Get Updates
Get notified of breaking news, exclusive insights, and must-see stories!

Ugadi Horoscope 2023: ವೃಷಭ ರಾಶಿ ಯುಗಾದಿ ಪಂಚಾಂಗ ವರ್ಷ ಭವಿಷ್ಯ ಫಲ

ವೃಷಭ ರಾಶಿಯ ಯುಗಾದಿ ಜಾತಕ 2023: ಕನ್ನಡದಲ್ಲಿ ವೃಷಭ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಭಾರತವು ವೈವಿಧ್ಯಮಯ ದೇಶವಾಗಿದ್ದು, ವಿವಿಧ ಸಾಂಸ್ಕೃತಿಕ ಹಿನ್ನೆಲೆಗೆ ಸೇರಿದ ಜನರು ವಾಸಿಸುತ್ತಾರೆ. ಆದ್ದರಿಂದ, ವರ್ಷಪೂರ್ತಿ, ನೀವು ವಿವಿಧ ಹಬ್ಬಗಳು ಮತ್ತು ಸಂದರ್ಭಗಳಿಗೆ ಸಾಕ್ಷಿಯಾಗುತ್ತೀರಿ. ಮಾರ್ಚ್ ತಿಂಗಳು ದೇಶದಾದ್ಯಂತ ಪ್ರಾದೇಶಿಕ ಹೊಸ ವರ್ಷದ ಆಚರಣೆಗಳನ್ನು ಪ್ರಾರಂಭಿಸುತ್ತದೆ. ಜನರು ಉತ್ಸಾಹದಿಂದ ಆಚರಿಸುವ ಪ್ರಾದೇಶಿಕ ಹೊಸ ವರ್ಷದ ಹಬ್ಬಗಳಲ್ಲಿ ಯುಗಾದಿಯೂ ಒಂದು.

ಯುಗಾದಿ ಅಥವಾ ಯುಗಾದಿ ಎಂಬುದು ಸಂಸ್ಕೃತ ಪದಗಳಾದ ಯುಗ ಅಂದರೆ ವಯಸ್ಸು ಮತ್ತು ಆದಿ ಎಂಬ ಪದದಿಂದ ಬಂದಿದೆ. ಆದ್ದರಿಂದ, ಇದರ ಅರ್ಥ "ಹೊಸ ಯುಗದ ಆರಂಭ". ಈ ಸುಸಂದರ್ಭವನ್ನು ಈ ವರ್ಷ ಮಾರ್ಚ್ 22ರಂದು ಆಚರಿಸಲಾಗುತ್ತದೆ.

ಈ ಶೋಭಕೃತಿ ನಾಮ ಸಂವತ್ಸರದಲ್ಲಿ ವೃಷಭ ರಾಶಿಯವರ 2023ರ ಭವಿಷ್ಯ ಹೇಗಿದೆ? ಗುರು, ಶನಿ ರಾಹು, ಕೇತು ಈ ನಾಲ್ಕು ಗ್ರಹಗಳಿಂದ ಈ ವರ್ಷ ವೃಷಭ ರಾಶಿಯವರ ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯಬಹುದು.

ಈಗಾಗಲೇ ತಿಳಿಸಿದಂತೆ ಗುರು ಲಾಭದ ಮತ್ತು ಜ್ಞಾನದ ಗ್ರಹವಾಗಿದೆ. ಇದು ವೃಷಭ ರಾಶಿಯವರಿಗೆ ಇಷ್ಟು ದಿನ ಲಾಭವನ್ನು ನೀಡುತ್ತಿತ್ತು. ಆರ್ಥಿಕ ಅಭಿವೃದ್ದಿಯನ್ನು ನೀಡಿತ್ತು. ಕುಟುಂಬದಲ್ಲಿ ಬರುವ ಸಮಸ್ಯೆಗಳಿಂದ ನಿಮ್ಮನ್ನು ದೂರ ಮಾಡುತ್ತಾ ಆರ್ಥಿಕ ಅಭಿವೃದ್ಧಿಯನ್ನು ಕೊಟ್ಟಿದ್ದನು. ಹಾಗಾದರೆ ಈ ವರ್ಷ ಆರ್ಥಿಕ ಫಲ ನೀಡುವುದಿಲ್ಲವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಇದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.

ವೃಷಭ: ಆರ್ಥಿಕ ಜೀವನ

ವೃಷಭ: ಆರ್ಥಿಕ ಜೀವನ

ಕಳೆದ ಬಾರಿ ನೀವು ಗಳಿಸಿದ ಹಣವನ್ನು ಈಗ ಹೂಡಿಕೆ ಮಾಡುವ ಸಮಯ. ಅಂದರೆ ಈ ವರ್ಷದಲ್ಲಿ ನೀವು ಮನೆ ಕಟ್ಟಲು ಕೈ ಹಾಕಬಹುದು, ಸೈಟ್ ತೆಗೆದುಕೊಳ್ಳಲು ಕೈ ಹಾಕಬಹುದು. ಅಥವಾ ಒಂದು ಹೊಸ ಬಿಸಿನೆಸ್ ಪ್ರಾರಂಭ ಮಾಡಲು ನಿರ್ಧರಿಸಬಹುದು. ಈ ರೀತಿ ಯೋಚನೆ ಮಾಡಿ ನೀವು ಉಳಿತಾಯ ಮಾಡಿರುವ ಹಣವನ್ನು ಹೂಡಿಕೆ ಮಾಡುವಿರಿ. ಇದರಿಂದ ಸುಖಾಸುಮ್ಮನೆ ಹಣ ಫೋಲಾಗುವುದು ತಪ್ಪಿಸಿದಂತಾಗುತ್ತದೆ.

ಆದರೆ ಇಲ್ಲಿ ಗಮನಿಸುವ ವಿಚಾರ ಏನೆಂದರೆ ಯಾವುದೇ ಕಾರಣಕ್ಕೂ ಸಾಲ ಮಾಡಿಕೊಂಡು ಮನೆ ಖರೀದಿ ಮಾಡುವಂತದ್ದಾಗಲಿ, ಅಥವಾ ಮನೆ ಕಟ್ಟುವುದನ್ನಾಗಲಿ ಅಥವಾ ವಾಹನ ಖರೀದಿ ಮಾಡುವುದನ್ನಾಗಲಿ ಮಾಡಬೇಡಿ. ಈ ವರ್ಷ ಹೂಡಿಕೆ ಮಾಡಿದ ಹಣಕ್ಕೆ ಮುಂದಿನ ವರ್ಷ ಲಾಭವನ್ನು ಪಡೆದುಕೊಳ್ಳುವಿರಿ. ಆದರೆ ಸಾಲದಿಂದ ಹೂಡಿಕೆ ಮಾಡುವುದು ನಿಮಗೆ ಕೆಟ್ಟ ಪರಿಣಾಮವನ್ನು ಬೀರಬಹುದು. ಆದರೆ ಗುರು ನಿಮ್ಮನ್ನು ಸಾಲಗ್ರಸ್ಥರನ್ನಾಗಿಯೂ ಮಾಡಬಹುದು.

ಇದರಿಂದ ಜಾಗರೂಕರಾಗಿ ಇರುವುದು ಉತ್ತಮ. ಜೊತೆಗೆ ಇನ್ಯಾರಿಗೋ ಸಾಲ ಕೊಡಿಸುವುದು, ಶೇರ್‌ನಲ್ಲಿ ಹೂಡಿಕೆ ಮಾಡುವುದು, ಚೀಟಿ ವ್ಯವಹಾರ, ಬಡ್ಡಿ ಕೊಡಿಸುವುದು, ಸಾಲ ಕೊಡುವುದು, ಎಲ್ಲಾ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವುದು ಇಂತದ್ದನ್ನೆಲ್ಲ ತಪ್ಪಿಸಬೇಕು.

ವೃಷಭ: ವೃತ್ತಿ ಜೀವನ

ವೃಷಭ: ವೃತ್ತಿ ಜೀವನ

ವೃಷಭ ರಾಶಿಯವರ ಕರ್ಮಸ್ಥನವನ್ನು ಶನಿ ನೋಡುತ್ತಿರುವಾಗ ಹೆಚ್ಚು ತಾಳ್ಮೆ ವಹಿಸಬೇಕು. ಈ ವರ್ಷ ವೃಷಭ ರಾಶಿಯವರು ಸಾಕಷ್ಟು ಕೆಲಸ ಮಾಡುತ್ತಾರೆ. ಬ್ಯಾಲೆನ್ಸ್ ಇರುವ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಸ್ವಂತ ಉದ್ಯೋಗದಲ್ಲಿರುವವರು ನಿಮ್ಮ ಕೆಲಸದ ಅಭಿವೃದ್ಧಿಗೋಸ್ಕರ ಬೇರೆ ಬೇರೆ ಕೆಲಸಗಳನ್ನು ಮಾಡುತ್ತೀರಿ. ಕುಂಭ ರಾಶಿಯವರು ತುಂಬಾನೇ ಶ್ರಮ ಜೀವಿಯಾಗಿರುತ್ತೀರಿ. ಈ ವರ್ಷ ಬಿಡುವಿಲ್ಲದೆ ದುಡಿಯುತ್ತೀರಿ.

ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಿದ್ದರೆ ವಿಶೇಷವಾಗಿ ನಿಮಗೊಂದು ಹೆಚ್ಚುವರಿ ಜವಬ್ದಾರಿಯೇ ಸಿಗಲಿದೆ. ಬಡ್ತಿ ಪಡೆಯುವ ಸಾಧ್ಯತೆ ಇದೆ. ಇದರಿಂದ ಜವಬ್ದಾರಿ ಹೆಚ್ಚಾಗುತ್ತದೆ. ಇಷ್ಟು ದಿನ ಇದ್ದ ಕೆಲಸ ಇನ್ನೂ ಹೆಚ್ಚಾಗಲಿದೆ. ನೀವು ಎಲ್ಲವನ್ನು ನಿಭಾಯಿಸಬೇಕಾಗುತ್ತದೆ.

ತುಂಬಾ ಸಮಯ ಕೆಲಸದ ಕಡೆಗೆ ಗಮನ ಕೊಡಬೇಕು. ಕೆಲಸದಲ್ಲಿ ಏನೇ ಸಮಸ್ಯೆಗಳಾದರೂ ಅದಕ್ಕೆ ನೀವೇ ಹೊಣೆಗಾರರಾಗುವುದರಿಂದ ನೀವು ಜಾಗರೂಕರಾಗಿರಬೇಕು. ಗುರು ವೃಷಭ ರಾಶಿಯವರಿಗೆ ಒಳ್ಳೆಯದನ್ನೇ ಮಾಡುತ್ತಾನೆ. ಆದರೆ ಅದರ ಹಿಂದೆ ಕಷ್ಟಗಳನ್ನು ಕೊಡುತ್ತಾನೆ. ಬಡ್ತಿ ಸಿಕ್ಕ ಖುಷಿಯಲ್ಲಿ ನಿಮಗೆ ಕೆಲಸ ಹೊರೆಯೂ ಹೆಚ್ಚಾಗುತ್ತದೆ. ಹಾಗಂತ ಕೆಲಸದ ಹೊರೆ ಹೆಚ್ಚಾಯಿತು ಎಂದು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ.

ಯಾಕೆಂದರೆ ಇನ್ನೊಂದು ಕೆಲಸವನ್ನು ನೀವು ಪಡೆಯುವ ಹೊತ್ತಿಗೆ ಗ್ರಹಗಳ ಸ್ಥಾನ ಪಲ್ಲಟದಿಂದಾಗಿ ಕೆಲಸ ಬದಲಾವಣೆ ಬಳಿಕವೂ ಶನಿ ನಿಮಗೆ ಕಿರಿಕಿರಿ ಅಥವಾ ತೊಂದರೆಯನ್ನುಂಟು ಮಾಡಬಹುದು. ಕೆಲಸ ಬಿಟ್ಟು ಮನೆಯಲ್ಲಿದ್ದು ಕೆಲ ದಿನಗಳ ನಂತರ ಕೆಲಸ ಹುಡುಕುತ್ತೇನೆಂದು ಯಾವುದೇ ಕಾರಣಕ್ಕೂ ಕೆಲಸವನ್ನು ಬಿಡಬೇಡಿ. ಯಾಕೆಂದರೆ ಇದು ನಿಮಗೆ ಆರ್ಥಿಕ ಸಮಸ್ಯೆಯನ್ನುಂಟು ಮಾಡಬಹುದು.

ಆದರೆ ಶನಿ ದೇವನು ವೃಷಭ ರಾಶಿಯವರ ತುಂಬಾ ದಿನದ ಹಳೆಯ ಕನಸನ್ನು ನನಸಾಗಿಸುತ್ತಾನೆ. ಹೀಗಾಗಿ ವೃಷಭ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಒಳ್ಳೆಯದ್ದೇ ಆಗಲಿದೆ.

ವೃಷಭ: ಕೌಟುಂಬಿಕ ಜೀವನ

ವೃಷಭ: ಕೌಟುಂಬಿಕ ಜೀವನ

ಎಲ್ಲಕ್ಕೂ ಆತುರ ಪಟ್ಟು ನಿರ್ಧಾರ ಮಾಡಬೇಡಿ. ನಾನಾ ಬಗೆಯಲ್ಲಿ ದುಃಖ ಅನುಭವಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರು, ಮಾತು ಕೇಳುತ್ತಿದ್ದವರು ಉಲ್ಟಾ ಹೊಡೆಯುವುದಕ್ಕೆ ಶುರು ಮಾಡುತ್ತಾರೆ. ಹೀಗಾಗಿ ಮನೆಗೆ ಬರುವ ಅತಿಥಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ.

ನಿಮ್ಮ ಮಾತು ಬೇಸರತದಂತೆ ನೋಡಿಕೊಳ್ಳಿ. ಶತ್ರುಗಳು ಪ್ರಬಲರಾಗುತ್ತಾರೆ. ಆದರೆ ನಿಮ್ಮ ಚಾಣಾಕ್ಷ ನಡೆಯಿಂದ ಅವುಗಳನ್ನು ದಾಟುತ್ತೀರಿ. ನಿಮಗೆ ಇಷ್ಟು ಸಮಯ ಗೌರವ ನೀಡದಿದ್ದವರು ಸಹ ಮಾನ- ಸಮ್ಮಾನಗಳನ್ನು ಮಾಡಲು ಆರಂಭಿಸುವ ಸಮಯ ದೂರವಿಲ್ಲ.

ಪುರುಷರಿಗೆ ಸ್ತ್ರೀಯರ ವಿಚಾರದಲ್ಲಿ ಹಾಗೂ ಸ್ತ್ರೀಯರಿಗೆ ಪುರುಷರ ವಿಚಾರದಲ್ಲಿ ಕೆಟ್ಟ ಹೆಸರು ಬರುವಂತಾಗುತ್ತದೆ. ಆ ಕಡೆಗೆ ಎಚ್ಚರವಾಗಿರಬೇಕು. ಪಾಪ ಕರ್ಮಾಸಕ್ತಿಯು ಹೆಚ್ಚಾಗಲಿದ್ದು, ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರ ಜತೆಗೆ ಮಾತನಾಡುವಾಗ ಗೌರವಯುತವಾಗಿ ಮಾತನಾಡಿ. ಇಲ್ಲದಿದ್ದರೆ ಅವಮಾನಕ್ಕೆ ಗುರಿ ಆಗುತ್ತೀರಿ. ಸಾಧ್ಯವಾದಷ್ಟೂ ಮೌನದಿಂದ ಇರುವುದು ಉತ್ತಮ.

ವೃಷಭ: ಶೈಕ್ಷಣಿಕ ಜೀವನ

ವೃಷಭ: ಶೈಕ್ಷಣಿಕ ಜೀವನ

ವೃಷಭ ರಾಶಿಯರಿಗೆ ಮರೆವಿನ ಸಮಸ್ಯೆ ಕಾಡಬಹುದು. ಯಾರ ಮಾತನ್ನೋ ನಂಬಿ, ಕೆಲಸ ಬಿಡುವುದು, ವಿದೇಶ ಪ್ರಯಾಣಕ್ಕೆ ಹೋಗುವುದು ಸೂಕ್ತವಾದ ನಡೆಯಲ್ಲ. ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಮಾರ್ಕೆಟಿಂಗ್‌ನಲ್ಲಿ ಇರುವವರಿಗೆ ಗುರಿ ಮುಟ್ಟುವುದಕ್ಕೆ ಅನುಕೂಲ ಆಗುತ್ತದೆ. ಮಕ್ಕಳ ಆರೋಗ್ಯ, ಸಹವಾಸ, ಶಿಕ್ಷಣ, ಭವಿಷ್ಯದ ಬಗ್ಗೆ ಜಾಸ್ತಿ ಲಕ್ಷ್ಯ ಕೊಡಿ. ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂದುಕೊಂಡಿರುವ ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿರಲಿದೆ.

ವಿದೇಶದಲ್ಲೇ ನೆಲೆಸಬೇಕು, ವ್ಯಾಸಂಗ ಮಾಡಬೇಕು ಎಂದು ಬಯಸುತ್ತಿದ್ದಲ್ಲಿ ಆ ಬಯಕೆ ಪೂರೈಸುವಂಥ ಅವಧಿ ಇದಲ್ಲ. ಇದನ್ನು ಮುಮದೂಡುವುದು ಉತ್ತಮ. ಆದರೆ ನಕಾರಾತ್ಮಕ ಆಲೋಚನೆಯನ್ನು ಬಿಟ್ಟು ನೀವು ಪ್ರಯತ್ನಿಸಬೇಕು.

ವೃಷಭ: ಪ್ರೇಮ ಜೀವನ

ವೃಷಭ: ಪ್ರೇಮ ಜೀವನ

ವೃಷಭ ರಾಶಿಯವರು ವಿವಾಹ ವಯಸ್ಕರಾಗಿದ್ದು, ಅದಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ಸಂವತ್ಸರದಲ್ಲಿ ಸೂಕ್ತವಾದ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಹಣದ ಹರಿವು ಉತ್ತಮಗೊಳ್ಳಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಇದೆ. ಸೋದರ- ಸೋದರಿಯರ ಜತೆಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇಟ್ಟುಕೊಳ್ಳಿ. ಇಲ್ಲದಿದ್ದರೆ ಸಂಬಂಧ ದೂರವಾದೀತು. ಮನೆಯಲ್ಲಿ ಸಂಗಾತಿ ಹೇಳುವ ಮಾತಿಗೂ ಬೆಲೆ ಕೊಡಿ.

ಸಂಗಾತಿ ಜತೆ ಯಾವುದೇ ವಿಚಾರ ಗುಟ್ಟು ಮಾಡಲು ಹೋಗದಿರಿ. ಇದರಿಂದ ವೃಥಾ ಮನಸ್ತಾಪ, ಭಿನ್ನಾಭಿಪ್ರಾಯ ಏರ್ಪಡಲಿದೆ. ಈ ಸಂವತ್ಸರದಲ್ಲಿ ವಿದೇಶ ಪ್ರಯಾಣ ಮಾಡುವಂಥ ಯೋಗ ನಿಮ್ಮ ಪಾಲಿಗಿದೆ. ಆದರೆ ಅಂಥ ಅವಕಾಶವನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷಿಸಿಕೊಳ್ಳಿ.

ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರಿಗೆ ಈ ಹಿಂದೆ ಮಾಡಿದ ತಪ್ಪಿನ ಫಲವನ್ನು ಈಗ ಅನುಭವಿಸಬೇಕಾಗುತ್ತದೆ. ದೂರ ಪ್ರಯಾಣ ಮಾಡುವಾಗ ನೀವು ಹೋಗುವ ಕೆಲಸ ಆಗುವ ಸಾಧ್ಯತೆ ಇದೆಯೇ ಎಂಬುದನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ.

ವೃಷಭ: ಆಸ್ತಿ ಖರೀದಿ

ವೃಷಭ: ಆಸ್ತಿ ಖರೀದಿ

ದುಬಾರಿ ಕಾರು, ವಿಲ್ಲಾ, ಹಲವು ದೇಶಗಳ ಪ್ರಯಾಣ, ಮನೆಯ ನವೀಕರಣ ಇಂಥವನ್ನು ಮಾಡಿಸಲಿದ್ದೀರಿ. ಈ ಹಿಂದೆ ನೀವು ಸಾಲ ಕೊಟ್ಟಿದ್ದಲ್ಲಿ ಅದು ವಾಪಸ್ ಆಗುವ ಸೂಚನೆಗಳಿವೆ. ಮುಖ್ಯವಾಗಿ ಶೋಕಿ ಮಾಡಬೇಡಿ. ಅನಗತ್ಯ ಖರ್ಚುಗಳಾಗದಂತೆ ಎಚ್ಚರಿಕೆಯನ್ನು ವಹಿಸಿ. ಆಸ್ತಿ ಖರೀದಿಸಿ, ಅದರ ನವೀಕರಣ, ಸೌಂದರ್ಯ ಹೆಚ್ಚಿಸುವ ಸಲುವಾಗಿ ಸಿಕ್ಕಾಪಟ್ಟೆ ಖರ್ಚು ಮಾಡಬೇಡಿ.

ತಂದೆಯಿಂದ ಬಂದಂಥ ಆಸ್ತಿ, ಹೆಸರು, ವ್ಯವಹಾರ ಹಾಳು ಮಾಡಿಕೊಳ್ಳುತ್ತೀರಿ. ಯಾವುದೇ ಸಣ್ಣ- ಪುಟ್ಟ ವಿಚಾರಕ್ಕೂ ಕಾನೂನು ಬಾಹಿರ ದಾರಿಯನ್ನು ಅನುಸರಿಸಬೇಡಿ. ಯಾರ್ಯಾರದೋ ಮಾತನ್ನು ನಂಬಿ, ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಆ ನಂತರದಲ್ಲಿ ದುಃಖ ಪಡಬೇಕಾಗುತ್ತದೆ. ಮುಖ್ಯವಾಗಿ ಪಾರ್ಟನರ್ಶಿಪ್ ವ್ಯವಹಾರಗಳನ್ನು ಮಾಡಬೇಡಿ.

ವೃಷಭ: ಆರೋಗ್ಯ

ವೃಷಭ: ಆರೋಗ್ಯ

ವೃಷಭ ರಾಶಿಯವರಿಎಗ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಗುರು ಅನಾರೋಗ್ಯ ಸ್ಥಾನವನ್ನು ನೋಡುತ್ತಿರುವುದರಿಂದ ವೃಷಭ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು. ಈ ವರ್ಷ ದೇಹದಲ್ಲಿ ಕೊಲಸ್ಟ್ರಾಲ್ ಜಾಸ್ತಿ ಆಗಬಹುದು. ಇದರಿಂದ ಹೊರಗಿನ ಆಹಾರ ತಪ್ಪಿಸುವುದು ಉತ್ತಮ. ನೀರಿನಿಂದ ಬರುವ ಸೋಂಕು ಹೆಚ್ಚಾಗಬಹುದು. ಸುತ್ತಾಟದಿಂದ ಸೋಂಕುಗಳು ಹರಡಬಹುದು. ಊಟ ನೀರು ವ್ಯತ್ಯಾಸವಾದಾಗ ಅನಾರೋಗ್ಯ ಹೆಚ್ಚಾಗುತ್ತದೆ. ಹೀಗಾಗಿ ಇದರ ಬಗ್ಗೆ ಕಾಳಜಿ ವಹಿಸಿ. ಸಕ್ಕರೆ ಖಾಯಿಲೆ ಇರುವವರು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ನಿಮ್ಮ ಬಗ್ಗೆ ಮಾತನಾಡಿಕೊಳ್ಳುವವರು ಸಿಕ್ಕಾಪಟ್ಟೆ ಇರುತ್ತಾರೆ. ಆದರೆ ಯಾರೂ ಕೂಡ ನಿಮ್ಮ ಎದುರು ಮಾತಣಾಡುವುದಿಲ್ಲ. ಏನೇನೋ ಕಥೆ ಕಟ್ಟಿ ಮಾತನಾಡುವವರು ಇರುತ್ತಾರೆ. ಅದಕ್ಕೆಲ್ಲ ವೃಷಭ ರಾಶಿಯವರು ತಲೆ ಕಡಿಸಿಕೊಳ್ಳಬಾರದು. ನೀವು ಮಾಡಿದ ಕರ್ಮಫಲವನ್ನು ನೀವೇ ಅನುಭವಿಸುತ್ತೀರಿ. ಹೀಗಾಗಿ ಯಾರ ಮಾತಿಗೂ ಕಿವಿ ಕೊಡದೇ ಇರುವುದು ಒಳ್ಳೆಯದು. ವೃಷಭ ರಾಶಿಯವರಿಗೆ ಈ ಯುಗಾದಿ ಬಳಿಕ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲ ಪರಿಹಾರಗಳು ನೀಡಲಾಗಿದೆ.

ಪರಿಹಾರ

ಪರಿಹಾರ

*ಪ್ರತೀ ಶನಿವಾರ ಕಪ್ಉ ಎಳ್ಳು ಉದ್ದಿನ ಬೇಳೆಯನ್ನು ದಾನ ಕೊಡಿ

*ಪ್ರತೀ ಗುರುವಾರ ದೇವಸ್ಥಾನಕ್ಕೆ ಕಡ್ಲೆಬೇಳೆಯನ್ನು ಕೊಡಿ

*ಗುರು ಚರಿತ್ರೆಯನ್ನು ಪರಾಯಣ ಮಾಡುವಂತದ್ದು, ಗುರುಪಾದಕ ಮಂತ್ರವನ್ನು ಹೇಳುವಂತದ್ದು, ಗುರುಗಳ ದೇವಸ್ಥಾನಕ್ಕೆ ಹೋಗುವುದು ಮಾಡಿ.

* ಗುರು ಸಮಾನವಾದವರಿಗೆ ವಸ್ತ್ರ ಪಂಚೆ ಶಲ್ಲ್ಯಾ ನೀಡಿ.

* ವೃದ್ಧಾಶ್ರಮಗಳಿಗೆ ತೆರಳಿ ಕೈಲಾದ ಸಹಾಯ ಮಾಡಿ. ಒಳ್ಳೆ ಕೆಲಸ ಮಾಡುವುದು ಒಳ್ಳೆಯದನ್ನೇ ತರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+