ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು
ನವದೆಹಲಿ, ಮಾರ್ಚ್ 27 : ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್ ನವದೆಹಲಿಯಲ್ಲಿ ಮಂಗಳವಾರ ದಿನ ಘೋಷಣೆ ಮಾಡಿದ್ದು, ಮೇ 12ರಂದು ಒಂದೇ ಹಂತದಲ್ಲಿ 224 ಕ್ಷೇತ್ರಗಳಲ್ಲೂ ಚುನಾವಣೆ ನಡೆಯಲಿದೆ.

ಮಾರ್ಚ್ 27 - ನೀತಿ ಸಂಹಿತೆ ಜಾರಿ
ಏಪ್ರಿಲ್ 17 - ಚುನಾವಣಾ ಅಧಿಸೂಚನೆ ಪ್ರಕಟ
ಏಪ್ರಿಲ್ 24 - ನಾಮಪತ್ರ ಸಲ್ಲಿಸಲು ಕೊನೆಯ ದಿನ
ಏಪ್ರಿಲ್ 25 - ನಾಮಪತ್ರಗಳ ಪರಿಶೀಲನೆ
ಏಪ್ರಿಲ್ 27 - ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಮೇ 12 - ಮತದಾನ
Recommended Video

ಕರ್ನಾಟಕ ಚುನಾವಣಾ 2018ಕ್ಕೆ ರೋಚಕ ತಿರುವು | ಸಂಪೂರ್ಣ ಮಾಹಿತಿ ಇಲ್ಲಿದೆ | Oneindia Kannada
ಮೇ 15 - ಮತ ಎಣಿಕೆ
ರಾಜಕೀಯ ಪಕ್ಷಗಳ ಖರ್ಚಿಗೆ ಯಾವುದೇ ಮಿತಿ ವಿಧಿಸಿಲ್ಲ. ಆದರೆ ಅಭ್ಯರ್ಥಿಗಳ ಖರ್ಚಿಗೆ ಇಪ್ಪತ್ತೆಂಟು ಲಕ್ಷ ರುಪಾಯಿ ಮಿತಿ ವಿಧಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ 51 ಲಕ್ಷ ಹೊಸ ಮತದಾರರು ಸೇರಿದ್ದಾರೆ. ಮತದಾನಕ್ಕಾಗಿ 56,696 ಮತಗಟ್ಟೆಗಳು ಸ್ಥಾಪನೆ ಮಾಡಲಾಗುವುದು. ಸಂಪೂರ್ಣ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 450 ಎಂದು ತಿಳಿಸಲಾಗಿದೆ.











Click it and Unblock the Notifications