ಪ್ರೇಮಿಗಳಿಗೆ ಜ್ವರ, ಕಾಟಿ ಜೋನಿಗೆ ಸೇರ್ಪಡೆ

ಫ್ರೆಂಡ್ ಶಿಪ್ ಕಾಂಬೋದಲ್ಲಿ ಏನಿರುತ್ತದೆ? ಸಸ್ಯಾಹಾರ ಬೇಕಾದರೆ ಎರಡು ತವಾ ಪನ್ನೀರ್ ರೋಲ್, ಒಂದು ವೆಜಿಟಬಲ್ ಕಟ್ಲೆಟ್ಟಿನ ತುಂಡು ಮತ್ತು ಕೋಕು. ಇದರ ಬೆಲೆ 230 ರೂಪಾಯಿ ಮಾತ್ರ.
ನಾನ್ ವೆಜಿಟೇರಿಯನ್ ಕಾಂಬೋ ಬಯಸುವವರಿಗೆ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಎರಡು ಚಿಕನ್ ಟಿಕ್ಕ ಜಂಬೋ ರೋಲ್, ಒಂದು ತುಕಡಾ ಚಿಕನ್ ನಗೆಟ್ ಮತ್ತು ಕೋಕು. ಇದರ ಬೆಲೆ 280 ರೂಪಾಯಿಗಳು.
"ಕಾಟಿ ಜೋನ್ ಗೆ ಇನ್ನೊಂದು ಹೆಸರು ಫನ್. ಸ್ನೇಹ ಮನೋಭಾವವನ್ನು ಬೆಳೆಸುವುದಕ್ಕೆ ಮತ್ತು ಉತ್ತೇಜಿಸುವುದಕ್ಕೆ ನಮ್ಮ ಕಾಂಬೋ ಕೊಡುಗೆಗಳು ಇಂಬುಕೊಡುತ್ತವೆ. ಉತ್ತಮ ರೀತಿಯಲ್ಲಿ ತಯಾರಿಸಿದ ಈ ಆಹಾರ ಪದಾರ್ಥಗಳು ಪೌಷ್ಟಿಕಾಂಶ ಭರಿತವಾಗಿದ್ದು ಪ್ರೇಮಿಗಳ ಉಲ್ಲಾಸವನ್ನು ವೃದ್ಧಿಸುತ್ತವೆ" ಎಂದು ಕಾಟಿಜೋನಿನ ಸಿಇಒ ಕಿರಣ್ ನಾಡಕರ್ಣಿ ಹೇಳಿದರು. ವ್ಯಾಲಂಟೈನ್ ಡೇ ನಿಮಿತ್ತ ಸಾದರಪಡಿಸಿರುವ ಕಾಂಬೊ ಮತ್ತಿತರ ಆಕರ್ಷಕ ಆಹಾರ ವೈವಿಧ್ಯ ಬೆಂಗಳೂರಿನಲ್ಲಿರುವ ಕಾಟಿ ಜೋನಿನ ಎಲ್ಲ ಮಳಿಗೆಗಳಲ್ಲಿ ಲಭ್ಯವಿವೆ ಎಂದು ಅವರು ಹೇಳಿದರು.
"ಇನ್ನೊಂದು ವಿಶೇಷವೆಂದರೆ ಪ್ರೇಮಿಗಳು ತಮ್ಮ ಪ್ರೇಮ ಸಂದೇಶವನ್ನು ಬರೆದು ಕಾಟಿ ಮಳಿಗೆಗಳಲ್ಲಿ ಇಟ್ಟಿರುವ ಡ್ರಾಪ್ ಬಾಕ್ಸಿಗಳಿಗೆ ಹಾಕಬೇಕು. ಅತ್ಯುತ್ತಮ ಸ್ನೇಹ ಸಂದೇಶಕ್ಕೆ 1000 ರೂ. ಮುಖಬೆಲೆಯ ಕಾಟಿ ವೋಚರುಗಳನ್ನು ಬಹುಮಾನವಾಗಿ ನೀಡಲಾಗುವುದು" ಎಂದು ಸಿಒಓ ಪರಾಗ್ ದತ್ತ ತಿಳಿಸಿದರು.
ಕಾಟಿ ತಿಂಡಿಗಳ ಪಾರ್ಸೆಲ್ ಸೌಲಭ್ಯವೂ ಇದೆ. 080-411-22-100. ಅಂತರ್ಜಾಲ ತಾಣ www.kaatizone.com












Click it and Unblock the Notifications