Get Updates
Get notified of breaking news, exclusive insights, and must-see stories!

Ugadi Horoscope 2023: ಮಕರ ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಲಾಭವೋ? ನಷ್ಟವೋ?

ಮಕರ ರಾಶಿಯ ಯುಗಾದಿ ಜಾತಕ 2023: ಮಕರ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಮಕರ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ಮಕರ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.

ಮಕರ ರಾಶಿಯ ಎರಡನೇ ಮನೆಗೆ ಶನಿ ಆಗಮನವಾಗಿದೆ. ಇಷ್ಟು ದಿನ ಗುರು ಮೀನ ರಾಶಿಯಲ್ಲಿ ಸ್ಥಿತನಾಗಿದ್ದರೆ ಯುಗಾದಿ ಕಳೆದ ನಂತರ ಗುರು ಮೇಷ ಪ್ರವೇಶ ಮಾಡುತ್ತಾನೆ. ಅಂದರೆ ಚತುರ್ಥಭಾವಕ್ಕೆ ಗುರು ಪ್ರವೇಶ ಮಾಡುತ್ತಾನೆ.

ಇಷ್ಟು ದಿನ ಗುರು ತೃತಿಯಭಾವದಲ್ಲಿರುವದರಿಂದ ಗುರು ಬಲ ಮಕರ ರಾಶಿವರ ಮೇಲೆ ಇರಲಿಲ್ಲ. ಚತುರ್ಥಭಾವಕ್ಕೆ ಗುರು ಪ್ರವೇಶ ಮಾಡಿದರೂ ಗುರು ಬಲ ಇರುವುದಿಲ್ಲ. ಆದರೆ ಗುರು ಬಲವಿರುತ್ತದೆ. ಈ ಹಿಂದೆ ಸಾಕಷ್ಟು ಸಮಸ್ಯೆಗಳು ಮಕರ ರಾಶಿಯವರಿಗೆ ಇತ್ತು. ಈ ಯುಗಾದಿ ಗ್ರಹಗಳ ಬದಲಾವಣೆ ನಿಮಗೆ ಸ್ವಲ್ಪ ಮಟ್ಟಿಗೆ ನಿಮಗೆ ನೆಮ್ಮದಿಯನ್ನು ತರಲಿದೆ.

ಮಕರ: ಆರ್ಥಿಕ ಜೀವನ

ಮಕರ: ಆರ್ಥಿಕ ಜೀವನ

ಮಕರ ರಾಶಿಯವರ ಆರ್ಥಿಕ ಜೀವನ ಈ ವರ್ಷ ಮಿಶ್ರವಾಗಿರುತ್ತದೆ. ಮಕರ ರಾಶಿಯವರ ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಈ ವರ್ಷ ಸ್ವಲ್ಪ ಕಷ್ಟವಾಗುತ್ತದೆ. ಅಂದರೆ ನೀವು ಯಾರಿಗಾದರೂ ಹಣವನ್ನು ಕೊಟ್ಟರೆ ಅದು ವಾಪಸ್ಸು ಬರುವುದಿಲ್ಲ. ಅವರಿಗೆ ಮೋಸ ಮಾಡುವ ಉದ್ದೇಶ ಇರುವುದಿಲ್ಲವಾದರೂ ನಿಮಗೆ ಬರುವ ಹಣ ತುಂಬಾ ನಿಧಾನವಾಗುತ್ತವೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಕೊಂಚ ಉಳಿತಾಯ ಮಾಡುವುದು ಮುಖ್ಯವಾಗಿರುತ್ತದೆ.

ನೀವು ಎಲ್ಲೋ ಹಣ ಹೂಡಿಕೆ ಮಾಡಿದ್ದರೆ, ಸಾಲ ಕೊಟ್ಟಿದ್ದರೆ, ಆ ಹಣ ಬರುವುದು ನಿಧಾನವಾಗುತ್ತದೆ. ಇದರಿಂದ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಮಕರ ರಾಶಿಯವರು ಈ ವರ್ಷ ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಹಣಕಾಶಿನ ವಿಚಾರದಲ್ಲಿ ಆರು ತಿಂಗಳ ಬಳಿಕ ಸ್ವಲ್ಪ ಸಮಾಧಾನ ಸಿಗಲಿದೆ.

ಮಕರ: ವೃತ್ತಿ ಜೀವನ

ಮಕರ: ವೃತ್ತಿ ಜೀವನ

ಮಕರ ರಾಶಿಯವರ ವೃತ್ತಿ ಜೀವನ ಈ ವರ್ಷ ಚೆನ್ನಾಗಿದೆ. ಗುರು ದಶಮ ಸ್ಥಾನವನ್ನು ನೋಡುವುದರಿಂದ ಮಕರ ರಾಶಿಯವರ ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ನಿಭಾಯಿಸಿಕೊಂಡು ಹೋಗುವ ಶಕ್ತಿ ಸಿಗಲಿದೆ. ಈ ವರ್ಷದ ಆರಂಭದಲ್ಲಿ ಸ್ವಲ್ಪ ಒತ್ತಡ ಇರುತ್ತದೆ. ಇದರಿಂದ ನೀವು ಕೆಲಸವೇ ಬೇಡ ಎಂದು ನಿರ್ಧರಿಸಬಹುದು. ಹಾಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗೆ ಮಾಡುವುದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುತ್ತವೆ.

ಹೀಗಾಗಿ ಯೋಜನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಒಳ್ಳೆದಾಗಲು ಸಮಯವನ್ನು ಕೊಡಿ. ಆರು ತಿಂಗಳ ಬಳಿಕೆ ಎಲ್ಲವೂ ಸರಿ ಹೋಗುತ್ತದೆ. ಗುರು ದಶಮ ನೋಡುವುದರಿಂದ ನಿಮ್ಮಲ್ಲಿ ಕೆಲಸ ಮಾಡುತ್ತೇನೆ ಎನ್ನುವ ಛಲವೂ ಹೆಚ್ಚಾಗುತ್ತದೆ. ಕೆಲಸದಲ್ಲಿ ಬದಲಾವಣೆ ಆಗಬಹುದು. ಓಡಾಟ ಅಧಿಕವಾಗಿರುತ್ತದೆ.

ಮಕರ: ಕೌಟುಂಬ ಜೀವನ

ಮಕರ: ಕೌಟುಂಬ ಜೀವನ

ಮಕರ ರಾಶಿಯವರ ಮೇಲೆ ಶನಿ ಪ್ರಭಾವ ಈ ವರ್ಷವಿರುತ್ತದೆ. ಹೀಗಾಗಿ ನೀವು ಯಾವುದೇ ಶುಭವನ್ನು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬಸ್ಥರಿಂದ ನಿಮಗೆ ಅಸಮಧಾನವಾಗಬಹುದು. ನಿಮ್ಮ ಮೇಲೆ ಕೆಲ ತಪ್ಪುಗಳನ್ನು ಹೋರಿಸುವುದು, ಕಷ್ಟ, ಹಣಕಾಸಿನ ವಿಷಯದಲ್ಲಿ ಸಮಸ್ಯೆ, ಕುಟುಂಬದ ಹೊರೆಯಾಗುತ್ತಿದೆ ಎನ್ನುವ ರೀತಿಯಲ್ಲಿ ಶನಿ ಫಲ ನೀಡುತ್ತಾನೆ. ಇದರೊಂದಿಗೆ ಬೇರೆ ಬೇರೆ ಸಮಸ್ಯೆಗಳು ಬರುತ್ತವೆ.

ವಾಸ್ತಾನದಲ್ಲಿ ಶನಿ ಇರುವುದರಿಂದ ನಿಮಗೆ ಗೊತ್ತಿಲ್ಲದೇ ರೀತಿಯಲ್ಲಿ ಬೇರೆಯವರಿಗೆ ಅಥವಾ ಕುಟುಂಬಸ್ಥರಿಗೆ ಬೇಸರದ ಮಾತನಾಡಬಹುದು. ಅವರು ನಿಮ್ಮಿಂದ ದೂರವಾಗಬಹುದು. ಕುಟುಂಬದಲ್ಲಿ ಎಲ್ಲರೂ ಇದ್ದರೂ ನೀವು ಒಂಟಿ ಎನಿಸುತ್ತದೆ. ಪ್ರಮಾಣಿಕ ಸಂಬಂಧವನ್ನು ನಿಮ್ಮ ಮಾತಿನಿಂದ ನೀವು ದೂರ ಮಾಡಿಕೊಳ್ಳಬಹುದು. ಹೀಗಾಗಿ ನೀವು ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ.

ಮಕರ: ಶೈಕ್ಷಣಿಕ ಜೀವನ

ಮಕರ: ಶೈಕ್ಷಣಿಕ ಜೀವನ

ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ಸಮಯ ಇದಾಗಿದೆ. ಮಕರ ರಾಶಿಯ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುತ್ತೀರಿ. ಕೇತು ಕೂಡ ನಿಮ್ಮ ಜ್ಞಾನ ವೃದ್ಧಿಗೆ ಸಹಕಾರ ಮಾಡುತ್ತಾನೆ. ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವುದರ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಮಾಡುವ ಅವಕಾಶವನ್ನು ಕಾಯುತ್ತಿದ್ದರೆ ಅದೇ ಅವಕಾಶವನ್ನು ಪಡೆಯುತ್ತೀರಿ. ಮಕ್ಕಳ ಜಾತಕ ಕೂಡ ತುಂಬಾ ಚೆನ್ನಾಗಿದೆ. ಪೋಷಕರು ತುಂಬಾ ಸಂತೋಷ ಪಡುತ್ತಾರೆ.

ಮಕರ: ಪ್ರೇಮ ಜೀವನ

ಮಕರ: ಪ್ರೇಮ ಜೀವನ

ಪರಸ್ಪರ ವ್ಯಕ್ತಿಗಳ ನಡುವೆ ಉತ್ತಮ ಹೊಂದಾಣಿಕೆ ಹಾಗೂ ಪ್ರೀತಿ ವಿಶ್ವಾಸ ಇದೆ ಎಂದಾದರೆ ಅವರ ಸಂಬಂಧ ಹಾಗೂ ಸ್ನೇಹ ಅತ್ಯುತ್ತಮವಾಗಿರುತ್ತವೆ. ಜೊತೆಗೆ ಒಬ್ಬರ ಕಷ್ಟದಲ್ಲಿ ಇನ್ನೊಬ್ಬರು ಹೃದಯ ಪೂರ್ವಕವಾಗಿ ಸ್ಪಂದಿಸುತ್ತಾರೆ. ಮಕರ ರಾಶಿಯವರು ಅಗತ್ಯದ ಸಂದರ್ಭದಲ್ಲಿ ಸೂಕ್ತ ಸಹಾಯವನ್ನು ಮಾಡುತ್ತಾರೆ. ಒಬ್ಬರ ಅಗತ್ಯಗಳಿಗೆ ಇನ್ನೊಬ್ಬರು ಸ್ಪಂದಿಸುವುದರ ಮೂಲಕ ಮಾನಸಿಕವಾಗಿಯೂ ಹಿತವನ್ನು ನೀಡುತ್ತಾರೆ. ಇಂತಹ ಹೊಂದಾಣಿಕೆಯು ದಾಂಪತ್ಯ ಜೀವನದಲ್ಲಿ ಅತ್ಯಗತ್ಯವಾದ ಸಂಗತಿಯಾಗಿರುತ್ತದೆ.

ವ್ಯಕ್ತಿಗಳ ನಡುವೆ ಉತ್ತಮ ಹೊಂದಾಣಿಕೆ ಇರಬೇಕು ಎಂದರೆ ಅವರ ಕುಂಡಲಿ ಹಾಗೂ ರಾಶಿಚಕ್ರಗಳ ಹೊಂದಾಣಿಕೆ ಉತ್ತಮವಾಗಿರಬೇಕು. ವೈದಿಕ ಜ್ಯೋತಿಷ್ಯದ ಪ್ರಕಾರ ಪಾಲುದಾರರು ಅಥವಾ ಸಂಗಾತಿಗಳ ನಡುವೆ ಸೂಕ್ತ ಹೊಂದಾಣಿಕೆ ಇರಬೇಕು. ಆಗಲೇ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಇದೆ ಎಂದಾಗ ಜೀವನವು ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ. ಯಾವ ದಂಪತಿಗಳ ಕುಂಡಲಿ ಹೊಂದಾಣಿಕೆ ಇರುವುದಿಲ್ಲವೋ ಅಂತಹ ವ್ಯಕ್ತಿಗಳ ನಡುವಿನ ದಾಂಪತ್ಯ ವಿರಸ, ಬೇಸರ ಹಾಗೂ ಕಲಹದಿಂದ ಕೂಡಿರುತ್ತದೆ.

ಮಕರ: ಆಸ್ತಿ ಖರೀದಿ

ಮಕರ: ಆಸ್ತಿ ಖರೀದಿ

ಈ ಯುಗಾದಿಗೆ ಆಸ್ತಿ ಕುರಿತಾದ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ. ಕಾನೂನು ಮೆಟ್ಟಿಲೇರುವ ಆಸ್ತಿ ಸಂಬಂಧಿತ ಸಮಸ್ಯೆಗಳು ನಿಮ್ಮ ಪರವಾಗಿ ಬಗೆಹರಿಯಲಿವೆ. ಕೋರ್ಟ್ ಕೇಸ್‌ಗಳಿಂದ ತುಂಬಾ ಓಡಾಟ ಇರುತ್ತದೆ. ಗುರು ಬಂದ ಮೇಲೆ ಈ ಸಮಸ್ಯೆಗಳು ಎಲ್ಲಾ ದೂರವಾಗುತ್ತವೆ. ಅಂದರೆ ನವೆಂಬರ್ ಬರುತ್ತಿದ್ದಂತೆ ನಿಮಗೆ ನ್ಯಾಯ ಸಿಗುತ್ತದೆ. ಗುರು ಅಂದರೆ ನ್ಯಾಯ ಕೊಡಿಸುವವನು. ಹೀಗಾಗಿ ಇಷ್ಟು ದಿನ ಕಷ್ಟಗಳು ದೂರವಾಗುತ್ತವೆ.

ಮನೆ, ಭೂಮಿ, ವಾಹನ ಖರೀದಿಸಲು ಈ ಸಮಯ ಉತ್ತಮವಾಗಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಸಾಲ ಮಾಡಿ ಮನೆ, ಭೂಮಿ, ವಾಹನ ಖರೀದಿಗೆ ಮುಂದಾಗಬೇಡಿ. ಇದು ನಿಮಗೆ ಕಷ್ಟವನ್ನು ನೀಡಬಹುದು. ಸಾಲ ತೀರಿಸಲಾಗದಂತ ಸಮಸ್ಯೆಗಳು ನಿಮಗೆ ಬರಬಹುದು.

ಮಕರ: ಆರೋಗ್ಯ

ಮಕರ: ಆರೋಗ್ಯ

ಯುಗಾದಿ ಬಳಿಕ ಆರೋಗ್ಯದಲ್ಲಿ ಜಾಗರೂಕರಾಗಿರಿ. ನಿಮ್ಮ ಆರೋಗ್ಯದ ಕಡೆ ಜಾಸ್ತಿ ಎಚ್ಚರಿಕೆಯನ್ನು ವಹಿಸಬೇಕು. ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಉತ್ತಮ ವೈದ್ಯರನ್ನು ಕಾಣುವುದರಿಂದ ಸಮಸ್ಯೆಗಳಿಗೆ ಕೊಂಚ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ನಿಮಗಿಂತಲೂ ಮಕ್ಕಳ ಬಗ್ಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ನಿಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ರಾಹು ಹಾಗೂ ಶನಿಗೆ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ.

ಪರಿಹಾರ

ಪರಿಹಾರ

* ಪ್ರತೀ ಶನಿವಾರ ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ದೇವಸ್ಥಾನಕ್ಕೆ ಕೊಡಿ

* ಶುಕ್ರವಾರ ಕಪ್ಪು ಎಳ್ಳು ಇಟ್ಟು ಪೂಜೆ ಮಾಡಿ

*ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.

*ವೃದ್ಧಾಶ್ರಮಕ್ಕೆ ಹೋಗಿ ಹಳದಿ ವಸ್ತ್ರವನ್ನು ದಾನ ಮಾಡಿ

* ಸಂಕಷ್ಟ ಚತುರ್ಥಿ ವ್ರತ ಮಾಡಿ

* ಸೂರ್ಯ, ಮಂಗಳ ಮಂತ್ರವನ್ನು ಪಠಿಸಿ

* ಗುರು ಆರಾಧನೆ ಮಾಡಿ

*ವಯಸ್ಸಾದವರ ಆಶೀರ್ವಾದ ಪಡೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+