Get Updates
Get notified of breaking news, exclusive insights, and must-see stories!

ದಟ್ಸ್ ಕನ್ನಡ ಅಕ್ಷರ ತೋಟದಲಿ ಅರಳಿದ ಗುಲಾಬಿ

Love flowers blossomed in Rose garden
ಪ್ರಮೋದ್ ಮುತಾಲಿಕ್ ಬಳಿದ ಮಸಿ ಬಂದ್ ಮುಖಾಂತರ ನಿಧಾನವಾಗಿ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಪರೀತ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳದ ಗುಲಾಬಿ ಪಕಳೆಯ ಪ್ರೇಮಿಗಳು ನಲ್ಲೆಯ ಹೃದಯವನ್ನು ಕದಿಯುವ ಕಾರ್ಯದಲ್ಲಿ, ಕೆಂಪು ಕೆಂಪು ಬಣ್ಣದ ಹುಡುಕಾಟದಲ್ಲಿ, ವ್ಯಾಲಂಟೈನ್ಸ್ ಡೇ ಕಾರ್ಡುಗಳ ಮುಖಾಂತರ ಹೃದಯದರಸಿಯ ಮನಮೆಚ್ಚಿಸುವ ಕೈಂಕರ್ಯದಲ್ಲಿ ಪ್ರವೃತ್ತರಾಗಿದ್ದಾರೆ.

ಉತ್ಕಟ ಪ್ರೇಮಿಗಳಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ. ಆದರೆ, ಪ್ರೇಮಿಗಳ ದಿನದಂದು ಪ್ರೇಮದ ಉತ್ಕಟತೆ ಪ್ರೇಮದ ಪರ್ವತ ಏರಿರುತ್ತದೆ. ಬೈಕಿನ ಹಿಂದೆ ಕೂತ ಜೀನ್ಸ್ ಟೀಶರ್ಟ್ ಹುಡುಗಿಯ ಗುಲಾಬಿ ರಂಗೇರಿದ ಮುಖ ವೇಲ್ ನಲ್ಲಿ ಮುಚ್ಚಿರುತ್ತದೆ. ನಲ್ಲನ ಕೈಗೆ ಚುಚ್ಚಿದ ರೋಸ್ ಮುಳ್ಳು ಪ್ರೀತಿಯ ನಿವೇದನೆ ಮಾಡಿರುತ್ತದೆ. ಟೆಡ್ಡಿ ಬೇರುಗಳ ಮಾರಾಟಗಾರನ ಮುಖದಲ್ಲಿ ಇನ್ನಿಲ್ಲದ ಕಳೆ ಮೂಡಿರುತ್ತದೆ. ಬೆಂಗಳೂರು ಬಿಟ್ಟ ಬೈಕು, ಕಾರುಗಳು ನಂದಿ ಬೆಟ್ಟ, ಮೇಕೆದಾಟು ಸಂಗಮ, ಚುಂಚಿ ಪಾಲ್ಸ್ ದಾರಿ ಹಿಡಿದಿರುತ್ತವೆ. ಹೆಣ್ಣು ಹೆತ್ತಿರುವ ಪಾಲಕರು ಮಾತ್ರ ಜಿಪಿ ರಾಜರತ್ನಂ ಹೇಳಿದಂತೆ ಬುಟ್ಟಿಗ್ ಬಿದ್ ಮೀನ್ ನಂತೆ ಚಟಪಡಿಕೆಯಿಂದ ಇಡೀ ದಿನ ಕಳೆದಿರುತ್ತಾರೆ.

ಏನೇ ಆಗಲಿ, ಪ್ರೇಮಿಗಳ ದಿನಾಚರಣೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಆಗಿರಲಿ, ಯಾರೇ ವಿರೋಧಿಸಲಿ, ಯಾರೇ ಪ್ರೇಮಿಗಳ ಪರ ಯುದ್ಧ ಸಾರಲಿ ನಲ್ಲೆಯ ತೆಕ್ಕೆಯಲ್ಲಿರುವ ನಲ್ಲನ ಮತ್ತು ನಲ್ಲನ ಗಾಢ ಆಲಿಂಗನದಲ್ಲಿ ತುಟಿಗೆ ತುಟಿ ನೀಡುವ ನಲ್ಲೆಗೆ ಸುತ್ತಲಿನ ಜಗತ್ತೆಲ್ಲ ಕತ್ತಲೆಯಲ್ಲಿ ಮುಳುಗಿರುತ್ತದೆ. ಪ್ರೀತಿ ಕುರುಡು ಕುರುಡು ಕುರುಡು.

ಎಲ್ಲದರ ನಡುವೆ, ದಟ್ಸ್ ಕನ್ನಡ ಅಕ್ಷರ ತೋಟದಲ್ಲಿ ವಿಹರಿಸುತ್ತಿರುವ ಮಿಲನದ ನಿರೀಕ್ಷೆಯಲ್ಲಿರುವ ಕಾಡುಹಕ್ಕಿ ಏನು ಹಾಡುತ್ತಿದೆ, ಮುದ್ದಾಡುವ ಪ್ರೇಮಿ ಏನು ಹೇಳ್ತಾನೆ, ವೈಯಾರಿ ಊರ್ವಶಿ ಯಾರನ್ನು ಮೋಡಿ ಮಾಡಿದ್ದಾಳೆ ಓದಿರಿ, ಕೇಳಿರಿ ಮತ್ತು ನಿಷ್ಕಳಂತ ಪ್ರೇಮದ ಗುಣಗಾನ ಮಾಡಿರಿ.

* ಲವ್ಲಿಗಾಗಿ ಹರಿ ಫೆಬ್ರವರಿ 13ರಂದು ಪರಾರಿ (ಹಾಸ್ಯ ಪ್ರಸಂಗ)
* ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ (ಟೌನ್ ಹಾಲ್ ಬೆಂಗಳೂರು. ಫೆ 11)
* ವಯ್ಯಾರಿ ಊರ್ವಶಿಯ ಪ್ರೇಮ ಪ್ರಸಂಗಳು (ಪುರಾಣಗಳಲ್ಲಿ ಪ್ರೇಮಿಗಳು)
* ದೇವಲೋಕದ ಚೆಲುವೆ ಊರ್ವಶಿ ಬಯೋಡೇಟ (ಇವಳು ಯಾರು ಬಲ್ಲಿರೇನು?)
* ಪ್ರೇಮಿಗಳ ದಿನಕ್ಕೆ ಒಂದಿಷ್ಟು 'ಮುತ್ತಿನ' ಹನಿಗಳು (ಶಾರ್ಟ್ ಅಂಡ್ ಸ್ವೀಟ್)
* ಮಿಲನದ ನಿರೀಕ್ಷೆಯಲ್ಲಿ ಕಾಡುಹಕ್ಕಿ (ರವಿ ಬೆಳಗೆರೆ)
* ಪ್ರೇಮಿಗಳಿಗೆ ಜ್ವರ, ಕಾಟಿ ಜೋನಿಗೆ ಸೇರ್ಪಡೆ (ಬೆಂಗಳೂರು ಸುದ್ದಿ)
* ಪ್ರೀತಿಯ ಆಳ ಅಗಲ ಅಳೆಯಲು ಸಾಧ್ಯವೆ? (ಜಿಎಸ್ ಕುಮಾರ್)
* ಹೊಡೆದಾಡುವರ ಮಧ್ಯೆ ಮುದ್ದಾಡುವ ಪ್ರೇಮಿ (ಪ್ರಶಾಂತ್ ಬೀಚಿ)
* ಪ್ರೇಮಿಗಳೆ ಮೈಮರೆತರೆ ಮದುವೆ ಗ್ಯಾರಂಟಿ! (ಹುಬ್ಬಳ್ಳಿಯಿಂದ)
* ಮುಮ್ತಾಜಳ ರಕ್ಷಣೆಗೆ ಸಾವಿರಾರು ತುಳಸಿಯರು (ಪ್ರಕೃತಿ ವಿಸ್ಮಯ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+