Get Updates
Get notified of breaking news, exclusive insights, and must-see stories!

Ugadi Horoscope 2023: ಧನು ರಾಶಿಯ ಯುಗಾದಿ ಭವಿಷ್ಯ ಈ ವರ್ಷ ಲಾಭವೋ? ನಷ್ಟವೋ?

ಧನು ರಾಶಿಯ ಯುಗಾದಿ ಜಾತಕ 2023: ಧನು ರಾಶಿ ಶೋಭಾಕೃತಿ ನಾಮ ಸಂವತ್ಸರ ಯುಗಾದಿ ರಾಶಿ ಭವಿಷ್ಯ ಇಲ್ಲಿದೆ.

ಯುಗಾದಿ ಹಬ್ಬವನ್ನು ಇದೇ ಮಾರ್ಚ್ 22ರಂದು ಆಚರಿಸಲಾಗುತ್ತದೆ. ಈ ವರ್ಷ ದ್ವಾದಶಿ ರಾಶಿಯವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಧನು ರಾಶಿಯವರಿಗೆ 2023ರ ಯುಗಾದಿ ಭವಿಷ್ಯ ಯಾವ ರೀತಿ ಇದೆ? ಯಾವ ಗ್ರಹದ ಅನುಗ್ರಹವನ್ನು ವೃಶ್ಚಿಕ ರಾಶಿಯವರು ಪಡೆಯುತ್ತಾರೆ ಎನ್ನುವುದನ್ನು ನೋಡೋಣ.

ಇಷ್ಟು ದಿನ ಧನು ರಾಶಿಯವರಿಗೆ ಸಾಡೇಸಾತ್ ನಡೆಯುತ್ತಿತ್ತು. ಇದರಿಂದ ಈ ವರ್ಷ ಧನು ರಾಶಿಯವರಿಗೆ ಬಿಡುಗಡೆ ಸಿಕ್ಕಿರುವುದು ಖುಶಿ ವಿಚಾರ. ಧನು ರಾಶಿಯವರಿಗೆ ಎಲ್ಲಾ ಗ್ರಹಗಳು ಶುಭ ಫಲವನ್ನೇ ಕೊಡುತ್ತವೆ. ಆದರೆ ರಾಹು ಮಾತ್ರ ಅಶುಭ ಫಲವನ್ನು ಕೊಡುತ್ತಾನೆ. ಹೀಗಾಗಿ ಹೆದರುವ ಅವಶ್ಯಕತೆ ಇಲ್ಲ. ಅದಕ್ಕೆ ಪರಿಹಾರ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ. ಸಾಡೇಸಾತ್ ನಿಂದ ಬಿಡುಗಡೆಯಾದ ಬಳಿಕೆ ಸಾಕಷ್ಟು ತಿಳುವಳಿಕೆಯನ್ನು ಧನು ರಾಶಿಯವರಿಗೆ ಶನಿ ಕೊಟ್ಟಿದ್ದಾನೆ. ಸಾಕಷ್ಟು ವಿಚಾರಗಳನ್ನು ನೀವು ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೀರಿ. ಎಲ್ಲಿ ಎಷ್ಟು ಮಾತನಾಡಬೇಕು? ಯಾರ ಜೊತೆ ಸುಮ್ಮನಿರಬೇಕು? ಯಾರ ಜೊತೆ ವಾದ ಮಾಡಬಾರದು ಎನ್ನುವುದನ್ನು ನೀವು ತಿಳಿದವರಾಗಿರುವಿರಿ.

ಹಾಗೇ ಸಂಬಂಧಗಳನ್ನು ಹೇಗೆ ಕಾಪಾಡಬೇಕು ಉಳಿಸಿಕೊಳ್ಳಬೇಕು ಎನ್ನುವುದನ್ನೂ ತಿಳಿದುಕೊಂಡಿದ್ದೀರಾ. ಹಣಕಾಸಿನ ವಿಚಾರದ ಅರಿವೂ ಕೂಡ ನಿಮಗಾಗಿದೆ.

ಧನು: ಆರ್ಥಿಕ ಜೀವನ

ಧನು: ಆರ್ಥಿಕ ಜೀವನ

ಧನು ರಾಶಿಯವರಿಗೆ ಈ ವರ್ಷ ಖರ್ಚುಗಳು ಕಡಿಮೆ ಆಗುತ್ತವೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಈ ಹಿಂದೆ ಅನುಭವಿಸಿದ ನಷ್ಟವನ್ನು ಇನ್ಮುಂದೆ ನೀವು ಕಾಣುವುದಿಲ್ಲ. ನಿಮ್ಮ ವ್ಯಕ್ತಿತ್ವ ವಿಕಾಶ ಮಾಡಿಕೊಳ್ಳುವ ಸಂದರ್ಭ ಇದಾಗಿದೆ.

ಆರ್ಥಿಕ ಜೀವನದಲ್ಲಿ ಏರಿಳಿತಗಳು ಕಂಡು ಬರುತ್ತವೆ. ಅಂದುಕೊಂಡ ಕಾರ್ಯಗಳನ್ನ ಈಡೇರಲು ನಿಮಗೆ ಹಣಕಾಸಿನ ತೊಂದರೆ ಎದುರಾಗಬಹುದು. ಹೀಗಾಗಿ ಹಣದ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಿ. ಅನಾವಶ್ಯಕ ಖರ್ಚು ತಪ್ಪಿಸಿ. ಇತರರಿ ಸಾಲ ನೀಡುವುದು, ಅಥವಾ ಸಾಲ ಪಡೆಯುವುದನ್ನು ಮಾಡಬೇಡಿ. ಇದರಿಂದ ನೀವು ಮೋಸ ಹೋಗುವಿರಿ.

ಧನು: ವೃತ್ತಿ ಜೀವನ

ಧನು: ವೃತ್ತಿ ಜೀವನ

ಕೆಲಸದಲ್ಲಿ ಅನುಕೂಲಕರ ಸಮಯ ಇದಾಗಿದೆ. ಸ್ವಂತ ಉದ್ಯೋಗದಲ್ಲಿ ಅಭಿವೃದ್ಧಿ ಹೆಚ್ಚಾಗಲಿದೆ. ನವೆಂಬರ್ ವರೆಗೂ ಕೆಲಸ ನಿಧಾನವಾಗುತ್ತದೆ. ನಂತರ ತುಂಬಾ ಉತ್ತಮ ಫಲ ಸಿಗಲಿದೆ. ನಿಮ್ಮ ಕೆಲಸದಲ್ಲಿ ಅಡೆತಡೆಗಳು ಈ ಆರು ತಿಂಗಳು ಇರುತ್ತದೆ. ಏನೇ ಮಾಡಬೇಕು ಅಂದುಕೊಂಡರೂ ಅದಕ್ಕೆ ಅಡೆತಡೆಗಳು ಬರುತ್ತವೆ. ಇದರಿಂದ ನಿಮಗೆ ಯಾವುದೇ ಹೊಸ ಕೆಲಸ ಪ್ರಾರಂಭಿಸಲು ತೊಂದರೆಯಾಗಬಹುದು.

ಧನು: ಕುಟುಂಬ ಜೀವನ

ಧನು: ಕುಟುಂಬ ಜೀವನ

ಹಳೆಯ ಮಿತ್ರರನ್ನು ಭೇಟಿ ಮಾಡುವುದರ ಜೊತೆಗೆ ನೀವು ಅವರ ಸಹಾಯವನ್ನೂ ಪಡೆದುಕೊಳ್ಳುವಿರಿ. ಬಂಧುಗಳ ಪ್ರೀತಿ ವಿಶ್ವಾಸವನ್ನು ನೀವು ಗಳಿಸುವಿರಿ. ಕುಟುಂಬದಲ್ಲಿ ಸಮಸ್ಯೆಗಳು ನಿವಾರಣೆ ಮಾಡಿಕೊಳ್ಳುತ್ತೀರಾ. ಮಾನಸಿಕವಾಗಿ ನೊಂದಿರುವ ನೀವು ಪರಿಹಾರವನ್ನು ಕಂಡುಕೊಳ್ಳುವಿರಿ. ಆ ನೋವು ನಿರಾಸೆ ಮರೆಯುತ್ತಾ ಬರುತ್ತೀರಾ.

ಪಂಚಮ ಸ್ಥಾನಕ್ಕೆ ಗುರು ಎಂಟ್ರಿ ಕೊಡುತ್ತಾನೆ. ಪಂಚಮ ಸ್ಥಾನ ಅಂದರೆ ನಮ್ಮನ್ನು ನಾವು ನಿಯಂತ್ರಿಸುವಂತದ್ದಾಗಿದೆ. ನಿಮ್ಮನ್ನು ಪ್ರೀತಿಸುವಂತವರು, ನಿಮಗೆ ಒಳ್ಳೆಯದನ್ನು ಮಾಡುವಂತವರು ಹೆಚ್ಚಾಗುತ್ತಾ ಹೋಗುತ್ತಾರೆ. ಸ್ನೇಹಿತರ ಬಳಗ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದ ಬಳಗ ಹೆಚ್ಚಾಗುತ್ತದೆ. ಒಂಟಿತನ ದೂರವಾಗುತ್ತದೆ.

ಧನು: ಶೈಕ್ಷಣಿಕ ಜೀವನ

ಧನು: ಶೈಕ್ಷಣಿಕ ಜೀವನ

ಜ್ಞಾನ ಅಭಿವೃದ್ಧಿಯಾಗುತ್ತದೆ. ಇಲ್ಲಿ ಗುರು ವಿದ್ಯಾರ್ಥಿಗಳಿಗೆ ಸಾಕಷ್ಟು ಶುಭ ಫಲವನ್ನು ಕೊಡುತ್ತಾನೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡುತ್ತಾನೆ. ಉನ್ನತ ವ್ಯಾಸಾಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಈ ವರ್ಷ ಶುಭವಾಗಿದೆ. ಗೊತ್ತಿಲ ಸೂಕ್ಷ್ಮ ವಿಚಾರಗಳನ್ನು ಕಲಿಯಲು ಅವಕಾಶ ಇದೆ. ಶನಿ ಮತ್ತು ಗುರುವಿನ ದೃಷ್ಟಿ ಒಬ್ಬಂತ್ತನೇ ಮನೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳ ಆಸೆ ಆಕಾಂಕ್ಷೆಗಳು ನನಸಾಗುತ್ತವೆ.

ಧನು: ಪ್ರೇಮ ಜೀವನ

ಧನು: ಪ್ರೇಮ ಜೀವನ

ಮದುವೆ ವಿಚಾರದಲ್ಲಿ ಸಂತಾನ ವಿಚಾರದಲ್ಲಿ ಯುಗಾದಿ ಭವಿಷ್ಯ ಅತ್ಯುತ್ತಮವಾಗಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಎಲ್ಲದರಲ್ಲೂ ಗುರು ಸಾಕಷ್ಟು ಶುಭಫಲವನ್ನು ಕೊಡುತ್ತಾನೆ. ಎಲ್ಲಾ ವಿಚಾರದಲ್ಲೂ ಈ ವರ್ಷ ಧನು ರಾಶಿಯವರಿಗೆ ಅತ್ಯುತ್ತಮವಾಗಿದೆ. ಆದರೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.

ಧನು: ಆಸ್ತಿ ಖರೀದಿ

ಧನು: ಆಸ್ತಿ ಖರೀದಿ

ಕೆಲವೊಂದು ಆಸ್ತಿ ವಿಚಾರದಲ್ಲಿ ತೊಂದರೆಗಳಿದ್ದರೆ ಈ ವರ್ಷ ನಿವಾರಣೆಯಾಗುತ್ತವೆ. ಆಸ್ತಿ ಖರೀದಿ ವಿಚಾರಣದಲ್ಲಿ ಕಾನೂನು ಸಮಸ್ಯೆಗಳು ಇತ್ಯಾರ್ಥವಾಗುತ್ತವೆ. ಒಳ್ಳೆ ವಕೀಲರು ನಿಮಗೆ ಸಿಗುತ್ತಾರೆ. ಪೂರ್ವ ಯೋಜಿತವಾಗಿ ಕೈತಪ್ಪಿದ ಆಸ್ತಿಯನ್ನು ಪಡೆಯುತ್ತೀರಿ. ಆಸ್ತಿ ವಿಚಾರದಲ್ಲಿ ಕಳೆದುಕೊಂಡ ಮನಶಾಂತಿ ಸಿಗುತ್ತದೆ. ತುಂಬಾ ದೈವ ಕಾರ್ಯಗಳನ್ನು ಮಾಡುವಿರಿ. ದೇವಸ್ಥಾನಗಳಿಗೆ ಹೋಗುವುದು. ದೈವ ಕಾರ್ಯದಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿರುತ್ತದೆ. ಮನೆಯಲ್ಲಿ ವಿಶೇಷ ಪೂಜೆ ಪುನಸ್ಕಾರದಲ್ಲಿ ನೀವು ತೊಡಗಿರುತ್ತೀರಿ.

ಧನು: ಆರೋಗ್ಯ

ಧನು: ಆರೋಗ್ಯ

ಧನು ರಾಶಿಯವರ ಕುಟುಂಬದ ಹಿರಿಯರ ಆಯೋಗ್ಯದಲ್ಲಿ ಕೆಲವು ಏರಿಳಿತಗಳಿರುತ್ತವೆ. ಅದರಿಂದ ಉತ್ತಮ ವೈದ್ಯರ ಬಳಿಕೆ ಅವರನ್ನು ತೋರಿಸುವುದು ಉತ್ತಮ. ಅವರೊಂದಿಗೆ ಸಮಯ ಕಳೆಯುವುದರಿಂದ ಅವರಲ್ಲಿರುವ ಚಿಂತೆ ದೂರವಾಗುತ್ತದೆ. ಮನೆಯ ಹಿರಿಯರ ಆರೋಗ್ಯ ಚೆನ್ನಾಗಿದ್ದರೆ ಮನೆಯ ವಾತಾವರಣ ಚೆನ್ನಾಗಿರುತ್ತದೆ. ನೀವು ಕೂಡ ಅವರೊಂದಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೊರಗಿನ ಆಹಾರವನ್ನು ಸೇವನೆ ತಪ್ಪಿಸಿ. ನಿಮ್ಮ ಊಟದಲ್ಲಿ ತರಕಾರಿ ಹೆಚ್ಚಾಗಿರಲಿ. ಊಟದ ಬಳಿಕ ಹಣ್ಣು ತಿನ್ನಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿ.

ಪರಿಹಾರ

ಪರಿಹಾರ

* ಪ್ರತೀ ಶನಿವಾರ ಉದ್ದಿನ ಬೇಳೆ, ಹುರಳಿ ಕಾಳು ಹಾಗೂ ಕಪ್ಪು ಎಳ್ಳು ದಕ್ಷಿಣ ಸಮೇತವಾಗಿ ದೇವಸ್ಥಾನಕ್ಕೆ ಕೊಡಿ

* ಶುಕ್ರವಾರ ಕಪ್ಪು ಎಳ್ಳು ಇಟ್ಟು ಪೂಜೆ ಮಾಡಿ

*ಹನುಮಾನ್ ಚಾಲೀಸ್, ಗಣೇಶ ಹಾಗೂ ದುರ್ಗಾ ಸ್ತ್ರೋತ್ರವನ್ನು ಪ್ರತಿ ದಿನ ಪಠಿಸಿ.

* ಗುರು ಆರಾಧನೆ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+