Get Updates
Get notified of breaking news, exclusive insights, and must-see stories!

ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election

ಕರ್ನಾಟಕದ ನೆರೆ ರಾಜ್ಯ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ನೆರೆಯ ತಮಿಳುನಾಡು ರಾಜ್ಯದಲ್ಲಿ ಇದೀಗ ಅಚ್ಚುಕಟ್ಟಾಗಿ, ಕಾನೂನಿನ ಚೌಕಟ್ಟಿನಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೂಡ ಸಕಲ ಸಿದ್ಧತೆ ಕೈಗೊಂಡಿದೆ. ಅದರಲ್ಲೂ ಯಾವುದೇ ರೀತಿ ಕಾನೂನು ಮೀರುವ ಹಾಗೂ ಚುನಾವಣಾ ಅಕ್ರಮಗಳು ನಡೆಯದಂತೆ ತಡೆಯಲು ಖಡಕ್ ಕ್ರಮ ಕೈಗೊಂಡಿದ್ದಾರೆ ಚುನಾವಣಾ ಅಧಿಕಾರಿಗಳು. ಇದೇ ಕಾರಣಕ್ಕೆ ಈಗ ಅಭ್ಯರ್ಥಿಗಳ ಖರ್ಚಿಗೆ ಒಂದು ಗಡಿಯನ್ನು ಕೂಡ ಹಾಕಲಾಗಿದೆ.

ಹೌದು, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮೇಲೆ ಈಗ ನಿಯಂತ್ರಣ ತರಲು ಚುನಾವಣಾ ಆಯೋಗ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಹೊಸ ಮಾರ್ಗಸೂಚಿ ಪ್ರಕಾರ, ವೆಜ್ ಬಿರಿಯಾನಿಗೆ 50 ರೂಪಾಯಿ ಫಿಕ್ಸ್ ಮಾಡಿದ್ದರೆ ಅದೇ ರೀತಿಯಾಗಿ ಮಟನ್ ಬಿರಿಯಾನಿಗೆ ಗರಿಷ್ಠ 180 ರೂಪಾಯಿ ದರ ನಿಗದಿಪಡಿಸಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಚುನಾವಣೆ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಬಿರಿಯಾನಿ ಅಡುಗೆಯನ್ನು ಕಾರ್ಯಕರ್ತರು ಹಾಗೂ ಮತದಾರರಿಗೆ ಹಂಚುವ ವಾಡಿಕೆ ಇದೆ. ಅದರಲ್ಲೂ ರಂಜಾನ್ ಮಾಸದ ಸಮಯವಾದ ಈಗ ದೊಡ್ಡ ಪ್ರಮಾಣದಲ್ಲಿ ಭೋಜನ ಕೂಟಗಳು ಆಯೋಜನೆ ಆಗುತ್ತಿವೆ. ಈ ಸಮಯದಲ್ಲೇ ಮಹತ್ವದ ಆದೇಶ ಪ್ರಕಟವಾಗಿದ್ದು, ಎಲೆಕ್ಷನ್ ಸಮಯದಲ್ಲಿ ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ ಚುನಾವಣೆ ಅಧಿಕಾರಿಗಳು.

Tamil Nadu Election

ವಿವಿಧ ಆಹಾರದ ಬೆಲೆ ಫಿಕ್ಸ್

ಅಂದಹಾಗೆ ಭಾರತೀಯ ಚುನಾವಣಾ ಆಯೋಗ, ತಮಿಳುನಾಡು ಸೇರಿದಂತೆ ಒಟ್ಟು 5 ರಾಜ್ಯಗಳಲ್ಲಿ ಈಗ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಕೆಲವು ದಿನಗಳ ಹಿಂದಷ್ಟೇ ಚುನಾವಣೆ ದಿನಾಂಕವು ಪ್ರಕಟವಾಗಿದ್ದು, ಚುನಾವಣೆ ದಿನಾಂಕ ಘೋಷಣೆ ಮೂಲಕ ತಕ್ಷಣ ಮಾದರಿ ನೀತಿ ಸಂಹಿತೆಯೂ ಜಾರಿಗೆ ಬಂದಿತ್ತು. ಹೀಗೆ ರಾಜಕೀಯ ಪ್ರಚಾರ ಹಾಗೂ ಅಭ್ಯರ್ಥಿಗಳ ಖರ್ಚಿನ ಮೇಲೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಿದೆ. ಹಾಗಾದರೆ ಇದೀಗ ಚುನಾವಣೆ ಆಯೋಗ ನಿಗದಿ ಮಾಡಿರುವ ಬೆಲೆ ಎಷ್ಟು? ಯಾವ ಯಾವ ಆಹಾರದ ಬೆಲೆ ಎಷ್ಟು? ಮುಂದೆ ಓದಿ.

2026 ಎಲೆಕ್ಷನ್ ಸಂಬಂಧ ಮಾಂಸಾಹಾರಿ ಊಟಕ್ಕೆ 350 ರೂಪಾಯಿ ಹಾಗೂ ಸಸ್ಯಾಹಾರಿ ಊಟಕ್ಕೆ 110 ರೂಪಾಯಿ ಗರಿಷ್ಠ ಮಿತಿಯೂ ನಿಗದಿಯಾಗಿದೆ. ಹೀಗೆ ಇದರ ಜೊತೆಯಲ್ಲಿ ಆಹಾರ ಪದಾರ್ಥಗಳಲ್ಲಿ ವೆಜ್ ಬಿರಿಯಾನಿ 50 ರೂಪಾಯಿ, ವಿವಿಧ ರೀತಿ ರೈಸ್ ಐಟಂಗಳಿಗೆ 45 ರೂಪಾಯಿ ಮತ್ತು 2 ಇಡ್ಲಿ ಬೆಲೆ 40 ರೂಪಾಯಿಗೆ ನಿಗದಿ ಮಾಡಲಾಗಿದೆ. 2 ಚಪಾತಿ ಅಥವಾ 2 ಪೂರಿಗೆ 50 ರೂಪಾಯಿ ಎಂದು ಬೆಲೆಯನ್ನ ನಿಗದಿ ಮಾಡಲಾಗಿದೆ. ಪೊಂಗಲ್ 50 ರೂಪಾಯಿ, ವಡೆ 15 ರೂಪಾಯಿ ಹಾಗೂ ಮಿನರಲ್ ವಾಟರ್ ಬಾಟಲ್ 15 ರೂಪಾಯಿ ಬೆಲೆ ಎಂದು ನಿಗದಿಪಡಿಸಿದೆ ಚುನಾವಣೆ ಆಯೋಗ. ಹೀಗೆ ಬೆಲೆ ನಿಗದಿಯ ಮೂಲಕ ಅಭ್ಯರ್ಥಿಗಳ ಚುನಾವಣೆ ಖರ್ಚಿನ ಮೇಲೆ ಕಣ್ಣಿಡಲಾಗುತ್ತಿದೆ.

ಸೋಲು & ಗೆಲುವಿನ ಲೆಕ್ಕಾಚಾರ ಶುರು

ಸಾಮಾನ್ಯ ಟೂರಿಸ್ಟ್ ವಾಹನಕ್ಕೆ 150 ಕಿಮೀ ಅಥವ 15 ಗಂಟೆ ತನಕ ಬಳಸಲು 3,300 ರೂಪಾಯಿ ಗರಿಷ್ಠ ದರ ನಿಗದಿಯಾಗಿದೆ. ಹಾಗೇ ಟೀ 12 ರೂಪಾಯಿ ಮತ್ತು ಕಾಫಿ ಬೆಲೆಯು 18 ರೂಪಾಯಿ ದರ ಇರಲಿದೆ. ತಮಿಳುನಾಡು ರಾಜ್ಯದಲ್ಲಿ ಗೆದ್ದು ಬೀಗಬೇಕು ಎಂಬುದು ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಅತ್ತ ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಒಕ್ಕೂಟಗಳಿಗೆ ಅನಿವಾರ್ಯ ಎನ್ನುವಂತಾಗಿದೆ. ಇದೇ ಕಾರಣ ತಮಿಳುನಾಡು ವಿಧಾನಸಭೆ ಚುನಾವಣೆಯು ಜಿದ್ದಿನಿಂದ ಕೂಡಿದ್ದು, ಚುನಾವಣೆ ಅಧಿಕಾರಿಗಳು ಎಲ್ಲಾ ಕಡೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಕ್ರಮವನ್ನ ಕೂಡ ವಹಿಸಿದ್ದಾರೆ ಈಗ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+