Get Updates
Get notified of breaking news, exclusive insights, and must-see stories!

Ugadi Horoscope 2023 : ಯುಗಾದಿ 2023: ಮೇಷ ರಾಶಿಯವರಿಗೆ ಶನಿದೇವನ ಕೃಪೆ: ವರ್ಷವಿಡೀ ಲಾಭ

ಮೇಷ ರಾಶಿಯ ಯುಗಾದಿ ಜಾತಕ 2023: ಕನ್ನಡದಲ್ಲಿ ಮೇಷ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ದೇಶದೆಲ್ಲೆಡೆ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ.

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಮುಂತಾದ ರಾಜ್ಯಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ.

ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದುಗಳು ಆಚರಿಸುತ್ತಾರೆ. ಮಾರ್ಚ್ 22ರಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಶೋಭಕೃತಿ ನಾಮ ಸಂವತ್ಸರದಲ್ಲಿ ಮೇಷ ರಾಶಿಯ ಭವಿಷ್ಯ ಹೇಗಿದೆ? ಯಾವುದು ಶುಭದಾಯಕ, ಲಾಭದಾಯಕವಾಗಲಿದೆ ಎಂಬುದರ ಕುರಿತ ಯುಗಾದಿ ರಾಶಿಭವಿಷ್ಯ ತಿಳಿದುಕೊಳ್ಳಿ.

ಮೇಷ: ಆರ್ಥಿಕ ಜೀವನ

ಮೇಷ: ಆರ್ಥಿಕ ಜೀವನ

ಮೇಷ ರಾಶಿಯವರಿಗೆ ಯುಗಾದಿ ನಂತರ ಗುರುವಿನ ಅನುಗ್ರಹ ಇರುತ್ತದೆ. ಹೀಗಾಗಿ ಆರ್ಥಿಕವಾಗಿ ಇದ್ದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಯಾಕೆಂದರೆ ಗುರು ಗ್ರಹ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಮೇಷ ರಾಶಿಯಲ್ಲಿ ಗುರು ಇರುವುದರಿಂದ ಕಳೆದುಕೊಂಡ ಹಣವನ್ನು ಮತ್ತೆ ಸಂಪಾದನೆ ಮಾಡಲು ಉತ್ತೇಜನವನ್ನು ನೀಡುತ್ತಾನೆ. ಕಳೆದುಕೊಂಡ ಹಣವನ್ನು ಸಂಪಾದಿಸುವ ಶಕ್ತಿಯನ್ನು ಕೊಡುತ್ತಾನೆ. ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.

ಎಷ್ಟೇ ಕೆಲಸ ಮಾಡಿದರೂ ಫಲ ಸಿಗುತ್ತಿಲ್ಲ ಎನ್ನುವ ಸಮಸ್ಯೆ ಇನ್ಮುಂದೆ ಮೇಷ ರಾಶಿಯವರಿಗೆ ಇರುವುದಿಲ್ಲ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸ್ವಂತ ಉದ್ಯೋಗ ಮಾಡುವವರಿಗೆ ತುಂಬಾನೇ ಶುಭ ಫಲವಿದೆ. ನಿಮಗೆ ಬರಬೇಕಾದ ಹಣ ಬರುತ್ತದೆ. ಸಾಲ ಪಡೆದವರು ಕೊಟ್ಟ ಹಣವನ್ನು ನಿಮಗೆ ಹಿಂದಿರುಗಿಸುತ್ತಾರೆ. ಹೂಡಿಕೆಯಿಂದ ನಿಮಗೆ ಲಾಭ ಸಿಗಲಿದೆ.

ಮೇಷ: ವೃತ್ತಿ ಜೀವನ

ಮೇಷ: ವೃತ್ತಿ ಜೀವನ

ಇಷ್ಟು ದಿನ ಶನಿ ಮಕರ ರಾಶಿಯಲ್ಲಿ ಇದ್ದನು. ಈ ವೇಳೆ ಮೇಷ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಿತ್ತು. ತುಂಬಾ ಶ್ರಮ ಪಡೆಬೇಕಾಗಿತ್ತು. ಆದರೆ ಇದಕ್ಕೆ ತಕ್ಕ ಫಲ ಸಿಗುತ್ತಿರಲಿಲ್ಲ. ಎಷ್ಟು ದುಡಿದರೂ ಅನುಕೂಲವಾಗುತ್ತಿಲ್ಲವಲ್ಲ ಎನ್ನುವ ಬೇಸರವಿತ್ತು. ಇದೆಲ್ಲವೂ ಮೇಷ ರಾಶಿಯವರಿಗೆ ಇನ್ಮುಂದೆ ದೂರವಾಗಲಿದೆ.

ಈ ವರ್ಷವಿಡೀ ಲಾಭವನ್ನೇ ಶನಿ ಮೇಷ ರಾಶಿಯವರಿಗೆ ನೀಡುತ್ತಾನೆ. ಮೇಷದ ಲಾಭ ಸ್ಥಾನದಲ್ಲಿ ಯಾವುದೇ ಗ್ರಹವಿದ್ದರೂ ಶುಭಫಲವನ್ನೇ ನೀಡುವುದರಿಂದ ಶನಿ ಕೂಡ ಮೇಷ ರಾಶಿಯವರಿಗೆ ಲಾಭವನ್ನು ನೀಡುತ್ತಾನೆ. ಅದರಲ್ಲೂ ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಹೆಚ್ಚಿನ ಶುಭ ಫಲವನ್ನು ನಿರೀಕ್ಷೆ ಮಾಡಬಹುದು.

ಇನ್ನೂ ಬೇರೆಯವರ ಕೈ ಕೆಳಗೆ ಕೆಲಸ ಮಾಡುವರಿಗೆ ಈ ಯುಗಾದಿ ಹೇಗಿದೆ ಅಂದರೆ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಗೌರವ ಮರ್ಯಾದೆ ಹೆಚ್ಚಾಗುತ್ತದೆ. ಕೆಲಸದ ಒತ್ತಡ ಯುಗಾದಿ ಕಳೆದ ನಂತರ ದೂರವಾಗುತ್ತದೆ.

ಮೇಷ: ಕೌಟುಂಬಿಕ ಜೀವನ

ಮೇಷ: ಕೌಟುಂಬಿಕ ಜೀವನ

ರಾಹು ಮೇಷ ರಾಶಿಗೆ ಬಂದ ಮೇಲೆ ಮೇಷ ರಾಶಿಯವರಿಗೆ ಮನಸ್ತಾಪಗಳು, ಕಿರಿಕಿರಿ, ಭಿನ್ನಪ್ರಾಯ, ನಿಮ್ಮ ಬಗ್ಗೆ ಅಪನಂಬಿಕೆ ಹೆಚ್ಚಾಗಿರುವುದು, ಇಂತೆಲ್ಲಾ ಸಮಸ್ಯೆಗಳಿಂದ ಮೇಷ ರಾಶಿಯವರ ನೆಮ್ಮದಿ ಹಾಳಾಗಿತ್ತು. ಆದರೆ ಮೇಷ ರಾಶಿಗೆ ಗುರು ಆಗಮನದಿಂದಾಗಿ ಈ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ನೀವು ಏನು? ನಿಮ್ಮ ಗುಣ ಸ್ವಭಾವ ಎಂಥದ್ದು ಎಂದು ಗುರು ತೋರಿಸಿಕೊಡುತ್ತಾನೆ. ಯಾರು ನಿಮಗೆ ಬೇಸರ ತಂದಿದ್ದರೆ ಅವರೇ ನಿಮ್ಮ ಬಳಿ ಬಂದು ಕ್ಷೆಮೆ ಕೇಳಬಹುದು.

ಕದಡಿ ಹೋಗಿದ್ದ ಮನಶಾಂತಿ ಮರಳಿ ಸಿಗಲಿದೆ. ಕುಟುಂಬದಲ್ಲಿ ವೈವಾಹಿಕ ಜೀವನದಲ್ಲಿ ಇದ್ದ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಂಗಾತಿಯ ನಡುವೆ ಇದ್ದಂತ ವೈಮನಸ್ಸುಗಳನ್ನು ನಿವಾರಣೆ ಮಾಡಿ ಮತ್ತೆ ಒಂದಾಗುವಂತೆ ಮಾಡುತ್ತಾನೆ. ದೀರ್ಘಕಾಲದವರೆಗೆ ಒಂದೇ ರಾಶಿಯಲ್ಲಿರುವ ಗ್ರಹಗಳೆಂದರೆ ಅದು ರಾಹು ಕೇತು ಶನಿ ಗುರು.

ಈ ನಾಲ್ಕು ಗ್ರಹಗಳು ಮೇಷ ರಾಶಿಯವರಿಗೆ ಶುಭ ಫಲವನ್ನು ನೀಡುತ್ತವೆ. ಹೀಗಾಗಿ ಮೇಷ ರಾಶಿಯವರಿಗೆ ಸಂಪೂರ್ಣವಾಗಿ ಶುಭಫಲವಾಗಿದೆ. ಬೆಲ್ಲ ತಿಂದಷ್ಟೆ ಸಂತೋಷವನ್ನು ನೀಡಲಿದೆ.

ಸಾಲದ ಬಾಧೆಯಿಂದ ಬಳಲುತ್ತಿರುವವರು ಈ ವರ್ಷದ ಎಷ್ಟು ಸಾಧ್ಯವೋ ಅಷ್ಟು ಸಾಲವನ್ನು ಮರುಪಾವತಿ ಮಾಡುವಿರಿ. ನವೆಂಬರ್ ಹೊತ್ತಿಗೆ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮ ಹಂತಕ್ಕೆ ಬರುತ್ತದೆ.

ಮೇಷ: ಶೈಕ್ಷಣಿಕ ಜೀವನ

ಮೇಷ: ಶೈಕ್ಷಣಿಕ ಜೀವನ

ಮೇಷರಾಶಿಯವರಿಗೆ ಗುರು ಜ್ಞಾನ ಮತ್ತು ಸುಖವನ್ನು ಕೊಡುತ್ತಾನೆ. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಈ ಯುಗಾದಿ ನಂತರ ದಿನಗಳು ಉತ್ತಮವಾಗಿವೆ. ಉನ್ನತ ವ್ಯಾಸಾಂಕ ಮಾಡಲು ಅನುಕೂಲವಾಗಿದೆ. ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳು ಸವಲತ್ತುಗಳು ನಿಮಗೆ ಸಿಗಲಿವೆ. ಒಳ್ಳೆ ಅವಕಾಶಗಳು ಸಿಗುತ್ತದೆ.

ವಿದ್ಯಾರ್ಥಿಗಳಿಗೆ ಯುಗಾದಿ ನಂತರದ ಸಮಯ ಅತ್ಯುತ್ತಮವಾಗಿದೆ. 2022ರಲ್ಲಿ ಇದ್ದ ವಿದ್ಯಾಭ್ಯಾಸದಲ್ಲಿನ ತೊಂದರೆಗಳು ದೂರವಾಗುತ್ತವೆ. ಮೇಷದಲ್ಲಿರುವ ಗುರು ಜ್ಞಾನವನ್ನು ವೃದ್ಧಿ ಮಾಡುತ್ತಾನೆ. ವಿದ್ಯೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತಾನೆ. ಅದ್ಯಾಭ್ಯಾಸದಲ್ಲಿ ಅಭಿವೃದ್ಧಿ ಕೂಡ ಕೊಡುತ್ತಾನೆ.

ಇದರೊಂದಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ವಿದೇಶದಲ್ಲಿ ಉದ್ಯೋಗ ಪಡೆಯಲು ಮೇಷ ರಾಶಿಯವರು ಪ್ರಯತ್ನ ಮಾಡುತ್ತಿದ್ದರೆ ಅಂಥವರಿಗೆ ಅವಕಾಶಗಳು ಸಿಗುತ್ತವೆ.

ಮೇಷ: ಪ್ರೇಮ ಜೀವನ

ಮೇಷ: ಪ್ರೇಮ ಜೀವನ

ಜೊತೆಗೆ ಸಂತಾನಾಪೇಕ್ಷೆಯನ್ನು ಹೊಂದಿರುವ ಮೇಷ ರಾಶಿಯವರು ಅಥವಾ ವಿವಾಹ ತಡವಾಡುತ್ತಿದ್ದರೆ ಗುರು ಶುಭ ಸುದ್ದಿಯನ್ನು ಕೊಡುತ್ತಾನೆ. ಮೇಷರಾಶಿಯವರಿಗೆ ಗುರು ಬಲವಿರುತ್ತದೆ.

ನವೆಂಬರ್‌ನಿಂದ ಅಂದರೆ ಮೇಷರಾಶಿಯಲ್ಲಿರುವ ರಾಹು ಮೀನ ರಾಶಿ ಪ್ರವೇಶ ಮಾಡಿದಾಗ ಗುರು ಇನ್ನೂ ಉತ್ತಮ ಫಲವನ್ನು ಕೊಡುತ್ತಾನೆ. ಅಂದರೆ ನಿಮ್ಮನ್ನು ಅವಹೇಳನ ಮಾಡುವಂತದ್ದು, ನಿಮ್ಮ ವಿರುದ್ಧ ದೂರು ನೀಡಿದವರೆಲ್ಲಾ ನಿಮಗೆ ಕ್ಷಮೆಯನ್ನು ಕೇಳುತ್ತಾರೆ. ಗುರು ಮೇಷ ರಾಶಿಯವರ ಗೌರವ ಮರ್ಯಾದೆಯನ್ನು ಕಾಪಾಡುತ್ತಾನೆ.

ಇನ್ನೂ ಯುಗಾದಿ ನಂತರದಲ್ಲಿ ಧರ್ಮ ಕಾರ್ಯಗಳು ಮೇಷ ರಾಶಿಯವರ ಮನೆಯಲ್ಲಿಯಾಗುತ್ತವೆ. ಮದುವೆಯಂತಹ ಶುಭ ಕಾರ್ಯಗಳು ನಡೆಯುತ್ತವೆ. ಮನೆಯಲ್ಲಿ ಹೋಮ, ಪೂಜೆ, ದೇವಸ್ಥಾನಕ್ಕೆ ಅಥವ ತೀರ್ಥ ಕ್ಷೇತ್ರಗಳಿಗೆ ಹೆಚ್ಚಾಗಿ ಹೋಗುವುದು ಇರುತ್ತದೆ.

ಮೇಷರಾಶಿಯವರಿಗೆ ದೈವ ಕಾರ್ಯದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತವೆ. ತುಂಬಾ ಪುಣ್ಯದ ಕಾರ್ಯಗಳು ಮೇಷ ರಾಶಿಯವರಿಂದ ನಡೆಯಲಿವೆ.

ಮೇಷ: ಆಸ್ತಿ ಖರೀದಿ

ಮೇಷ: ಆಸ್ತಿ ಖರೀದಿ

ಈ ವರ್ಷ ಮೇಷ ರಾಶಿಯವರು ಮನೆ ಕಟ್ಟಬೇಕು, ಸೈಟ್ ತೆಗೆದುಕೊಳ್ಳಬೇಕು ಅಥವಾ ಇನ್ನಿತರ ಯಾವುದೇ ವಸ್ತುಗಳನ್ನು ಖರೀದಿ ಮಾಡಬೇಕು, ಯಾವುದೇ ಶುಭ ಕಾರ್ಯಗಳನ್ನು ಮಾಡಬೇಕು ಅಂದುಕೊಂಡಿದ್ದರೆ ತುಂಬಾ ಒಳ್ಳೆ ಸಮಯ ಇದಾಗಿದೆ. ಆದರೆ ಸಾಲ ಮಾಡಿ ವಾಹನ, ಆಸ್ತಿ ಖರೀದಿ ಮಾಡುವುದನ್ನು ತಪ್ಪಿಸಿ.

ಯಾಕೆಂದರೆ ಸಾಲ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ಸದ್ಯ ಇರುವ ಗ್ರಹಗಳ ಸ್ಥಾನಪಲ್ಲಟದಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹೀಗಾಗಿ ನಿಮಗೆ ಮುಂಬರುವ ದಿನಗಳು ಕಷ್ಟಕರವಾಗಿದ್ದರೆ ನೀವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಬಹುದು. ಹೀಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಉತ್ತಮ.

ಮೇಷ: ಆರೋಗ್ಯ

ಮೇಷ: ಆರೋಗ್ಯ

ಮೇಷ ರಾಶಿಯವರಿಗೆ ಈ ಯುಗಾದಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ಸದಾ ಕಾಪಾಡುತ್ತದೆ. ಆದರೂ ಗಟ್ಟಿ ಪದಾರ್ಥವನ್ನು ಸೇವಿಸುವುದನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಉತ್ತಮ ವೈದ್ಯರನ್ನು ಕಾಣುವುದರಿಂದ ಸಮಸ್ಯೆಗಳಿಗೆ ಕೊಂಚ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ನಿಮಗಿಂತಲೂ ಮಕ್ಕಳ ಬಗ್ಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ನಿಮ್ಮ ಕುಟುಂಬ ಆರೋಗ್ಯವಾಗಿರುತ್ತದೆ.ಮೇಷ ರಾಶಿಯವರಿಗೆ ಈ ಯುಗಾದಿ ಬಳಿಕ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲ ಪರಿಹಾರಗಳನ್ನು ನೀಡಲಾಗಿದೆ.

ಪರಿಹಾರ

ಪರಿಹಾರ

* ದೇವಸ್ಥಾನದಲ್ಲಿ ಕಪ್ಪು ಎಳ್ಳು ದಾನವನ್ನು ಮಾಡಿ

* ಯಾವುದಾದರೂ ಬೇಳೆಯನ್ನು ದಾನ ಮಾಡಿ.

* ಅನಾಥಶರಿಗೆ ವಸ್ತ್ರ ದಾನ ಮಾಡಿ

* ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ

* ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+