Get Updates
Get notified of breaking news, exclusive insights, and must-see stories!

Ugadi Horoscope 2023 : ಯುಗಾದಿ 2023: ಈ ವರ್ಷ ಮಿಥುನ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ, ವೃತ್ತಿಯಲ್ಲಿ ಲಾಭ

ಮಿಥುನ ರಾಶಿಯ ಯುಗಾದಿ ಜಾತಕ 2023: ಕನ್ನಡದಲ್ಲಿ ಮಿಥುನ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ.

ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ. ಈ ಸುಸಂದರ್ಭವನ್ನು 2023ರ ಮಾರ್ಚ್ 22ರಂದು ಆಚರಿಸಲಾಗುತ್ತದೆ.

ಈ ಶೋಭಕೃತಿ ನಾಮ ಸಂವತ್ಸರದಲ್ಲಿ ಮಿಥುನ ರಾಶಿಯವರ 2023ರ ಭವಿಷ್ಯ ಹೇಗಿದೆ? ಗುರು, ಶನಿ ರಾಹು, ಕೇತು ಈ ನಾಲ್ಕು ಗ್ರಹಗಳಿಂದ ಈ ವರ್ಷ ಮಿಥುನ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಲಾಭದ ಸ್ಥಾನದಲ್ಲಿ ಗುರು ಮತ್ತು ರಾಹು ಇರುವುದರಿಂದ ಮಿಥುನ ರಾಶಿಯವರಿಗೆ ಈ ಯುಗಾದಿ ಆರ್ಥಿಕ ಲಾಭವನ್ನು ನೀಡುತ್ತದೆ. ಆರ್ಥಿಕ ಅಭಿವೃದ್ಧಿ ಕಾಣಬಹುದು. ಒಡುವೆ, ವಸ್ತ್ರ, ಹಣ ಪ್ರಾಪ್ತಿಯಾಗಲಿದೆ. ರಾಹು ಆಕಸ್ಮಿಕ ಅಭಿವೃದ್ಧಿ ಕೊಡುತ್ತಾನೆ. ಸ್ವಂತ ಉದ್ಯೋಗದಲ್ಲಿರುವ ಉದ್ಯೋಗಿಗಳು ಆಕಸ್ಮಿಕ ಲಾಭಗಳನ್ನು ಪಡೆಯುತ್ತಾರೆ.

ಮಿಥುನ ರಾಶಿಯವರು ಸಾಲದ ಬಾದೆಯನ್ನು ಎದುರಿಸುತ್ತಿದ್ದರೆ, ತುಂಬಾ ಕಷ್ಟ ಪಡುತ್ತಿದ್ದರೆ ಅಂಥವರಿಗೆ ಯುಗಾದಿ ಕಳೆದ ಬಳಿಕ ಸಾಲದ ಹೊರೆಯನ್ನು ಕಡಿಮೆ ಆಗುತ್ತದೆ. ಧನ ಲಾಭವಾಗುತ್ತದೆ. ಲೋನ್ ಕ್ಲಿಯರ್ ಆಗುತ್ತದೆ.

ಮಿಥುನ: ಆರ್ಥಿಕ ಜೀವನ

ಮಿಥುನ: ಆರ್ಥಿಕ ಜೀವನ

ಆರ್ಥಿಕ ಜೀವನದಲ್ಲಿ ಮಿಥುನ ರಾಶಿಯವರು ಸಾಕಷ್ಟು ಶುಭ ಫಲವನ್ನು ಕಾಣುತ್ತೀರಿ. ಹಣದ ಹರಿವು ಹೆಚ್ಚಾಗುತ್ತದೆ. ಹಣವನ್ನು ಸುಖಾ ಸುಮ್ಮನೆ ಖರ್ಚು ಮಾಡಬೇಡಿ. ಖರ್ಚಿನ ಕಡೆಗೆ ಹೆಚ್ಚು ಗಮನ ವಹಿಸಿ. ನಿರೀಕ್ಷೆಯೇ ಮಾಡದಂತೆ ಸಿಕ್ಕಾಪಟ್ಟೆ ಖರ್ಚುಗಳು ಕುತ್ತಿಗೆಗೆ ಅಮರಿಕೊಳ್ಳುತ್ತವೆ. ನಿಮ್ಮದೇ ಅತಿಯಾದ ವಿಶ್ವಾಸದಿಂದ ಸಾಲ ಮಾಡಿಕೊಳ್ಳುತ್ತೀರಿ. ಹಣದ ಹರಿವು ಚೆನ್ನಾಗಿದೆ ಎಂಬ ಕಾರಣಕ್ಕೆ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ.

ಕುಟುಂಬದಲ್ಲಿ ದುಖ: ಮತ್ತು ಸಮಸ್ಯೆಗಳು ನಿವಾರಣೆ ಸಮಾಧಾನ ಇರುತ್ತದೆ. ಆರ್ಥಿಕ ಜೀವನ ಸುಧಾರಣೆ ಕಾಣಲು ಕಪ್ಪು ಎಳ್ಳನ್ನು ದೇವಸ್ಥಾನಕ್ಕೆ ಕೊಡಿ. ಇದರಿಂದ ಹನುಮಾನ್ ಚಾಲೀಸ್ ಅನ್ನು ಪಠಿಸಿ. ಈ ಒಂದು ಯುಗಾಧಿ ಭವಿಷ್ಯ ಮಿಥುನ ರಾಶಿಯವರಿಗೆ ತುಂಬಾನೇ ಶುಭಫಲವನ್ನು ಕೊಡುತ್ತದೆ.h

ಮಿಥುನ: ವೃತ್ತಿ ಜೀವನ

ಮಿಥುನ: ವೃತ್ತಿ ಜೀವನ

ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಒಳ್ಳೆಯ ಲಾಭವನ್ನು ಗಳಿಸುವಿರಿ. ಅಂದುಕೊಂಡ ಕಾರ್ಯಗಳು ನಿವಾರಣೆಯಾಗುತ್ತವೆ. ವರ್ಗಾವಣೆ ಸಿಗಬೇಕು, ಬಡ್ತಿ ಬೇಕು, ಕೆಲಸದ ಹೊರೆ ಕಡಿಮೆಯಾಗಬೆಕು ಇಂತೆಲ್ಲಾ ಆಸೆ ಉಳ್ಳವರಿಗೆ ಗುರು ಆಶೀರ್ವದಿಸಲಿದ್ದಾನೆ. ಯುಗಾದಿ ಕಳೆದ ಬಳಿಕ ನೀವಂದುಕೊಂಡ ಎಲ್ಲಾ ಕಾರ್ಯಗಳು ಸುಲಭವಾಗಿ ನೆರವೇರುತ್ತವೆ. ಜೊತೆಗೆ ಉದ್ಯೋಗ ವಿಚಾರದಲ್ಲಿ ಯುಗಾದಿ ಬಳಿಕ ಶುಭವಾಗಲಿದೆ.

ಭಾಗ್ಯದಲ್ಲಿ ಭಾಗ್ಯಾಧಿಪತಿ ಶನಿ ಇರುವುದರಿಂದ ನಿಮಗೆ ಅದೃಷ್ಟವನ್ನು ತಂದುಕೊಡುತ್ತಾನೆ. ನೀವು ಮಾಡುವ ಕೆಲಸಕ್ಕೆ ತಕ್ಕಂತೆ ಶನಿ ಲಾಭವನ್ನು ತಂದು ಕೊಡುತ್ತಾನೆ. ಅಭಿವೃದ್ಧಿಯನ್ನು ತಂದು ಕೊಡುತ್ತಾನೆ.

ಮಿಥುನ: ಕೌಟುಂಬಿಕ ಜೀವನ

ಮಿಥುನ: ಕೌಟುಂಬಿಕ ಜೀವನ

ಕುಟುಂಬದಲ್ಲಿ ಸಮಸ್ಯೆಗಳು, ಕುಗ್ಗುವಿಕೆ ದೂರವಾಗುತ್ತದೆ. ಉದ್ಯೋಗದಲ್ಲಿ ತುಂಬಾ ಶ್ರಮ ನಿವಾರಣೆಯಾಗುತ್ತದೆ. ಈವರೆಗೆ ದುಡಿಲೇಬೇಕು ಎನ್ನುವ ಕಷ್ಟ ಇತ್ತು. ಆದರೆ ಈ ವರ್ಷ ಇಂತಹ ಯಾವುದೇ ಕಷ್ಟಗಳು ಇರುವುದಿಲ್ಲ. ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ಈ ವರ್ಷದಲ್ಲಿ ಕೆಲವೊಂದು ವಿಚಾರಕ್ಕೆ ನಿಮಗೆ ಬೇಸರವಾಗಲಿದೆ. ನಿಮ್ಮ ಬಂಧು ಮಿತ್ರರಿಂದ ಈ ವರ್ಷ ಮನಸ್ತಾಪಗಳಾಗುತ್ತವೆ. ಉದ್ಯೋಗ, ಹಣಕಾಸು, ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಆದರೆ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ಮನಸ್ತಾಪಗಳಾಗುತ್ತದೆ.

ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದೇ ಉತ್ತಮ. ಎಲ್ಲರಿಗೂ ಒಳ್ಳೆಯವರಾಗಿರಿ ಇರಲು ಸಾಧ್ಯವಿಲ್ಲ. ಹೀಗಾಗಿ ಯಾವುದೇ ವಿಚಾರದಲ್ಲಿ ದುಡುಕಿ ಮಾತನಾಡಬೇಡಿ. ದ್ವಾಪರ ಯುಗದಲ್ಲಿ ರಾಮನಲ್ಲೂ ತಪ್ಪುಗಳನ್ನು ಹುಡುಕಲಾಯ್ತು. ಹೀಗಿರುವಾಗ ನಾವು ಭಗವಂತನನ್ನು ಮೆಚ್ಚಿಸಬೇಕೇ ಹೊರತು ಸಂಬಂಧಿಕರು ಅಥವಾ ಸ್ನೇತರನ್ನಲ್ಲ ಎನ್ನುವುದನ್ನು ಗಮನದಲ್ಲಿ ಇಡಿ.

ಮಿಥುನ: ಶೈಕ್ಷಣಿಕ ಜೀವನ

ಮಿಥುನ: ಶೈಕ್ಷಣಿಕ ಜೀವನ

ವಿದ್ಯಾರ್ಥಿಗಳಿಗೆ ತುಂಬಾ ಉತ್ತಮ ಸಮಯ ಇದಾಗಿದೆ. ಮಿಥುನ ರಾಶಿಯ ವಿದ್ಯಾರ್ಥಿಗಳು ತುಂಬಾ ಜ್ಞಾನವನ್ನು ಪಡೆಯುತ್ತೀರಿ. ಕೇತು ಕೂಡ ನಿಮ್ಮ ಜ್ಞಾನ ವೃದ್ಧಿಗೆ ಸಹಕಾರ ಮಾಡುತ್ತಾನೆ. ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳುವುದರ ಕಡೆಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಯಾವ ಅವಕಾಶವನ್ನು ಕಾಯುತ್ತಿರೋ ಅದೇ ಅವಕಾಶವನ್ನು ಪಡೆಯುತ್ತೀರಿ. ಮಕ್ಕಳ ಜಾತಕ ಕೂಡ ತುಂಬಾ ಚೆನ್ನಾಗಿದೆ. ಪೋಷಕರು ಮಕ್ಕಳಿಂದ ತುಂಬಾ ಸಂತೋಷ ಪಡುತ್ತಾರೆ.

ಮಿಥುನ: ಪ್ರೇಮ ಜೀವನ

ಮಿಥುನ: ಪ್ರೇಮ ಜೀವನ

ಮಿಥುನ ರಾಶಿಯ ಅವಿವಾಹಿತರು ಮದುವೆ ವಿಳಂಬವಾಗುತ್ತಿದೆ ಎಂದು ಯೋಚಿಸುತ್ತಿದ್ದರೆ ಅಂಥವರಿಗೆ ಕಂಕಣ ಭಾಗ್ಯ ಅಥವಾ ವಿವಾಹ ಯೋಗ ಕೂಡಿ ಬರಲಿದೆ. ವಿವಾಹಿತರು ಪುತ್ರ ಸಂತಾನವಿಲ್ಲ ಎಂದು ಚಿಂತೆಗೀಡಾಗಿದ್ದರೆ ಅವರೆಲ್ಲರಿಗೂ ಸಂತಾನ ಭಾಗ್ಯ ಸಿಗಲಿದೆ. ವಿವಾಹ ಕಾರ್ಯಗಳಿಗೆ ಇಷ್ಟು ದಿನ ಅಡೆ ತಡೆಗಳು ಇತ್ತು. ಆದರೆ ಈ ಯುಗಾದಿ ಕಳೆದ ಬಳಿಕ ನಿಮಗೆ ಮದುವೆ ತಡವಾಗುದಿಲ್ಲ.

ಗುರು ಬಲದಿಂದಾಗಿ ಸಂತಾನ ಭಾಗ್ಯ ಸಿಗಲಿದೆ. ಮನೆಯಲ್ಲಿ ಪೂಜೆ, ಪುನಸ್ಕಾರಗಳು, ಶುಭ ಕಾರ್ಯಗಳು ನಡೆಯುತ್ತವೆ. ಜೊತೆಗೆ ನಿಮ್ಮಲ್ಲಿ ದೈವ ಭಕ್ತಿ ಹೆಚ್ಚಾಗಲಿದೆ. ದೇವಸ್ಥಾನಗಳಿಗೆ ಹೋಗುವುದರಿಂದ ಮನಶಾಂತಿ ಸಿಗುತ್ತದೆ. ಗುರು ಬಲ ಗಾಯಕ್ಕೆ ಔಷಧಿ ಇದ್ದಂತೆ. ಹೀಗಾಗಿ ಗುರು ಬಲ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಮೂಲಕ ನಿವಾರಣೆ ಕೂಡ ನೀಡುತ್ತಾನೆ. ಜೊತೆಗೆ ಹಳೆಯ ಕಹಿ ಘಟನೆಗಳನ್ನು ಗುರು ಮರೆಸುತ್ತಾ ಹೋಗುತ್ತಾನೆ.

ಮಿಥುನ: ಆಸ್ತಿ ಖರೀದಿ

ಮಿಥುನ: ಆಸ್ತಿ ಖರೀದಿ

ಮಿಥುನ ರಾಶಿಯವರು ಯುಗಾದಿ ಬಳಿಕ ಆಸ್ತಿ ಖರಿಯನ್ನು ಮಾಡಬಹುದು. ಆದರೆ ಇದರಿಂದ ಮೋಸ ಹೋಗುವುದನ್ನು ತಪ್ಪಿಸಲು ಅನುಭವಿಗಳ ಸಲಹೆಯನ್ನು ಪಡೆಯಿರಿ. ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಮುನ್ನ ಮನೆಯಲ್ಲಿ ಶುಭ ಕಾರ್ಯಗಳಾಗುವುದು ಉತ್ತಮ. ಪೂಜೆಯಿಂದ ವಿಘ್ನಗಳು ದೂರವಾಗುತ್ತವೆ.

ಮನೆ, ಸೈಟ್, ವಾಹನ ಇತ್ಯಾದಿ ಖರೀದಿಗೆ ಯುಗಾದಿ ನಂತರದ ಸಮಯ ಉತ್ತಮವಾಗಿದೆ. ವಿಘ್ನಗಳ ನಿವಾರಣೆಗೆ ಪೂಜೆ ಮಾಡಿಸುವುದರಿಂದ ಯಾವುದೇ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ. ಭೂಮಿ ಲಾಭ ಇರುವುದರಿಂದ ಸೈಟು- ಜಮೀನು ಖರೀದಿ ಸಾಧ್ಯತೆ, ಮನೆ ನಿರ್ಮಾಣ ಅಥವಾ ಕಟ್ಟಿರುವ ಮನೆಯನ್ನೇ ಖರೀದಿ ಮಾಡುವ ಅವಕಾಶಗಳು ನಿಮ್ಮ ಪಾಲಿಗೆ ಇವೆ.

ಮಿಥುನ: ಆರೋಗ್ಯ

ಮಿಥುನ: ಆರೋಗ್ಯ

ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಸ್ಪಲ್ಪ ಜಾಗರೂಕರಾಗಿರಬೇಕು. ಹವಮಾನ ಬದಲಾವಣೆಯಿಂದಾಗಿ ನಿಮ್ಮ ಆರೋಗ್ಯ ಬಹುಬೇಗ ಹದಗೆಡಬಹುದು. ಮಿಥುನ ರಾಶಿಯವರು ಬದಲಾದ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುವುದಿಲ್ಲ. ಯಾರೋ ಮಾಡುವ ಕೆಲಸ ಅಂದರೆ ಯಾರೋ ತಿಂದರು ಎಂದು ತಿನ್ನುವುದು, ಯಾರೋ ಹೇಳಿದರು ಅಥವಾ ಒತ್ತಾಯಿಸಿದರೆಂದು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದನ್ನು ಮಾಡಬೇಡಿ.

ನಿಮ್ಮ ಆರೋಗ್ಯಕ್ಕೆ ಅಥವಾ ನಿಮ್ಮ ದೇಹ ಯಾವ ವಾತಾವರಣಕ್ಕೆ, ಯಾವ ಆಹಾರಕ್ಕೆ ಹೊಂದಿಕೊಳ್ಳುತ್ತದೋ ಅದೇ ಆಹಾರವನ್ನು ಸೇವಿಸಿ. ಆದಷ್ಟು ಹೊರ ಸೇವನೆಯನ್ನು ತಪ್ಪಿಸಿ. ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ಜಾಗರೂಕರಾಗಿರಿ.

ಪರಿಹಾರ

ಪರಿಹಾರ

* ಶನಿವಾರ ಕಪ್ಪು ಎಳ್ಳು ದೇವಸ್ಥಾನಕ್ಕೆ ನೀಡಿ

* ಯಾವುದಾದರೂ ಬೇಳೆಯನ್ನು ದಾನ ಮಾಡಿ.

* ಅನಾಥಶರಿಗೆ ವಸ್ತ್ರ ದಾನ ಮಾಡಿ

* ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ

* ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+