Weekly Horoscope: ಗುರುವಿನ ಕೃಪೆಯಿಂದ ಈ ರಾಶಿಯವರಿಗೆ ಕಂಕಣ ಭಾಗ್ಯ
ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರಮಾಸದ ಚೈತ್ರ ಬಹುಳ ಪಂಚಮಿಯಿಂದ ದ್ವಾದಶಿಯವರೆಗೆ.
ಈ ವಾರದ ಚಂದ್ರನ ಸಂಚಾರ ಮೂಲಾ ನಕ್ಷತ್ರದಿಂದ ಉತ್ತರಾಭಾದ್ರ ನಕ್ಷತ್ರದ ವರೆಗೆ.
28/04/2024 ರಿಂದ 04/05/2024 ವಾರಭವಿಷ್ಯ
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಏಪ್ರಿಲ್ 28ರಿಂದ ಮೇ 04ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ
ಮೇ ಒಂದನೇ ತಾರೀಕಿನಿಂದಲೇ ಗುರುಬಲ ಶುರುವಾಗಲಿದೆ. ಮನೆಯಲ್ಲಿ ಸಂತಸ ಸಂಭ್ರಮದ ವಾತಾವರಣ ಇರುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ನೌಕರಿ ಇಲ್ಲದೆ ಹುಡುಕುತ್ತಿರುವವರಿಗೆ ಮನೆ ಬಾಗಿಲಿಗೇ ನೌಕರಿಯ ಆಹ್ವಾನ ಬರುತ್ತದೆ. ಹಣದ ಹರಿವು ಉತ್ತಮವಾಗಿದೆ. ಶನಿಯೂ 11ನೇ ಮನೆಯಲ್ಲಿ, ಇದ್ದು ಈಗ ನಿಮಗೆ ಭಾಗ್ಯೋದಯವಾಗುವ ಕಾಲ.

ವೃಷಭ ರಾಶಿಯ ವಾರ ಭವಿಷ್ಯ
ವ್ಯಯಸ್ಥಾನದಲ್ಲಿ ಇದ್ದ ಗುರು ಈಗ ನಿಮ್ಮ ರಾಶಿಗೆ ಬಂದಿದ್ದಾನೆ. ಖರ್ಚು ಹಾಗೂ ಒತ್ತಡಗಳು ಇರುತ್ತದೆ. ಆದರೆ ರಾಹುಬಲ ಇರುವುದರಿಂದ ಏನೇ ಅಡೆತಡೆಗಳು ಎದುರಾದರೂ ಸರಾಗವಾಗಿ ನಿಭಾಯಿಸಿ ಮುಂದಕ್ಕೆ ಹೋಗುತ್ತೀರಿ. ಯಾವುದಕ್ಕೂ ಯೋಚನೆಬೇಡ. ಗುರುಗಳ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿ.

ಮಿಥುನ ರಾಶಿಯ ವಾರ ಭವಿಷ್ಯ
ಗುರು ವ್ಯಯಸ್ಥಾನಕ್ಕೆ ಬಂದಿರುವುದರಿಂದ ಶುಭಕಾರ್ಯಕ್ಕೆ ಖರ್ಚುಗಳು ಇರುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕೆ ಅಥವಾ ವೃತ್ತಿಜೀವನಕ್ಕೆ ಸಂಬಂಧಿಸಿದ ಹಾಗೆ ಒಂದು ಬದಲಾವಣೆ ಇದೆ. ಅದು ಗೋಚರಿಸಿದಾಗ ಒಪ್ಪಿಕೊಳ್ಳಿ. ಆ ಬದಲಾವಣೆಯಿಂದ ನಿಮ್ಮ ಜೀವನಕ್ಕೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ತಾಯಿಗೆ ಒತ್ತಡಗಳು ಅನಾರೋಗ್ಯ ಇರುತ್ತದೆ. ಲಾಭಸ್ಥಾನದಲ್ಲಿ ಸೂರ್ಯ ಬುಧ ಇದ್ದು ಧನಲಾಭ ಚೆನ್ನಾಗಿದೆ. ಸರ್ಕಾರದಿಂದ ಆಗಬೇಕಾದ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.

ಕಟಕ ರಾಶಿಯ ವಾರ ಭವಿಷ್ಯ
ಇದುವರೆಗೂ ಗುರುಬಲ ಇಲ್ಲದೇ ಒದ್ದಾಡಿದ್ದೀರಿ. ಈಗ ಗುರುಬಲ ಬಂದಿದೆ. ಎಷ್ಟೋ ಕೆಲಸಗಳು ಮುಂದುವರೆಯದೆ ಅಲ್ಲಲ್ಲೇ ಸ್ಥಗಿತಗೊಂಡದ್ದು ಈಗ ಚಾಲನೆ ಪಡೆದುಕೊಳ್ಳುತ್ತದೆ. ವೃತ್ತಿಯಲ್ಲಿ ಬಡ್ತಿ ಯಶಸ್ಸು ಇದೆ. ಕೌಟುಂಬಿಕ ಶಾಂತಿಸೌಹಾರ್ದತೆ ಇದೆ. ಮೂರನೇ ಮನೆಯಲ್ಲಿ ಕೇತು ನಿಮಗೆ ಮುನ್ನುಗ್ಗುವ ಎದುರಿಸುವ ಶಕ್ತಿ ಕೊಡುತ್ತಾನೆ. ಹತ್ತನೇ ಮನೆಯಲ್ಲಿ ಸೂರ್ಯ ಬುಧ ಇದ್ದು ಧನಲಾಭ ಆಗುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಒತ್ತಡಗಳು ಕಡಿಮೆಯಾಗುತ್ತದೆ

ಸಿಂಹ ರಾಶಿಯ ವಾರ ಭವಿಷ್ಯ
ಈ ವಾರದ ಮೊದಲಲ್ಲಿ ಗುರು ಭಾಗ್ಯಸ್ಥಾನದಿಂದ ದಶಮಸ್ಥಾನಕ್ಕೆ ಬರುತ್ತಾನೆ. ಇದು ಕೊಂಚ ಋಣಾತ್ಮಕ ಫಲ ನೀಡುತ್ತದೆ. ನಿಮ್ಮ ನೌಕರಿಯ ಜಾಗದಲ್ಲಿ ಏನೇ ಏರಿಳಿತ ಆದರೂ ಸಂಭಾಳಿಸಿಕೊಳ್ಳಿ. ಯಾರೊಂದಿಗೂ ಜಗಳ ವಾದ ವಾಗ್ವಾದ ಬೇಡ. ಆರೋಗ್ಯದಲ್ಲಿ ಏರುಪೇರು ಕಾಣಬಹುದು. ನಿಮ್ಮ ಅಭ್ಯಾಸಗಳ ಮೇಲೆ ನಿಗಾ ಇರಲಿ. ಶನಿ ಕೂಡ ನಿಮ್ಮ ರಾಶಿಯನ್ನು ದೃಷ್ಡಿಸುವುದರಿಂದ ಕೊಂಚ ಆತಂಕ ಒತ್ತಡಗಳು ಇರುತ್ತದೆ. ಕುಟುಂಬದಲ್ಲಿ ಅಶಾಂತಿ ಇರುತ್ತದೆ

ಕನ್ಯಾ ರಾಶಿಯ ವಾರ ಭವಿಷ್ಯ
ಶನಿಬಲ ಗುರುಬಲ ಎರಡೂ ಸೇರಿ ನಿಮ್ಮನ್ನು ಉತ್ತುಂಗಕ್ಕೆ ಏರಿಸಲಿದೆ. ಯಾವ ಯಾವುದೋ ನಿಂತು ಹೋಗಿದ್ದ ಕೆಲಸಗಳು ಈಗ ಮರುಚಾಲನೆಯಾಗಿ ನಿಮ್ಮ ಉತ್ಸಾಹ ಹೆಚ್ಚಿಸುತ್ತದೆ. ನೌಕರಿಯಲ್ಲಿ ಬಡ್ತಿ ಮದುವೆ ಮನೆ ಕಟ್ಟುವುದು ಕೊಳ್ಳುವುದು ಮುಂತಾದ ಗಟ್ಟಿ ಸಂಗತಿಗಳು ನಡೆಯುತ್ತದೆ. ನೀವು ನಡೆದದ್ದೇ ದಾರಿ. ಜನ ನಿಮ್ಮ ಮಾತಿಗೆ ಗೌರವ ಕೊಡುತ್ತಾರೆ. ರಾಜಕೀಯ ನಾಯಕರಿಗೆ ಪದವಿ ಅಧಿಕಾರ ದೊರೆಯುತ್ತದೆ.

ತುಲಾ ರಾಶಿಯ ವಾರ ಭವಿಷ್ಯ
ಈಗ ಈ ವಾರದಲ್ಲಿ ಗುರುಬಲ ಹೋಗುವುದರಿಂದ ಇಲ್ಲಸಲ್ಲದ ತೊಂದರೆಗಳು ಮೈಮೇಲೆ ಬೀಳುತ್ತವೆ. ಗುರು ಎಂಟನೇ ಮನೆಗ ಬಂದರೆ ಆರೋಗ್ಯಕ್ಕೆ ತೊಂದರೆ. ಯಾವುದಾದರೂ ಆರೋಗ್ಯ ತೊಂದರೆ ಕಾಣಿಸಬಹುದು ಅಥವಾ ಇರುವ ತೊಂದರೆ ಉಲ್ಬಣಿಸಬಹುದು. ಪಂಚಮ ಶನಿಯೂ ಇರುವುದರಿಂದ ಕಾಲಿಗೆ ಪೆಟ್ಟಾಗುವ ಮೂಳೆ ಮುರಿಯುವ ಆಪರೇಷನ್ ಆಗುವ ಸಾಧ್ಯತೆಗಳು ಇವೆ. ಜಾಗರೂಕರಾಗಿರಿ. ರಾಹು ಬಲ ಇರುವುದರಿಂದ ನಿಮ್ಮ ತೊಂದರೆಗಳನ್ನು ಹಿಮ್ನೆಟ್ಟಿಸಿ ನೀವು ಧೈರ್ಯದಿಂದ ನಿಲ್ಲಬಲ್ಲಿರಿ. ರಾಹು ಧನವನ್ಬೂ ಪರಾಕ್ರಮವನ್ನು ಕೊಡುತ್ತಾನೆ.

ವೃಶ್ಚಿಕ ರಾಶಿಯ ವಾರ ಭವಿಷ್ಯ
ಇದುವರೆಗೂ ಬಹಳ ಮಾನಸಿಕ ಕಿರುಕುಳ ಅನುಭವಿಸಿದ್ದೀರಿ. ಹಣಕಾಸು ಕಳೆದುಕೊಂಡಿದ್ದೀರಿ. ಮಾನಸಿಕವಾಗಿ ಜರ್ಝರಿತರಾಗಿದ್ದೀರಿ. ಈಗ ನಿಮಗೆ ಗುರುಬಲ ಬರುವುದರಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರ ಕಾಣುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿ ಬದಲಿಸುವವರಿಗೆ ಇನ್ನೂ ಒಳ್ಳೆಯ ಅವಕಾಶಗಳು ಸಿಗುತ್ತದೆ. ಮಕ್ಕಳಿಂದ ಮನಸ್ಸಿಗೆ ನೋವುಇದೆ. ಆದರೆ ಆರೋಗ್ಯ ಹಣಕಾಸು ಕೌಟುಂಬಿಕ ಸುಖಶಾಂತಿಗಳು ವೃದ್ಧಿಸಲಿದೆ.

ಧನಸ್ಸು ರಾಶಿಯ ವಾರ ಭವಿಷ್ಯ
ಇದುವರೆಗೂ ಐದನೇ ಮನೆಯಲ್ಲಿ ನಿಮಗೆ ರಕ್ಷೆಯಾಗಿ ಇದ್ದ ಗುರು ಈ ವಾರ ಆರನೇ ಮನೆಗೆ ಪ್ರವೇಶವಾಗುತ್ತಾನೆ. ಷಷ್ಠ ಗುರು ಶುಭನಲ್ಲ.ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಣಕಾಸಿನ ಸಮಸ್ಯೆಗಳು ಮೇಲೇಳಬಹುದು. ಯಾವುದೋ ವ್ಯವಹಾರ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ಕೌಟುಂಬಿಕ ಶಾಂತಿ ಕದಡಬಹುದು. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಹೋಗಬಹುದು. ಆದರೂ ಈಗ ನಿಮಗೆ ಶನಿಬಲ ಇದೆ. ಶನಿ ಇನ್ನೂ ಮೂರನೇ ಮನೆಯಲ್ಲಿ ಇದ್ದಾನೆ. ಇವನ ಅನುಗ್ರಹದಿಂದ ಬೆಟ್ಟದ ಹಾಗೆ ಬಂದ ಕಷ್ಡಗಳು ಮಂಜಿನಹಾಗೆ ಕರಗುತ್ತದೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದು ತಾಯಿಯೊಂದಿಗಿನ ಸಂಬಂಧ ಹದಗೆಡಬಹುದು. ವೃಥಾ ಅಲೆದಾಟ ಇರುತ್ತದೆ.

ಮಕರ ರಾಶಿಯ ವಾರ ಭವಿಷ್ಯ
ಇದುವರೆಗೂ ಗುರು ನಾಲ್ಕನೇ ಮನೆಯಲ್ಲಿ ಇದ್ದು ನೀವು ಅನೇಕ ತೊಂದರೆಗಳನ್ನು ಅನುಭವಿಸಿದ್ದೀರಿ. ಈ ವಾರದ ಮೊದಲಲ್ಲೇ ನಿಮಗೆ ಗುರುವಿನ ಅನುಗ್ರಹ ಆಗಲಿದೆ. ಮನಸ್ಸಿಗೆ ಉಲ್ಲಾಸ ಸಂತೋಷ ಅನುಭವಿಸುತ್ತೀರಿ. ನೌಕರಿ ಲಾಭ, ಅರ್ಹರಿಗೆ ವಿವಾಹಯೋಗ, ಆಸ್ತಿ ಖರೀದಿ, ಪ್ರವಾಸ ಮೊದಲಾದ ಎಲ್ಲ ಶುಭ ಸಂಗತಿಗಳೂ ಈಗ ನಿಮಗೆ ಇದೆ. ಮೂರರಲ್ಲಿ ರಾಹು ಹಾಗೂ ಐದರಲ್ಲಿ ಗುರು ಇದ್ದು ಈಗ ನಿಮಗೆ ಭಾಗ್ಯೋದಯವಾಗುವ ಸಮಯ. ನಿಮ್ಮ ಕಷ್ಟಗಳಿಗೆ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ಗೋಚರಿಸುತ್ತಾ ಹೋಗುತ್ತದೆ.

ಕುಂಭ ರಾಶಿಯ ವಾರ ಭವಿಷ್ಯ
ಗುರು ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ನಾಲ್ಕನೇ ಮನೆಯ ಗುರು ಶುಭಕಾರಕನಲ್ಲ. ಧರ್ಮರಾಯನಿಗೆ ನಾಲ್ಕು ಗುರು ಬಂದಾಗಲೇ ವನವಾಸ ಆಯಿತು ಎಂದು ಹೇಳುತ್ತಾರೆ. ಹೀಗಾಗಿ ಜಾಗರೂಕರಾಗಿರಿ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಸಣ್ಣಪುಣ್ಣ ಆರೋಗ್ಯ ಸಮಸ್ಯೆ ಎಂದುಕೊಂಡು ನಿರ್ಲಕ್ಷ್ಯ ಮಾಡಿದ್ದೇ ಇಂದು ಬೃಹದಾಕಾರ ತಾಳಿ ನಿಮಗೆ ಟೆನ್ಷನ್ ಕೊಡಬಹುದು. ಎಲ್ಲವನ್ನು ಸಮಭಾವದಿಂದ ತೆಗೆದುಕೊಳ್ಳಿ. ವೈದ್ಯರ ಸಲಹೆಯಂತೆ ನಡೆಯಿರಿ. ಹಣಕಾಸಿನ ಬಿಕ್ಕಟ್ಟು ತಲೆದೋರಲಿದೆ. ಕುಟುಂಬದಲ್ಲೂ ಅಸೌಖ್ಯ ಅಶಾಂತಿ ಇರುತ್ತದೆ. ರಾಜಕೀಯ ನಾಯಕರಿಗೆ ಪದವಿ ಪಲ್ಲಟವಾಗಬಹುದು. ವಿನಾಕಾರಣ ಅವಮಾನ ಆಗಬಹುದು. ನಿಮ್ಮವರೇ ನಿಮ್ಮ ತೇಜೋವಧೆ ಮಾಡಬಹುದು. ಜಾಗ್ರತೆಯಿಂದ ಇರಿ.
Recommended Video

ಮೀನ ರಾಶಿಯ ವಾರ ಭವಿಷ್ಯ
ನಿಮಗೆ ಇದುವರೆಗೂ ಎರಡನೇ ಮನೆಯಲ್ಲಿ ಇದ್ದು ನಿಮಗೆ ಬಲವನ್ನು ಕೊಟ್ಟಿದ್ದ ಗುರು ಈ ವಾರದ ಮೊದಲಲ್ಲಿ ಮೂರನೇ ಮನೆಗೆ ಪ್ರವೇಶಿಸುತ್ತಾನೆ. ಮೂರರ ಗುರು ಕೂಡ ಶುಭಕಾರಕನಲ್ಲ. ಪ್ರತಿದಿನ ನಡೆಯುವ ಹಾದಿಯೇ ಆದರೂ ಅಚಾನಕ್ ಎಡವುವುದು ಜೀವನಪಥದಲ್ಲೂ ಮುಗ್ಗರಿಸುವುದು ನಡೆಯುತ್ತದೆ. ಹತ್ತಿರದವರಿಂದಲೇ ಅವಮಾನಗಳು ಆತ್ಮೀಯರೊಡನೆ ಮನಸ್ತಾಪ ಇವೆಲ್ಲ ಇರುತ್ತದೆ. ಹಣಕಾಸಿಗೆ ತೊಂದರೆ ಇರುತ್ತದೆ. ಎದೆಗುಂದದೆ ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಾಮಾಣಿಕತೆಯನ್ನು ಬಿಡಬೇಡಿ. ನಿಮ್ಮ ಗುರುಗಳ ಅನುಗ್ರಹ ಪಡೆದುಕೊಳ್ಳಿ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications