ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 13 ರಂದು ಕೊಪ್ಪಳದಲ್ಲಿ ಅಪ್ರೆಂಟಿಸ್ ಮೇಳ

|
Google Oneindia Kannada News

ಕೊಪ್ಪಳ, ಜೂನ್ 10; ಅಪ್ರೆಂಟಿಸ್ ಮೇಳವನ್ನು ಕೊಪ್ಪಳದ ಕೊಕನೂರಿನಲ್ಲಿ ಜೂನ್ 13ರಂದು ಹಮ್ಮಿಕೊಳ್ಳಲಾಗಿದೆ. ವಿವಿಧ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಜೊತೆ ಹಾಜರಾಗಬಹುದು.

ಉದ್ಯೋಗ ಮತ್ತು ತರಬೇತಿ ಇಲಾಖೆ, ಕೊಪ್ಪಳ ಜಿಲ್ಲೆಯ ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಜೂನ್ 13 ರಂದು ಬೆಳಗ್ಗೆ 9 ಗಂಟೆಗೆ ಅಪ್ರೆಂಟಿಸ್ ಮೇಳವನ್ನು ಆಯೋಜನೆ ಮಾಡಿದೆ.

ವಿಜಯನಗರ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವಿಜಯನಗರ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಪ್ರೆಂಟಿಸ್ ಮೇಳದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆ, ಕಾರ್ಖಾನೆ ಮತ್ತು ಕಂಪನಿಗಳು ಭಾಗವಹಿಸಲಿವೆ. ಜಿಲ್ಲೆಯ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Apprenticeship Mela At Kukunuru ITI College On June 13

ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ; ಕೊಪ್ಪಳದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ 3 ತಿಂಗಳ ಅವಧಿಯ ವಿವಿಧ ಕೋರ್ಸ್‌ಗಳ ಉಚಿತ ತರಬೇತಿಗೆ ಅರ್ಜಿ ಕರೆದಿದೆ.

ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್. ಎಸ್. ಎಲ್. ಸಿ, ಐಟಿಐ, ಡಿಪ್ಲೊಮಾ ಅಥವಾ ಬಿಇ (ಮೆಕ್ಯಾನಿಕಲ್) ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಿಎನ್‌ಸಿ ಮಿಲ್ಲಿಂಗ್ ಮಷಿನ್ ಆಪರೇಟರ್, ಸಿಎನ್‌ಸಿ ಟರ್ನಿಂಗ್ ಮಷಿನ್ ಆಪರೇಟರ್, ಕನ್ವೆನ್ಷನಲ್ ಮಿಲ್ಲಿಂಗ ಮಷಿನ್ ಆಪರೇಟರ್, ಸಿ.ಎನ್.ಸಿ ಲೇಥ್ ಮಷಿನ್ ಆಪರೇಟರ್, ಸಿ.ಎನ್.ಸಿ ಪೋಗ್ರಾಮಿಂಗ್ ಮತ್ತು ಅಪರೇಷನ್, ಪ್ರೋಡಕ್ಷನ್ ಇಂಜಿನಿಯರ್ ಕ್ಯಾಡ್/ ಕ್ಯಾಮ್ ಕೋರ್ಸ್‌ಗಳ ತರಬೇತಿ ಪಡೆಯಬಹುದಾಗಿದೆ.

ಆಸಕ್ತರು ಅರ್ಜಿ ಸಲ್ಲಿಸಲು ಜೂನ್ 31 ಕೊನೆಯ ದಿನಾಂಕವಾಗಿದ್ದು, ಜುಲೈ ತಿಂಗಳ ಮೊದಲ ವಾರದಲ್ಲಿ ತರಬೇತಿಗಳು ಪ್ರಾರಂಭವಾಲಿವೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ಪ್ರವೇಶ ಪಡೆಯಬಹುದಾಗಿದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪಡೆದ ನಂತರ ಯೋಜನೆಯ ಅನುಸಾರ ಪ್ರಮಾಣ ಪತ್ರ ನೀಡಲಾಗುತ್ತದೆ.

ಎಸ್. ಸಿ., ಎಸ್. ಟಿ ವಿದ್ಯಾರ್ಥಿಗಳಿಗೆ ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಅಡಿಯಲ್ಲಿ ಶಿಷ್ಯವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಗದಗ ರಸ್ತೆ ದದೇಗಲ್-ಕೊಪ್ಪಳ ಕಾರ್ಯಾಲಯವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 9902556110, 8087764454.

ಸ್ವ ಉದ್ಯೋಗ ಆರಂಭಿಸಲು ಸಾಲ ಸೌಲಭ್ಯ; ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ವತಿಯಿಂದ 2022-23ನೇ ಸಾಲಿನ ದೀನ್‌ದಯಾಳ ಅಂತ್ಯೋದಯ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಅರ್ಹ ಬಿಪಿಎಲ್ ಅಭ್ಯರ್ಥಿಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ ಮತ್ತು ಪ್ರದೇಶಮಟ್ಟದ ಒಕ್ಕೂಟಗಳಲ್ಲಿ ಸ್ವಯಂ ಉದ್ಯೋಗ ಪ್ರಾರಂಭಿಸಿಕೊಳ್ಳಲು ಮತ್ತು ಗುಂಪು ಚಟುವಟಿಕೆ ನಿರ್ವಹಿಸುವವರೆಗೆ ಸಾಲ ಸೌಲಭ್ಯ, ವಿವಿಧ ತರಬೇತಿಗಳಿಗಾಗಿ ಹಾಗೂ ಸ್ವಸಹಾಯ ಸಂಘಗಳನ್ನು ರಚಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಯೋಜನೆಗಳಯಡಿ ಎಸ್‌ಇಪಿ-ಐ-ಸ್ವಯಂ ಉದ್ಯೋಗ ಕಾರ್ಯಕ್ರಮ (ವೈಯಕ್ತಿಕ ಸಾಲ) 27, ಎಸ್‌ಇಪಿ-ಜಿ-ಸ್ವಯಂ ಉದ್ಯೋಗ ಕಾರ್ಯಕ್ರಮ (ಗುಂಪು ಸಾಲ) 1, ಎಸ್‌ಇಪಿ-ಲಿಂಕೇಜ್-ಸ್ವ-ಸಹಾಯ ಗುಂಪುಗಳಿಗೆ ಸಾಲ ಮತ್ತು ಬಡ್ಡಿ ಸಹಾಯ ಧನ 27, ಎಸ್‌ಹೆಚ್‌ಜಿ (ಗ್ರೂಪ್ಸ್) ಸ್ವ-ಸಹಾಯ ಗುಂಪುಗಳ ರಚನೆ 54, ಎಎಲ್‌ಎಫ್-ಪ್ರದೇಶ ಮಟ್ಟದ ಒಕ್ಕೂಟ ರಚನೆ 4, ಪಿ.ಎಂ ಸ್ವನಿಧಿ ರೂ 20 ಸಾವಿರ ಸಾಲ ಸೌಲಭ್ಯ ಯೋಜನೆ 408, ಪಿ.ಎಂ.ಎಫ್.ಎಂ.ಇ -ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ 100 ಸೇರಿದಂತೆ ಒಟ್ಟು 621 ಗುರಿ ಹೊಂದಲಾಗಿದೆ.

ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಟಿಸಿ, ವೋಟರ್ ಕಾರ್ಡ್ 2, ರೇಷನ್ ಕಾರ್ಡ್, ಆಧಾರ್ ಕಾರ್ಡ್ (ಕಡ್ಡಾಯವಾಗಿ ಮೊಬೈಲ್ ನಂಬರ್ ಲಿಂಕ್ ಅನ್ನು ಹೊಂದಿರಬೇಕು), ಟ್ರೇಡ್ ಲೈಸನ್ಸ್ 2, ಪಾಸ್ ಪೋರ್ಟ ಸೈಜ್ ಪೋಟೋ, 20 ರೂ. ಬಾಂಡ್ ಕೋರ್ಟ್ ಆಫಿಡವಿಟ್‌ನೊಂದಿಗೆ, ಈ ಎಲ್ಲಾ ಅಗತ್ಯ ದಾಖಲೆಗಳ 2 ಪ್ರತಿ ಜೆರಾಕ್ಸ್‌ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಲಗತ್ತಿಸಬೇಕು.

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಗಂಗಾವತಿ ನಗರಸಭೆ ಕಾರ್ಯಾಲಯದ ನಲ್ಮ್ ವಿಭಾಗದಲ್ಲಿ ಪಡೆದು ಭರ್ತಿ ಮಾಡಿ, ಜೂನ್ 27ರ ಸಾಯಂಕಾಲ 5 ಗಂಟೆಯೊಳಗಾಗಿ ನಗರಸಭೆ ಕಾರ್ಯಾಲಯದಲ್ಲಿ ಸ್ವಯಂ ದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ದ್ವಿ ಪ್ರತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಗುರಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸುವ ಕುರಿತು ಪೌರಾಯುಕ್ತರ ನಿರ್ಧಾರವೇ ಅಂತಿಮ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ನಗರಸಭೆಯ ಡೇ-ನಲ್ಮ್ ವಿಭಾಗದ ಸಮುದಾಯ ಸಂಘಟಕರಾದ ಸರಸ್ವತಿ ಇವರನ್ನು ಸಂಪರ್ಕಿಸಬಹುದು.

English summary
Apprenticeship Mela organized in Koppal district Kukunuru ITI college on June. ITT passed candidates can attend interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X