ಕರ್ಕಾಟಕ ರಾಶಿ ಸ್ತ್ರೀಯ ತುಟಿಯಲ್ಲೇ ಸಿಹಿ ಕ್ಷಣದ ಮುನ್ನುಡಿ

Posted By: ರಮಾಕಾಂತ್
Subscribe to Oneindia Kannada
   Karkataka ( Cancer ) Rashi : People Who Belongs To This Sign Are Lucky |Watch video|Oneindia Kannada

   ದಾಂಪತ್ಯದಲ್ಲಿ ಗಂಡು- ಹೆಣ್ಣಿನ ಆಸಕ್ತಿ ಸಮಾನವಾದರೆ ಒಂದು ಬಗೆ. ಒಂದು ವೇಳೆ ಸ್ವಲ್ಪ ಕೈ ಕೊಟ್ಟು ಹೆಣ್ಣು- ಗಂಡಿನ ಆದ್ಯತೆಗಳು ಬೇರೆಯಾಗಿ ಉತ್ತರ ಧ್ರುವ- ದಕ್ಷಿಣ ಧ್ರುವ ಎಂದಾಗಿಬಿಟ್ಟರೆ ಕಷ್ಟ ಕಷ್ಟ. ಈ ಬಗ್ಗೆ ಜ್ಯೋತಿಷ್ಯದಲ್ಲೂ ಪ್ರಸ್ತಾವವಿದೆ. ಗಂಡ-ಹೆಂಡತಿ ಮಧ್ಯೆ ಸಾಮರಸ್ಯಕ್ಕೆ ಇಬ್ಬರ ನಕ್ಷತ್ರ- ರಾಶಿ ಕೂಡ ಕಾರಣವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

   ವೃಷಭ ರಾಶಿಯ ಸ್ತ್ರೀಯರ ಪ್ರಣಯ ಕ್ಷಣದ ಆದ್ಯತೆಗಳು

   ಎಷ್ಟೋ ಸಲ ಪ್ರೀತಿಸಿ, ಬಹಳ ಕಾಲ ಕಾಯ್ದು, ಆ ನಂತರ ಮದುವೆ ಅದವರ ಮಧ್ಯೆಯೇ ಅಸಮಾಧಾನ ಮೂಡುತ್ತದೆ. ಇನ್ನು ಲೈಂಗಿಕ ವಿಚಾರಕ್ಕಾಗಿಯೂ ಗಂಡ- ಹೆಂಡತಿ ಬೇರೆಯಾಗುವ ಸಂದರ್ಭಗಳಿವೆ. ಸ್ತ್ರೀಯರ ಲೈಂಗಿಕ ಪ್ರಾಧಾನ್ಯ ಬೇರೆಯೇ ಇರುತ್ತದೆ. ಜ್ಯೋತಿಷ್ಯದಲ್ಲೇ ಆ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿಸಿಕೊಡುವ ಯತ್ನವಿದು.

   ಈ ದಿನ ಕರ್ಕಾಟಕ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ತುಟಿಯಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ತುಟಿಯನ್ನು ಇಷ್ಠಿಷ್ಟಾಗಿ ಹೀರುತ್ತಾ ಚುಂಬಿಸಿದರೆ ಹಾಗೂ ನಿಮ್ಮ ಸಂಗಾತಿಯ ತುಟಿಗಳ ಜತೆಗೆ ತುಟಿ ಬೆಸೆದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತೋಷಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.

   ಮೇಷ ರಾಶಿ ಮಹಿಳೆಯ ಪ್ರಣಯ ಕ್ಷಣ ಉದ್ದೀಪಿಸುವ ಕೇಶ

   ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು.

   ಪುನರ್ವಸು, ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ

   ಪುನರ್ವಸು, ಪುಷ್ಯ ಹಾಗೂ ಆಶ್ಲೇಷ ನಕ್ಷತ್ರ

   ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯಾ ಹಾಗೂ ಆಶ್ಲೇಷಾ ನಕ್ಷತ್ರ ಸೇರಿ ಕರ್ಕಾಟಕ ರಾಶಿಯಾಗುತ್ತದೆ. ಪುನರ್ವಸು- ಆಶ್ಲೇಷಾ ನಕ್ಷತ್ರಗಳಿಗೆ ಬೆಕ್ಕು ಹಾಗೂ ಪುಷ್ಯಾ ನಕ್ಷತ್ರಕ್ಕೆ ಆಡು ಯೋನಿ ಕೂಟವಾಗುತ್ತದೆ. ಈ ಪ್ರಾಣಿಗಳು ಆಯಾ ನಕ್ಷತ್ರದ ಸ್ತ್ರೀಯರ ಲೈಂಗಿಕ ಆದ್ಯತೆಯನ್ನು, ಸ್ವಭಾವವನ್ನು ಸೂಚಿಸುತ್ತವೆ.

   ಒರಟು ನಡವಳಿಕೆ ಬೇಡ

   ಒರಟು ನಡವಳಿಕೆ ಬೇಡ

   ಈ ರಾಶಿಯ ಸ್ತ್ರೀಯರ ತುಟಿಯಲ್ಲಿ ಹಾಗೂ ಎದೆಯ ಭಾಗದಲ್ಲಿ ಪ್ರಣಯ ಕ್ಷಣಗಳ ಆರಂಭ ಅಡಗಿರುತ್ತದೆ. ತುಟಿಯನ್ನು ಚುಂಬಿಸುತ್ತಾ, ಎದೆಯ ಮೆದುವಾದ ಭಾಗಕ್ಕೆ ಕೈ ತಾಗಿದರೆ ಈ ರಾಶಿಯ ಸ್ತ್ರೀಯರು ಬೇಗ ಉತ್ತೇಜನಗೊಳ್ಳುತ್ತಾರೆ. ಸ್ವಚ್ಛತೆಗೆ ತುಂಬ ಹೆಚ್ಚಿನ ಆದ್ಯತೆ ಕೊಡುವ ಈ ರಾಶಿಯ ಸ್ತ್ರೀಯರು ಒರಟು ನಡವಳಿಕೆಯನ್ನು ದ್ವೇಷಿಸುತ್ತಾರೆ.

   ಒಂದು ಕ್ಷಣ ಉತ್ಸಾಹ, ಮರುಕ್ಷಣ ಮಂಕು

   ಒಂದು ಕ್ಷಣ ಉತ್ಸಾಹ, ಮರುಕ್ಷಣ ಮಂಕು

   ಕರ್ಕಾಟಕ ರಾಶಿಯ ಸ್ತ್ರೀಯರಲ್ಲಿ ಭಾವನೆಗಳ ಹೊಯ್ದಾಟ ಹೆಚ್ಚು. ಕೆಲವೇ ಕ್ಷಣಗಳ ಹಿಂದೆ ತುಂಬಾ ಚೆನ್ನಾಗಿ ಮಾತನಾಡಿ, ಸಂಗಾತಿಯನ್ನು ಅಣಿಗೊಳಿಸುವ ಇವರು ಇದ್ದಕ್ಕಿದ್ದಂತೆ ಮಂಕಾಗುತ್ತಾರೆ. ಅಪರೂಪಕ್ಕೆ ಎಂಬಂತೆ ಸಿಡುಕಿದರೂ ಅಚ್ಚರಿಯಿಲ್ಲ. ಇದನ್ನು ಮುಂಚೆಯೇ ತಿಳಿದುಕೊಂಡಿದ್ದರೆ ಉತ್ತಮ.

   ವಿಪರೀತ ಎನಿಸುವಷ್ಟು ಮೂಡಿ

   ವಿಪರೀತ ಎನಿಸುವಷ್ಟು ಮೂಡಿ

   ಪ್ರಶಾಂತವಾದ ವಾತಾವರಣ, ಸಮುದ್ರ, ಬೆಟ್ಟ-ಗುಡ್ಡ, ಪ್ರಕೃತಿಯ ಮಧ್ಯೆ ಈ ರಾಶಿಯ ಸ್ತ್ರೀಯರ ಮನಸ್ಸು ಬೇಗ ಅರಳುತ್ತದೆ. ಅಂಥ ಕಡೆ ಪ್ರವಾಸಕ್ಕೆ ಹೋದಾಗ ಇನ್ನೂ ಹೆಚ್ಚು ಪ್ರಣಯದ ಆಲೋಚನೆಗಳು ಹೊಮ್ಮುತ್ತವೆ. ಆದರೆ ಈ ಸ್ತ್ರೀಯರು ವಿಪರೀತ ಎನಿಸುವಷ್ಟು ಮೂಡಿ ಆಗಿರುತ್ತಾರೆ. ನಿರೀಕ್ಷೆ ಅತಿಯಾಗಿಟ್ಟುಕೊಳ್ಳದಿರುವುದು ಒಳಿತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   This is an article about Cancer zodiac sign woman sensual behavior and tips to how to induce them.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ