ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾಪಾ ಮಾಡ್ಕೋಬ್ಯಾಡ್ ಸುಮ್ಕಿರೆ ನನ್ ಮುದ್ದಿನ ರಾಣಿ

By * ಧವಳ
|
Google Oneindia Kannada News

Love compatibility astrology
ಹೆಂಡತಿ ಎಷ್ಟೇ ಕೂಗಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ಎಂದು ಮುಗುಮ್ಮಾಗಿ ಇರುವ ಗಂಡ ಇದ್ದರೆ, ಹೆಣ್ಣೇ ನಿನಗೆ ಸಾಟಿಯಿಲ್ಲ ಎಂದು ಹೊಗಳು ಭಟ್ಟ ಗಂಡನಿದ್ದರೆ ಸಂಸಾರ ಆನಂದ ಸಾಗರ. ಇದು ಗಂಡನಿಗೆ ಮಾತ್ರವಲ್ಲ ಹೆಂಡತಿ ಕೂಡ ಹೀಗೇ ಇದ್ದರೆ ಬಾಳೇ ಬಂಗಾರ.

* ಧವಳ

ವೃಷಭ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಸಿಂಹ ರಾಶಿ ಸ್ತ್ರೀ ಸದಾ ತನ್ನ ಸಂಗಾತಿ ತನ್ನನ್ನು ಗಮನಿಸುತ್ತಲೇ ಇರಬೇಕು ಹಾಗೂ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಇಷ್ಟಪಡುತ್ತಾಳೆ. ವೃಷಭ ರಾಶಿ ಪುರುಷ ಎಲ್ಲಾ ಸೌಕರ್ಯಗಳು ನೀಡಲಾರ. ಆದರೆ ತನ್ನವಳು ಸದಾ ಸಂತೋಷವಾಗಿ ಇರಬೇಕು ಎಂದು ಶ್ರಮವಹಿಸುತ್ತಾ ಇರುತ್ತಾನೆ. ಅವನ ಜೀವನದ ಅತಿ ಮುಖ್ಯ ಆಶಯಗಳಲ್ಲಿ ಇದೂ ಒಂದು. ವೃಷಭ ರಾಶಿಯವರ ಮತ್ತೊಂದು ಗುಣ ಕಠಿಣತೆ. ಮಾತು ಒರಟು ಆದರೆ ಹೃದಯ ತುಂಬಾ ಮೃದು. ಯಾರು ಒಪ್ತಾರೆ ಈ ಗುಣವನ್ನು. ಉಪ್ಪು ಹುಳಿ ತಿನ್ನುವ ದೇಹ, ಕೋಪ ಇಬ್ಬರ ಆಸ್ತಿ! ಅದು ಜಗಳಕ್ಕೆ ದಾರಿ ಮಾಡಿ ಕೊಡುತ್ತದೆ. ಈ ಸಂಸಾರ ಚೆನ್ನಾಗಿರಬೇಕು ಅಂದ್ರೆ ಇಬ್ಬರೂ ಒಳ್ಳೆಯ ಲಿಸೆನರ್ಸ್ ಆಗಿರಬೇಕು. ನನ್ನ ಮಾತೆ ಸರಿ ನನ್ನ ಮೂಗಿನ ನೇರಕ್ಕೆ ನಾನು ಹೋಗ್ತೀನಿ ಅಂದ್ರೆ ತೊಂದರೆ ಅವರಿಬ್ಬರಿಗೇ!

ವೃಷಭ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ :
ವೃಷಭ ರಾಶಿ ಸ್ತ್ರೀಯರಿಗೆ ಕನ್ಯಾ ರಾಶಿ ಪುರುಷರ ಬಗ್ಗೆ ಹೆಚ್ಚು ಆಸ್ಥೆ ಇರುತ್ತದೆ. ಇವರಿಬ್ಬರು ಸಂಗಾತಿಗಳಾದರೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಏಕೆಂದರೆ ಇಬ್ಬರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಬ್ಬರ ನಡುವೆ ಗಲಾಟೆ ಗದ್ದಲ ತುಂಬಾ ಕಡಿಮೆ. ಕನ್ಯಾ ರಾಶಿ ಪುರುಷ ತನ್ನ ಸಂಗಾತಿಯ ಸುಖಕ್ಕಾಗಿ ಎಂತಹ ಮಾರ್ಪಾಡಿಗೂ ಸಿದ್ಧ. ಅದರಲ್ಲೂ ಮುಖ್ಯವಾಗಿ ಒಳ್ಳೆಯ ವಾತಾವರಣ ನೀಡುವುದಕ್ಕೆ ಆದ್ಯತೆ ನೀಡುತ್ತಾರೆ. ಇವರು ಆದರ್ಶ ಜೋಡಿಗಳಾಗುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X