ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Earth Hour 2022: ಇಂದು ರಾತ್ರಿ 8:30 ರಿಂದ 9:30 ರವರೆಗೆ ವಿದ್ಯುತ್ ಬಳಕೆ ನಿಲ್ಲಿಸಿ, ಭೂಮಿಯ ತಾಪ ಇಳಿಸಿ..!!!

|
Google Oneindia Kannada News

ಹೊಸದಿಲ್ಲಿ ಮಾರ್ಚ್ 26: ಮಾರ್ಚ್ ತಿಂಗಳ ಕೊನೆಯ ಶನಿವಾರದಂದು ವಿಶ್ವದಾದ್ಯಂತ ಜನರು ಅರ್ಥ್ ಅವರ್ ಅನ್ನು ಆಚರಿಸುತ್ತಾರೆ. ಜಾಗತಿಕ ತಾಪಮಾನ ನಿಯಂತ್ರಣ, ಏರುತ್ತಿರುವ ಪರಿಸರ ಮಾಲಿನ್ಯ ತಡೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಅರ್ಥ್ ಅವರ್ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷ ಇದು ಮಾರ್ಚ್ 26 ರಂದು ಮಾಡಲಾಗುತ್ತದೆ. ಅರ್ಥ್ ಅವರ್ ಎಂಬುದು WWF (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್/ವರ್ಲ್ಡ್ ವೈಲ್ಡ್‌ಲೈಫ್ ಫಂಡ್) ನಿಂದ ರಚಿಸಲ್ಪಟ್ಟ ವಾರ್ಷಿಕ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದು ಪ್ರಪಂಚದಾದ್ಯಂತದ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳು ತಮ್ಮ ಅನಿವಾರ್ಯವಲ್ಲದ ದೀಪಗಳು ಮತ್ತು ವಿದ್ಯುತ್ ಉಪಕರಣಗಳನ್ನು ನಿಗದಿತ ಸಮಯದಲ್ಲಿ ಒಂದು ಗಂಟೆ ಆಫ್ ಮಾಡಲು ಒತ್ತಾಯಿಸುತ್ತದೆ.

ಅರ್ಥ್ ಅವರ್ ಈ ಶನಿವಾರ ರಾತ್ರಿ 8:30 ಕ್ಕೆ (ಭಾರತೀಯ ಕಾಲಮಾನ) ಮಾಡಲಾಗುತ್ತದೆ. ಪ್ರಕೃತಿಯ ನಷ್ಟ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಲಕ್ಷಾಂತರ ಜನರೊಂದಿಗೆ ಸೇರಿ ಒಂದು ಗಂಟೆ ಪವರ್ ಬಂದ್ ಮಾಡಲಾಗುತ್ತದೆ.

ಅರ್ಥ್ ಅವರ್ 2022: ದಿನಾಂಕ, ಸಮಯ, ಥೀಮ್

ಜಗತ್ತಿನಾದ್ಯಂತ ಜನರು ಮಾರ್ಚ್‌ನ ಕೊನೆಯ ಶನಿವಾರದಂದು ರಾತ್ರಿ 8:30 ರಿಂದ 9.30 ರವರೆಗೆ ದೀಪಗಳನ್ನು ಆಫ್ ಮಾಡುವ ಮೂಲಕ 'ಅರ್ಥ್ ಅವರ್' ಅನ್ನು ಆಚರಿಸುತ್ತಾರೆ.

 Earth Hour Day 2022: Date, theme, measures, history and significance in Kannada

ಅದು ಯಾವಾಗ ಮತ್ತು ಎಲ್ಲಿ ಪ್ರಾರಂಭವಾಯಿತು?

170 ದೇಶಗಳ ವಿವಿಧ ನಗರಗಳಲ್ಲಿ ವಿದ್ಯುತ್ ದೀಪಗಳನ್ನು ಒಂದು ಗಂಟೆ ಕಾಲ ಬಂದ್ ಮಾಡಲಾಗುತ್ತದೆ. ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ . ಅರ್ಥ್ ಅವರ್ ಕಾರ್ಯಕ್ರಮವನ್ನು ಪಾಲಿಸಲು ಅನೇಕ ಸಂಸ್ಥೆಗಳು, ಕಚೇರಿಗಳು ಸಜ್ಜಾಗಿವೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಸಾಕಷ್ಟು ಕಾರ್ಯಕ್ರಮಗಳು ರದ್ದಾಗಿವೆ.

ಅರ್ಥ್ ಅವರ್ 2007ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪ್ರಾರಂಭವಾಯಿತು. ಒಂದು ವರ್ಷದ ನಂತರ ಇದು 18 ಸಮಯ ವಲಯಗಳಲ್ಲಿ 35 ಕ್ಕೂ ಹೆಚ್ಚು ದೇಶಗಳಲ್ಲಿ 370 ನಗರಗಳು ಮತ್ತು ಪಟ್ಟಣಗಳಲ್ಲಿ ಆಚರಿಸಲಾಯಿತು. ನಂತರ ಅರ್ಥ್ ಅವರ್‌ಗಾಗಿ ತಮ್ಮ ಅಗತ್ಯವಲ್ಲದ ಬೆಳಕನ್ನು ಆಫ್ ಮಾಡುವ ಮೂಲಕ ಕೆಲವು ವೆಬ್‌ಸೈಟ್‌ಗಳು ಈ ಈವೆಂಟ್‌ನಲ್ಲಿ ಭಾಗವಹಿಸಿದ್ದವು, ಗೂಗಲ್‌ನ ಮುಖಪುಟವು ಈ ಸಮಯದಲ್ಲಿ ಕತ್ತಲು ಆಗಲಿದೆ.

ಭಾರತದಲ್ಲಿ, ಅರ್ಥ್ ಅವರ್ ಅನ್ನು ಮೊದಲು ಮಾರ್ಚ್ 26, 2011 ರಂದು ರಾತ್ರಿ 8:30 ರಿಂದ 9:30 ರವರೆಗೆ ನಡೆಸಲಾಯಿತು. ಅಂದಿನ ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು WWF ಇಂಟರ್ನ್ಯಾಷನಲ್ ಡೈರೆಕ್ಟರ್ ಜನರಲ್ ಜಿಮ್ ಲೀಪ್ ಅವರ ಉಪಸ್ಥಿತಿಯಲ್ಲಿ ಆರಂಭಿಸಿದರು.

ಅರ್ಥ್ ಅವರ್ ಎಂದರೇನು?

ಆಸ್ಟ್ರೇಲಿಯಾದ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸ್ವಯಂ ಸೇವಾ ಸಂಸ್ಥೆ ಈ ಆಂದೋಲನದ ಜನಕ. 2007ರಲ್ಲಿ ಸಿಡ್ನಿಯಲ್ಲಿ ಜಾರಿಗೆ ಬಂದ ಇದು ಜಾಗತಿಕವಾಗಿ ಮನ್ನಣೆ ಪಡೆಯಿತು. ಈ ಅಭಿಯಾನದಲ್ಲಿ ಭಾರತ ಸೇರಿದಂತೆ 162 ದೇಶಗಳು ಭಾಗವಹಿಸಿವೆ. ಬೆಂಗಳೂರು ಸೇರಿ 7 ಸಾವಿರಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿವೆ.

ಅರ್ಥ್‌ ಅವರ್ ಆಚರಣೆಗೆ ಪ್ರಮುಖ ಕಾರಣಗಳು

ಸಣ್ಣ ಪ್ರಯತ್ನ ದೊಡ್ಡ ಬದಲಾವಣೆಯನ್ನು ತರುತ್ತದೆ. ಮನೆಯಲ್ಲಿ ಕೋಣೆಯಲ್ಲಿ ಉಪಯೋಗಿಸದೇ ಇದ್ದಾಗ ಲೈಟ್ ಆಫ್ ಮಾಡುವುದು, ಅನಗತ್ಯ ವಿದ್ಯುತ್ ಬಳಸದೇ ಇರುವುದು , ಕಡಿಮೆ ಶಾಖದಲ್ಲಿ ಬಲ್ಬ್‌ಗಳನ್ನು ಬಳಸುವುದರಿಂದ ಕೋಣೆಯ ತಾಪಮಾನ ನಿಯಂತ್ರಣದಲ್ಲಿರುತ್ತದೆ. ಹೀಗೆ ವಿದ್ಯುತ್ ಉಳಿತಾಯದಲ್ಲಿ ಸಣ್ಣ ಪುಟ್ಟ ಕ್ರಮಗಳು ಕೂಡ ತಾಪಮಾನ ನಿಯಂತ್ರಣದಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಅರಿವು ಮೂಡಿಸುವ ಸಣ್ಣ ಪ್ರಯತ್ನ ವರ್ಷಕ್ಕೆ ಒಂದು ತಾಸು ವಿದ್ಯುತ್ ಸ್ವಿಚ್‌ಗಳನ್ನು ಆಫ್ ಮಾಡುವುದರಿಂದ ಜಾಗತಿಕ ತಾಪಮಾನ ಕಡಿಮೆಯಾಗುತ್ತದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಉತ್ತಮ ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಮಿತವ್ಯಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ವಿದ್ಯುತ್ ಬಳಕೆ ಹೆಚ್ಚಿದಂತೆಲ್ಲಾ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗುತ್ತದೆ.

English summary
The annual Earth Hour will be observed by people across the world on the last Saturday of March. This year, it falls on March 26
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X