ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೌಟುಂಬಿಕ ದೌರ್ಜನ್ಯ ಮತ್ತು ಅದರ ವಿರುದ್ಧ ಇರುವ ಕಾನೂನುಗಳು

|
Google Oneindia Kannada News

ವರದಕ್ಷಿಣೆ ಕಿರುಕುಳ, ಮರ್ಯಾದಾ ಹತ್ಯೆಯಂಥ ಪ್ರಕರಣಗಳು ಬೆಳಕಿಗೆ ಬಂದಾಗ ಪತ್ರಿಕೆಗಳಲ್ಲಿ 'ಕೌಟುಂಬಿಕ ದೌರ್ಜನ್ಯ' ಎಂಬ ಪದ ಕಣ್ಣಿಗೆ ರಾಚುತ್ತದೆ. ಕೌಟುಂಬಿಕ ವ್ಯವಸ್ಥೆಯ ಬಗೆಗಿನ ವಿಶ್ವಾಸಾರ್ಹತೆಯನ್ನೇ ಇಂಥ ದೌರ್ಜನ್ಯಗಳು ಕಡಿಮೆ ಮಾಡುತ್ತಿವೆ ಎಂಬುದನ್ನು ಮನಗಂಡ ವಿಶ್ವಸಂಸ್ಥೆ ನವೆಂಬರ್ 25 ಅನ್ನು "ಅಂತಾರಾಷ್ಟ್ರೀಯ ಕೌಟುಂಬಿಕ ದೌರ್ಜನ್ಯ ತಡೆ ದಿನ"ವನ್ನಾಗಿ ಆಚರಿಸಲು ನಿರ್ಧರಿಸಿತು.

ವಿಶ್ವದಾದ್ಯಂತ ಇರುವ ಮಹಿಳೆಯರು ಎದುರಿಸುತ್ತಿರುವ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಮತ್ತಿತರ ಹಿಂಸೆಯ ತಡೆಯ ಅರಿವು ಮೂಡಿಸುವ ಸಲುವಾಗ ಈ ದಿನವನ್ನು ಆಚರಿಸಲಾಗುತ್ತದೆ.

ಗಂಡನನ್ನು 5 ಲಕ್ಷಕ್ಕೆ ಇಟ್ಕೊಂಡವಳಿಗೆ ಮಾರಿದ ಕಟ್ಕೊಂಡವಳು! ಗಂಡನನ್ನು 5 ಲಕ್ಷಕ್ಕೆ ಇಟ್ಕೊಂಡವಳಿಗೆ ಮಾರಿದ ಕಟ್ಕೊಂಡವಳು!

ಈ ದಿನವನ್ನು ಬೇರೆ ಬೇರೆ ಸ್ಥಳಗಳಲ್ಲಿ ಮೆರವಣಿಗೆ, ಶಾಂತಿಯುತ ಪ್ರತಿಭಟನೆ ಮಾಡುವ ಮೂಲಕ ಆಚರಿಸಲಾಗುತ್ತದೆ. ಪ್ಲೆಕಾರ್ಡ್ ಗಳನ್ನು ಹಿಡಿದು, ಘೋಷಣೆ ಕೂಗುವ ಮೂಲಕ ದೌರ್ಜನ್ಯವನ್ನು ವಿರೋಧಿಸಲಾಗುತ್ತದೆ.

ಅಷ್ಟಕ್ಕೂ ಕೌಟುಂಬಿಕ ದೌರ್ಜನ್ಯ ಎಂದರೇನು?

ಅಷ್ಟಕ್ಕೂ ಕೌಟುಂಬಿಕ ದೌರ್ಜನ್ಯ ಎಂದರೇನು?

ಒಂದು ಕುಟುಂಬ ವ್ಯವಸ್ಥೆಯಲ್ಲಿ ಮದುವೆಯ ನಂತರ ಅಥವಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಮೇಲೆ ನಡೆವ ಹಿಂಸೆಯನ್ನೇ ಕೌಟುಂಬಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ. ಉದಾ: ಒಬ್ಬ ಮಹಿಳೆಯ ಮೇಲೆ ವರದಕ್ಷಿಣೆಗಾಗಿ ಆಕೆಯ ಪತಿ ಮತ್ತು ಕುಟುಂಬದ ಇನ್ನಿತರರು ಮಾನಸಿಕ ಮತ್ತು ದೈಹಿಕವಾಗಿ ನಡೆಸುವ ಹಿಂಸೆ. ನೇರಳೆ ಬಣ್ಣದ ರಿಬ್ಬನ್ ಕೌಟುಂಬಿಕ ದೌರ್ಜನ್ಯ ತಡೆಯ ಸಂಕೇತ.

ಯಾವುದು ಕೌಟುಂಬಿಕ ದೌರ್ಜನ್ಯ?

ಯಾವುದು ಕೌಟುಂಬಿಕ ದೌರ್ಜನ್ಯ?

ಒಬ್ಬ ವ್ಯಕ್ತಿಯ ಮೇಲೆ ದೈಹಿಕ, ಮಾತಿನ ಮೂಲಕ, ಭಾವನಾತ್ಮಕವಾಗಿ, ಆರ್ಥಿಕ, ಧಾರ್ಮಿಕ, ಲೈಂಗಿಕವಾಗಿ ನಡೆವ ಹಿಂಸೆಯನ್ನು ಕೌಟುಂಬಿಕ ದೌರ್ಜನ್ಯ ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಕೌಟುಂಬಿಕ ದೌರ್ಜನ್ಯದಿಂದ ಅತೀ ಹೆಚ್ಚು ಪರಿತಪಿಸುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಯಾವ ದೇಶದಲ್ಲಿ ಲಿಂಗ ಸಮಾನತೆ ಕಡಿಮೆಯಿದೆಯೋ ಅಲ್ಲಿ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ.

ಹೃತಿಕ್ ರೋಷನ್ ಇಷ್ಟ ಎನ್ನುವ ಅಸೂಯೆಯಿಂದ ಪತ್ನಿಯನ್ನೇ ಕೊಂದಹೃತಿಕ್ ರೋಷನ್ ಇಷ್ಟ ಎನ್ನುವ ಅಸೂಯೆಯಿಂದ ಪತ್ನಿಯನ್ನೇ ಕೊಂದ

2005 ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ

2005 ರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ

ಭಾರತದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ ಸರ್ಕಾರ 2005 ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಈ ಕಾಯ್ದೆಯ ಪ್ರಕಾರ ಕಾನೂನು ಮಗಿಳೆಗೆ ಈ ಕೆಳಗಿನಂತೆ ನ್ಯಾಯ ನೀಡಬಹುದು.
* ಗಂಡನ ಮನೆಯಿಂದ ಹೊರಬರದೆ, ಅಲ್ಲಿಯೇ ಉಳಿಯಲು ಹೇಳಬಹುದು, ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆಸದಂತೆ ಎಚ್ಚರಿಕೆ ನೀಡಬಹುದು.
* ಒಂದು ವೇಳೆ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಗಂಡನ ಆಸ್ತಿಯಲ್ಲಿ ಪಾಲಿಲ್ಲದಿದ್ದರೂ ಮನೆಯ ಒಂದು ಭಾಗವನ್ನು ಆಕೆಗೆ ನೀಡುವಂತೆ ಹೇಳುವುದು.
* ಆಕೆಯನ್ನು ಮನೆಯಿಂದ ಹೊರಹಾಕುವಂತಿಲ್ಲ ಮತ್ತು ಆಕೆಗೆ ಉದ್ಯೋಗ ಸ್ಥಳದಲ್ಲೂ ತೊಂದರೆ ನೀಡುವಂತಿಲ್ಲ
* ಆರೋಪಿ ದೌರ್ಜನ್ಯಕ್ಕೊಳಗಾದ ವ್ಯಕ್ತಿಗೆ ಯಾವುದೇ ರೀತಿಯ ದೂರವಾಣಿ ಕರೆ, ಮೌಖಿಕವಾಗಿ, ಲಿಖಿತವಾಗಿ, ವಿದ್ಯುನ್ಮಾನ ಮಾಧ್ಯಮದ ಮೂಲಕ ಸಂದೇಶ ಕಳಿಸುವುದನ್ನು ನಿಷೇಧಿಸಬಹುದು.
* ತಿಂಗಳ ಜೀವನಾಂಶ ಕೇಳಬಹುದು. ಮತ್ತು ದೌರ್ಜನ್ಯದಿಂದ ಉಂಟಾದ ನಷ್ಟ ಮತ್ತು ತೊಂದರೆಗಳಿಗೆ ಪರಿಹಾರ ನೀಡುವುದು.
* ದೌರ್ಜನ್ಯದಿಂದ ಮಾನಸಿಕ, ಭಾವನಾತ್ಮಕ ಒತ್ತಡ ಉಂಟಾಗಿದ್ದರೆ ಪರಿಹಾರ ಕೇಳಬಹುದು.
* ಈ ಕಾನೂನಿನಡಿ ಕಾನೂನುಬಾಹಿರ ಕೃತ್ಯ ಎಸಗಿದ್ದರೆ 1 ವರ್ಷ ಸೆರೆವಾಸದ ಶಿಕ್ಷೆ ಮತ್ತು 20,000 ರೂ.ವರೆಗೆ ದಂಡ ವಿಧಿಸಬಹುದು.

NFHS ಸಮೀಕ್ಷೆ ವರದಿ

NFHS ಸಮೀಕ್ಷೆ ವರದಿ

2006 ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ದೌರ್ಜನ್ಯಕ್ಕೀಡಾದ ಒಟ್ಟು 83703 ಮಹಿಳೆಯರಲ್ಲಿ 67426 ಹಿಂದು ಮಹಿಳೆಯರಿದ್ದರೆ, 11,396 ಮುಸ್ಲಿಂ ಮಹಿಳೆಯರು, 2,039 ಕ್ರೈಸ್ತ ಮಹಿಳೆಯರು, 1,492 ಸಿಕ್ಖ್ ಮಹಿಳೆಯರಿದ್ದರು. ಭಾರತದಲ್ಲಿ ನಡೆಯುವ ಕೌಟುಂಬಿಕ ಹಿಂಸೆಗಳಲ್ಲಿ ಶೇ.1 ರಷ್ಟು ಮಹಿಳೆಯರು ಮಾತ್ರವೇ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾರೆ. ಮಿಕ್ಕವರಲ್ಲಿ ಮುಕ್ಕಾಲು ಪ್ರತಿಶತ ಜನ ಹಿಂಸೆಯನ್ನು ಸಹಿಸಿಕೊಂಡೇ ಉಳಿಯುತ್ತಾರೆ, ಇಲ್ಲವೇ ಆತ್ಮಹತ್ಯೆಯ ಪ್ರಯತ್ನ ನಡೆಸುತ್ತಾರೆ ಎನ್ನಲಾಗಿದೆ. ಜಗತ್ತಿನಲ್ಲಿರುವ ಒಟ್ಟು ಮಹಿಳೆಯರ ಪೈಕಿ 38,028,000ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೌಟುಂಬಿಕ ದೌರ್ಜನ್ಯವನ್ನು ಎದುರಿಸಿದ್ದಾರೆ. ಅಮೆರಿಕದಲ್ಲಿ ಪ್ರತಿದಿನ ಪುರುಷನಿಂದ ಕೌಟುಂಬಿಕ ದೌರ್ಜನ್ಯದಿಂದ ಕೊಲೆಯಾಗುತ್ತಿರುವ ಮಹಿಳೆಯರ ಸಂಖ್ಯೆ 3. ಜಗತ್ತಿನಲ್ಲಿರುವ ಪ್ರತಿ 4 ಮಹಿಳೆಯರಲ್ಲಿ ಒಬ್ಬ ಮಹಿಳೆ ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆಯಾಗುತ್ತಿದ್ದಾರೆ.

ಪಾರ್ಟಿಗೆಂದು ಮನೆಗೆ ಬಂದವರು, ಅತ್ಯಾಚಾರ, ಕೊಲೆ ಮಾಡಿದ್ರುಪಾರ್ಟಿಗೆಂದು ಮನೆಗೆ ಬಂದವರು, ಅತ್ಯಾಚಾರ, ಕೊಲೆ ಮಾಡಿದ್ರು

ಪುರುಷರ ಮೇಲೂ ದೌರ್ಜನ್ಯ

ಪುರುಷರ ಮೇಲೂ ದೌರ್ಜನ್ಯ

ಹೆಚ್ಚಾಗಿ ಕೌಟುಂಬಿಕ ದೌರ್ಜನ್ಯ ಮಹೆಯರ ಮೇಲೆಯೇ ನಡೆಯುತ್ತಿದ್ದರೂ, ಈ ಕಾನೂನನ್ನು ಇತ್ತೀಚೆಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆಗಳೂ ನಡೆಯುತ್ತಿದೆ. ದೌರ್ಜನ್ಯ ನಡೆಸದಿದ್ದರೂ ಜೀವನಾಂಶಕ್ಕಾಗಿ ದೌರ್ಜನ್ಯದ ಆರೋಪ ಹೊರಿಸುವ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಪುರುಷರ ಮೇಲೆ ನಡೆದ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ವಿರುದ್ಧ ಹೋರಾಡಲು ಯಾವುದೇ ಸೂಕ್ತ ಕಾನೂನು ಇಲ್ಲದ ಕಾರಣ, ಅವು ಬೆಳಕಿಗೆ ಬರುತ್ತಿಲ್ಲ.

English summary
What Is Domestic Violence? What Are the Laws Against Domestic Violence,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X