ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್: ಪಾಕಿಸ್ತಾನ ಒಪ್ಪಿಕೊಂಡ ಸತ್ಯಂ

By Staff
|
Google Oneindia Kannada News

ನವದೆಹಲಿ, ಜ. 8: ಜಗತ್ತಿಗೇ ಗೊತ್ತಿರುವ ಸತ್ಯವನ್ನು ಪಾಕಿಸ್ತಾನ ಕೊನೆಗೂ ತನ್ನ ಬಾಯಿಂದಲೇ ಒಪ್ಪಿಕೊಂಡಿದೆ. ಮುಂಬೈ ಭಯೋತ್ಪಾದನಾ ಕೃತ್ಯದಲ್ಲಿ ಬದುಕಿ ಉಳಿದಿರುವ ಪಾತಕಿ ಅಜ್ಮಲ್ ಅಮೀರ್ ಇಮಾನ್ ಕಸಬ್ ಪಾಕಿಸ್ತಾನದ ನಾಗರಿಕ ಎಂದು ಪಾಕ್ ಒಪ್ಪಿಕೊಂಡಿದೆ.

ಕಸಬ್, ಮೂಲತಃ ಪ೦ಜಾಬ ಪ್ರಾಂತ್ಯದ ಫರೀದಕೋಟ ಊರಿನವನು. ಇವನಿಗೆ ಪಾಕ್ ದೂತಾವಾಸದ ಸಂಪರ್ಕ ಕಲ್ಪಿಸಬೇಕೇ ಬೇಡವೇ ಎಂದು ಸರಕಾರ ಇನ್ನು ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಈತನಿಗೆ ಸರಕಾರಿ ಸಂಸ್ಥೆಗಳ ಜೊತೆ ಯಾವುದೇ ಸಂಪರ್ಕವಿರಲಿಲ್ಲ. ಪ್ರಾಥಮಿಕ ತನಿಖೆಯ ವರದಿಯನ್ನು ಪ್ರಧಾನಿ ಯೂಸುಫ್ ಗಿಲಾನಿ ಅವರಿಗೆ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಕುರಿತು ಸರಕಾರ ಅಧಿಕೃತ ಹೇಳಿಕೆ ನೀಡುತ್ತದೆ ಎಂದು ಪಾಕ್ ಸಚಿವೆ ಶೆರ್ರಿ ರೆಹಮಾನ್ ಹೇಳಿದ್ದಾರೆ.

ಇದೆ ವೇಳೆ, ಪಾಕ್ ಇಬ್ಬಗೆ ನೀತಿಯ ಬಗ್ಗೆ ಭಾರತ ತನ್ನ ರಾಜತಾಂತ್ರಿಕ ವಾಗ್ದಾಳಿ ಮುಂದುವರಿಸಿದೆ. ಉಗ್ರರ ದಮನಕ್ಕೆ ಮುಂದಾಗದಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳಲು ಎಲ್ಲಾ ಅವಕಾಶಗಳನ್ನು ಮುಕ್ತವಾಗಿಡಲಾಗಿದೆ ಎಂದು ರಕ್ಷಣಾ ಸಚಿವ ಎ.ಕೆ. ಆ೦ಟೋನಿ ನವದೆಹಲಿಯಲ್ಲಿ ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X