಯದ ನೇತೃತ್ವದಲ್ಲಿ ಐಪಿಎಲ್ 2 ಭದ್ರತೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಲ ಅಗತ್ಯ ಮಾರ್ಪಾಡು ಮಾಡಿ ಏಪ್ರಿಲ್ 10 ರಿಂದ ಪಂದ್ಯಾವಳಿ ಆರಂಭಿಸಲು ಕೇಂದ್ರ ಸಚಿವಾಲಯ ಸಮ್ಮತಿಸಿತು.

ಸಭೆಯಲ್ಲಿ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ತಾನ ಹಾಗೂ ಪಶ್ಚಿಮ ಬಂಗಾಲ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಕೇಂದ್ರದ ಗೃಹ ಇಲಾಖೆ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದರು. ಚರ್ಚೆಯ ಆಧಾರ ಮೇಲೆ ಐಪಿಎಲ್ 2 ಪಂದ್ಯಾವಳಿಗಳಲ್ಲಿ ಕೆಲ ಮಾರ್ಪಾಡು ಮಾಡಲು ಸೂಚನೆ ನೀಡಿದೆ. ಮುಖ್ಯವಾಗಿ ಭದ್ರತಾ ದೃಷ್ಟಿಯಿಂದ ಪಂದ್ಯಗಳ ಸ್ಥಳ ಹಾಗೂ ದಿನಾಂಕ ಬದಲಾವಣೆ ಮಾಡುವುದು ಪ್ರಮುಖವಾಗಿವೆ.

ರಾಜ್ಯ ಪೊಲೀಸರನ್ನು ನಿಯೋಜಿಸುವುದರ ಜೊತೆಗೆ ಕೇಂದ್ರದ ಅರೆ ಸೇನಾಪಡೆ ಬಳಸಿಕೊಳ್ಳಲು ಸಚಿವಾಲಯ ಸಮ್ಮತಿಸಿದೆ. ಕೊನೆಗೂ ಐಪಿಎಲ್ 2 ಮೇಲೆ ಇದ್ದ ಕಾರ್ಮೋಡು ಸರಿದಂತಾಗಿದೆ. ಮತದಾನ ಹಾಗೂ ಮತಎಣಿಕೆ ದಿನಾಂಕಗಳು ಹೊರತುಪಡಿಸಿ ಪಂದ್ಯನಡೆಸುವಂತೆ ಸಚಿವಾಲಯ ಸೂಚಿಸಿದೆ. ಶೀಘ್ರದಲ್ಲಿ ಐಪಿಎಲ್ 2 ವೇಳಾಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)
ಏಪ್ರಿಲ್ 10 ರಿಂದ ಐಪಿಎಲ್ ಪಂದ್ಯಗಳು ಆರಂಭ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X