ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Election Flashback : ಉತ್ತರ ಕನ್ನಡದಲ್ಲಿ ಮಹಿಳಾ ಶಾಸಕಿಯರ ಆಡಳಿತ

|
Google Oneindia Kannada News

ಉತ್ತರ ಕನ್ನಡ, ಏಪ್ರಿಲ್ 06 : ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಮಹಿಳಾ ಮಣಿಗಳ ಸಾಧನೆಗಳು ಕೂಡ ಸಾಕಷ್ಟಿವೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರು ಆಡಳಿತ ನಡೆಸಿದ್ದು, ಅವರ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳೂ ನಡೆದಿವೆ.

ಜಿಲ್ಲೆಯಲ್ಲಿ ಯಾವುದೇ ಮಹಿಳಾ ಮೀಸಲು ಕ್ಷೇತ್ರ ಇಲ್ಲ. ಆದರೂ, ಪುರುಷ ಅಭ್ಯರ್ಥಿಗಳ ಜತೆಗೆ ಸ್ಪರ್ಧಿಸಿ ಮಹಿಳೆಯರು ಗೆದ್ದಿರುವ ಅನೇಕ ಉದಾಹರಣೆಗಳಿವೆ. ಪುರುಷ ಅಭ್ಯರ್ಥಿಗಳನ್ನೂ ಎದುರಿಸಿ ಟಿಕೆಟ್ ಪಡೆದ ನಿದರ್ಶನಗಳಿವೆ. ಜಿಲ್ಲೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲೇ ಅತಿ ಹೆಚ್ಚು ಬಾರಿ ಮಹಿಳೆಯರು ಸ್ಪರ್ಧಿಸಿದ್ದಾರೆ.

ಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯಉಡುಪಿ ಕ್ಷೇತ್ರ flashback : ಮಧ್ವರಾಜ್ ಕುಟುಂಬ ರಾಜಕೀಯ

ವಸಂತಲತಾ : ಈವರೆಗೆ ನಾಲ್ವರು ಮಹಿಳೆಯರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಾಗಿ ಆಡಳಿತ ನಡೆಸಿದ್ದಾರೆ. ಕುಮಟಾ ವಿಧಾನಸಭಾ ಕ್ಷೇತ್ರದ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಸಂತಲತಾ ಮಿರ್ಜಾನಕರ್ ಶಾಸಕರಾಗಿ ಆಯ್ಕೆಯಾಗಿದ್ದರು.

Uttara Kannada district assembly election flashback

ಪುರುಷ ಅಭ್ಯರ್ಥಿಗಳನ್ನು ಮೀರಿಸಿ ಮೊದಲ ಬಾರಿಗೆ 1957ರ ಚುನಾವಣೆಯಲ್ಲಿ 14,034 ಹಾಗೂ ಎರಡನೇ ಬಾರಿಯ 1962ರ ಚುನಾವಣೆಯಲ್ಲಿ 14,225 ಮತಗಳನ್ನು ಪಡೆದು ಆಯ್ಕೆಯಾಗಿ ಶಾಸಕರಾಗಿದ್ದರು.

ಬಳಿಕ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ 2013ರಲ್ಲಿ ಕಾಂಗ್ರೆಸ್‌ನಿಂದ ಶಾರದಾ ಮೋಹನ್ ಶೆಟ್ಟಿ ಅವರು ಸ್ಪರ್ಧಿಸಿ 36,756 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಳಿಕ ಇದೇ ಅವಧಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯ ಹುದ್ದೆಯನ್ನೂ ಅವರು ಪಡೆದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಅಂಕೋಲಾ ಕ್ಷೇತ್ರ : 1972ರಲ್ಲಿ ಅಂಕೋಲಾ ವಿಧಾನಸಭಾ ಕ್ಷೇತ್ರವಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಧಾ ಮಹಾಬಲೇಶ್ವರ ಭಟ್ಟ 14,241 ಮತಗಳನ್ನು ಪಡೆದು ಶಾಸಕರಾಗಿದ್ದರು. ಇದೇ ಕ್ಷೇತ್ರದಲ್ಲಿ 1978ರಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಅನಸೂಯಾ ಗಜಾನನ ಶರ್ಮಾ 27,897 ಮತಗಳನ್ನು ಪಡೆದು ಶಾಸಕಿಯಾಗಿದ್ದರು.

Uttara Kannada district assembly election flashback

ಭಟ್ಕಳ ಕ್ಷೇತ್ರದಿಂದ 1994ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಎನ್.ನಾಯ್ಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಮಹಿಳಾ ಅಭ್ಯರ್ಥಿ ಲಕ್ಷ್ಮೀ ಮಂಜಪ್ಪ ನಾಯ್ಕ ಅವರನ್ನು ಬಿಜೆಪಿಯ ಡಾ.ಯು.ಚಿತ್ತರಂಜನ್ ಅವರ ವಿರುದ್ಧ ಕಣಕ್ಕೆ ಇಳಿಸಲಾಗಿತ್ತು. ಲಕ್ಷ್ಮೀ ಚುನಾವಣೆಯಲ್ಲಿ ಸೋಲನನುಭವಿಸಿದರೂ ಸಹ 22,931 ಮತ ಪಡೆದು ಗಮನ ಸೆಳೆದಿದ್ದರು.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ : 1978ರಲ್ಲಿ ಅಂಕೋಲಾ ಕ್ಷೇತ್ರವಿದ್ದಾಗ ನಳಿನಿ ಬಾಲಕೃಷ್ಣ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 918 ಮತಗಳನ್ನು ಪಡೆದಿದ್ದರು. 1994 ರಲ್ಲಿ ಸುಮನಾ ಮಹಾದೇವ ಹೆಗಡೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 314 ಮತಗಳನ್ನು ಪಡೆದಿದ್ದರು.

English summary
Several Women candidates won assembly elections in Uttara Kannada district, Karnataka. Here is a Karnataka election flashback of Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X