ಮಿಥುನ ರಾಶಿಯ ಸ್ತ್ರೀ ಅಂಗೈಲಿ ಆ ಕ್ಷಣಗಳ ಉತ್ಕಟತೆ
ಜ್ಯೋತಿಷ್ಯದಲ್ಲಿ ಯಾವುದೆಲ್ಲ ವಿಚಾರಗಳನ್ನು ಹೇಳಲಾಗಿದೆ ಅಂದರೆ ಸಮುದ್ರದ ಮುಂದೆ ನಿಂತು ಅಗೋ ಅಲ್ಲಿಗೆ ಕೊನೆ ಎಂದು ಕೂಗಿದರೆ ಹೇಗೋ ಹಾಗಾಗುತ್ತದೆ. ಈ ದಿನದ ಲೇಖನದಲ್ಲಿ ದಾಂಪತ್ಯದ ಬಗ್ಗೆ ಅದರಲ್ಲೂ ಪತಿ ಮಹಾಶಯ ಪತ್ನಿ ಜತೆಗೆ ಉತ್ತುಂಗಕ್ಕೆ ಏರಬಹುದಾದ ಪ್ರಣಯ ಕ್ಷಣಗಳನ್ನು ತಿಳಿಸಲಾಗುತ್ತದೆ. ಇದು ಕೂಡ ಆಯಾ ರಾಶಿಗೆ ಅನ್ವಯ ಆಗುತ್ತದೆ.
ಈ ದಿನ ಮಿಥುನ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ಅಂಗೈನಲ್ಲಿ ಅದರಲ್ಲೂ ಬೆರಳುಗಳಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ಕೈ ಬೆರಳುಗಳನ್ನು ನವಿರಾಗಿ ಹಿಡಿದು, ರಮಿಸಿದರೆ ಹಾಗೂ ನಿಮ್ಮ ಕೈ ಬೆರಳುಗಳ ಸಂಗಾತಿಯ ಕೈ ಬೆರಳುಗಳ ಜತೆಗೆ ಹೊಸೆದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತುಷ್ಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.
ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು. ಮದುವೆ ಸಂದರ್ಭದಲ್ಲಿ ಗಮನಿಸುವ ದ್ವಾದಶ ಕೂಟದಲ್ಲಿ ಯೋನಿ ಕೂಟ ಎಂಬುದಿದೆ. ಗಂಡ-ಹೆಂಡತಿಯ ಮಧ್ಯೆ ಲೈಂಗಿಕ ಆಸಕ್ತಿ ಹಾಗೂ ಸಾಮರ್ಥ್ಯ, ಪರಸ್ಪರ ಮೇಲಿನ ಆಕರ್ಷಣೆಯನ್ನು ಆ ಮೂಲಕ ತಿಳಿಯಬಹುದು.

ಮೃಗಶಿರಾ, ಆರಿದ್ರಾ ಹಾಗೂ ಪುನರ್ವಸು ನಕ್ಷತ್ರ
ಮೃಗಶಿರಾ ನಕ್ಷತ್ರದ ಮೂರು ಹಾಗೂ ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ನಾಲ್ಕು ಪಾದ, ಪುನರ್ವಸು ನಕ್ಷತ್ರದ ಮೊದಲ ಎರಡು ಪಾದ ಮಿಥುನ ರಾಶಿಯಾಗುತ್ತದೆ. ಈ ನಕ್ಷತ್ರಗಳಿಗೆ ಕ್ರಮವಾಗಿ ಹಾವು, ನಾಯಿ ಹಾಗೂ ಬೆಕ್ಕು ಯೋನಿ ಕೂಟವಾಗುತ್ತದೆ. ಈ ಪ್ರಾಣಿಗಳು ಆಯಾ ನಕ್ಷತ್ರದ ಸ್ತ್ರೀಯರ ಲೈಂಗಿಕ ಆದ್ಯತೆಯನ್ನು, ಸ್ವಭಾವವನ್ನು ಸೂಚಿಸುತ್ತವೆ.

ಅಚ್ಚರಿ ಇಷ್ಟಪಡುವ ವೃಷಭ ರಾಶಿ ಸ್ತ್ರೀಯರು
ಮಿಥುನ ರಾಶಿಯ ಸ್ತ್ರೀಯರ ಪ್ರಣಯ ಕ್ಷಣಗಳಲ್ಲಿ ನಿಮ್ಮ ಕೈ ಮೇಲಾಗಬೇಕು ಎಂದಾದರೆ ಅವರ ಬೆರಳುಗಳನ್ನು ನಿಮ್ಮ ಬೆರಳುಗಳಿಂದ ಹೊಸೆಯಿರಿ. ಬೆರಳ ತುದಿಗೆ ಮೃದುವಾದ ಸ್ಪರ್ಶ ನೀಡಿರಿ. ಅಲ್ಲಿಂದ ಆರಂಭವಾಗುವುದನ್ನು ನಿಧಾನಕ್ಕೆ ಮುಂದುವರಿಸಿ. ಈ ರಾಶಿಯ ಸ್ತ್ರೀಯರ ಪ್ರಣಯ ಆಸಕ್ತಿಯನ್ನು ಕೆರಳಿಸಲು ಕೈ ಬೆರಳುಗಳು ಸೂಕ್ತ.

ಎರಡು ರೀತಿ ಸ್ವಭಾವ ಕಾಣಬಹುದು
ಈ ರಾಶಿ ಸ್ತ್ರೀಯರ ಪ್ರೀತಿಗೆ ತೀವ್ರತೆ ಹೆಚ್ಚು. ಉಳಿದ ರಾಶಿಯವರಿಗಿಂತ ಭಿನ್ನ ಸ್ವಭಾವದ ಮಿಥುನ ರಾಶಿಯವರು ಉತ್ಕಟ ಕ್ಷಣಗಳಲ್ಲಿ ಗಂಡು-ಹೆಣ್ಣು ಎರಡೂ ರೀತಿಯಲ್ಲೂ ವರ್ತನೆ ತೋರುತ್ತಾರೆ. ಅದರರ್ಥ ಅವರೇ ಮುಂದಾಳತ್ವ ವಹಿಸಲು ಸಿದ್ಧ ಹಾಗೂ ಪತಿಯ ಇಚ್ಛೆಗೆ ಸ್ಪಂದನೆ ನೀಡಲು ಸಹ ಸಿದ್ಧರಿರುತ್ತಾರೆ.

ಚಂಚಲತೆ ಹೆಚ್ಚು
ಮಿಥುನ ರಾಶಿಯ ಸ್ತ್ರೀ ಆದ್ಯತೆ, ಆಸಕ್ತಿಗಳು ಬಹಳ ಬೇಗ ಗೊತ್ತಾಯಿತು ಎಂದು ಭಾವಿಸುವವರೇ ಹೆಚ್ಚು. ಆದರೆ ಇವರು ತುಂಬ ಅಚ್ಚರಿಗಳನ್ನು ನೀಡುತ್ತಾರೆ. ಶಾಂತ ಸ್ವಭಾವ, ತೀವ್ರತೆ, ಆ ಸಂದರ್ಭದಲ್ಲಿ ಹುಲಿಯಂಥ ವ್ಯಗ್ರತೆ ತೋರಿಸುವುದರಿಂದ ಗೊಂದಲಕ್ಕೆ ಒಳಗಾಗಬೇಡಿ. ಏಕೆಂದರೆ ಇವರ ಸ್ವಭಾವದಲ್ಲೇ ಬಹಳ ಚಂಚಲತೆ ಇರುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications