Get Updates
Get notified of breaking news, exclusive insights, and must-see stories!

Ugadi Horoscope 2023: ಯುಗಾದಿ 2023: ಕರ್ಕಾಟಕ ರಾಶಿ ಯುಗಾದಿ ವರ್ಷ ಭವಿಷ್ಯ

ಕಟಕ ರಾಶಿಯ ಯುಗಾದಿ ಜಾತಕ 2023: ಕಟಕ ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ.

ಯುಗಾದಿಯ ಅರ್ಥ 'ಯುಗದ ಆದಿ'. 'ಯುಗಾದಿ' ಎಂಬ ಶಬ್ದ ಸಂಸ್ಕೃತದ 'ಯುಗ' ಮತ್ತು 'ಆದಿ' ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ. ಈ ಹೊಸ ವರ್ಷವನ್ನು ಮಾರ್ಚ್ 22ರಂದು ಆಚರಿಸಲಾಗುತ್ತದೆ. ಶೋಭಕೃತಿ ನಾಮ ಸಂವತ್ಸರದಲ್ಲಿ ಕಟಕ ರಾಶಿಯ ಭವಿಷ್ಯ ಯಾವ ರೀತಿ ಇದೆ? ಗುರು, ರಾಹು, ಶನಿ, ಕೇತು ನಾಲ್ಕು ಗ್ರಹಗಳು ಕಟಕ ರಾಶಿಯವರಿಗೆ ಯಾವ ಫಲವನ್ನು ನೀಡುತ್ತವೆ? ಎನ್ನುವುದನ್ನು ನೋಡೋಣ.

ಈ ವರ್ಷದ ಯುಗಾದಿ ಕಳೆದ ನಂತರ ಕಟಕ ರಾಶಿಯವರಿಗೆ ಕೆಲವೊಂದು ಶುಭ ಫಲಗಳು ಇದ್ದರೆ ಆದರೆ ಇನ್ನೂ ಕೆಲವು ಅಶುಭ ಫಲಗಳಾಗಿವೆ.

ಹಾಗಂತ ಈ ಯುಗಾದಿ ಕಳೆದ ಬಳಿಕ ನಮಗೆ ಒಳ್ಳೆಯದ್ದೇ ಆಯೋಗಿಲ್ಲ ಬರೀ ಕಷ್ಟಗಳು ಇರುತ್ತವೆ ಎಂದಲ್ಲ. ಅಶುಭ ಫಲಗಳಿಗೆ ಪರಿಹಾರಗಳೂ ಇದೆ. ಹಾಗಾಗಿ ಪರಿಹಾರಗಳನ್ನು ಹೆಚ್ಚಾಗಿ ಮಾಡಿಕೊಳ್ಳುವ ಮೂಲಕ ಬರುವ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅಥವಾ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಕಟಕ ರಾಶಿಯವರ ಆರ್ಥಿಕ ಜೀವನ ಹೇಗಿದೆ ತಿಳಿಯೋಣ.

ಕಟಕ: ಆರ್ಥಿಕ ಜೀವನ

ಕಟಕ: ಆರ್ಥಿಕ ಜೀವನ

ಕಟಕ ರಾಶಿಯವರ ದನ ಸ್ಥಾನವನ್ನು ಶನಿ ನೋಡುತ್ತಿದ್ದಾನೆ. ಜೊತೆಗೆ ಗುರು ಕೂಡ ನಿಮ್ಮ ಕರ್ಮ ಸ್ಥಾನವನ್ನು ನೋಡುವುದರಿಂದ ಆರ್ಥಿಕವಾಗಿ ನಿಮಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ನಿಮ್ಮ ಸ್ವಪ್ರಯತ್ನದಿಂದಾಗುವ ಫಲವನ್ನು ನಿಮಗೆ ಗುರು ಗ್ರಹ ಅನುಗ್ರಹಿಸುತ್ತಾನೆ. ಆದರೆ ಬಂದ ಹಣವನ್ನು ವ್ಯಯ ಮಾಡುವಂತ ಕೆಲಸವನ್ನು ಶನಿ ಗ್ರಹ ಮಾಡುತ್ತಾನೆ. ನೀವು ಯಾರನ್ನೋ ನಂಬಿ ಮೋಸ ಹೋಗಬಹುದು.

ಇನ್ನೆಲ್ಲೋ ಹಣ ಹೂಡಿಕೆ ಮಾಡಿ ನಷ್ಟವನ್ನು ಅನುಭವಿಸಬಹುದು. ನಿಮ್ಮ ಹಣವನ್ನು ನೀವು ಮೋಸದಿಂದ ಕಳೆದುಕೊಳ್ಳುವ ಸಾಧ್ಯತೆಗಳು ಇವೆ. ಹೀಗಾಗಿ ಯಾವುದಕ್ಕೂ ಹಣವನ್ನು ಹೂಡಿಕೆ ಮಾಡಬೇಡಿ. ಜೊತೆಗೆ ಯಾರಿಗೂ ಹಣವನ್ನು ಕೊಡಬೇಡಿ. ಇದರಿಂದ ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳು ಇವೆ. ಹಣವನ್ನು ಜೋಪಾನ ಮಾಡಿಕೊಳ್ಳಿ.

ಕಟಕ: ವೃತ್ತಿ ಜೀವನ

ಕಟಕ: ವೃತ್ತಿ ಜೀವನ

ಮೊದಲನೆಯದಾಗಿ ಕಟಕ ರಾಶಿಯವರಿಗೆ ಎಚ್ಚರಿಕೆ ತುಂಬಾ ಮುಖ್ಯ. ಯಾವುದೇ ಕೆಲಸಕ್ಕೂ ಮುನ್ನ ನೂರು ಬಾರಿ ಯೋಚಿಸಿ, ತಯಾರಿ ಮಾಡಿಕೊಂಡ ನಂತರವೇ ಮುನ್ನಡೆಯಿರಿ. ಇದು ಕಟಕರ ರಾಶಿಯವರಿಗೆ ಬಹುಮುಖ್ಯ ಪರಿಹಾರವಾಗಿದೆ. ಕಟಕ ರಾಶಿಯವರಿಗೆ ಗುರು ಗ್ರಹ ಶುಭ ಫಲವನ್ನು ಕೊಡುತ್ತದೆ. ಸ್ವಂತ ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕಂತೆ ಫಲವನ್ನು ಗುರು ಗ್ರಹ ನೀಡುತ್ತದೆ. ಹೆಚ್ಚಿನ ಶ್ರಮ ನಿಮ್ಮ ಕೆಲಸದಲ್ಲಿ ವಹಿಸಬೇಕಾಗಬಹುದು. ಆರ್ಥಿಕವಾಗಿ ತಕ್ಕಮಟ್ಟಿಗೆ ಪರಿಹಾರವನ್ನು ಗುರು ಗ್ರಹದಿಂದ ಸಿಗಲಿದೆ.


ಅದೇ ರೀರಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಿರುವವರಿಗೆ ಯುಗಾದಿ ಕಳೆದ ಬಳಿಕ ಸಮಯ ತುಂಬಾ ಚೆನ್ನಾಗಿದೆ. ಖಾಸಗಿ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಕೆಲಸದಲ್ಲಿ ಯಾವುದೇ ರೀತಿ ತೊಂದರೆಗಳಾಗುವುದಿಲ್ಲ.


ಆದರೆ ಅಷ್ಟಮದಲ್ಲಿರುವ ಶನಿಯ ನಿಮ್ಮ ಕರ್ಮ ಸ್ಥಾನಕ್ಕೆ ಶನಿ ದೃಷ್ಟಿ ಇರುವುದರಿಂದ ಕೆಲಸದಲ್ಲಿ ಕೊಂಚ ಒತ್ತಡ ಇರುತ್ತದೆ. ಜೊತೆಗೆ ಹೆಚ್ಚಿನ ಜವಬ್ದಾರಿ, ಅಧಿಕ ಕೆಲಸ, ವಿಳಂಬವಿಲ್ಲದ ಕೆಲಸ ಮಾಡುವುದು ಇರುತ್ತದೆ.

ಕಟಕ: ಕುಟುಂಬದಲ್ಲಿ ಶಾಂತಿ

ಕಟಕ: ಕುಟುಂಬದಲ್ಲಿ ಶಾಂತಿ

ಕಟಕ ರಾಶಿಯವರಿಗೆ ಕುಟುಂಬ ಜೀವನದಲ್ಲಿ ಸಾಕಷ್ಟು ನೋವು ಸಂಕಟ ಕಷ್ಟಗಳನ್ನು ಶನಿ ದೇವ ಕೊಡುತ್ತಾನೆ. ಅಷ್ಟದಲ್ಲಿರುವ ಶನಿ ನಿಮಗೆ ಕಷ್ಟಗಳನ್ನು ಕೊಡುತ್ತಾನೆ. ಅಷ್ಟಮ ಎಂದರೆ ಆಯುಷ್ಯ ಸ್ಥಾನ. ಶನಿ ನಿಮ್ಮ ಆಯುಷ್ಯವನ್ನು ಕಷ್ಟ ಮಾಡುತ್ತಾನೆ. ಆದರೆ ಅಷ್ಟಮದಲ್ಲಿರುವ ಶನಿ ಕರ್ಮ ಸ್ಥಾನವನ್ನು ಹಾಳು ಮಾಡುತ್ತಾನೆ. ಅಂದರೆ ಕೆಲಸದಲ್ಲಿ ಕಷ್ಟವಾಗುವ ರೀತಿ ಮಾಡುತ್ತಾನೆ. ನಿಮಗೆ ಸಿಕ್ಕ ಒಳ್ಳೆ ಕೆಲಸಗಳನ್ನು ಕೈತಪ್ಪುವಂತೆ ಮಾಡುತ್ತಾನೆ. ಮನಶಾಂತಿ ಹಾಳು ಮಾಡುವಂತದನ್ನು ಶನಿ ಗ್ರಹ ಮಾಡುತ್ತದೆ. ಆದರೆ ನಿಮ್ಮ ಸಂಬಳಕ್ಕಾಗಲಿ, ಗೌರವಕ್ಕಾಗಲಿ, ಸ್ಥಾನಮಾನಕ್ಕಾಗಲಿ, ಅಧಿಕಾರಕ್ಕಾಗಲಿ ಶನಿವು ತೊಂದರೆಯನ್ನುಂಟು ಮಾಡುವುದಿಲ್ಲ. ಅದರೆ ಅಲ್ಲಿ ಏನಾದರೂ ಸಣ್ಣ ಪುಟ್ಟ ಕಿರಿಕಿರಿಯನ್ನು ಶನಿ ದೇವ ಉಂಟು ಮಾಡುತ್ತಾನೆ.


ಇನ್ನೂ ಶನಿ ದೇವ ಎರಡನೇ ಮನೆಯನ್ನು ಮನೆಯನ್ನು ನೋಡುವುದರಿಂದ ಎರಡನೇ ಮನೆಯನ್ನು ಧನ ಸ್ಥಾನ ಮತ್ತು ಕುಟುಂಬ ಸ್ಥಾನ ಎಂದು ಹೇಳಲಾಗುತ್ತದೆ. ಕುಟುಂಬದಲ್ಲಿರುವವರಿಗೆ ಮನಸ್ತಾಪಗಳಾಗುವ ಸಾಧ್ಯತೆಗಳು ಇವೆ. ಈ ವರ್ಷ ಯುಗಾದಿ ಕಳೆದ ಬಳಿಕೆ ಮನೆಯಲ್ಲಿ ಮಸ್ತಾಪಗಳು ಹೆಚ್ಚಾಗಬಹುದು. ನಿಮ್ಮ ಮಾತಿನಿಂದ ಕೆಲವೊಂದು ಎಡವಟ್ಟುಗಳಾಗುವ ಸಾಧ್ಯತೆಗಳಿವೆ.


ಅವಶ್ಯಕತೆ ಇಲ್ಲದ ಕಡೆ ಮಾತನಾಡದೇ ಇರುವುದು ಉತ್ತಮವಾಗಿದೆ. ನಿಮ್ಮ ಮಾತಿನಿಂದ ಸಮಸ್ಯೆ ಬರುತ್ತದೆ ಎಂದು ತಿಳಿದ ಬಳಿಕ ಮೈನ ತಾಳಬೇಡಿ ಅದಕ್ಕೂ ಮುನ್ನ ಮೌನವಾಗಿರುವುದು ಬುದ್ಧಿವಂತರ ಲಕ್ಷಣ. ಮುಂಚಿತವಾಗಿ ಮಾತನ್ನು ಹಿಡಿತವಾಗಿಟ್ಟುಕೊಳ್ಳಿ. ಎಷ್ಟು ಬೇಕು ಅಷ್ಟು ಮಾತನಾಡಿ. ಯಾರೇ ನಿಮ್ಮನ್ನು ಬೇಸರ ಮಾಡಿದರೂ ತಕ್ಷಣಕ್ಕೆ ನೀವು ಪ್ರತಿಕ್ರಿಯೆ ನೀಡದೇ ಇರುವುದು ಒಳ್ಳೆಯದು.


ಆದಷ್ಟು ಸೂಕ್ಷ್ಮವಾಗಿ ಹೇಳೋದನ್ನು ಅಭ್ಯಾಸ ಮಾಡಿಕೊಳ್ಳಿ. ಇದನ್ನು ನೀವು ಕಲಿಯಲೇ ಬೇಕು. ಇಲ್ಲವಾದರೆ ಅದು ನಿಮ್ಮ ಮನಶಾಂತಿಯನ್ನು ಹಾಳು ಮಾಡುತ್ತದೆ. ಸಂಬಂಧಗಳನ್ನು ನಾವು ಉಳಿಸಿಕೊಂಡು ಬೆಳಸಿಕೊಂಡು ಹೋಗುವುದರಲ್ಲಿ ತುಂಬಾ ನೆಮ್ಮದಿ ಇದೆ.

ಕಟಕ: ವಿದೇಶದಲ್ಲಿ ವಿದ್ಯಾಭ್ಯಾಸ

ಕಟಕ: ವಿದೇಶದಲ್ಲಿ ವಿದ್ಯಾಭ್ಯಾಸ

ಕಟಕ ರಾಶಿಯ ವಿದ್ಯಾರ್ಥಿಗಳಿಗೆ ಯುಗಾದಿ ಕಳೆದ ಬಳಿಕ ಸಮಯ ಉತ್ತಮವಾಗಿದೆ. ಅವರು ಅಂದುಕೋಮಡ ಕೋರ್ಸ್‌ಗಳನ್ನು ಮಾಡುತ್ತಾರೆ. ಸಾವಾಲಿನಂತೆ ಅವರು ಯಜ ಗಳಿಸುತ್ತಾರೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಈ ಯುಗಾದಿ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಅವರ ಬುದ್ಧಿವಂತಿಕೆ, ಗ್ರಹಣಾ ಶಕ್ತಿ ಹೆಚ್ಚಾಗುತ್ತದೆ. ಶಿಕ್ಷಕ ಹಾಗೂ ಪೋಷಕರ ಸಹಾಯದಿಂದ ಅಂದುಕೊಂಡ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಇನ್ನೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅಥವಾ ಉದ್ಯೋಗ ಪಡೆಯಲು ಯೋಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಯುಗಾದಿ ಶುಭವನ್ನು ನೀಡುತ್ತದೆ. ಈ ಸಮಯ ನಿಮ್ಮ ಪ್ರಯತ್ನಕ್ಕೆ ಉತ್ತಮವಾಗಿದೆ.

ಕಟಕ: ಸುಖಮಯ ಪ್ರೇಮ ಜೀವನ

ಕಟಕ: ಸುಖಮಯ ಪ್ರೇಮ ಜೀವನ

ತುಂಬಾ ಎಲ್ಲರನ್ನು ನಂಬುವುದು ಎಲ್ಲಾ ವಿಷಗಳನ್ನು ಹೇಳಿಕೊಳ್ಳುವುದನ್ನು ಮಾಡಬೇಡಿ. ಇದರಿಂದ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ನಿಮ್ಮ ವೈಯಕ್ತಿ ವಿಚಾರಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಬೇರೆಯವರ ಬಗ್ಗೆ ನೀವು ಮಾತನಾಡಬೇಡಿ ನಿಮ್ಮ ಬಗ್ಗೆ ಬೇರೆಯವರು ಮಾತನಾಡದಂತೆ ನೋಡಿಕೊಳ್ಳಿ. ನಿಮ್ಮ ವೈವಾಹಿಕ ಜೀವನ ಅಥವಾ ಪ್ರೇಮಿಗಳಿಗೆ ಈ ಯುಗಾದಿ ಬಳಿಕ ಉತ್ತಮವಾಗಿದೆ.


ಮದುವೆಯಾಗಲು ಉತ್ತಮ ಸಂದರ್ಭಗಳು ನಿಮಗೆ ಒದಗಿ ಬರಲಿದೆ. ನೀವಂದುಕೊಂಡ ಸಂಗಾತಿಯನ್ನೇ ನೀವು ಕೈ ಹಿಡಿಯುತ್ತೀರಿ. ಮದುವೆ ಬಳಿಕ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದರೂ ನಿಮ್ಮ ವೈವಾಹಿಕ ಜೀವನ ಸಮಯ ಕಳೆದಂತೆ ಉತ್ತಮವಾಗಿರುತ್ತದೆ. ಪ್ರೇಮಿಗಳು ತಮ್ಮ ಪ್ರೇಮ ವಿಚಾರವನ್ನು ನವೆಂಬರ್ ಬಳಿಕ ಹೇಳಿಕೊಳ್ಳಬಹುದು. ನಿಮ್ಮ ಕುಟುಂಬಸ್ಥರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೂ ಕೆಲ ಸಣ್ಣ ಪುಟ್ಟ ಅಡೆತಡೆಗಳು ಬರುತ್ತವೆ. ಅವುಗಳನ್ನು ತಾಳ್ಮೆಯಿಂದ ನೀವು ನಿಭಾಯಿಸಬೇಕು.

ಕಟಕ: ಆಸ್ತಿ ಖರೀದಿಗೆ ಉತ್ತಮವಾಗಿರಲಿ ಆರ್ಥಿಕ ಸ್ಥಿತಿ

ಕಟಕ: ಆಸ್ತಿ ಖರೀದಿಗೆ ಉತ್ತಮವಾಗಿರಲಿ ಆರ್ಥಿಕ ಸ್ಥಿತಿ

ಈ ವರ್ಷದಲ್ಲಿ ಗುರು ನಿಮಗೆ ಮನೆ ಕಟ್ಟುವ, ಭೂಮಿ, ವಾಹನ ಖರೀದಿ ವಿಚಾರದಲ್ಲಿ ಯೋಗ್ಯವವಾದ ಫಲವನ್ನು ನೀಡುತ್ತಾನೆ. ಆದರೆ ಇದೆಲ್ಲವನ್ನು ಖರೀದಿ ಮಾಡಲು ನೀವು ಸಾಲ ಮಾಡಬೇಕಾಗಬಹುದು. ಯುಗಾದಿ ಬಳಿಕ ನೀವು ಸಾಲ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಯಾಕೆಂದರೆ ಸಾಲ ಅಂದರೆ ನಮ್ಮ ಬಳಿ ಇಲ್ಲದ ಹಣವನ್ನು ತೂಗಿಸಲು ಇತರರ ಬಳಿ ಪಡೆದುಕೊಳ್ಳುವ ಹಣ. ಈ ಹಣವನ್ನು ನಾವು ಒಂದೇ ದಿನ, ವಾರ, ಅಥವಾ ತಿಂಗಳಲ್ಲಿ ಮರುಪಾತಿಸಲಾಗುವುದಿಲ್ಲ.


ಕಡಿಮೆ ಅಂದರೂ ಒಂದು ವರ್ಷ ಅಥವಾ ಎರಡು ವರ್ಷ ಸಾಲ ತೀರಿಸಲು ತೆಗೆದುಕೊಳ್ಳಬಹುದು. ಈ ಒಂದು ಅಥವಾ ಎರಡು ವರ್ಷದಲ್ಲಿ ನಿಮ್ಮ ಗ್ರಹಗತಿಗಳು ನಿಮಗೆ ಶುಭ ಫಲವನ್ನೇ ನೀಡುತ್ತವೆ ಎಂದು ಹೇಳಲಾಗುವುದಿಲ್ಲ. ಇದರಿಂದ ನಿಮಗೆ ಸಾಲ ತೀರಿಸಲು ತೊಂದರೆಗಳಾಗಬಹುದು. ಹೀಗಾಗಿ ನಿಮ್ಮ ಆಸೆಗಳು ನಿಮ್ಮ ಆರ್ಥಿಕ ಸ್ಥಿತಿಗತಿಗನುಗುಣವಾಗಿರುವುದು ಒಳ್ಳೆಯದು.


ಹೀಗಾಗಿ ಸಾಲ ಮಾಡುವುದನ್ನು ತಪ್ಪಿಸಿ. ಈಗಿರುವ ಸಮಸ್ಯೆಗಳ ನಡುವೆ ಇದೊಂದು ಸಮಸ್ಯೆ ನಿಮಗೆ ತೊಂದರೆಯನ್ನುಂಟು ಮಾಡುವುದು ಬೇಡ. ಜೊತೆಗೆ ಆಸ್ತಿ ಖರೀದಿ, ಕೋರ್ಟ್ ಕಚೇರಿ ವಿವಾದಗಳು, ತುಂಬಾ ವರ್ಷಗಳಿಂದ ನಡೆಯುತ್ತಿದ್ದ ಕೋರ್ಟ್ ಸಮಸ್ಯೆಗಳು ಯುಗಾದಿ ಬಳಿಕ ಅಂದರೆ ನವೆಂಬರ್ ಬಳಿಕ ಇತ್ಯಾರ್ಥಗೊಳ್ಳುತ್ತವೆ.

ಕಟಕ: ಆರೋಗ್ಯ ಕಾಪಾಡಲಿದೆ ಗುರು ಬಲ

ಕಟಕ: ಆರೋಗ್ಯ ಕಾಪಾಡಲಿದೆ ಗುರು ಬಲ

ಕಟಕ ರಾಶಿಯವರಿಗೆ ಯುಗಾದಿ ಕಳೆದ ಬಳಿಕ ಆರೋಗ್ಯದಲ್ಲಿ ತೊಂದರೆಗಳಾಗುವ ಸಾಧ್ಯತೆಗಳು ಇವೆ. ಇದರಿಂದ ಖರ್ಚುಗಳು ಹೆಚ್ಚಾಗಬಹುದು. ಹೀಗಾಗಿ ಹಣ ಉಳಿತಾಯ ಮಾಡುವುದು ಮುಖ್ಯವಾಗಿದೆ. ಇಂತಹ ಸಂದರ್ಭಗಳನ್ನು ಎದುರಿಸಲು ಹೆಲ್ತ್‌ ಇನ್ಸುರೆನ್ಸ್ ಮಾಡಿಸಿಕೊಳ್ಳುವುದು, ಹಣವನ್ನು ಕೂಡಿಟ್ಟಿರುವುದು ಅತ್ಯಗತ್ಯ. ಹೀಗಾಗಿ ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಸುಖಾ ಸುಮ್ಮನೆ ಖರ್ಚು ಮಾಡುವುದನ್ನು ತಪ್ಪಿಸಿ.

ಕುಟುಂಬದಲ್ಲಿ ಹಠಾತ್ ಆರೋಗ್ಯ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆದರೆ ಧೈರ್ಯ ಗುಂದಬೇಡಿ. ವೈದ್ಯರ ಸಹಕಾರದಿಂದ ಎಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವೈದ್ಯರ ಸಲಹೆಯಂತೆ ನಡೆಯುವುದರಿಂದ ನೀವು ನಿಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ಹೊರಗಿನ ಆಹಾರವನ್ನು ತಪ್ಪಿಸಿ. ನಿಮ್ಮ ಆಹಾರದಲ್ಲಿ ತರಹಾರಿ ಇರಲಿ. ಹಣ್ಣುಗಳನ್ನು ಸೇವಿಸಿ.

ಪರಿಹಾರ

ಪರಿಹಾರ

ಕಟಕ ರಾಶಿಯವರಿಗೆ ಈ ಯುಗಾದಿ ಬಳಿಕ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲ ಸಲಹೆಗಳನ್ನು ನೀಡಲಾಗಿದೆ.

* ದೇವಸ್ಥಾನದಲ್ಲಿ ಕರಿ ಎಳು ದ್ವೀಪವನ್ನು ಹಚ್ಚಿ

* ಯಾವುದಾದರೂ (ಉದ್ದಿನ ಬೇಳೆ, ತೊಗರಿ ಬೇಳೆ) ಬೇಳೆಯನ್ನು ದಾನ ಮಾಡಿ.

* ಅನಾಥಶರಿಗೆ ವಸ್ತ್ರ ದಾನ ಮಾಡಿ

* ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ

* ಶನಿವಾರ ತಪ್ಪದೇ ಹನುಮಾನ ಚಾಲೀಸ್ ಪಠಿಸಿ

* ವಯಸ್ಸಾದವರ ಸೇವೆ ಮಾಡಿ

* ದುರ್ಗಾ ದೇವೆ ಮಂತ್ರವನ್ನು ಹೇಳಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+