Get Updates
Get notified of breaking news, exclusive insights, and must-see stories!

Ugadi Horoscope 2023: ಯುಗಾದಿ 2023: ಕನ್ಯಾ ರಾಶಿಯವರಿಗೆ ಹಣ ಮತ್ತು ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಕನ್ಯಾ ರಾಶಿಯ ಯುಗಾದಿ ಜಾತಕ 2023: ಕನ್ಯಾ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದದೆ ಕನ್ಯಾ ರಾಶಿವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹ ಅನುಗ್ರಹವನ್ನು ಕನ್ಯಾರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ. ಕನ್ಯಾ ರಾಶಿಯ ಎರಡನೇ ಮನೆಯಲ್ಲಿ ಕೇತು, ಆರನೇ ಮನೆ (ಶಷ್ಟಭಾಗ) ಶನಿ, ಅಷ್ಟಮದಲ್ಲಿ ಗುರು ಹಾಗೂ ರಾಹು ಸ್ಥಿತರಾಗಿರುತ್ತಾರೆ. ಇದರಿಂದ ಶುಭ ಹಾಗೂ ಅಶುಭ ಫಲ ಎರಡೂ ಇರುತ್ತದೆ.

ರಾಹು ಮತ್ತು ಗುರು ಅಷ್ಟಮದಲ್ಲಿ ಇರುವುದು ಕನ್ಯಾ ರಾಶಿಯವರಿಗೆ ಶುಭಫಲವಲ್ಲ. ಆದರೆ ಶಷ್ಟಭಾಗದಲ್ಲಿ ಶನಿ ಇರುವುದು ತುಂಬಾ ಶುಭಫಲ ನೀಡುತ್ತದೆ. ಹಾಗಾಗಿ ಈ ವರ್ಷ ಶನಿ ನಿಮಗೆ ಶುಭ ಫಲವನ್ನು ಕೊಡುತ್ತಿದ್ದಾನೆ.

ಕನ್ಯಾ: ಆರ್ಥಿಕ ಜೀವನ

ಕನ್ಯಾ: ಆರ್ಥಿಕ ಜೀವನ

ಕನ್ಯಾ ರಾಶಿಯವರ ಆರ್ಥಿ ಸ್ಥಿತಿ ಈ ವರ್ಷ ಮಿಶ್ರವಾಗಿರುತ್ತದೆ. ಅಂದರೆ ಸ್ವಂತ ಉದ್ಯೋಗದಲ್ಲಿ ಕೆಲಸ ಮಾಡುವಂತವರು ಬಂಡಾವಳವನ್ನೆಲ್ಲಾ ಕಳೆದುಕೊಂಡು ನಷ್ಟ ಪರಿಸ್ಥಿತಿ ಎದುರಿಸುವಂತಾಗಬಹುದು. ಹಾಗಾಗಿ ಯಾವುದೇ ಹೂಡಿಕೆಯನ್ನು ಈ ವರ್ಷ ತಪ್ಪಿಸುವುದು ಉತ್ತಮ.

ನಿಮ್ಮ ಹಣ ಬೇರೆಯವರಿಗೆ ಕೊಟ್ಟು ಅದು ವಾಪಸ್ಸು ಬಾರದೇ ಇರಬಹುದು. ಹಣ ಕಳ್ಳತನವಾಗಬಹುದು ಅಥವಾ ಸಾಲವಾಗಿ ಕೊಟ್ಟ ಹಣ ವಾಪಸ್ಸು ಬಾರದೇ ಇರಬಹುದು. ಅಥವಾ ಯಾರೋ ನಿಮಗೆ ನಂಬಿಸಿ ಮೋಸ ಮಾಡಬಹುದು. ಫೋನ್ ಪೇ ಗೂಗಲ್ ಪೇನಲ್ಲಿ ವ್ಯತ್ಯಾಸವಾಗಿ ಹಣ ಕಳೆದುಕೊಳ್ಳಬಹುದು. ಇಂತೆಲ್ಲಾ ವಿಚಾರದಲ್ಲಿ ಕನ್ಯಾ ರಾಶಿಯವರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ.

ಜೊತೆಗೆ ಚೀಟಿ ವ್ಯವಹಾರ, ದುಡ್ಡು ಹಾಕಿದ್ರೆ ಡಬಲ್ ಆಗುತ್ತೆ ಎನ್ನುವ ನಂಬಿಕೆಯಿಂದ ಹಣ ಹಾಕುವುದು ಇಂತೆಲ್ಲಾ ವಿಚಾರದಿಂದ ದೂರವಿರಿ. ಇದೆಲ್ಲದರಿಂದ ಮೋಸ ಆಗುತ್ತದೆ. ಕಷ್ಟದಲ್ಲಿರುವ ವ್ಯಕ್ತಿಗೆ ಶ್ಯೂರಿಟಿ ಹಾಕಬೇಡಿ, ಇದರಿಂದ ನಿಮಗೇ ಮೋಸ ಆಗುತ್ತದೆ. ಜೊತೆಗೆ ಮನೆಯಲ್ಲಿನ ಒಡವೆ ಯಾರಿಗೋ ಕೊಡುವುದು, ಮನೆಯನ್ನು ಇನ್ನೊಬ್ಬರ ಕೈಗೆ ಒಪ್ಪಿಸಿ ಹೋಗುವುದು ಮಾಡಬೇಡಿ. ಅಧಿಕ ಆಭರಣಗಳನ್ನು ಹಾಕಿಕೊಂಡು ಹೋಗುವುದರಿಂದ ಕಳ್ಳತನವಾಗುವ ಸಾಧ್ಯತೆಗಳು ಇವೆ.

ಕನ್ಯಾ: ವೃತ್ತಿ ಜೀವನ

ಕನ್ಯಾ: ವೃತ್ತಿ ಜೀವನ

ಶನಿ ಆರನೇ ಮನೆಗೆ ಹೋಗುತ್ತಾನೆ ನಿಮ್ಮ ಉದ್ಯೋಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತೀರಾ. ಬೇರೆ ಕೈಗೆಳಗೆ ಕೆಲಸ ಮಾಡುವಂತ ಕನ್ಯಾ ರಾಶಿಯವರಿಗೆ, ಸರ್ಕಾರಿ ಕೆಲಸ, ಬೇರೆ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವರಿಗೆ ಹೆಚ್ಚಿನ ಅಭಿವೃದ್ಧಿ ಸಿಗಲಿದೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಬದಲಾವಣೆ, ಪ್ರಮೋಷನ್, ಹೆಚ್ಚಿನ ಗೌರವ ಮರಿಯಾದೆ ಸಿಗುತ್ತದೆ.

ಆರನೇ ಮನೆಯನ್ನು ಸೇವಸ್ಥಾನ ಎಂದು ಕರೆಯಲಾಗುತ್ತದೆ. ಈ ಸ್ಥಾನಕ್ಕೆ ಶನಿ ಬಂದಾಗ ನಿಮ್ಮಿಂದ ಸಾಕಷ್ಟು ಕೆಲಸವನ್ನು ಮಾಡಿಸುತ್ತಾನೆ. ಯಾವಾಗ ನೀವು ಹೆಚ್ಚು ಕೆಲಸ ಮಾಡುತ್ತೀರೋ ಅಲ್ಲಿ ನಿಮ್ಮ ಮರಿಯಾದೆ ಹೆಚ್ಚಾಗುತ್ತದೆ. ನಿಮ್ಮ ಸಾಮಾರ್ಥ್ಯ, ಬುದ್ಧಿ ಶಕ್ತಿಯನ್ನು ಶನಿ ಪ್ರಸ್ತುತಪಡಿಸುತ್ತಾನೆ. ಹೀಗಾಗಿ ನಿಮ್ಮ ಕೆಲಸದಲ್ಲಿನ ಗೌರ ಹೆಚ್ಚಾಗುತ್ತದೆ.

ಬಹುಮುಖ್ಯವಾಗಿ ಕನ್ಯಾ ರಾಶಿಯವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಅಜ್ಞಾನದಿಂದ, ಅತೀಯಾದ ಬುದ್ಧಿವಂತಿಕೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ಕನ್ಯಾರಾಶಿಯವರಿಗೆ ಈ ಯುಗಾದಿಗೆ ಈ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಯೋಚನೆ ಮಾಡಲು ಸಮಯ ಸಿಗುತ್ತದೆ. ಕೆಲಸದಲ್ಲಿ ನಿಮ್ಮನ್ನು ಶನಿ ಹೆಚ್ಚು ತೊಡಗಿಸಿಕೊಳ್ಳುತ್ತಾನೆ. ಹೀಗಾಗಿ ಈಗ ಆ ನೆಮ್ಮದಿ ಸಿಗುತ್ತದೆ.

ಪಾಲುದಾರಿಕೆಯಲ್ಲಿ ಉದ್ಯೋಗ ಮಾಡುವವರಿಗೆ ತೊಂದರೆಯಾಗುತ್ತದೆ. ಪಾಲುದಾರ ನಿಮಗೆ ಮೋಸ ಮಾಡಬಹುದು. ಅಥವಾ ಮೋಸ ಹೋಗುವುದಾಗಿ ನಿಮಗೆ ಅನ್ನಿಸಬಹುದು. ನಿಮ್ಮ ಬಗ್ಗೆ ಆತ ತಪ್ಪಾಗಿ ತಿಳಿದುಕೊಳ್ಳಬಹುದು. ಇದರಿಂದ ಉದ್ಯೋಗದಲ್ಲಿ ಏರಿಳಿತಗಳಾಗಬಹುದು.

ಕನ್ಯಾ: ಕೌಟುಂಬಿಕ ಜೀವನ

ಕನ್ಯಾ: ಕೌಟುಂಬಿಕ ಜೀವನ

ಕುಟುಂಬಸ್ಥೃರಿಂದ, ಸ್ನೇಹಿತರಿಂದ ಸಾಕಷ್ಟು ನೆಮ್ಮದಿ ಇರುತ್ತದೆ. ಅಷ್ಟಮದಲ್ಲಿ ಗುರು ಚಾಂಡಾಲ ಯೋಗ ಇರುವುದರಿಂದ ನಿಮ್ಮ ಸಂಸಾಸರದಲ್ಲಿ ಮನಸ್ತಾಪಗಳು ಬರಬಹುದು. ತಪ್ಪಾಗಿ ತಿಳಿದುಕೊಳ್ಳುವಂತದಾಗುತ್ತದೆ. ಹಾಗಾಗಿ ಯಾವುದೇ ವಿಚಾರವನ್ನು ತಾಳ್ಮೆಯಿಂದ ಯೋಚಿಸಿ ನಂತರ ಮುನ್ನಡೆಯಿರಿ.

ನಿಮ್ಮ ವೈಯಕ್ತಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಶತ್ರುಗಳಿಂದ ಬಿಡುಗಡೆ ಸಿಗುತ್ತದೆ. ಉದ್ಯೋಗಕ್ಕೆ ತಕ್ಕಂತೆ ಆದಾಯ ಇರುವುದರಿಂದ ಕುಟುಂಬ ನಡೆಸಲು ಯಾವುದೇ ತೊಂದರೆಗಳು ಇರುವುದಿಲ್ಲ. ಆದರೆ ನೀವು ಹಣ ಪೋಲಾಗುವುದನ್ನು ತಪ್ಪಿಸಬೇಕು. ಹಣ ಇದೆ ಅಂತ ಖರ್ಚು ಹೆಚ್ಚು ಮಾಡುವುದನ್ನು ತಪ್ಪಿಸಬೇಕು. ಅತೀ ಆಸೆ ಗತಿ ಗೇಡು ಆಗುತ್ತದೆ.

ಕನ್ಯಾ: ಶೈಕ್ಷಣಿಕ ಜೀವನ

ಕನ್ಯಾ: ಶೈಕ್ಷಣಿಕ ಜೀವನ

ವಿದ್ಯಾರ್ಥಿಗಳಿಗೆ ಈ ಯುಗಾದಿ ತುಂಬಾ ಚೆನ್ನಾಗಿದೆ. ಅವರಲ್ಲಿ ಬುದ್ಧಿ ಶಕ್ತಿ ಹೆಚ್ಚಾಗಲಿದೆ. ವಿಶೇಷ ಜ್ಞಾನ ಈ ಯುಗಾದಿ ನಂತರ ಸಿಗಲಿದೆ. ಗೊಂದಗಳನ್ನು ನಿವಾರಣೆಯಾಗುತ್ತದೆ. ಚಿಂತೆ ಕಡಿಮೆಯಾಗುತ್ತದೆ. ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಲಿದೆ. ಅದರಲ್ಲೂ ವಿಶೇಷವಾಗಿ ಆದ್ಯಾತ್ಮದ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಈ ಯುಗಾದಿ ಕಳೆದ ನಂತರ ಕನ್ಯಾ ರಾಶಿಯವರಲ್ಲಿ ಹೆಚ್ಚಾಗಲಿದೆ. ನಿಮಗೆ ಗೊತ್ತಿಲ್ಲದ ಅದೆಷ್ಟೋ ಸೂಕ್ಷ್ಮ ವಿಚಾರಗಳನ್ನು ಗುರು ತಿಳಿಸಿಕೊಡುತ್ತಾನೆ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉನ್ನತ ಅಭ್ಯಾಸ ಮಾಡಲು ಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಹೆಚ್ಚು ಓದಬೇಕು ಎನ್ನುವ ಹಂಬ ಹೆಚ್ಚಾಗುತ್ತದೆ. ಓದಿದ್ದು ನೆನಪಲ್ಲಿ ಉಳಿಯುತ್ತದೆ. ಗುರು ಭಾಗ್ಯದಲ್ಲಿ ಇರುವುದರಿಂದ ತುಂಬಾ ಸಹಾಯ ಮಾಡುತ್ತಾನೆ. ಸಂಗೀತ, ಕಲೆ, ನೃತ್ಯ ಯಾವುದೇ ಒಂದು ಕಲೆಯನ್ನು ಕಲಿಯಲು ಬೇಕಾದ ಆಸಕ್ತಿಯನ್ನು ಗುರು ದಯಪಾಲಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯುಗಾದಿ ಕಳೆದು ಬಳಿಕ ತುಂಬಾ ಉತ್ತಮವಾದ ಸಮಯ.

ಕನ್ಯಾ: ಪ್ರೇಮ ಜೀವನ

ಕನ್ಯಾ: ಪ್ರೇಮ ಜೀವನ

ನಿಮ್ಮ ಮಾತಿನ ಬಗ್ಗೆ ಜಾಗೃತವಾಗಿರಿ. ವಿನಾಕಾರಣ ಅಪವಾದಗಳು ನಿಮ್ಮ ಮೇಲೆ ಬರಬಹುದು. ಹೀಗಾಗಿ ಸಂಸಾರದ ವಿಚಾರದಲ್ಲಿ ಜಾಗರೂಕರಾಗಿರಿ. ಸಂಗಾತಿ ಜೊತೆ ಮಾತನಾಡುವಾಗ ಜಾಗರೂಕರಾಗಿರಿ. ಅವರಿಗೆ ನೋಯಿಸುವಂತೆ ಮಾತನಾಡಬೇಡಿ. ಸಂಗಾತಿಗೆ ಹೆಚ್ಚು ಸಮಯ ಕೊಡಲು ಪ್ರಯತ್ನಿಸಿ. ನಿಮ್ಮ ಕೆಲಸದ ಹೊರೆಯನ್ನು ಸಂಗಾತಿಗೆ ಹೇರಬೇಡಿ.

ಮನೆಯಲ್ಲಿ ಆದಷ್ಟು ಶಾಂತವಾಗಿ ವರ್ತಿಸುವುದು ತುಂಬಾ ಒಳ್ಳೆಯದು. ನಿಮಗೆ ಇಷ್ಟವಾಗದ ಯಾರ ಮಾತಿಗೂ ನೀವು ಕಿವಿಯನ್ನು ಕೊಡಬೇಡಿ. ಪ್ರೇಮಿಗಳು ತಮ್ಮ ಪ್ರೀತಿ ಬಗ್ಗೆ ನವೆಂಬರ್ ಬಳಿಕ ಹೇಳಿಕೊಳ್ಳಬಹುದು. ಮನೆಯವರ ಸಹಕಾರ ದೊರೆಯುತ್ತದೆ. ಸಣ್ಣ ಪುಟ್ಟ ತೊಂದರೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ಕನ್ಯಾ: ಆಸ್ತಿ ಖರೀದಿ

ಕನ್ಯಾ: ಆಸ್ತಿ ಖರೀದಿ

ಕನ್ಯಾ ರಾಶಿಯವರು ಆಸ್ತಿ ಖರೀದಿ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಯಾಕೆಂದರೆ ನಿಮ್ಮ ಹಣಕಾಸಿನ ಸ್ಥಿತಿ ಸದ್ಯ ಉತ್ತಮವಾಗಿದ್ದು ಮುಂದೊಂದು ದಿನ ಸಮಸ್ಯೆಗೆ ಸಿಲುಕಬಹುದು. ಹೀಗಾಗಿ ಅವಶ್ಯಕತೆ ಇದ್ದಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಉತ್ತಮ. ಯುಗಾದಿ ನಂತರ ನಿಮ್ಮ ಹಣಕಾಸಿ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಆದರೆ ಇದನ್ನು ಖರ್ಚು ಮಾಡುವಾಗ ತುಂಬಾ ಜಾಗರೂಕತೆಯಿಂದ ಇರುವುದು ಮುಖ್ಯವಾಗಿದೆ.


ಮನೆ ಅಥವಾ ಸೈಟ್ ಖರೀದಿ ವೇಳೆ ನೀವು ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ. ಇದರಿಂದ ಈ ಯುಗಾದಿಯಲ್ಲಿ ಬೆಲೆ ಭಾಳುವ ವಸ್ತುಗಳ ಖರೀದಿ ಆಸೆಗಳಿಂದ ದೂರವಿರಿ. ಮೋಸ ಹೋಗುವುದರಿಂದ ಜಾಗರೂಕರಾಗಿರಿ.

ಕನ್ಯಾ: ಆರೋಗ್ಯ

ಕನ್ಯಾ: ಆರೋಗ್ಯ

ಕನ್ಯಾ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಕೆಲಸದ ಜವಬ್ದಾರಿ ಹೆಚ್ಚಾಗಿರುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡದೇ ಇರುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ವೈರಲ್ ಫಿವರ್ ಬರಬಹುದು. ನೀರಿನಿಂದ ಸೋಂಕುಗಳು ಹರಡಬಹುದು. ಹೀಗಾಗಿ ಯೂಗಾದಿ ಕಳೆದ ನಂತರ ಕನ್ಯಾ ರಾಶಿಯವರು ಆರೋಗ್ಯ ಕಡೆಗೆ ಹೆಚ್ಚು ಗಮನ ಹರಿಸಬೇಕು. ಹೊರಗಿನ ಆಹಾರವನ್ನು ಸಂಪೂರ್ಣವಾಗಿ ತಪ್ಪಿಸಬೇಕು. ವ್ಯಾಯಾಮ, ಯೋಗ ಮಾಡುವುದು ರೂಢಿಸಿಕೊಳ್ಳಬೇಕು.

ಆಹಾರದಲ್ಲಿ ತರಕಾರಿ ಹೆಚ್ಚಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಹಣ್ಣು, ಹಾಲು, ಪೌಷ್ಟಿಕಾಂಶ ಹೆಚ್ಚಿರುವ ಆಹಾರವನ್ನೇ ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ವೈದ್ಯರ ಬಳಿ ಹೋಗುವಂತ ಸಂದರ್ಭಗಳು ಬರುವುದಿಲ್ಲ. ಹೀಗಾಗಿ ಈ ಯುಗಾದಿ ಮಿಶ್ರ ಫಲವನ್ನು ನೀಡುತ್ತದೆ.

ಪರಿಹಾರ

ಪರಿಹಾರ

*ಗುರುಪಾದುಕ ಮಂತ್ರವನ್ನು ಹೇಳಿ

*ಪ್ರತಿ ಗುರುವಾರ ಕಡ್ಲೇಬೇಳೆಯನ್ನು ಗುರುಗಳ ದೇವಸ್ಥಾನಕ್ಕೆ ಕೊಡುವುದು

*ಕಡ್ಲೇಬೇಳೆಯಿಂದ ಮಾಡಿದ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಮಾಡಿ ಹಂಚುವುದು

*ಶನಿವಾರ ಉದ್ದಿನ ಬೇಳೆ ಹುರುಳಿ ಕಾಳು ದೇವಸ್ಥಾನಕ್ಕೆ ಕೊಡುವುದು

*ದುರ್ಗಾಷ್ಟೊತ್ತರಗಳನ್ನು ಹೇಳಿ

*ಸಂಕಷ್ಟ ಚತುರ್ಥಿ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+