Ugadi Horoscope 2023: ಯುಗಾದಿ 2023- ಯಾವ ರಾಶಿಗೆ ಬೇವು, ಯಾರಿಗೆ ಬೆಲ್ಲ?
ಮಾರ್ಚ್ 22ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಶೋಭಕೃತಿ ನಾಮ ಸಂವತ್ಸರದಲ್ಲಿ 12 ರಾಶಿಗಳ ಭವಿಷ್ಯ ಹೇಗಿದೆ? ಯಾವುದು ಶುಭದಾಯಕ, ಲಾಭದಾಯಕವಾಗಲಿದೆ ಎಂಬುದರ ಕುರಿತ ಯುಗಾದಿ ರಾಶಿಭವಿಷ್ಯ ತಿಳಿದುಕೊಳ್ಳಿ.
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ. ಹೌದು ಮತ್ತೊಂದು ಯುಗಾದಿ ಬಂದೇ ಬಿಡ್ತು. ಇದೇ ಮಾರ್ಚ್ 22ರಂದು ಶೋಭಕೃತಿ ಸಂವತ್ಸರ ಯುಗಾದಿ ಹಬ್ಬ ಆರಂಭವಾಗುತ್ತದೆ.
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿವಾಣಿಯಂತೆ ಬದುಕು ಹಳೆಯದಾದರೂ ಸಮಸ್ಯೆಗಳನ್ನೆಲ್ಲ ಮೆಟ್ಟಿ ನಿಲ್ಲುವ ಗೆದ್ದು ನಿಲ್ಲುವ ಭರವಸೆಗಳು ಹೊಸದಾಗಿರಬೇಕು. ಅಂತಹ ಭರವಸೆ, ವಿಶ್ವಾಸ, ನಂಬಿಕೆಗಳನ್ನು ತುಂಬಿ ತುಂಬಿ ಕೊಡುವ ಹಬ್ಬವೇ ಯುಗಾದಿ.
ನಿನ್ನೆ ಮೊನ್ನೆ ತನಕ ಇದ್ದ ಎಲ್ಲಾ ಎಲೆಗಳನ್ನು ಕಳೆದುಕೊಂಡು ಬೋಳು ಬೋಳಾಗಿದ್ದ ಮರ ಇದೀಗ ಚಿಗಿರಿ ಸಿಂಗಾರಗೊಂಡ ನವ ತರುಣಿಯಂತೆ ಹಸಿರನ್ನು ಹೊತ್ತು ನಳನಳಿಸುತ್ತಿದ್ದರೆ ಬದುಕಿನ ಜಂಜಾಟಗಳಿಂದ ಬೇಸತ್ತ ನಮ್ಮಲ್ಲೂ ಅದೇನೋ ಒಂದು ಹೊಸ ಹುರುಪು, ಎಲ್ಲಾ ಸರಿ ಹೋಗಿ ಮೊದಲಿನಂತಾಗುತ್ತದೆ ಅನ್ನುವಂತ ಹೊಸ ಭರವಸೆ.
ಎಷ್ಟೋ ತಿಂಗಳುಗಳಿಂದ ಜನಮಾನಸದಿದಲೇ ಮಾಯವಾಗಿ ಮರತೇ ಹೋಗಿದ್ದ ಕೋಗಿಲೆ ಮಾಮರ ಚಿಗುರೆಲೆಗಳಲ್ಲಿ ಕುಳಿತು ಕುಹು ಕುಹು ಎಂದು ಕೂಗುತ್ತಿದ್ದರೆ, ನಮ್ಮ ಕಿವಿಗಳಲ್ಲಿ ಹುಟ್ಟುವ ಪುಳಕ ಇಡೀ ದೇಹವನ್ನು ಆವರಿಸಿ ನಮ್ಮ ಜೀವನಕ್ಕೆ ನವ ಚೈತನ್ಯದ ಝಳಕವನ್ನು ಮಾಡಿಸುತ್ತದೆ. ಬದುಕಿಗೆ ಬೇಸತ್ತು ಬದಿಗೆ ನಿಲ್ಲಿಸಿದ್ದ ಬದುಕಿನ ಬಂಡಿಯನ್ನು ಮತ್ತೆ ಶರು ಮಾಡಿ ಮುನ್ನಡಿಸಲು ತೈಲವಾಗುತ್ತದೆ.
ಹೀಗೆ ಈ ವರ್ಷ ಯುಗಾದಿ ದ್ವಾದಶಿ ರಾಶಿಯವರಿಗೆ ಯಾವ ರೀತಿ ಇರಲಿದೆ? ಈ ವರ್ಷ ಯುಗಾದಿ ವೃತ್ತಿ ಭವಿಷ್ಯ ಹೇಗಿದೆ? ಆರೋಗ್ಯ, ಮದುವೆ, ಆರ್ಥಿಕ ಜೀವನ, ಕೌಟುಂಬಿಕ, ಶೈಕ್ಷಣಿಕ ಜೀವನ ಹೇಗಿದೆ? ಇಂತೆಲ್ಲ ಪ್ರಶ್ನೆಗಳು ನಿಮಗೆ ಎದುರಾಗಬಹುದು. ಇದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.
ಹಾಗಾದರೆ ಈ ಯುಗಾದಿ ಭವಿಷ್ಯ 2023 ದ್ವಾದಶಿ ರಾಶಿಗಳಿಗೆ ಹೇಗಿದೆ ಎಂದು ತಿಳಿಯೋಣ. ಇದಕ್ಕೂ ಮೊದಲು ಗ್ರಹಗಳ ಸ್ಥಾನ ಪಲ್ಲಟ ಎಂದರೇನು? ಮೊದಲನೇ ಮನೆ ಎರಡನೇ ಮನೆ ಎಂದರೇನು? ಯಾಕೆ ಇದನ್ನು ಬಳಸುತ್ತಾರೆ ಎಂದು ತಿಳಿಯೋಣ.

ಗ್ರಹಗಳ ಸ್ಥಾನ ಪಲ್ಲಟ
ಸಾಮಾನ್ಯವಾಗಿ ಭವಿಷ್ಯವನ್ನು ಹೇಳುವಾಗ ಮೊದಲನೇ ಮನೆ, ಎರಡನೇ ಮನೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಅನೇಕರು ನಮಗೆ ಇರುವುದು ಒಂದೇ ಮನೆ ಇದ್ಯಾವುದು ಮೂರು ಮತ್ತು ನಾಲ್ಕನೆ ಮನೆ ಎಂದು ಅಪಹಾಸ್ಯ ಮಾಡುವುದು ಅಥವಾ ಅಪಾರ್ಥ ಮಾಡಿಕೊಳ್ಳುವುದು ಇದೆ. ಆದರೆ ಇದು ತಪ್ಪು ತಿಳುವಳಿಕೆ.
ಗ್ರಹಗಳು ಇರುವ ಸ್ಥಳವನ್ನು ಮನೆ ಎಂದು ಕರೆಯಲಾಗುತ್ತದೆ. ಈ ಮನೆ ಹನ್ನೆರಡು ರಾಶಿಗಳಲ್ಲಿ ಇರುತ್ತದೆ. ಅಥವಾ ಗ್ರಹಗಳು ನೋಡುವ ದಿಕ್ಕುಗಳಾಗಿರಬಹುದು. ಆಯಾ ದಿಕ್ಕು ಅಥವಾ ರಾಶಿಯಲ್ಲಿರುವ ಫಲದ ಆಧಾರ ಮೇಲೆ ಪ್ರತೀ ರಾಶಿಯ ಭವಿಷ್ಯ ನಿರ್ಧಾರವಾಗುತ್ತದೆ.
ಉದಾಹಾರಣೆಗೆ ಮೇಷ ರಾಶಿಯಲ್ಲಿ ರಾಹು ಇರುತ್ತಾನೆ. ರಾಹು ತನ್ನ ನಾಲ್ಕನೇ ಮನೆ ನೋಡುತ್ತಾನೆ ಅಂದರೆ ನಾಲ್ಕನೆ ಮನೆಯಲ್ಲಿರುವ ರಾಶಿ, ಅಲ್ಲಿರುವ ಫಲಾನುಫಲ ರಾಹುಗೆ ಹೇಗೆ ಹೊಂದಿಕೆಯಾಗುತ್ತದೆ ಎನ್ನುವ ಆಧಾರ ಮೇಲೆ ಮೇಷ ರಾಶಿ ಭವಿಷ್ಯ ನಿರ್ಧಾರವಾಗಿರುತ್ತದೆ. ಇನ್ನಷ್ಟು ತಿಳಿಯಲು ಚಾಟ್ ನೀಡಲಾಗಿದೆ. ಇದನ್ನು ಅನುಸರಿಸಿ ಭವಿಷ್ಯವನ್ನು ಅರ್ಥ ಮಾಡಿಕೊಳ್ಳಬಹುದು.

ಮೇಷ: ಶ್ರಮದ ಫಲ ಪ್ರಾಪ್ತಿ
ಮೇಷರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಯಾವ ಗ್ರಹಗಳು ಈ ವರ್ಷ ನಿಮಗೆ ಫಲವನ್ನು ಕೊಡುತ್ತವೆ ಅನ್ನೋದನ್ನು ತಿಳಿಯೋಣ. ಮುಖ್ಯವಾಗಿ ನಾಲ್ಕು ಗ್ರಹಗಳು ಈ ಬಾರಿ ಯುಗಾದಿ ನಂತರ ಮೇಷ ರಾಶಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಅವು ರಾಹು, ಗುರು, ಕೇತು, ಶನಿ ಗ್ರಹಗಳಾಗಿವೆ. ಇವುಗಳ ಸ್ಥಾನ ಪಲ್ಲಟದಿಂದಾಗಿ ಮೇಷ ರಾಶಿಯವರ ಜೀವನದಲ್ಲಿ ಈ ವರ್ಷದ ಯುಗಾದಿ ನಂತರ ಹಲವಾರು ಬದಲಾವಣೆಗಳಾಗಲಿವೆ.
ಮೇಷ ರಾಶಿಯಲ್ಲಿ ಏಪ್ರಿಲ್ 22ನೇ ತಾರೀಖು ಗುರು ಪ್ರವೇಶವಾಗಲಿದೆ. ಈ ವರ್ಷ ಪೂರ್ತಿ ಗುರು ಮೇಷದಲ್ಲೇ ಸ್ಥಿತನಾಗಿರುತ್ತಾನೆ. ಇನ್ನೂ ರಾಹು ಈಗಾಗಲೇ ಮೇಷದಲ್ಲೇ ಸ್ಥಿತನಾಗಿದ್ದಾನೆ.
ಅಕ್ಟೋಬರ್ 29ಕ್ಕೆ ಮೀನ ರಾಶಿಗೆ ರಾಹು ತಾತ್ಕಾಲಿಕವಾಗಿ ಪ್ರವೇಶ ಮಾಡುತ್ತಾನೆ. ನವೆಂಬರ್ 29ನೇ ತಾರೀಖು ಸಂಪೂರ್ಣವಾಗಿ ಮೇಷ ರಾಶಿಯಿಂದ ರಾಹು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಹೀಗಾಗಿ ನವೆಂಬರ್ 29ರ ತನಕ ರಾಹುವಿನ ಪ್ರಭಾವ ಮೇಷ ರಾಶಿಯ ಮೇಲಿರುತ್ತದೆ.
ಅದೇ ರೀತಿ ಕೇತು ಕೂಡ ನವೆಂಬರ್ 29ರಂದು ಕನ್ಯಾರಾಶಿಗೆ ಹೋಗುತ್ತಾನೆ. ಅಕ್ಟೋಬರ್ 29ಕ್ಕೆ ತಾತ್ಕಾಲಿಕವಾಗಿ ಕೇತು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ನವೆಂಬರ್ 29ಕ್ಕೆ ಸಂಪೂರ್ಣವಾಗಿ ಕೇತು ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಅಲ್ಲಿಯವರೆಗೂ ತುಲರಾಶಿಯ ಫಲವನ್ನು ಕೇತು ಮೇಷ ರಾಶಿಯವರಿಗೆ ಕೊಡುತ್ತಾನೆ.
ಇನ್ನೂ ಜನವರಿ 17ನೇ ತಾರೀಖಿಗೆ ಕುಂಭ ರಾಶಿಯಲ್ಲಿ ಶನಿ ಈಗಾಗಲೇ ಬಂದಿದ್ದಾನೆ. ಈ ವರ್ಷ ಪೂರ್ತಿ ಕುಂಭ ರಾಶಿಯಲ್ಲೇ ಶನಿ ಸ್ಥಿತನಾಗಿರುತ್ತಾನೆ. ಇದರಿಂದ ಕುಂಭರಾಶಿಯ ಫಲವನ್ನೇ ಶನಿ ದೇವನ್ನು ಮೇಷ ರಾಶಿಯವರಿಗೆ ಕೊಡುತ್ತಾನೆ. ಹಾಗಾದರೆ ಈ ನಾಲ್ಕು ಗ್ರಹಗಳಿಂದ ಮೇಷ ರಾಶಿಗೆ ಯಾವ ರೀತಿ ಫಲ ಸಿಗಲಿದೆ?
ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ಗುರುಚಾಂಡಾಲ ಯೋಗವಿರುತ್ತದೆ. ಇದರ ಪ್ರಭಾವ ನವೆಂಬರ್ ವರೆಗೂ ಇರುತ್ತದೆ. ಹಾಗಾದರೆ ಈಗಾಗಲೇ ಮೇಷ ರಾಶಿಯಲ್ಲಿರುವ ಗುರು ಮೇಷ ರಾಶಿಗೆ ಶುಭ ಫಲ ನೀಡುತ್ತಾನಾ? ಅಥವಾ ಅಶುಭ ಫಲ ನೀಡುತ್ತಾನಾ?
ಗುರು ಮೇಷ ರಾಶಿಗೆ ಉತ್ತಮ ಫಲವನ್ನೇ ಕೊಡುತ್ತಾನೆ. ಆದರೆ ರಾಹುವಿನ ನಿಯಂತ್ರಣದಲ್ಲಿರುವ ಗುರು ಸಂಪೂರ್ಣವಾಗಿ ಶುಭ ಫಲ ಕೊಡಲು ಸಾಧ್ಯವಾಗದೇ ಇದ್ದರೂ ಕೂಡ ತಕ್ಕಮಟ್ಟಿಗಾದರೂ ಒಳ್ಳೆ ಫಲವನ್ನು ಕೊಟ್ಟೇ ಕೊಡುತ್ತಾನೆ.
ಮೇಷ ರಾಶಿಯವರಿಗೆ ಶನಿದೇವನ ಕೃಪೆ ಇರುವುದರಿಂದ ವರ್ಷವಿಡೀ ಲಾಭ ಸಿಗಲಿದೆ. ಶ್ರಮದ ಫಲ ಸಿಗಲಿದೆ. ಮೇಷ ರಾಶಿಯವರಿಗೆ ಈ ವರ್ಷದ ಯುಗಾದಿ ಬಳಿಕ ನಾಲ್ಕು ಗ್ರಹಗಳಿಂದ ಉತ್ತಮ ಫಲ ಸಿಗಲಿದೆ. ಆರ್ಥಿಕ ಹೀವನ, ಕೌಟುಂಬಿಕ ಜೀವನ ಹಾಗೂ ವೃತ್ತಿ ಜೀವನ ಇತರ ಎಲ್ಲಾ ವಿಚಾರದಲ್ಲಿ ಮೇಷ ರಾಶಿಯವರಿಗೆ ಶುಭವೇ ಆಗಲಿದೆ.
ಮೇಷ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವೃಷಭ: ಖರ್ಚು ತಪ್ಪಿಸಿ
ವೃಷಭ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಹೇಗಿದೆ? ಗುರು, ಶನಿ ರಾಹು, ಕೇತು ಈ ನಾಲ್ಕು ಗ್ರಹಗಳಿಂದ ಈ ವರ್ಷ ವೃಷಭ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯಬಹುದು. ಈಗಾಗಲೇ ತಿಳಿಸಿದಂತೆ ಗುರು ಲಾಭದ ಮತ್ತು ಜ್ಞಾನದ ಗ್ರಹವಾಗಿದೆ. ಇಷ್ಟು ದಿನ ಗುರು ವೃಷಭ ರಾಶಿಯವರಿಗೆ ಲಾಭವನ್ನು ನೀಡುತ್ತಿತ್ತು. ಆರ್ಥಿಕ ಅಭಿವೃದ್ದಿಯನ್ನು ನೀಡಿತ್ತು.
ಮಾತ್ರವಲ್ಲದೆ ಗುರು ಕುಟುಂಬದಲ್ಲಿ ಬರುವ ಸಮಸ್ಯೆಗಳಿಂದ ನಿಮ್ಮನ್ನು ದೂರ ಮಾಡುತ್ತಾ ಆರ್ಥಿಕ ಅಭಿವೃದ್ಧಿಯನ್ನು ಕೊಟ್ಟಿದ್ದನು. ಹಾಗಾದರೆ ಈ ವರ್ಷ ಆರ್ಥಿಕ ಫಲ ನೀಡುವುದಿಲ್ಲವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಕಳೆದ ಬಾರಿ ನೀವು ಗಳಿಸಿದ ಹಣವನ್ನು ಈಗ ಹೂಡಿಕೆ ಮಾಡುವ ಸಮಯ. ಅಂದರೆ ಈ ವರ್ಷದಲ್ಲಿ ನೀವು ಮನೆ ಕಟ್ಟಲು ಕೈ ಹಾಕಬಹುದು, ಸೈಟ್ ತೆಗೆದುಕೊಳ್ಳಲು ಪ್ರಯತ್ನಿಸಬಹುದು. ಅಥವಾ ಒಂದು ಹೊಸ ಬಿಸಿನೆಸ್ ಪ್ರಾರಂಭ ಮಾಡಲು ನಿರ್ಧರಿಸಬಹುದು. ಈ ರೀತಿ ನಿರ್ಧಾರ ಮಾಡಿ ನೀವು ಉಳಿತಾಯ ಮಾಡಿರುವ ಹಣವನ್ನು ಹೂಡಿಕೆ ಮಾಡುವಿರಿ. ಇದರಿಂದ ಸುಖಾಸುಮ್ಮನೆ ಹಣ ಫೋಲಾಗುವುದು ತಪ್ಪಿಸಿದಂತಾಗುತ್ತದೆ.
ಆದರೆ ಇಲ್ಲಿ ಗಮನಿಸುವ ವಿಚಾರ ಏನೆಂದರೆ ಯಾವುದೇ ಕಾರಣಕ್ಕೂ ಸಾಲ ಮಾಡಿಕೊಂಡು ಮನೆ ಖರೀದಿ ಮಾಡುವಂತದ್ದಾಗಲಿ, ಅಥವಾ ಮನೆ ಕಟ್ಟುವುದನ್ನಾಗಲಿ ಅಥವಾ ವಾಹನ ಖರೀದಿ ಮಾಡುವುದನ್ನಾಗಲಿ ಮಾಡಬೇಡಿ. ಈ ವರ್ಷ ಹೂಡಿಕೆ ಮಾಡಿದ ಹಣಕ್ಕೆ ಮುಂದಿನ ವರ್ಷ ಲಾಭವನ್ನು ಪಡೆದುಕೊಳ್ಳುವಿರಿ.
ಆದರೆ ಸಾಲದಿಂದ ಹೂಡಿಕೆ ಮಾಡುವುದು ನಿಮಗೆ ಕೆಟ್ಟ ಪರಿಣಾಮವನ್ನು ಬೀರಬಹುದು. ಅದರಿಂದ ಲಾಭ ಸಿಗುವುದಿರಲಿ ಕೊಟ್ಟ ಹಣ ವಾಪಸ್ಸು ಪಡೆಯುವುದು ಕಷ್ಟವಾಗಬಹುದು. ಮುಂಬರುವ ವರ್ಷ ಗುರು ನಿಮ್ಮನ್ನು ಸಾಲಗ್ರಸ್ಥರನ್ನಾಗಿಯೂ ಮಾಡಬಹುದು. ಹೀಗಾಗಿ ಜಾಗರೂಕರಾಗಿರಿ.
ವೃಷಭ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಿಥುನ: ಧನ ಲಾಭ
ಮಿಥುನ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಹೇಗಿದೆ? ಈ ವರ್ಷ ಯುಗಾದಿ ಕಳೆದ ನಂತರ ಗುರು, ಶನಿ ರಾಹು, ಕೇತು ಈ ನಾಲ್ಕು ಗ್ರಹಗಳಿಂದ ವೃಷಭ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಲಾಭದ ಸ್ಥಾನದಲ್ಲಿ ಗುರು ಮತ್ತು ರಾಹು ಇರುವುದರಿಂದ ಮಿಥುನ ರಾಶಿಯವರಿಗೆ ಈ ಯುಗಾದಿ ಆರ್ಥಿಕ ಲಾಭವನ್ನು ನೀಡುತ್ತದೆ.
ಆರ್ಥಿಕ ಅಭಿವೃದ್ಧಿ ಕಾಣಬಹುದು. ಒಡುವೆ, ವಸ್ತ್ರ, ಹಣ ಪ್ರಾಪ್ತಿಯಾಗಲಿದೆ. ರಾಹು ಆಕಸ್ಮಿಕ ಅಭಿವೃದ್ಧಿ ಕೊಡುತ್ತಾನೆ. ಸ್ವಂತ ಉದ್ಯೋಗ ಮಾಡುವ ಉದ್ಯೋಗಿಗಳು ಆಕಸ್ಮಿಕ ಲಾಭಗಳನ್ನು ಪಡೆಯುತ್ತಾರೆ.
ಮಿಥುನ ರಾಶಿಯವರು ಸಾಲದ ಬಾದೆಯನ್ನು ಎದುರಿಸುತ್ತಿದ್ದರೆ, ತುಂಬಾ ಕಷ್ಟ ಪಡುತ್ತಿದ್ದರೆ ಅಂಥವರಿಗೆ ಯುಗಾದಿ ಕಳೆದ ಬಳಿಕ ಸಾಲದ ಹೊರೆಯನ್ನು ಕಡಿಮೆ ಆಗುತ್ತದೆ. ಧನ ಲಾಭವಾಗುತ್ತದೆ. ಲೋನ್ ಕ್ಲಿಯರ್ ಆಗುತ್ತದೆ.
ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಒಳ್ಳೆಯ ಲಾಭವನ್ನು ಗಳಿಸುವಿರಿ. ಅಂದುಕೊಂಡ ಕಾರ್ಯಗಳು ನಿವಾರಣೆಯಾಗುತ್ತವೆ. ವರ್ಗಾವಣೆ ಸಿಗಬೇಕು. ಬಡ್ತಿ ಬೇಕು, ಕೆಲಸದ ಹೊರೆ ಕಡಿಮೆಯಾಗಬೇಕು ಇಂತೆಲ್ಲಾ ಆಸೆ ಉಳ್ಳವರಿಗೆ ಗುರು ಆಶೀರ್ವದಿಸಲಿದ್ದಾನೆ.
ಯುಗಾದಿ ಕಳೆದ ಬಳಿಕ ನೀವಂದುಕೊಂಡ ಎಲ್ಲಾ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಜೊತೆಗೆ ಉದ್ಯೋಗ ವಿಚಾರದಲ್ಲಿ ಯುಗಾದಿ ಬಳಿಕ ಶುಭವಾಗಲಿದೆ. ಭಾಗ್ಯದಲ್ಲಿ ಭಾಗ್ಯಾಧಿಪತಿ ಶನಿ ಇರುವುದರಿಂದ ನಿಮಗೆ ಅದೃಷ್ಟವನ್ನು ತಂದುಕೊಡುತ್ತಾನೆ.
ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ಸಮಯ ಇದಾಗಿದೆ. ಜ್ಞಾನವನ್ನು ಪಡೆಯುತ್ತೀರಿ. ಕೇತು ಕೂಡ ನಿಮ್ಮ ಜ್ಞಾನ ವೃದ್ಧಿಗೆ ಸಹಕಾರ ಮಾಡುತ್ತಾನೆ. ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವುದರ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಅವಕಾಶವನ್ನು ಕಾಯುತ್ತಿದ್ದರೆ ಅದೇ ಅವಕಾಶವನ್ನು ಪಡೆಯುತ್ತೀರಿ.
ಮಿಥುನ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಟಕ: ಸಮಸ್ಯೆಗಳಿಗೆ ಪರಿಹಾರ
ಕಟಕ ರಾಶಿಯವರಿಗೆ ಯುಗಾಧಿ ಭವಿಷ್ಯ ಯಾವ ರೀತಿ ಇರಲಿದೆ? ಗುರು, ರಾಹು, ಶನಿ, ಕೇತು ನಾಲ್ಕು ಗ್ರಹಗಳು ಕಟಕ ರಾಶಿಯವರಿಗೆ ಯಾವ ಫಲವನ್ನು ನೀಡುತ್ತವೆ? ಎನ್ನುವುದನ್ನು ನೋಡೋಣ. ಈ ವರ್ಷದ ಯುಗಾದಿ ಕಳೆದ ನಂತರ ಕಟಕ ರಾಶಿಯವರಿಗೆ ಕೆಲವೊಂದು ಶುಭ ಫಲಗಳು ಇದ್ದರೆ ಇನ್ನೂ ಕೆಲವು ಅಶುಭ ಫಲಗಳಾಗಿವೆ.
ಹಾಗಂತ ಈ ಯುಗಾದಿ ಕಳೆದ ಬಳಿಕ ನಮಗೆ ಒಳ್ಳೆಯದ್ದೇ ಆಯೋಗಿಲ್ಲ ಬರೀ ಕಷ್ಟಗಳು ಇರುತ್ತವೆ ಎಂದಲ್ಲ. ಶುಭ ಫಲಗಳನ್ನು ನೀವ ಸ್ವೀಕರಿಸುವಂತೆ ಅಶುಭ ಫಲಗಳನ್ನು ಸ್ವೀಕರಿಸಬೇಕು ಎಂದಿಲ್ಲ.
ಅಶುಭ ಫಲಗಳಿಗೆ ಪರಿಹಾರಗಳು ಸಿಗುತ್ತವೆ. ಹಾಗಾಗಿ ಪರಿಹಾರಗಳನ್ನು ಹೆಚ್ಚಾಗಿ ಮಾಡಿಕೊಳ್ಳುವ ಮೂಲಕ ಬರುವ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅಥವಾ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಕಟಕ ರಾಶಿಯವರಿಗೆ ಎಚ್ಚರಿಕೆ ತುಂಬಾ ಮುಖ್ಯ. ಯಾವುದೇ ಕೆಲಸಕ್ಕೂ ಮುನ್ನ ನೂರು ಬಾರಿ ಯೋಚಿಸಿ, ತಯಾರಿ ಮಾಡಿಕೊಂಡ ನಂತರವೇ ಮುನ್ನಡೆಯಿರಿ. ಇದು ಕಟಕರ ರಾಶಿಯವರಿಗೆ ಬಹುಮುಖ್ಯ ಪರಿಹಾರವಾಗಿದೆ.
ಕಟಕ ರಾಶಿಯವರಿಗೆ ಗುರು ಗ್ರಹ ಶುಭ ಫಲವನ್ನು ಕೊಡುತ್ತದೆ. ಸ್ವಂತ ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕಂತೆ ಫಲವನ್ನು ಗುರು ಗ್ರಹ ನೀಡುತ್ತದೆ. ಆದರೆ ಹೆಚ್ಚಿನ ಶ್ರಮ ನಿಮ್ಮ ಕೆಲಸದಲ್ಲಿ ವಹಿಸಬೇಕಾಗಬಹುದು. ಆರ್ಥಿಕವಾಗಿ ತಕ್ಕಮಟ್ಟಿಗೆ ಪರಿಹಾರ ಗುರು ಗ್ರಹದಿಂದ ಸಿಗಲಿದೆ.
ಮನಶಾಂತಿ ಹಾಳು ಮಾಡುವಂತದನ್ನು ಶನಿ ಗ್ರಹ ಮಾಡುತ್ತದೆ. ಆದರೆ ನಿಮ್ಮ ಸಂಬಳಕ್ಕಾಗಲಿ, ಗೌರವಕ್ಕಾಗಲಿ, ಸ್ಥಾನಮಾನಕ್ಕಾಗಲಿ, ಅಧಿಕಾರಕ್ಕಾಗಲಿ ಶನಿಯು ತೊಂದರೆಯನ್ನುಂಟು ಮಾಡುವುದಿಲ್ಲ. ಸಣ್ಣ ಪುಟ್ಟ ಕಿರಿಕಿರಿಯನ್ನು ಶನಿ ದೇವ ಉಂಟು ಮಾಡುತ್ತಾನೆ.
ಕಟಕ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಸಿಂಹ: ಕಂಕಣ ಭಾಗ್ಯ
ಸಿಂಹ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಕೇತು, ಶನಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ತಿಳಿಯೋಣ. ಏಪ್ರಿಲ್ 27ನೇ ತಾರೀಖು ಭಾಗ್ಯ ಸ್ಥಾನಕ್ಕೆ ಗುರು ಪ್ರವೇಶವಾಗಲಿದೆ. ಗುರು ಮುಂದಿನ ಯುಗಾದಿವರೆಗೂ ಭಾಗ್ಯ ಸ್ಥಾನದಲ್ಲಿರುತ್ತಾನೆ. ಹೀಗಾಗಿ ಗುರು ಸಿಂಹ ರಾಶಿಯವರಿಗೆ ಭಾಗ್ಯ ಅಂದರೆ ಶುಭಫಲವನ್ನು ಕೊಡುತ್ತಾನೆ.
ರಾಹು ಕೂಡ ಭಾಗ್ಯ ಸ್ಥಾನದಲ್ಲಿದ್ದಾನೆ. ಹೀಗಾಗಿ ರಾಹು ಮತ್ತು ಗುರು ಮೇಷರಾಶಿಯಲ್ಲಿರುವುದರಿಂದ ಅದೇ ಶುಭ ಫಲವನ್ನು ಕೊಡುತ್ತಾರೆ. ಅದೇ ರೀತಿ ಕೇತು ಕೂಡ ತುಲಾ ರಾಶಿಯಲ್ಲಿರುವುದರಿಂದ ಅದೇ ಶುಭಫಲವನ್ನು ಕೊಡುತ್ತದೆ. ಶನಿ ಕಂಭ ರಾಶಿಯಲ್ಲಿ ಸಪ್ತಮದಲ್ಲಿ ಸಂಚಾರ ಮಾಡುತ್ತಾನೆ.
ಇದರಿಂದಾಗಿ ಸಿಂಹ ರಾಶಿಯವರಿಗೆ ಹಿಂದೆ ಇದ್ದ ಕೆಲ ಸಮಸ್ಯೆಗಳು ದೂರವಾಗುತ್ತವೆ. ಈ ವರ್ಷ ಯುಗಾದಿಗೆ ಗುರು ಹಾಗೂ ಶನಿ ಅತ್ಯಂತ ಶುಭಫಲವನ್ನು ಸಿಂಹ ರಾಶಿಗೆ ದಯಪಾಲಿಸಲಿವೆ.
ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉನ್ನತ ಅಭ್ಯಾಸ ಮಾಡಲು ಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಹೆಚ್ಚು ಓದಬೇಕು ಎನ್ನುವ ಹಂಬಲ ಹೆಚ್ಚಾಗುತ್ತದೆ. ಓದಿದ್ದು ನೆನಪಲ್ಲಿ ಉಳಿಯುತ್ತದೆ.
ಗುರು ಭಾಗ್ಯದಲ್ಲಿ ಇರುವುದರಿಂದ ತುಂಬಾ ಸಹಾಯ ಮಾಡುತ್ತಾನೆ. ಸಂಗೀತ, ಕಲೆ, ನೃತ್ಯ ಯಾವುದೇ ಒಂದು ಕಲೆಯನ್ನು ಕಲಿಯಲು ಬೇಕಾದ ಆಸಕ್ತಿಯನ್ನು ಗುರು ದಯಪಾಲಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯುಗಾದಿ ಕಳೆದು ಬಳಿಕ ತುಂಬಾ ಉತ್ತಮವಾದ ಸಮಯ.
ವಿವಾಹವಾಗಲು, ಸಂತಾನವಾಗಲು ಗುರು ಗ್ರಹ ಬಲವಿರಬೇಕು. ಯಾರಿಗೆ ಗುರು ಶಾಪವಿರುತ್ತದೋ ಅವರಿಗೆ ವಿವಾಹ ಹಾಗೂ ಸಂತಾನ ಭಾಗ್ಯ ಸಿಗುವುದಿಲ್ಲ. ಜೊತೆಗೆ ಅಂತವರು ಮಕ್ಕಳಿಂದ ಸಮಸ್ಯೆ, ಮಕ್ಕಳಿಂದ ತೊಂದರೆಗಳನ್ನು ಅನುಭವಿಸುತ್ತಾರೆ.
ಆದರೆ ಸಿಂಹ ರಾಶಿಯವರಿಗೆ ಗುರು ಎಲ್ಲಾ ವಿಚಾರದಲ್ಲಿ ಶುಭಫಲವನ್ನು ಕೊಡುತ್ತಾನೆ. ಸಂತಾನಾಪೇಕ್ಷೆ ಇರುವವರು, ಮದುವೆಯಾಗಲು ಕಾಯುತ್ತಿರುವವರು ಶುಭ ವಾರ್ತೆಯನ್ನು ಕೇಳುವಿರಿ.
ಸಿಂಹ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕನ್ಯಾ: ಉದ್ಯೋಗದಲ್ಲಿ ಅಭಿವೃದ್ಧಿ
ಕನ್ಯಾ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಹೇಗಿದೆ? ಯಾವ ಗ್ರಹ ಅನುಗ್ರಹವನ್ನು ಕನ್ಯಾರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ. ಕನ್ಯಾ ರಾಶಿಯ ಎರಡನೇ ಮನೆಯಲ್ಲಿ ಕೇತು, ಆರನೇ ಮನೆ (ಶಷ್ಟಭಾಗ) ಶನಿ, ಅಷ್ಟಮದಲ್ಲಿ ಗುರು ಹಾಗೂ ರಾಹು ಸ್ಥಿತರಾಗಿರುತ್ತಾರೆ. ಇದರಿಂದ ಶುಭ ಹಾಗೂ ಅಶುಭ ಫಲ ಎರಡೂ ಇರುತ್ತದೆ.
ರಾಹು ಮತ್ತು ಗುರು ಅಷ್ಟಮದಲ್ಲಿ ಇರುವುದು ಕನ್ಯಾ ರಾಶಿಯವರಿಗೆ ಶುಭಫಲವಲ್ಲ. ಆದರೆ ಶಷ್ಟಭಾಗದಲ್ಲಿ ಶನಿ ಇರುವುದು ತುಂಬಾ ಶುಭಫಲ ನೀಡುತ್ತದೆ. ಹಾಗಾಗಿ ಈ ವರ್ಷ ಶನಿ ನಿಮಗೆ ಶುಭ ಫಲವನ್ನು ಕೊಡುತ್ತಿದ್ದಾನೆ.
ಆದರೆ ರಾಹು, ಕೇತು, ಗುರು ನಿಮಗೆ ಅಶುಭ ಫಲವನ್ನು ಕೊಡುತ್ತಿದ್ದಾರೆ. ಈ ವರ್ಷ ಕನ್ಯಾ ರಾಶಿಯವರಿಗೆ ಮಿಶ್ರಫಲ ಸಿಗಲಿದೆ. ಅಶುಭಗಳಿಗೆ ಪರಿಹಾರ ಮಾಡಿಕೊಂಡರೆ ನಿಮಗೆ ಶುಭವಾಗಲಿದೆ. ಈ ವರ್ಷ ಕನ್ಯಾ ರಾಶಿಯವರು ಆರೋಗ್ಯ ಹಾಗೂ ಹಣ ಎರಡನ್ನೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತೀರಾ. ಬೇರೆ ಕೈಗೆಳಗೆ ಕೆಲಸ ಮಾಡುವಂತ ಕನ್ಯಾ ರಾಶಿಯವರಿಗೆ, ಸರ್ಕಾರಿ ಕೆಲಸ, ಬೇರೆ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವರಿಗೆ ಹೆಚ್ಚಿನ ಅಭಿವೃದ್ಧಿ ಸಿಗಲಿದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಬದಲಾವಣೆ, ಪ್ರಮೋಷನ್, ಹೆಚ್ಚಿನ ಗೌರವ ಮರಿಯಾದೆ ಸಿಗುತ್ತದೆ.
ಕನ್ಯಾ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ತುಲಾ: ಗುರು ಬಲದಿಂದ ಸಮಸ್ಯೆಗಳು ಪರಿಹಾರ
ತುಲಾ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಹೇಗಿರಲಿದೆ? ಯಾವ ಗ್ರಹಗಳ ಪ್ರಭಾವ ತುಲಾರಾಶಿಯಲ್ಲಿ ಯಾವ ಬದಲಾವಣೆಯನ್ನು ತರುತ್ತದೆ ಎಂದು ನೋಡೋಣ. ಇಷ್ಟು ದಿನ ತುಲಾ ರಾಶಿಯಲ್ಲಿ ಕೇತು ಇತ್ತು. ಸಪ್ತಮದಲ್ಲಿ ರಾಹು, ಚಥುರ್ತ ಭಾಗದಲ್ಲಿ ಶನಿ, ಗುರು ಆರನೇ ಮನೆಯಲ್ಲಿ(ಮೀನ) ಸ್ಥಿತನಾಗಿದ್ದ. ಆದರೆ ಈ ವರ್ಷದಲ್ಲಿ ತುಲಾ ರಾಶಿಯರಲ್ಲಿ ಕೆಲ ಬದಲಾವಣೆಗಳಾಗುತ್ತದೆ.
ತುಲಾ ರಾಶಿಯವರಿಗೆ ಪಂಚಮ ಶನಿ ನಡೆಯುತ್ತಿದೆ. ಪಂಚಮ ಶನಿ, ಅಷ್ಟಮ ಶನಿ, ಸಾಡೇಸಾತ್ ಶನಿ ಬಂದ ರಾಶಿಗೆ ಗುರು ದೃಷ್ಟಿ ಇದ್ದರೆ ಸಂಕಷ್ಟದಿಂದ ಕೊಂಚ ಪರಿಹಾರ ಸಿಗಲಿದೆ. ಈಗ ತುಲಾ ರಾಶಿಯವರಿಗೆ ಪಂಚಮ ಶನಿ ಶುರುವಾಗಿದೆ. ಸ್ವಲ್ಪ ಆತಂಕ ಪಡುವಂತಹ ವಿಚಾರ ಇದಾಗಿದೆ.
ನಿಮ್ಮ ಬದುಕಿನಲ್ಲಿ ಕಷ್ಟವನ್ನು ಕೊಟ್ಟು ಬದಲಾವಣೆ ತರುವ ಉದ್ದೇಶ ಪಂಚಮ ಶನಿಯದ್ದಾಗಿರುತ್ತದೆ. ಹೀಗಾಗಿ ಈ ವರ್ಷ ತುಲಾ ರಾಶಿಯವರಿಗೆ ಕೊಂಚ ಕಷ್ಟಗಳು ಎದುರಾಗುತ್ತವೆ. ಆದರೆ ಶನಿ ಯಾವುದೇ ಸಮಸ್ಯೆ ಕೊಟ್ಟರೂ ಅದರಿಂದ ಪಾರಾಗಲು ಯುಗಾದಿ ನಂತರ ಗುರು ನಿಮ್ಮನ್ನು ಕಾಪಾಡುತ್ತಾನೆ. ಯಾವುದೇ ಸಮಸ್ಯೆಯಿಂದ ಹೊರ ಬರಲು ಗುರು ನಿಮಗೆ ದಾರಿಯನ್ನು ತೋರಿಸುತ್ತಾನೆ.
ಹಣಕಾಸಿನ ಸಮಸ್ಯೆ ಬರುವುದನ್ನು ತಪ್ಪಿಸಿ. ಸಾಲ ಮಾಡಬೇಡಿ. ಪಾಲುದಾರಿಕೆಯಲ್ಲಿ ಅತೀಯಾದ ನಂಬಿಕೆ ಬೇಡ. ಇದರಿಂದ ಮೋಸ ಹೋಗುವ ಸಾಧ್ಯತೆಗಳು ಇವೆ. ಹೀಗಾಗಿ ಈ ವರ್ಷದ ಯುಗಾದಿ ಫಲ ತುಲಾ ರಾಶಿಯವರಿಗೆ ಮಿಶ್ರಫಲವಾಗಿದೆ.
ತುಲಾ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವೃಶ್ಚಿಕ: ಸರ್ಕಾರಿ ನೌಕರರಿಗೆ ಉತ್ತಮ ಸಮಯ
ವೃಶ್ಚಿಕ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹ ಅನುಗ್ರಹವನ್ನು ವೃಶ್ಚಿಕ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ. ಈ ವರ್ಷ ವೃಶ್ಚಿಕ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.
ವೃಶ್ಚಿಕ ರಾಶಿಯವರಿಗೆ ಈ ವರ್ಷ ಶನಿಯ ಫಲ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ, ಶನಿ ಈ ವರ್ಷ ಪೂರ್ಣ ಚತುರ್ಥಭಾವದಲ್ಲಿ ಸ್ಥಿತನಾಗಿರುತ್ತಾನೆ. ಚತುರ್ಥಭಾವ ಅಂದರೆ ಮನೆ, ವಾಹನ, ಭೂಮಿ, ಮನಶಾಂತಿ, ನೆಮ್ಮದಿ ಇತ್ಯಾದಿಗಳನ್ನು ಸೂಚಿಸುತ್ತದೆ.
ಆದರೆ ಶನಿ ನಾಲ್ಕನೇ ಸ್ಥಾನಕ್ಕೆ ಬರುವುದರಿಂದ ಕರ್ಮ ಸ್ಥಾನವನ್ನು ನೋಡುವುದರಿಂದ ಕೆಲಸದಲ್ಲಿ ನೆಮ್ಮದಿ ಹಾಳಾಗುತ್ತದೆ. ಕೆಲಸ ಮಾಡುವ ಕಡೆ ಮೇಲಾಧಿಕಾರಿಗಳು ಜಾಸ್ತಿ ಕೆಲಸ ಕೊಡುವಂತದ್ದು, ಹೆಚ್ಚು ಕೆಲಸದ ಒತ್ತಡ ಹೇರುವಂತದ್ದು, ಪದೇ ಪದೇ ಕೆಲಸ ಹೇಳುವಂತ ಸಮಸ್ಯೆಗಳನ್ನು ಶನಿ ವೃಶ್ಚಿಕ ರಾಶಿಯವರಿಗೆ ಕೊಡುತ್ತಾನೆ.
ಈ ಕೆಲಸ ಬಿಟ್ಟು ಹೋದರೂ ಬೇರೆ ಕಡೆ ಕೂಡ ಇದೇ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆದರೆ ಶನಿ ಬದಲಾಗುವುದಿಲ್ಲ. ಅದರ ಪ್ರಭಾವ ನಿಮ್ಮ ಮೇಲಾದಾಗ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇದರಿಂದ ಪರಿಹಾರ ಪಡಿಯಲು ಜ್ಯೋತಿಷ್ಯದಲ್ಲಿ ಸಲಹೆಗಳಿವೆ.
ಗುರು ದಶಮ ಸ್ಥಾನವನ್ನು ನೋಡುವುರದಿಂದ ಕೆಲಸದಲ್ಲಿ ಏನೇ ಸಮಸ್ಯೆಗಳಿದ್ದರು ಪರಿಹಾರಗೊಳ್ಳುತ್ತವೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತವರಿಗೆ ಏನೂ ತೊಂದರೆ ಇಲ್ಲ. ಆದರೆ ಸ್ವಂತ ಕೆಲಸ ಉದ್ಯಮ ಮಾಡುವಂತವರಿಗೆ ಕೆಲ ಸಮಸ್ಯೆಗಳು ಎದುರಾಗುತ್ತವೆ. ಸರ್ಕಾರಿ ಕೆಲಸ, ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತವರಿಗೆ ಎಷ್ಟೇ ಒತ್ತಡ ಇದ್ದರೂ ದೂರವಾಗುತ್ತದೆ.
ವೃಶ್ಚಿಕ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಧನು: ಕಷ್ಟದಿಂದ ಮುಕ್ತಿ ಶುಭ ಗಳಿಗೆ ಆರಂಭ
ಧನು ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಕೇತು, ಶನಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ತಿಳಿಯೋಣ. ಇಷ್ಟು ದಿನ ಧನು ರಾಶಿಯವರಿಗೆ ಸಾಡೇಸಾತ್ ನಡೆಯುತ್ತಿತ್ತು. ಇದರಿಂದ ಈ ವರ್ಷ ಧನು ರಾಶಿಯವರಿಗೆ ಬಿಡುಗಡೆ ಸಿಕ್ಕಿರುವುದು ಖುಷಿ ವಿಚಾರ.
ಸಾಡೇಸಾತ್ ಎಂದರೆ ಕಷ್ಟದ ಅವಧಿ ಎನ್ನುತ್ತಾರೆ. ಆದರೆ ಇದು ಜೀವನದಲ್ಲಿ ಬದಲಾವಣೆಯನ್ನು ಕಾಣುವ ಅವಧಿಯಾಗಿದೆ. ಈ ಅವಧಿಯಲ್ಲಿ ನಾವು ಕರ್ಮದತ್ತ ಗಮನ ಹರಿಸಬೇಕು. ಬರುವಂತಹ ಎಲ್ಲಾ ಅಡೆತಡೆಗಳು ಮತ್ತು ವೈಫಲ್ಯಗಳೊಂದಿಗೆ ನಿಮ್ಮ ಕಾರ್ಯ ಮತ್ತು ಕರ್ತವ್ಯಗಳಿಗೆ ನ್ಯಾಯ ಒದಗಿಸಿದರೆ ಅಂತಿಮವಾಗಿ ಉತ್ತಮಫಲವನ್ನು ಕಾಣುವುದರಲ್ಲಿ ನಿಸ್ಸಂಶಯವಿಲ್ಲ.
ಧನು ರಾಶಿಯವರಿಗೆ ಎಲ್ಲಾ ಗ್ರಹಗಳು ಶುಭ ಫಲವನ್ನೇ ಕೊಡುತ್ತವೆ. ಆದರೆ ರಾಹು ಮಾತ್ರ ಅಶುಭ ಫಲವನ್ನು ಕೊಡುತ್ತಾನೆ. ಹಾಗಂತ ಧೈರ್ಯ ಗುಂದಬೇಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೆ ಪರಿಹಾರ ಕೂಡ ಇದೆ. ಸಾಡೇಸಾತ್ ನಿಂದ ಬಿಡುಗಡೆಯಾದ ಬಳಿಕೆ ಸಾಕಷ್ಟು ತಿಳುವಳಿಕೆಯನ್ನು ಶನಿ ಧನು ರಾಶಿಯವರಿಗೆ ಕೊಟ್ಟಿದ್ದಾನೆ.
ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೀರಿ. ಎಲ್ಲಿ ಎಷ್ಟು ಮಾತನಾಡಬೇಕು? ಯಾರ ಜೊತೆ ಸುಮ್ಮನಿರಬೇಕು? ಯಾರ ಜೊತೆ ವಾದ ಮಾಡಬಾರದು ಎನ್ನುವುದನ್ನು ನೀವು ತಿಳಿದವರಾಗಿರುವಿರಿ.
ಹಾಗೇ ಸಂಬಂಧಗಳನ್ನು ಹೇಗೆ ಕಾಪಾಡಬೇಕು ಉಳಿಸಿಕೊಳ್ಳಬೇಕು ಎನ್ನುವುದನ್ನೂ ತಿಳಿದುಕೊಂಡಿದ್ದೀರಾ. ಹಣಕಾಸಿನ ವಿಚಾರದ ಅರಿವೂ ಕೂಡ ನಿಮಗಾಗಿದೆ. ಪಂಚಮ ಸ್ಥಾನಕ್ಕೆ ಗುರು ಎಂಟ್ರಿ ಕೊಡುತ್ತಾನೆ.
ಪಂಚಮ ಸ್ಥಾನ ಅಂದರೆ ನಮ್ಮನ್ನು ನಾವು ನಿಯಂತ್ರಿಸುವಂತದ್ದಾಗಿದೆ. ನಿಮ್ಮನ್ನು ಪ್ರೀತಿಸುವಂತವರು, ನಿಮಗೆ ಒಳ್ಳೆಯದನ್ನು ಮಾಡುವಂತವರು ಹೆಚ್ಚಾಗುತ್ತಾ ಹೋಗುತ್ತಾರೆ. ಸ್ನೇಹಿತರ ಬಳಗ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದ ಬಳಗ ಹೆಚ್ಚಾಗುತ್ತದೆ. ಒಂಟಿತನ ದೂರವಾಗುತ್ತದೆ.
ಧನು ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಕರ: ಮಾನಸಿಕ ವ್ಯಥೆ
ಮಕರ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹ ಅನುಗ್ರಹವನ್ನು ಮಕರ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ. ಮಕರ ರಾಶಿಯ ಎರಡನೇ ಮನೆಗೆ ಶನಿ ಆಗಮನವಾಗಿದೆ. ಇಷ್ಟು ದಿನ ಗುರು ಮೀನ ರಾಶಿಯಲ್ಲಿ ಸ್ಥಿತನಾಗಿದ್ದರೆ ಯುಗಾದಿ ಕಳೆದ ನಂತರ ಗುರು ಮೇಷ ಪ್ರವೇಶ ಮಾಡುತ್ತಾನೆ. ಅಂದರೆ ಚತುರ್ಥಭಾವಕ್ಕೆ ಗುರು ಪ್ರವೇಶ ಮಾಡುತ್ತಾನೆ.
ಇಷ್ಟು ದಿನ ಗುರು ತೃತಿಯಭಾವದಲ್ಲಿರುವದರಿಂದ ಗುರು ಬಲ ಮಕರ ರಾಶಿವರ ಮೇಲೆ ಇರಲಿಲ್ಲ. ಚತುರ್ಥಭಾವಕ್ಕೆ ಗುರು ಪ್ರವೇಶ ಮಾಡಿದರೂ ಗುರು ಬಲ ಇರುವುದಿಲ್ಲ. ಆದರೆ ಗುರು ದೃಷ್ಟಿ ಇರುತ್ತದೆ. ಈ ಹಿಂದೆ ಸಾಕಷ್ಟು ಸಮಸ್ಯೆಗಳು ಮಕರ ರಾಶಿಯವರಿಗೆ ಇತ್ತು. ಈ ಯುಗಾದಿ, ಗ್ರಹಗಳ ಬದಲಾವಣೆ ನಿಮಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯನ್ನು ತರಲಿದೆ.
ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ಸಮಯ ಇದಾಗಿದೆ. ಜ್ಞಾನವನ್ನು ಪಡೆಯುತ್ತೀರಿ. ಕೇತು ಕೂಡ ನಿಮ್ಮ ಜ್ಞಾನ ವೃದ್ಧಿಗೆ ಸಹಕಾರ ಮಾಡುತ್ತಾನೆ. ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವುದರ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಅವಕಾಶವನ್ನು ಕಾಯುತ್ತಿದ್ದರೆ ಅದೇ ಅವಕಾಶವನ್ನು ಪಡೆಯುತ್ತೀರಿ. ಮಕ್ಕಳ ಜಾತಕ ಕೂಡ ತುಂಬಾ ಚೆನ್ನಾಗಿದೆ. ಪೋಷಕರು ತುಂಬಾ ಸಂತೋಷ ಪಡುತ್ತಾರೆ.
ನಿಮ್ಮ ಮಾತು, ಸಂಸಾರ, ಹಣದ ಹರಿವು ಇವೆಲ್ಲವೂ ಏಕಾಏಕಿ ಅಸ್ತವ್ಯಸ್ತವಾದಂತೆ ಅನಿಸುತ್ತದೆ. ಹೇಳಿಕೊಳ್ಳಲಾಗದಂಥ ಮಾನಸಿಕ ವ್ಯಥೆ ಕಾಡಲಿದೆ. ನೀವಾಗಿಯೇ ಸಾಲದ ಹೊರೆ ಹೊರುವಂತಾಗುತ್ತದೆ. ಶತ್ರುಗಳು ಪ್ರಬಲರಾಗುತ್ತಾರೆ. ಆದರೆ ನಿಮ್ಮ ಚಾಣಾಕ್ಷ ನಡೆಯಿಂದ ಅವುಗಳನ್ನು ದಾಟುತ್ತೀರಿ.
ಉದ್ಯೋಗ ವಿಚಾರಕ್ಕೆ ಹೆಚ್ಚು ಲಕ್ಷ್ಯ ನೀಡಬೇಕು. ವಿವಾಹಕ್ಕೆ ಹೊರತಾದ ಸಂಬಂಧಗಳು, ಮೋಹಕ್ಕೆ ಸಿಲುಕಬೇಡಿ. ನಿಮ್ಮ ಪಾಲಿಗೆ ಸ್ನೇಹ ಅಂತೆನಿಸಿದರೂ ಸಮಾಜದ ಕಣ್ಣಿನಲ್ಲಿ ಅಪರಾಧಿಯಾಗಿ ನಿಲ್ಲಬೇಕಾದೀತು, ಎಚ್ಚರಿಕೆಯಿಂದ ಇರಿ.
ಮಕರ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕುಂಭ: ಸಾಡೇಸಾತ್ ಅವಧಿ
ಕುಂಭ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಕೇತು, ಶನಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ತಿಳಿಯೋಣ. ಈಗಾಗಲೇ ಕುಂಭ ರಾಶಿಗೆ ಶನಿ ಬಂದಾಗಿದೆ. ಶನಿ ನಿಮ್ಮ ಕುಂಭ ರಾಶಿಯಲ್ಲಿದ್ದು ಕುಂಭ ರಾಶಿಯವರಿಗೆ ಯಾವ ರೀತಿ ಫಲವನ್ನು ಕೊಡುತ್ತಾನೆಂದು ನೋಡುವುದಾದರೆ- ಶನಿ ಶುಭ ಹಾಗೂ ಅಶುಭ ಫಲಗಳನ್ನು ಕೊಡುತ್ತಾನೆ.
ಏಪ್ರಿಲ್‌ಗೆ ಗುರು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಜೊತೆಗೆ ಈಗಾಗಲೇ ರಾಹು ಮೇಷ ರಾಶಿಯಲ್ಲಿದೆ. ಕುಂಭ ರಾಶಿಯವರಿಗೆ ಗುರು ಬಲ ಇರುವುದಿಲ್ಲ. ಹೀಗಾಗಿ ಕುಂಭ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ವರ್ಷವಾಗಿದೆ.
ಹರ ಮುನಿದರು ಗುರು ಕಾಯುವನು ಎನ್ನುವ ರೀತಿಯಲ್ಲಿ ಗುರು ಶನಿಯಿಂದ ಕಾಪಾಡುತ್ತಿದ್ದ. ಆದರೆ ಕುಂಭ ರಾಶಿಯವರಿಗೆ ಗುರು ಬಲವಿಲ್ಲ. ಸಾಡೇಸಾತ್ ಇದೆ. ಹೀಗಾಗಿ ಎಲ್ಲಾ ಸಮಸ್ಯೆಯನ್ನು ಕುಂಭ ರಾಶಿಯವರೇ ಎದುರಿಸಬೇಕಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವೂ ಕೂಡ ಇದೆ.
ಸಾಡೇಸಾತ್ ಎಂದರೆ ಕಷ್ಟದ ಅವಧಿ ಎನ್ನುತ್ತಾರೆ. ಆದರೆ ಇದು ಜೀವನದಲ್ಲಿ ಬದಲಾವಣೆಯನ್ನು ಕಾಣುವ ಅವಧಿಯಾಗಿದೆ. ಈ ಅವಧಿಯಲ್ಲಿ ನಾವು ಕರ್ಮದತ್ತ ಗಮನ ಹರಿಸಬೇಕು. ಬರುವಂತಹ ಎಲ್ಲಾ ಅಡೆತಡೆಗಳು ಮತ್ತು ವೈಫಲ್ಯಗಳೊಂದಿಗೆ ನಿಮ್ಮ ಕಾರ್ಯ ಮತ್ತು ಕರ್ತವ್ಯಗಳಿಗೆ ನ್ಯಾಯ ಒದಗಿಸಿದರೆ ಅಂತಿಮವಾಗಿ ಉತ್ತಮಫಲವನ್ನು ಕಾಣುವುದರಲ್ಲಿ ನಿಸ್ಸಂಶಯವಿಲ್ಲ.
ರಾಹುಗೆ ವಿಶೇಷ ಶಕ್ತಿ ಉಳ್ಳವನಾಗಿದ್ದಾನೆ. ಹೀಗಾಗಿ ರಾಹು ಯಾವುದು ಸರಿ ತಪ್ಪುಗಳ ಬಗ್ಗೆ ಕುಂಭ ರಾಶಿಯವರಿಗೆ ಎಚ್ಚರಿಕೆ ನೀಡುತ್ತಾನೆ, ಮನವರಿಕೆ ಮಾಡುತ್ತಾನೆ. ನಿಮ್ಮ ಆರ್ಥಿಕ ಜೀವನದಲ್ಲಿ ಖರ್ಚು ಮತ್ತು ಆದಾಯ ಸಮನಾಗಿರುತ್ತದೆ. ಕಷ್ಟ ಜಾಸ್ತಿ ಆಗಿ ಸಾಲ ಮಾಡುವಂತ ಪರಿಸ್ಥಿತಿ ಬರಬಹುದು. ಆದರೆ ಅದಕ್ಕೂ ಮುಂಚಿತವಾಗಿ ಜಾಗೃತ ವಹಿಸಿ. ಹಣ ಉಳಿತಾ ಮಾಡಿ. ಸಾಲವನ್ನು ತಪ್ಪಿಸುವುದು ಒಳ್ಳೆದು.
ಕುಂಭ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆಹೆಚ್ಚಿನಮಾಹಿತಿ.

ಮೀನ: ಕೆಲಸದಲ್ಲಿ ಒತ್ತಡ
ಮೀನ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಕೇತು, ಶನಿ ಯಾವ ರೀತಿ ಪ್ರಭಾವ ಬೀರಲಿದೆ ಎಂದು ತಿಳಿಯೋಣ. ಇಷ್ಟು ದಿನ ಮೀನ ರಾಶಿಯ ಲಾಭ ಸ್ಥಾನದಲ್ಲಿ ಶನಿ ಇದ್ದ. ಜನವರಿಗೆ ಶನಿ ಮೀನ ರಾಶಿಯವರ ಹನ್ನೆರಡನೆ ಮನೆಗೆ ಪ್ರವೇಶ ಮಾಡಿ ಆಗಿದೆ.
ಸಾಡೇಸಾತ್‌ನ ಮೊದಲ ಹಂತದಲ್ಲಿ ಮೀನರಾಶಿಯವರು ಇದಾರೆ. ಅಂದರೆ ಮೀನ ರಾಶಿಯವರಿಗೆ ಸಾಡೇಸಾತ್ ಪ್ರಾರಂಭವಾಗಿದೆ. ಆದರೆ ಮೀನ ರಾಶಿಯವರನ್ನು ಗುರು ಗ್ರಹ ಕಾಪಾಡಲಿದೆ.
ಎರಡನೇ ಮನೆಗೆ ಹೋಗುವಂತ ಗುರು ನಿಮ್ಮ ಮುಂದೆ ಇರುತ್ತಾನೆ. ನಿಮ್ಮ ಹಿಂದೆ ಶನಿ ಇರುತ್ತಾನೆ. ಮುಂದೆ ಗುರು ಇರುವುದರಿಂದ ಮೀನ ರಾಶಿಯವರನ್ನು ಕೈ ಹಿಡಿದು ನಡೆಸುತ್ತಾನೆ.
ದಾರಿ ಗೊತ್ತಿಲ್ಲದ ಸಂದರ್ಭದಲ್ಲಿ ದಾರಿಯನ್ನು ತೋರಿಸುತ್ತಾನೆ. ಶನಿ ಸಾಡೇಸಾತ್ ಶುರುವಾಗಿರುವುದರಿಂದ ನಿಮ್ಮ ಕೆಲಸಗಳು ನಿಧಾನವಾಗುತ್ತವೆ. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.
ಕೊಟ್ಟ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ತುಂಬಾ ಕೆಲಸದ ಒತ್ತಡ ಆಗುತ್ತಿದೆ ಎನ್ನುವಂತ ಸ್ಥಿತಿಗೆ ಮೀನ ರಾಶಿಯವರು ತಲುಪುತ್ತೀರಿ. ಉದ್ಯೋಗ ವಿಚಾರದಲ್ಲಿ ಏನಾದರು ಒಂದು ಭಾದೆ ನಿಮ್ಮನ್ನು ಕಾಡಲಿದೆ.
ಭಾಗ್ಯ ಸ್ಥಾನಕ್ಕೆ ಶನಿ ದೃಷ್ಟಿ ಇರುವುದರಿಂದ ಅದೃಷ್ಟವೂ ಕೆಲಸ ಮಾಡುವುದಿಲ್ಲ. ಸ್ವಂತ ಉದ್ಯೋಗ ಮಾಡುವಂತವರಿಗೆ ಶ್ರಮಕ್ಕೆ ಸಮನಾಗಿ ಫಲ ಇರುತ್ತದೆ. ಅಂದರೆ ಉಳಿತಾಯ ಮಾಡುವಷ್ಟು ಲಾಭವನ್ನು ನೀವು ಪಡೆಯುವುದಿಲ್ಲ.
ಗುರುವಿನ ಅನುಗ್ರಹದಿಂದ ನಿಮಗೆ ಕೊಂಚ ಮಟ್ಟಿನ ಶ್ರಮದ ಫಲ ಸಿಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಸಮಯ ಇದಾಗಿರುತ್ತದೆ.
ಮೀನ ರಾಶಿಯವರ ಆರ್ಥಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ, ಆರೋಗ್ಯ, ಪ್ರೇಮ ಜೀವನ, ಆಸ್ತಿ ಖರೀದಿ ಇಂತೆಲ್ಲಾ ವಿಚಾರದಲ್ಲಿ ಯುಗಾದಿ ಭವಿಷ್ಯ ಹೇಗಿದೆ ಇಲ್ಲಿದೆಹೆಚ್ಚಿನಮಾಹಿತಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications