Get Updates
Get notified of breaking news, exclusive insights, and must-see stories!

Ugadi Horoscope 2023: ವೃಶ್ಚಿಕ ರಾಶಿಯ ಯುಗಾದಿ ವರ್ಷ ಭವಿಷ್ಯ ಹೇಗಿದೆ ತಿಳಿಯಿರಿ

ವೃಶ್ಚಿಕ ರಾಶಿಯ ಯುಗಾದಿ ಜಾತಕ 2023: ವೃಶ್ಚಿಕ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ವೃಶ್ಚಿಕ ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ವೃಶ್ಚಿಕ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.

ಈ ವರ್ಷ ವೃಶ್ಚಿಕ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ವೃಶ್ಚಿಕ ರಾಶಿಯವರಿಗೆ ಈ ವರ್ಷ ಶನಿಯ ಫಲ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ, ಶನಿ ಈ ವರ್ಷ ಪೂರ್ಣ ಚತುರ್ಥಭಾವದಲ್ಲಿ ಸ್ಥಿತನಾಗಿರುತ್ತಾನೆ. ಚತುರ್ಥಭಾವ ಅಂದರೆ ಮನೆ, ವಾಹನ, ಭೂಮಿ, ಮನಶಾಂತಿ, ನೆಮ್ಮದಿ ಇತ್ಯಾದಿಗಳನ್ನು ಸೂಚಿಸುತ್ತದೆ.

ಆದರೆ ಶನಿ ನಾಲ್ಕನೇ ಸ್ಥಾನಕ್ಕೆ ಬರುವುದರಿಂದ ಕರ್ಮ ಸ್ಥಾನವನ್ನು ನೋಡುವುದರಿಂದ ಕೆಲಸದಲ್ಲಿ ನೆಮ್ಮದಿ ಹಾಳಾಗುತ್ತದೆ. ಕೆಲಸ ಮಾಡುವ ಕಡೆ ಮೇಲಾಧಿಕಾರಿಗಳು ಜಾಸ್ತಿ ಕೆಲಸ ಕೊಡಿಸುವಂತದ್ದು, ಹೆಚ್ಚು ಕೆಲಸ ಒತ್ತಡ ಹೇರುವಂತದ್ದು, ಪದೇ ಪದೇ ಕೆಲಸ ಹೇಳುವಂತ ಸಮಸ್ಯೆಗಳನ್ನು ಶನಿ ವೃಶ್ಚಿಕ ರಾಶಿಯವರಿಗೆ ಕೊಡುತ್ತಾನೆ.

ವೃಶ್ಚಿಕ: ಆರ್ಥಿಕ ಜೀವನ

ವೃಶ್ಚಿಕ: ಆರ್ಥಿಕ ಜೀವನ

ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಆರ್ಥಿಕ ಜೀವನ ಹೇಗಿರಲಿದೆ ನೋಡೋಣ. ನಿಮ್ಮ ಆರನೇ ಮನೆಯಲ್ಲಿ ಗುರು ಮತ್ತು ರಾಹು ಸ್ಥಿತನಾಗಿರುತ್ತಾನೆ. ರಾಹು ಯಾವುದೇ ಸಮಸ್ಯೆಗಳನ್ನು ಕೊಡದೇ ಹೋದರು ಗುರು ಕೆಲ ಸಮಸ್ಯೆಗಳನ್ನು ನೀಡುತ್ತಾನೆ. ಗುರು ಗ್ರಹ ನಿಮ್ಮನ್ನು ಸಾಲದಬಾಧೆಗೆ ತಳ್ಳಬಹುದು. ಎಷ್ಟೇ ದುಡಿದರೂ ಎಲ್ಲಾ ಖರ್ಚಾಗುತ್ತದೆ. ಈ ವರ್ಷದಲ್ಲಿ ತುಂಬಾ ಖರ್ಚಾಗುತ್ತದೆ. ಉಳಿತಾಯದ ಹಣ ಖರ್ಚಾಗುತ್ತದೆ. ಮನೆ, ಸೈಟ್ ಖರೀದಿ ಮಾಡಲೂ ನೀವು ಹಣವನ್ನು ಖರ್ಚು ಮಾಡಿಕೊಳ್ಳಬಹುದು.

ಇದು ಖರ್ಚು ಮಾಡಿದಂತೆ ಅಲ್ಲ. ಇದು ಹೂಡಿಕೆ ಆಗುತ್ತದೆ. ಇದು ಒಳ್ಳೆ ರೀತಿ ಇದ್ದರೆ ಪರವಾಗಿಲ್ಲ, ಅದರೆ ಶೇರ್, ಚೀಟಿ ವ್ಯವಹಾರ, ಸಾಲ ಕೊಡುವುದು ಮಾಡುವುದರಿಂದ ಹಣ ಕಳೆದುಕೊಳ್ಳಬಹುದು. ಸಾಲ ಕೊಡಿಸಲು ಶ್ಯೂರಿಟಿ ಕೊಡಲು ಮುಂದಾಗಬೇಡಿ. ಇರುವ ಹಣವನ್ನು ಸರಿಯಾದ ರೀತಿ ಖರ್ಚು ಮಾಡಿ. ಬೇರೆ ಬೇರೆ ವ್ಯವಹಾರಗಳಿಂದ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳಬೇಡಿ.

ವೃಶ್ಚಿಕ: ವೃತ್ತಿ ಜೀವನ

ವೃಶ್ಚಿಕ: ವೃತ್ತಿ ಜೀವನ

ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ವೃತ್ತಿ ಜೀವನ ಹೇಗಿರಲಿದೆ ಎಂದು ನೋಡೋಣ. ಈ ವರ್ಷ ಒತ್ತಡ ಹೆಚ್ಚಾಗುತ್ತದೆ. ವಿಶೇಷ ಜವಬ್ದಾರಿಗಳು ಹೆಚ್ಚಾಗುತ್ತವೆ. ಅವಶ್ಯಕತೆಗಳಿಗಿಂತ ಹೆಚ್ಚಿನ ದುಡಿಮೆ ನೀವು ಮಾಡಬೇಕು. ಇದರಿಂದ ಕೆಲಸ ಬಿಡುವ ಸಂದರ್ಭಗಳು ಬಂದೊದಗುತ್ತವೆ. ಆದರೆ ಆ ಪರಿಸ್ಥಿತಿಯನ್ನು ನೀವು ತಂದುಕೊಳ್ಳಬೇಡಿ. ಮುಂದೊಂದು ದಿನ ನೀವು ಕೆಲಸ ವಿಲ್ಲದೆ ಖಾಲಿ ಕುಳಿತುಕೊಳ್ಭಹುದು. ಹೀಗಾಗಿ ಆ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ.

ಆದರೆ ಇಂತಹ ಕಷ್ಟಗಳಿಗೆ ಶನಿ ಪರಿಹಾರ ಮಾಡಿಕೊಳ್ಳಿ. ಈ ಕೆಲಸ ಬಿಟ್ಟು ಹೋದರೂ ಬೇರೆ ಕಡೆ ಕೂಡ ಇದೇ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆದರೆ ಶನಿ ಬದಲಾಗುವುದಿಲ್ಲ. ಅದರ ಪ್ರಭಾವ ನಿಮ್ಮ ಮೇಲಾದಾಗ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇದರಿಂದ ಪರಿಹಾರ ಪಡಿಯಲು ಜ್ಯೋತಿಷ್ಯದಲ್ಲಿ ಸಲಹೆಗಳಿವೆ.

ಗುರು ದಶಮ ಸ್ಥಾನವನ್ನು ನೋಡುವುರದಿಂದ ಕೆಲಸದಲ್ಲಿ ಏನೇ ಸಮಸ್ಯೆಗಳಿದ್ದರು ಪರಿಹಾರಗೊಳ್ಳುತ್ತವೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವಂತವರಿಗೆ ಏನೂ ತೊಂದರೆ ಇಲ್ಲ. ಎಷ್ಟೇ ಒತ್ತಡ ಇದ್ದರೂ ದೂರವಾಗುತ್ತದೆ.

ವೃಶ್ಚಿಕ: ಕೌಟುಂಬಿಕ ಜೀನವ

ವೃಶ್ಚಿಕ: ಕೌಟುಂಬಿಕ ಜೀನವ

ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಕೌಟುಂಬಿಕ ಜೀನವ ಹೇಗಿರಲಿದೆ ಎಂದು ನೋಡೋಣ. ಯಾವುದೇ ಕಾರಣಕ್ಕೂ ವೃಶ್ಚಿಕ ರಾಶಿಯವರು ಗುರು ಹಿರಿಯರನ್ನು ನೋಯಿಸಬಾರದು. ಮನೆಯಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವುದರಿಂದ ಜೀವನ ಸುಖಮಯವಾಗಿರುತ್ತದೆ. ತಾಳ್ಮೆ ಕಳೆದುಕೊಳ್ಲಬೇಡಿ. ಈ ಸಮಯ ನಿಮ್ಮ ತಾಳ್ಮೆಯನ್ನು ಪರಿಶೀಲಿಸಲಾಗುತ್ತದೆ. ತಾಳ್ಮೆ ಕಳೆದುಕೊಂಡರೆ ಕುಟುಂಬದಲ್ಲಿ ಶಾಂತಿ ಕಾಪಾಡಲು ಸಾಧ್ಯವಾಗುವುದಿಲ್ಲ.

ಬಂದ ಹಣ ಉಳಿತಾಯ ಮಾಡಿಕೊಳ್ಳಲು ನಿಮಗೆ ಸಮಸ್ಯೆಯಾಗಬಹುದು. ಇದರಿಂದ ಕುಟುಂಬ ನಿವಾರಣೆಗೆ ಕೆಲ ಬಾರಿ ಸಮಸ್ಯೆಗಳೂ ಆಗಬಹುದು. ಕುಟುಂಬದಲ್ಲಿ ನಿರೀಕ್ಷೆಗಳನ್ನು ಅಥವಾ ಆಸೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಖರ್ಚಿನ ಬಗ್ಗೆ ಜಾಗರೂಕರಾಗಿರಿ.

ವೃಶ್ಚಿಕ: ಶೈಕ್ಷಣಿಕ ಜೀವನ

ವೃಶ್ಚಿಕ: ಶೈಕ್ಷಣಿಕ ಜೀವನ

ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಶೈಕ್ಷಣಿಕ ಜೀವನ ಹೇಗಿರಲಿದೆ ಎಂದು ನೋಡೋಣ. ಇದು ಸ್ವಯಂ-ಅಧ್ಯಯನ ಮತ್ತು ಪ್ರತಿಬಿಂಬಕ್ಕೆ ಉತ್ತಮ ಸಮಯ, ಹಾಗೆಯೇ ತನ್ನನ್ನು ಮತ್ತು ಒಬ್ಬರ ಉದ್ದೇಶದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಶನಿಯು ಶಿಕ್ಷಣದಲ್ಲಿ ಕೆಲವು ಸವಾಲುಗಳು ಮತ್ತು ಅಡೆತಡೆಗಳನ್ನು ತರಬಹುದು, ಆದರೆ ಇದು ತಮ್ಮ ಗುರಿಗಳನ್ನು ಅನುಸರಿಸುವಲ್ಲಿ ಬಲವಾದ ಕೆಲಸದ ನೀತಿ ಮತ್ತು ಪರಿಶ್ರಮವನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಬಹುದು.

ಈ ಅವಧಿಯು ಶಿಕ್ಷಣದಲ್ಲಿ ವೃಶ್ಚಿಕ ರಾಶಿಯವರಿಗೆ ಆಧ್ಯಾತ್ಮಿಕ ಬೆಳವಣಿಗೆ, ಆತ್ಮಾವಲೋಕನ ಮತ್ತು ಕಠಿಣ ಪರಿಶ್ರಮದ ಸಮಯವಾಗಿರುತ್ತದೆ. ಈ ಸಮಯದಲ್ಲಿ ಗುರಿಗಳ ಮೇಲೆ ಕೇಂದ್ರೀಕರಿಸುವುದು, ಉತ್ತಮ ಕೆಲಸದ ನೀತಿಯನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಆತುರ ಅಥವಾ ಅಜಾಗರೂಕತೆಯನ್ನು ತಪ್ಪಿಸುವುದು ಮುಖ್ಯ.

ವೃಶ್ಚಿಕ: ಪ್ರೇಮ ಜೀವನ

ವೃಶ್ಚಿಕ: ಪ್ರೇಮ ಜೀವನ

ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಪ್ರೇಮ ಜೀವನ ಹೇಗಿರಲಿದೆ ಎಂದು ನೋಡೋಣ. ಈ ಅವಧಿಯಲ್ಲಿ ಆತ್ಮಾವಲೋಕನ ಮತ್ತು ಸ್ವಯಂ ಅನ್ವೇಷಣೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ, ಜೊತೆಗೆ ಸಂಬಂಧಗಳಿಗೆ ಬಂದಾಗ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಈ ಅವಧಿಯು ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಸಂಗಾತಿಯನ್ನು ಹುಡುಕಲು ಅಥವಾ ಮದುವೆಯಾಗಲು ಹೆಚ್ಚು ಅನುಕೂಲಕರ ಸಮಯವಾಗಿರುವುದಿಲ್ಲ, ಏಕೆಂದರೆ ಈ ವಿಚಾರದಲ್ಲಿ ಕೆಲವು ಸವಾಲುಗಳು ಮತ್ತು ಅಡೆತಡೆಗಳು ಇರಬಹುದು.


ಆದರೆ, ವೈಯಕ್ತಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ, ಜೊತೆಗೆ ಅಸ್ತಿತ್ವದಲ್ಲಿರುವ ಸಂಬಂಧದಲ್ಲಿ ಆಳವಾದ ಬದ್ಧತೆ ಮತ್ತು ನಿಷ್ಠೆಯನ್ನು ಬೆಳೆಸಿಕೊಳ್ಳಿ. ಹೊಸ ಅನುಭವಗಳು ಮತ್ತು ಅವಕಾಶಗಳಿಗೆ ತೆರೆದುಕೊಳ್ಳುವುದು ಸಹ ಮುಖ್ಯವಾಗಿದೆ, ಆದರೆ ಸಂಬಂಧಗಳಿಗೆ ಬಂದಾಗ ಗಡಿಬಿಡಿಯ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಆಸ್ತಿ ಖರೀದಿ

ವೃಶ್ಚಿಕ: ಆಸ್ತಿ ಖರೀದಿ

ವೃಶ್ಚಿಕ ರಾಶಿಯವರಿಗೆ ಶುಭ ಫಲ ಏನೆಂದರೆ ಈ ವರ್ಷ ವಾಹನ, ಮನೆ, ಭೂಮಿ ಖರೀದಿ ಸಾಧ್ಯವಾಗುತ್ತದೆ. ಒಳ್ಳೆ ನಿವೇಶ ತೆಗೆದುಕೊಳ್ಳಬಹುದು. ಆದರೆ ಇದಕ್ಕೆ ಹಣಕಾಸಿನ ಸ್ಥಿತಿ ಹೇಗಿದೆ ಎಂದೂ ನೋಡಬೇಕು. ಗುರು ಆರನೇ ಮನೆಗೆ ಬರುವುದರಿಂದ ನೀವು ನಿಮ್ಮಲ್ಲಿರುವ ಬಜೆಟ್‌ಗಿಂತಲೂ ಜಾಸ್ತಿ ವ್ಯವಹಾರ ಮಾಡುವಿರಿ. ಸಾಲ ಮಾಡುವಿರಿ. ಸಾಲ ಮಾಡುವಾಗ ಯೋಚನೆ ಮಾಡಿ. ಯಾಕೆಂದರೆ ಆರನೇ ಮನೆಯ ಗುರು ನಿಮ್ಮ ಸಾಲವನ್ನು ಬೆಳೆಸುತ್ತಾನೆ. ಹೀಗಾಗಿ ಸಾಲ ಮಾಡಿ ಏನನ್ನೂ ಮಾಡದಿರುವುದು ಉತ್ತಮ.

ಆದರೆ ವಾಹನ, ಮನೆ, ಸೈಟ್ ಖರೀದಿ ಮಾಡುವ ಸಂದರ್ಭಗಳು ನಿಮಗೆ ಬಂದೇ ಬರುತ್ತದೆ. ನೀವು ಖರೀದಿ ಮಾಡುವ ಜಾಗವನ್ನೂ ನೀವು ಹೋಗಿ ನೋಡುವಿರಿ. ಅದು ಬೇಡ ಅನ್ನಿಸಿದರೂ ಅದನ್ನು ನೀವು ಖರೀದಿ ಮಾಡಲು ಮನಸ್ಸು ಮಾಡುವಿರಿ. ಹೀಗಿರುವಾಗ ನಿಮ್ಮ ಬಳಿ ಇರುವ ಹಣದಲ್ಲಿ ಇದೆಲ್ಲವನ್ನು ಖರೀದಿ ಮಾಡಿ. ನಮ್ಮಲ್ಲಿ ಹಣವಿಲ್ಲದೆ ಸಾಲ ಮಾಡಿ ಯಾವುದೇ ಕೆಲಸ ಮಾಡಬೇಡಿ.

ವೃಶ್ಚಿಕ: ಆರೋಗ್ಯ

ವೃಶ್ಚಿಕ: ಆರೋಗ್ಯ

ವೃಶ್ಚಿಕ ರಾಶಿಯವರಿಗೆ ಕೆಲ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈಗಾಗಲೇ ಆರೋಗ್ಯ ಸಮಸ್ಯೆಗಳು ಇರುವಂತವರಿಗೆ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದೆ ಇರುವವರಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಪದೇ ಪದೇ ವೈರಲ್ ಫಿವರ್ ಬರುತ್ತದೆ. ಶನಿ ಹಳೆ ವ್ಯಾದಿಗಳನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತಾನೆ.

ನೀರು ಬದಲಾಗುವುದರಿಂದ, ಟ್ರಾವೆಲ್ ಮಾಡುವುದರಿಂದ ಇನ್ಫೆಕ್ಷನ್ ಆಗಬಹುದು. ಹೀಗಾಗಿ ಈ ವರ್ಷ ನಿಮ್ ಆರೋಗ್ಯ ಕಡೆಗೆ ನೀವು ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ. ಯಾಕೆಂದರೆ ಕೆಲ ಕಠಿಣ ಆರೋಗ್ಯ ಸಮಸ್ಯೆಗಳೂ ಈ ಸಂದರ್ಭದಲ್ಲಿ ಬರಬಹುದು. ತಿನ್ನೋ ವಿಚಾರದಲ್ಲಿ ಜಾಗರೂಕರಾಗಿರಬೇಕು ಬೊಜ್ಜು ಹೆಚ್ಚಾಗಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡಿ, ಹೊರಗಿನ ಆಹಾರವನ್ನು ತಪ್ಪಿಸಿ.

ಪರಿಹಾರ

ಪರಿಹಾರ

* ಪ್ರತೀ ಶನಿವಾರ ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ದೇವಸ್ಥಾನಕ್ಕೆ ಕೊಡಿ

* ಶುಕ್ರವಾರ ಕಪ್ಪು ಎಳ್ಳು ಇಟ್ಟು ಪೂಜೆ ಮಾಡಿ

*ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.

*ವೃದ್ಧಾಶ್ರಮಕ್ಕೆ ಹೋಗಿ ಹಳದಿ ವಸ್ತ್ರವನ್ನು ದಾನ ಮಾಡಿ

* ಸಂಕಷ್ಟ ಚತುರ್ಥಿ ವ್ರತ ಮಾಡಿ

* ಸೂರ್ಯ, ಮಂಗಳ ಮಂತ್ರವನ್ನು ಪಠಿಸಿ

* ಗುರು ಆರಾಧನೆ ಮಾಡಿ

*ಅಗತ್ಯವಿರುವ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+