ವೃಷಭ ರಾಶಿಯ ಸ್ತ್ರೀಯರ ಪ್ರಣಯ ಕ್ಷಣದ ಆದ್ಯತೆಗಳು

ಜ್ಯೋತಿಷ್ಯದಲ್ಲಿ ಯಾವುದೆಲ್ಲ ವಿಚಾರಗಳನ್ನು ಹೇಳಲಾಗಿದೆ ಅಂದರೆ ಸಮುದ್ರದ ಮುಂದೆ ನಿಂತು ಅಗೋ ಅಲ್ಲಿಗೆ ಕೊನೆ ಎಂದು ಕೂಗಿದರೆ ಹೇಗೋ ಹಾಗಾಗುತ್ತದೆ. ಈ ದಿನದ ಲೇಖನದಲ್ಲಿ ದಾಂಪತ್ಯದ ಬಗ್ಗೆ ಅದರಲ್ಲೂ ಪತಿ ಮಹಾಶಯ ಪತ್ನಿ ಜತೆಗೆ ಉತ್ತುಂಗಕ್ಕೆ ಏರಬಹುದಾದ ಪ್ರಣಯ ಕ್ಷಣಗಳನ್ನು ತಿಳಿಸಲಾಗುತ್ತದೆ. ಇದು ಕೂಡ ಆಯಾ ರಾಶಿಗೆ ಅನ್ವಯ ಆಗುತ್ತದೆ.

ಈ ದಿನ ವೃಷಭ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ಕತ್ತಿನ ಭಾಗದಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ಕತ್ತಿನ ಭಾಗದಲ್ಲಿ ಬೆರಳುಗಳನ್ನು ಹರಿದಾಡಿಸಿದರೆ ಹಾಗೂ ನಿಮ್ಮ ಮುಖವನ್ನು ಕತ್ತಿನ ಭಾಗದಲ್ಲಿ ನೇವರಿಸಿದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತುಷ್ಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.

ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು. ಮದುವೆ ಸಂದರ್ಭದಲ್ಲಿ ಗಮನಿಸುವ ದ್ವಾದಶ ಕೂಟದಲ್ಲಿ ಯೋನಿ ಕೂಟ ಎಂಬುದಿದೆ. ಗಂಡ-ಹೆಂಡತಿಯ ಮಧ್ಯೆ ಲೈಂಗಿಕ ಆಸಕ್ತಿ ಹಾಗೂ ಸಾಮರ್ಥ್ಯ, ಪರಸ್ಪರ ಮೇಲಿನ ಆಕರ್ಷಣೆಯನ್ನು ಆ ಮೂಲಕ ತಿಳಿಯಬಹುದು.

ಲೈಂಗಿಕ ಆದ್ಯತೆ ಸೂಚಿಸುವ ಯೋನಿ ಕೂಟ

ಲೈಂಗಿಕ ಆದ್ಯತೆ ಸೂಚಿಸುವ ಯೋನಿ ಕೂಟ

ಕೃತ್ತಿಕಾ ನಕ್ಷತ್ರದ ಮೂರು ಪಾದ, ರೋಹಿಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಮೃಗಶಿರಾ ನಕ್ಷತ್ರದ ಮೊದಲ ಎರಡು ಪಾದ ವೃಷಭ ರಾಶಿಯಾಗುತ್ತದೆ. ಈ ನಕ್ಷತ್ರಗಳಿಗೆ ಕ್ರಮವಾಗಿ ಆಡು ಹಾಗೂ ಹಾವು ಯೋನಿ ಕೂಟವಾಗುತ್ತದೆ. ಈ ಪ್ರಾಣಿಗಳು ಆಯಾ ನಕ್ಷತ್ರದ ಸ್ತ್ರೀಯರ ಲೈಂಗಿಕ ಆದ್ಯತೆಯನ್ನು, ಸ್ವಭಾವವನ್ನು ಸೂಚಿಸುತ್ತವೆ.

ಅಚ್ಚರಿ ಇಷ್ಟಪಡುವ ವೃಷಭ ರಾಶಿ ಸ್ತ್ರೀಯರು

ಅಚ್ಚರಿ ಇಷ್ಟಪಡುವ ವೃಷಭ ರಾಶಿ ಸ್ತ್ರೀಯರು

ವೃಷಭ ರಾಶಿಯ ಸ್ತ್ರೀಯರಿಗೆ ಅಚ್ಚರಿಯನ್ನು ನೀಡುವುದು ಇಷ್ಟವಾಗುತ್ತದೆ. ಮನೆಯಲ್ಲಿ ಒಬ್ಬರೇ ಇರುವಾಗ ಹಿಂದಿನಿಂದ ಬಂದು ಆವರಿಸಿಕೊಳ್ಳುವ ಪತಿಯ ರೀತಿಯನ್ನು ಇಷ್ಟಪಡುವ ಈ ರಾಶಿಯ ಸ್ತ್ರೀಯರ ಪ್ರಣಯ ಆಸಕ್ತಿಯನ್ನು ಕೆರಳಿಸಲು ಕುತ್ತಿಗೆ ಭಾಗ ಸೂಕ್ತ.

'ನಾಗಿಣಿ' ಕೆರಳದಂತೆ ಎಚ್ಚರ ವಹಿಸಿ

'ನಾಗಿಣಿ' ಕೆರಳದಂತೆ ಎಚ್ಚರ ವಹಿಸಿ

ಹಾಗಂತ ಹಿಡಿತ ಬಿಗಿ ಮಾಡಿದರೆ 'ನಾಗಿಣಿ'ಗೆ ಕೆರಳಿ ಬಿಡುತ್ತದೆ. ಈ ರಾಶಿಯ ಸ್ತ್ರೀಯರ ಮೇಲೆ ಪತಿ ರಾಯರು ಪ್ರಭುತ್ವ ಸಾಧಿಸಲು ಪ್ರಯತ್ನಿಸಿದರೆ ಅದು ಬಹಳ ಕಷ್ಟ. ಹಾಗೂ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲವೊಮ್ಮೆ ಈ ರಾಶಿ ಸ್ತ್ರೀಯರಿಗೇ ಮುಂದಾಳತ್ವ ಬಿಟ್ಟುಕೊಡಬೇಕಾಗುತ್ತದೆ.

ಸ್ವಲ್ಪ ಮಟ್ಟಿಗೆ ಆಲಸಿಗಳು

ಸ್ವಲ್ಪ ಮಟ್ಟಿಗೆ ಆಲಸಿಗಳು

ಈ ರಾಶಿಯ ಸ್ತ್ರೀಯರು ಸ್ವಲ್ಪ ಮಟ್ಟಿಗೆ ಆಲಸಿಗಳು ಹಾಗೂ ಪತಿಯ ಆಸಕ್ತಿಗೆ ತಕ್ಕಂತೆ ಸ್ಪಂದಿಸದ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನೇ ಮುಂದು ಮಾಡಿಕೊಂಡು ಹೀಯಾಳಿಸುವುದು, ಮೂದಲಿಸುವುದು ಮಾಡಿದರೆ ಆ ನಂತರದ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+