2017ರ ಫೇವರಿಟ್ : ಚಿಕನ್ ಬಿರಿಯಾನಿಗೆ ಚಿನ್ನ, ಮಸಾಲೆ ದೋಸೆಗೆ ಬೆಳ್ಳಿ

Posted By:
Subscribe to Oneindia Kannada

ಚಿಕನ್ ಬಿರಿಯಾನಿ- 2017ರಲ್ಲಿ ಭಾರತೀಯರ ಮನಗೆದ್ದಿರುವ ಆಹಾರ ನಂಬರ್ ಒನ್. ಸ್ವಿಗ್ಗಿ ಆನ್ ಲೈನ್ ಡೆಲಿವರಿ ವೆಬ್ ಸೈಟ್ ನಿಂದ ಹೊರಬಂದಿರುವ ಮಾಹಿತಿ ಪ್ರಕಾರ 2017ರಲ್ಲಿ ಆನ್ ಲೈನ್ ಮೂಲಕ ಅತಿ ಹೆಚ್ಚು ಆರ್ಡರ್ ಮಾಡಿರುವುದು ಇದನ್ನೇ.

ಮುಂಬೈ, ದೆಹಲಿ- ಎನ್ ಸಿಆರ್, ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ನಡೆಸಿದ ಅಧ್ಯಯನದಿಂದ ಈ ವಿಚಾರ ಗೊತ್ತಾಗಿದೆ. ಇನ್ನು ಆ ನಂತರದ ಸ್ಥಾನದಲ್ಲಿ ಮಸಾಲೆ ದೋಸೆ, ಬಟರ್ ನಾನ್, ತಂದೂರಿ ರೋಟಿ ಮತ್ತು ಪನೀರ್ ಬಟರ್ ಮಸಾಲೆ ಮೊದಲ ಐದು ಸ್ಥಾನದೊಳಗಿವೆ.

ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್!

ಮೊದಲ ಐದರ ಪಟ್ಟಿಯಲ್ಲಿ ಪಿಜ್ಜಾಗೆ ಸ್ಥಾನವೇ ಇಲ್ಲ. ಆದರೆ ಅತಿ ಹೆಚ್ಚು ಸರ್ಚ್ ಮಾಡಿರುವ ಪಟ್ಟಿಯಲ್ಲಿದೆ. ಐದು ಲಕ್ಷಕ್ಕೂ ಹೆಚ್ಚು ಬಾರಿ ಪಿಜ್ಜಾಗಾಗಿ ಸರ್ಚ್ ಮಾಡಿದ್ದಾರೆ. ಬರ್ಗರ್, ಚಿಕನ್, ಕೇಕ್ ಮತ್ತು ಮೊಮೊಸ್ ಗೆ ಆನ್ ಲೈನ್ ನಲ್ಲಿ ಹೆಚ್ಚು ಹುಡುಕಾಡಿದ್ದಾರೆ.

Chicken biriyani : 2017 highest ordered food in online

ಡಿಸೆಂಬರ್ ಮೂರರಂದು ಆಹಾರಪ್ರಿಯರು ಅತಿ ಹೆಚ್ಚು ಪ್ರಮಾಣದಲ್ಲಿ ಆನ್ ಲೈನ್ ನಲ್ಲಿ ಬುಕ್ ಮಾಡಿದ್ದಾರೆ. ಸ್ವಿಗ್ಗಿಯಲ್ಲಿ ಒಬ್ಬನೇ ವ್ಯಕ್ತಿ 2017ರಲ್ಲಿ 1415 ಬಾರಿ ಆರ್ಡರ್ ಮಾಡಿದ್ದಾರೆ.

ತಿಂಡಿ ವಿಚಾರಕ್ಕೆ ಬಂದರೆ ಮಸಾಲೆ ದೋಸೆ, ಇಡ್ಲಿ- ವಡೆಯದೇ ಆಧಿಪತ್ಯವಾದರೆ, ಊಟಕ್ಕೆ ಚಿಕನ್, ಮಟನ್ ಅಥವಾ ವೆಜ್ ಬಿರಿಯಾನಿ ಅಚ್ಚುಮೆಚ್ಚು ಎಂದು ಸಾಬೀತಾಗಿದೆ. ಅದರ ಜತೆಗೆ ಪನೀರ್ ಬಟರ್ ಮಸಾಲ ಮತ್ತು ಮಸಾಲೆ ದೋಸೆ, ದಾಲ್ ಮಖಾನಿ ಮತ್ತು ಚಿಕನ್ ಫ್ರೈಡ್ ರೈಸ್ ಗೆ ಬೇಡಿಕೆ ಕಂಡುಬಂದಿದೆ.

ಸಂಜೆ ತಿಂಡಿ ಸಮಯದಲ್ಲಿ ಭಾರತೀಯರ ಮನ ಗೆದ್ದಿದ್ದು ಯಾವುದು ಅಂತ ನೋಡಿದರೆ ಪಾವ್ ಬಾಜಿ, ಫಿಂಗರ್ ಚಿಪ್ಸ್, ಸಮೋಸಾ, ಚಿಕನ್ ರೋಲ್, ಚಿಕನ್ ಬರ್ಗರ್ ಹಾಗೂ ಬೇಲ್ ಪುರಿ ಹೆಸರುಗಳು ರಾರಾಜಿಸುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chicken biriyani : 2017 highest ordered food in online according Swiggy survey. Masala Dosa, Butter Naan, Tandoori Roti and Paneer Butter Masala placed in Top 5 list. Happy New Year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ