Get Updates
Get notified of breaking news, exclusive insights, and must-see stories!

Ugadi Horoscope 2023: ಯುಗಾದಿ 2023: ಯುಗಾದಿ ನಂತರ ಸಿಂಹ ರಾಶಿಯವರಿಗೆ ಎಲ್ಲಾ ರಂಗಗಳಲ್ಲೂ ಯಶಸ್ಸು

ಸಿಂಹ ರಾಶಿಯ ಯುಗಾದಿ ಜಾತಕ 2023: ಸಿಂಹ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಶೋಭಕೃತಿ ನಾಮ ಸಂವತ್ಸರದಲ್ಲಿ ಸಿಂಹ ರಾಶಿಯ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಶನಿ, ಕೇತು ನಾಲ್ಕು ಗ್ರಹಗಳು ಸಿಂಹ ರಾಶಿಯವರಿಗೆ ಯಾವ ಫಲವನ್ನು ನೀಡುತ್ತವೆ? ಎನ್ನುವುದನ್ನು ನೋಡೋಣ.

ಏಪ್ರಿಲ್ 27ನೇ ತಾರೀಖು ಭಾಗ್ಯ ಸ್ಥಾನಕ್ಕೆ ಗುರು ಪ್ರವೇಶವಾಗಲಿದೆ. ಗುರು ಮುಂದಿನ ಯುಗಾದಿವರೆಗೂ ಭಾಗ್ಯ ಸ್ಥಾನದಲ್ಲಿರುತ್ತಾನೆ. ಹೀಗಾಗಿ ಗುರು ಸಿಂಹ ರಾಶಿಯವರಿಗೆ ಭಾಗ್ಯ ಅಂದರೆ ಶುಭಫಲವನ್ನು ಕೊಡುತ್ತಾನೆ. ರಾಹು ಕೂಡ ಭಾಗ್ಯ ಸ್ಥಾನದಲ್ಲಿದ್ದಾನೆ. ಹೀಗಾಗಿ ರಾಹು ಮತ್ತು ಗುರು ಮೇಷರಾಶಿಯಲ್ಲಿರುವುದರಿಂದ ಶಭಫಲವನ್ನು ಕೊಡುತ್ತಾರೆ.

ಅದೇ ರೀತಿ ಕೇತು ಕೂಡ ತುಲಾ ರಾಶಿಯಲ್ಲಿರುವುದರಿಂದ ಶಭಫಲವನ್ನು ಕೊಡುತ್ತದೆ. ಇನ್ನೂ ಶನಿ ಕುಂಭ ರಾಶಿಯಲ್ಲಿ ಸಪ್ತಮದಲ್ಲಿ ಸಂಚಾರ ಮಾಡುತ್ತಾನೆ. ಇದರಿಂದಾಗಿ ಸಿಂಹ ರಾಶಿಯವರಿಗೆ ಹಿಂದೆ ಇದ್ದ ಕೆಲ ಸಮಸ್ಯೆಗಳು ದೂರವಾಗುತ್ತವೆ. ಈ ವರ್ಷ ಯುಗಾದಿಗೆ ಗುರು ಹಾಗೂ ಶನಿ ಅತ್ಯಂತ ಶುಭಫಲವನ್ನು ಸಿಂಹ ರಾಶಿಗೆ ದಯಪಾಲಿಸಲಿದೆ. ಹೀಗಾಗಿ ಈ ವರ್ಷದ ಯುಗಾದಿ ಸಿಂಹ ರಾಶಿಯವರಿಗೆ ತುಂಬಾ ಉತ್ತಮವಾಗಿದೆ.

ಸಿಂಹ: ಆರ್ಥಿಕ ಜೀವನ

ಸಿಂಹ: ಆರ್ಥಿಕ ಜೀವನ

ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಹಣಕಾಸಿನ ಸಮಸ್ಯೆ, ಆರ್ಥಿಕ ಮುಗ್ಗಟ್ಟು, ಸಾಲದಬಾಧೆಯಿಂದ ಬಳಲುತ್ತಿರುವ ಸಿಂಹ ರಾಶಿಯವರು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಿರಿ. ಈ ಹಿಂದೆ ಋಣ ಸ್ಥಾನದಲ್ಲಿ ಶನಿ ದೇವನಿದ್ದ, ಶನಿ ನಿಮಗೆ ಸಾಲ ತೀರಿಸಲು ಅಡೆತಡೆಯನ್ನುಟು ಮಾಡುತ್ತಿದ್ದನು. ಆದರೀಗ ಶನಿ ಈಗ ಏಳನೇ ಮನೆ ಪ್ರವೇಶ ಮಾಡಿರುವುದರಿಂದ ಸಾಲವನ್ನು ತೀರಿಸಲು ನಿಮಗೆ ಸಹಾಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಹೋಗುತ್ತದೆ.

ಸಿಂಹ: ವೃತ್ತಿ ಜೀವನ

ಸಿಂಹ: ವೃತ್ತಿ ಜೀವನ

ಹಲವಾರು ದುಖ:ದ ಪರಿಸ್ಥಿತಿಗಳು ನಿವಾರಣೆಯಾಗುತ್ತವೆ. ಪಾಲುದಾರಿಕೆಯಲ್ಲಿ ಬಿಸಿನೆಸ್ ಮಾಡುವವರಿಗೆ ಈ ವರ್ಷ ಯುಗಾದಿಗೆ ಶುಭವಾಗಲಿದೆ. ನಿಮ್ಮ ಉದ್ಯಮದಲ್ಲಿ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಕೆಲಸದಲ್ಲಿ ಉತ್ತಮ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಚಿಕ್ಕದಾಗಿ ಶುರುವಾದ ಬಿಸಿನೆಸ್ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಹೊಸ ಹೊಸ ಕೆಲಸಗಳುನ್ನು ಶುರು ಮಾಡುವಿರಿ. ಕೆಲಸದಲ್ಲಿ ಬ್ಯುಸಿಯಾಗುತ್ತೀರ. ಈ ವರ್ಷ ಯಾವುದೇ ಕೆಲಸ ಮಾಡಿದರೂ ಲಾಭವನ್ನು ನೀವು ಕಾಣುವಿರಿ.

ಹೊಸ ವ್ಯಕ್ತಿಗಳು ಪರಿಚಯವಾಗುತ್ತದೆ. ಬೇರೆಯವರಿಗೆ ಸಹಾಯ ಮಾಡಲು ಹೋಗಿ ಸಮಸ್ಯೆಗಳು ಹೆಚ್ಚಾಗುತ್ತವೆ. ಸಹಾಯ ಮಾಡಬೇಡಿ ಎಮದು ಹೇಳುವುದಿಲ್ಲ. ನಿಮ್ಮ ಕೈಲಾದಷ್ಟು ಮಾಡಿ ಅದು ನಿಮಗೆ ತೊಂದರೆಯಾಗಿರಬಾರದು. ಏಳನ ಮನೆ ಶನಿ ನಿಮ್ಮ ಪಾಲುದಾರರ ವ್ಯವಹಾರದಲ್ಲಿ ಸಮಸ್ಯೆಯನ್ನು ಉದ್ಬವಿಸಬಹುದು. ಇದರಿಂದ ಜಾಗರೂಕರಾಗಿರಿ.

ಸಿಂಹ:ಕೌಟುಂಬಿಕ ಜೀವನ

ಸಿಂಹ:ಕೌಟುಂಬಿಕ ಜೀವನ

ಕುಟುಂಬದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತದೆ. ಹಣಕಾಸಿನ ಅಡೆತಡೆಗಳು ಎಲ್ಲವೂ ನಿವಾರಣೆಯಾಗುತ್ತವೆ. ಶುಭ ಕಾರ್ಯಗಳು ನೆರವೇರುತ್ತವೆ. ಗುರು ಚಾಂಡಾಲ ಯೋಗವಿದೆ. ಇದರ ಪ್ರಭಾವ ಅಕ್ಟೋಬರ್ ನವೆಂಬರ್ ವರೆಗೂ ಇರುತ್ತದೆ. ಎಷ್ಟೋ ವಿಚಾರದಲ್ಲಿ ಸಮಸ್ಯೆಗಳು ದೂರವಾಗಿವೆ ಅನಿಸಿದರೂ ಕೊನೆ ಗಳಿಗೆಯಲ್ಲಿ ಹೋರಾಟ, ಓಡಾಟ ಅಧಿಕವಾಗುತ್ತದೆ. ಈ ಸಮಸ್ಯೆ ದೂರವಾಗುವುದಿಲ್ಲ ಎನ್ನುವ ಆಂತಕ ಸಿಂಹ ರಾಶಿಯವರಲ್ಲಿ ಇರುತ್ತದೆ. ನವೆಂಬರ್ ಕಳೆದ ನಂತರ ಎಲ್ಲಾ ವಿಚಾರದಲ್ಲೂ ಸಿಂಹ ರಾಶಿಯವರು ಯಶಸ್ಸನ್ನು ಕಾಣುತ್ತಾರೆ.

ಭಾಗ್ಯ ಸ್ಥಾನದಲ್ಲಿ ನವೆಂಬರ್‌ನಲ್ಲಿ ಒಬ್ಬನೇ ಸ್ಥಿತನಾಗುವುದರಿಂದ ಸಂಪೂರ್ಣವಾಗಿ ಶುಭಫಲವನ್ನು ಕೊಡುತ್ತಾನೆ. ಮುಂದಿನ ಆರು ತಿಂಗಳು ಮಾಡುವ ಹೋರಾಟಕ್ಕೆ ಪ್ರತಿಫಲವನ್ನು ಗುರು ನವೆಂಬರ್ ನಂತರ ದಯಪಾಲಿಸುತ್ತಾನೆ. ಅಲ್ಲಿವೆರೆಗೂ ಅಡೆತಡೆಗಳು ಇರುತ್ತದೆ.

ಸಿಂಹ: ಶೈಕ್ಷಣಿಕ ಜೀವನ

ಸಿಂಹ: ಶೈಕ್ಷಣಿಕ ಜೀವನ

ಗುರು ಜ್ಞಾನ ಕಾರಕ ಮತ್ತು ನೆಮ್ಮದಿ. ಸಿಂಹ ರಾಶಿಯವರು ಜಾತಕದಲ್ಲಿ ಗುರು ಬಲವಿರುವುದರಿಂದ ವಿಶೇಷ ಜ್ಞಾನ ಈ ಯುಗಾದಿ ನಂತರ ಸಿಗಲಿದೆ. ಗೊಂದಗಳನ್ನು ನಿವಾರಣೆಯಾಗುತ್ತದೆ. ಚಿಂತೆ ಕಡಿಮೆಯಾಗುತ್ತದೆ. ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಲಿದೆ. ಅದರಲ್ಲೂ ವಿಶೇಷವಾಗಿ ಆದ್ಯಾತ್ಮದ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿ ಈ ಯುಗಾದಿ ಕಳೆದ ನಂತರ ಸಿಂಹ ರಾಶಿಯವರಲ್ಲಿ ಹೆಚ್ಚಾಗಲಿದೆ. ನಿಮಗೆ ಗೊತ್ತಿಲ್ಲದ ಅದೆಷ್ಟೋ ಸೂಕ್ಷ್ಮ ವಿಚಾರಗಳನ್ನು ಗುರು ತಿಳಿಸಿಕೊಡುತ್ತಾನೆ.

ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉನ್ನತ ಅಭ್ಯಾಸ ಮಾಡಲು ಬಯಸುವವರಿಗೆ ಅವಕಾಶಗಳು ಸಿಗುತ್ತವೆ. ಹೆಚ್ಚು ಓದಬೇಕು ಎನ್ನುವ ಹಂಬ ಹೆಚ್ಚಾಗುತ್ತದೆ. ಓದಿದ್ದು ನೆನಪಲ್ಲಿ ಉಳಿಯುತ್ತದೆ. ಗುರು ಭಾಗ್ಯದಲ್ಲಿ ಇರುವುದರಿಂದ ತುಂಬಾ ಸಹಾಯ ಮಾಡುತ್ತಾನೆ. ಸಂಗೀತ, ಕಲೆ, ನೃತ್ಯ ಯಾವುದೇ ಒಂದು ಕಲೆಯನ್ನು ಕಲಿಯಲು ಬೇಕಾದ ಆಸಕ್ತಿಯನ್ನು ಗುರು ದಯಪಾಲಿಸುತ್ತಾನೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯುಗಾದಿ ಕಳೆದು ಬಳಿಕ ತುಂಬಾ ಉತ್ತಮವಾದ ಸಮಯ.

ಸಿಂಹ: ಪ್ರೇಮ ಜೀವನ

ಸಿಂಹ: ಪ್ರೇಮ ಜೀವನ

ಮನೆಯಲ್ಲಿ ಶುಭ ಕಾರ್ಯಗಳಾಗುತ್ತವೆ. ಸಿಂಹ ರಾಶಿಯವರಿಗೆ ಗುರು ಬಲವಿದೆ. ಎಷ್ಟು ಪ್ರಯತ್ನ ಮಾಡಿದರೂ ಮದುವೆಯಾಗುತ್ತಿಲ್ಲ, ಜಾತಕಗಳು ಹೊಂದಾಣಿಕೆಯಾಗುತ್ತಿಲ್ಲ, ದೋಷಗಳು ಇರುವುದು, ಇದರ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದರೆ ಸಿಂಹ ರಾಶಿಯವರಿಗೆ ಈ ಯುಗಾದಿ ಶುಭವನ್ನು ನೀಡುತ್ತದೆ. ಮದುವೆ ಯೋಗ ಕೂಡಿ ಬರಲಿದೆ.

ವಿವಾಹವಾಗಲು, ಸಂತಾನವಾಗಲು ಗುರು ಗ್ರಹ ಬಲವಿರಬೇಕು. ಯಾರಿಗೆ ಗುರು ಶಾಪವಿರುತ್ತದೋ ಅವರಿಗೆ ವಿವಾಹ ಹಾಗೂ ಸಂತಾನ ಭಾಗ್ಯ ಸಿಗುವುದಿಲ್ಲ. ಜೊತೆಗೆ ಅಂತವರು ಮಕ್ಕಳಿಂದ ಸಮಸ್ಯೆ, ಮಕ್ಕಳಿಂದ ತೊಂದರೆಗಳನ್ನು ಅನುಭವಿಸುತ್ತಾರೆ. ಆದರೆ ಸಿಂಹ ರಾಶಿಯವರಿಗೆ ಗುರು ಎಲ್ಲಾ ವಿಚಾರದಲ್ಲಿ ಶುಭಫಲವನ್ನು ಕೊಡುತ್ತಾನೆ. ಸಂತಾನಾಪೇಕ್ಷೆ ಇರುವವರು, ಮದುವೆಯಾಗಲು ಕಾಯುತ್ತಿರುವವರು ಶುಭ ವಾರ್ತೆಯನ್ನು ಕೇಳುವಿರಿ.

ಸಿಂಹ:ಆರೋಗ್ಯ

ಸಿಂಹ:ಆರೋಗ್ಯ

ಈ ಯುಗಾದಿ ಉತ್ತಮ ಆರೋಗ್ಯವನ್ನು ನೀಡುತ್ತದೆ. ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ಸದಾ ಕಾಪಾಡುತ್ತದೆ. ಆದರೂ ಗಟ್ಟಿ ಪದಾರ್ಥವನ್ನು ಸೇವಿಸುವುದನ್ನು ತಪ್ಪಿಸಿ. ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರು ಉತ್ತಮ ವೈದ್ಯರನ್ನು ಕಾಣುವುದರಿಂದ ಸಮಸ್ಯೆಗಳಿಗೆ ಕೋಮಚ ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ನಿಮಗಿಂತಲೂ ಮಕ್ಕಳ ಬಗ್ಗೆ ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ನಿಮ್ಮ ಕುಟುಂಬ ಆರೋಗ್ಯವಾಗಿರುತ್ತದೆ.

ಸಿಂಹ: ಆಸ್ತಿ ಖರೀದಿ

ಸಿಂಹ: ಆಸ್ತಿ ಖರೀದಿ

ಪತ್ರಾರ್ಜಿತಾ ಆಸ್ತಿಯಲ್ಲಿರುವ ಸಮಸ್ಯೆಗಳು ದೂರವಾಗುತ್ತವೆ. ಸಿಂಹ ರಾಶಿಯವರ ಒಂಬತ್ತನೇ ಮನೆಗೆ ಗುರು ಬಂದಿರುವುದರಿಂದ ಧರ್ಮ ಕಾರ್ಯಗಳಾಗುತ್ತವೆ. ವಿಶೇಷವಾಗಿ ಮನೆಯಲ್ಲಿ ಪೂಜೆ ಮಾಡುವಂತಹದ್ದು, ದೇವಸ್ಥಾನಗಳಿಗೆ ಹೋಗುವಂತದ್ದು, ದೇವಸ್ಥಾನಗಳಲ್ಲಿ ಪೂಜೆ ಮಾಡುವಂತದ್ದು, ತೀರ್ಥಯಾತ್ರೆಗೆ ಹೋಗುವಂತಹದ್ದು ಈ ವರ್ಷದಲ್ಲಿ ಸಿಂಹ ರಾಶಿಯವರು ಮಾಡುತ್ತಾರೆ. ದೂರದ ಪ್ರದೇಶದ ದೇವಸ್ಥಾನಗಳಿಗೆ ಹೋಗಬಹುದು. ಇದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.


ಸಿಂಹ ರಾಶಿಯವರು ಈ ಸಮಯದಲ್ಲಿ ಮನೆ, ಸೈಟ್, ವಾಹನ ಖರೀದಿ ಬಗ್ಗೆ ಯೋಚನೆ ಮಾಡಬಹುದು. ಆದರೆ ನಿಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮುನ್ನಡೆಯುವುದು ಉತ್ತಮ. ಇಲ್ಲವಾದಲ್ಲಿ ಸಾಲದ ಬಾಧೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳು ಇವೆ. ಈ ಸಮಯದಲ್ಲಿ ಸಾಲ ಮಾಡಲು ಪ್ರೇರಣೆ ಸಿಗಬಹುದು. ಯಾವುದೇ ಕಾರಣಕ್ಕೂ ಸಾಲವನ್ನು ಮಾಡಬೇಡಿ.

ಪರಿಹಾರ

ಪರಿಹಾರ

ಕಟಕ ರಾಶಿಯವರಿಗೆ ಈ ಯುಗಾದಿ ಬಳಿಕ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲ ಸಲಹೆಗಳನ್ನು ನೀಡಲಾಗಿದೆ.

* ಶನಿವಾರ ಕಪ್ಪು ಎಳ್ಳು ದೇವಸ್ಥಾನಕ್ಕೆ ನೀಡಿ

* ಯಾವುದಾದರೂ ಬೇಳೆಯನ್ನು ದಾನ ಮಾಡಿ.

* ಅನಾಥಶರಿಗೆ ವಸ್ತ್ರ ದಾನ ಮಾಡಿ

* ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ

* ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+