ಇರಾನ್ ಸಮೀಪಕ್ಕೆ ಬರುತ್ತಿವೆ ಮತ್ತಷ್ಟು ನೌಕೆಗಳು, ಮಧ್ಯಪ್ರಾಚ್ಯ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮ... Iran Conflict
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿ ಇರಾನ್ ಈಗ ದೊಡ್ಡ ಮಟ್ಟದ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಇರಾನ್ ನಾಯಕರು ಒಬ್ಬೊಬ್ಬರಾಗಿ ಜೀವ ಬಿಡುತ್ತಿದ್ದು, ತೈಲ & ಅನಿಲ ನಿಕ್ಷೇಪಗಳ ಮೇಲೆ ಕೂಡ ದೊಡ್ಡ ಮಟ್ಟದಲ್ಲಿ ದಾಳಿ ಮುಂದುವರಿಸಿವೆ ಇಸ್ರೇಲ್ & ಅಮೆರಿಕ ಸೇನೆಗಳು. ಹೀಗಿದ್ದಾಗ ಪರಿಸ್ಥಿತಿ ಯಾವುದೇ ಕ್ಷಣದಲ್ಲಿ ಮತ್ತೊಂದು ಮಹಾಯುದ್ಧದ ರೂಪ ಪಡೆದು ದೊಡ್ಡ ಯುದ್ಧದ ಬಿರುಗಾಳಿ ಸೃಷ್ಟಿ ಆಗಬಹುದು ಎಂಬ ಭಯ ಕೂಡ ಎಲ್ಲಾ ಕಡೆಗೂ ಆವರಿಸಿದೆ. ಇಂತಹ ಸಮಯದಲ್ಲೇ ಇರಾನ್ ಸಮೀಪಕ್ಕೆ ಬರುತ್ತಿರುವ ಅಮೆರಿಕದ ಮತ್ತಷ್ಟು ನೌಕೆಗಳು ಭೀಕರ ದಾಳಿ ಬಗ್ಗೆ ಮುನ್ಸೂಚನೆ ಕೊಡುತ್ತಿವೆ.
ಇರಾನ್ ಯುದ್ಧ ಶುರುವಾದ ನಂತರ ಮಧ್ಯಪ್ರಾಚ್ಯ ಸರ್ವನಾಶ ಆಗುವ ಹಂತಕ್ಕೆ ತಲುಪುತ್ತಿದ್ದು, ಅತ್ತ ಆರ್ಥಿಕ ಪರಿಸ್ಥಿತಿ ಕೂಡ ಬೀದಿಗೆ ಬೀಳುತ್ತಿದೆ. ಇನ್ನೊಂದು ಕಡೆ ಯುದ್ಧ ನಿಲ್ಲಿಸಬೇಕು ಎಂದರೆ ನೂರಾರು ಅಡ್ಡಿ ಆತಂಕದ ಜೊತೆ ಅಮೆರಿಕ ಅಧ್ಯಕ್ಷರ ಪ್ರತಿಷ್ಠೆ ಪ್ರಶ್ನೆ ಎದುರಾಗಿ ಇರಾನ್ ಮತ್ತು ಇಸ್ರೇಲ್ ತಿಕ್ಕಾಟ ಹೆಚ್ಚು ಮಾಡುತ್ತಿದೆ. ಈಗಾಗಲೇ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ದೊಡ್ಡ ಮಟ್ಟದಲ್ಲಿ ದಾಳಿ, ಪ್ರತಿದಾಳಿ ಮಾಡುತ್ತಾ ತೈಲ ಘಟಕಗಳನ್ನು ನಾಶ ಮಾಡುತ್ತಿದ್ದಾರೆ.

ಇರಾನ್ ವಿರುದ್ಧ ಭೂದಾಳಿ ಸಿದ್ಧತೆ?
ಇಸ್ರೇಲ್ ಸೇನೆಯು ಇರಾನ್ ದೇಶದ ತೈಲ ನಿಕ್ಷೇಪ & ತೈಲ ಸಂಸ್ಕರಣಾ ಘಟಕಗಳ ಮೇಲೆ ದಾಳಿ ಮಾಡಿದೆ ಎಂಬ ಗಂಭೀರ ಆರೋಪವು ಕೇಳಿಬಂದಿತ್ತು. ಆ ನಂತರ ರೊಚ್ಚಿಗೆದ್ದ ಇರಾನ್ ಸೇನೆ ಅಮೆರಿಕ & ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಅಕ್ಕಪಕ್ಕದ ದೇಶಗಳ ತೈಲ ಘಟಕಗಳ ಮೇಲೆಯೇ ದಾಳಿ ಮಾಡ್ತಿದೆ. ಈ ಸಮಯದಲ್ಲೇ ಅಮೆರಿಕ ದೊಡ್ಡ ಮಟ್ಟದಲ್ಲಿ ತನ್ನ ಯುದ್ಧ ನೌಕೆಗಳನ್ನ ಇರಾನ್ ಕಡೆಗೆ ಕಳುಹಿಸುತ್ತಿದ್ದು ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ಮೇಲೆ ಭೂದಾಳಿ ಆರಂಭ ಆಗುವ ಸನ್ನಿವೇಶ ನಿರ್ಮಾಣ ಆಗಿದೆ.












Click it and Unblock the Notifications