ಫೋಟೋಗೆ ನಿಂತ ಕನ್ನಡತಿ ಶ್ರೀಲೀಲಾನ 'ಸೈಡಿಗೆ ಹೋಗು' ಅಂತ ಪಕ್ಕಕ್ಕೆ ಕಳಿಸಿದ ಮಹಾರಾಷ್ಟ್ರ ಸಿಎಂ ಪತ್ನಿ, ವಿಡಿಯೋ ವೈರಲ್
ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಕನ್ನಡತಿ ಶ್ರೀಲೀಲಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ನಟಿ ಶ್ರೀಲೀಲಾ ಅವರನ್ನು ಫೋಟೋ ಫ್ರೇಮ್‌ನಿಂದ ಪಕ್ಕಕ್ಕೆ ಸರಿಯುವಂತೆ ಹೇಳಿರುವ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಅಸಲಿಗೆ ಆಗಿದ್ದೇನು?
ವರದಿಗಳ ಪ್ರಕಾರ, ಈ ಯೋಗ ದಿನದ ವಿಶೇಷ ಕಾರ್ಯಕ್ರಮದಲ್ಲಿ ಅಮೃತಾ ಫಡ್ನವಿಸ್ ಅವರು ತಮ್ಮ ಮಗಳು ದಿವಿಜಾ ಅವರೊಂದಿಗೆ ಪಾಲ್ಗೊಂಡಿದ್ದರು. ಇದೇ ವೇದಿಕೆಯಲ್ಲಿ ನಟಿ ಶ್ರೀಲೀಲಾ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದ ನಡುವೆ ಮೂವರೂ ಒಟ್ಟಾಗಿ ಮಾಧ್ಯಮದವರಿಗೆ ಫೋಟೋ ನೀಡಲು ಮುಂದಾದಾಗ, ಅಲ್ಲಿದ್ದ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸಲು ಶುರುಮಾಡಿದರು.

ಆದರೆ, ಈ ವೇಳೆ ಅಲ್ಲಿದ್ದ ಫೋಟೋಗ್ರಾಫರ್ ಒಬ್ಬರು ತಮಗೆ ಕೇವಲ ಅಮೃತಾ ಫಡ್ನವಿಸ್ ಮತ್ತು ಅವರ ಮಗಳ ಫೋಟೋ ಮಾತ್ರ ಬೇಕು ಎಂದು ವಿನಂತಿಸಿದರು ಎನ್ನಲಾಗಿದೆ. ಇದನ್ನು ಕೇಳಿಸಿಕೊಂಡ ಅಮೃತಾ ಅವರು, ತಾಯಿ-ಮಗಳ ಪ್ರತ್ಯೇಕ ಫೋಟೋಗಳಿಗಾಗಿ ಶ್ರೀಲೀಲಾ ಅವರಿಗೆ ಸ್ವಲ್ಪ ಸಮಯ ಪಕ್ಕಕ್ಕೆ ಸರಿಯುವಂತೆ ಹಾಗೂ ಹತ್ತಿರದಲ್ಲೇ ಕುಳಿತುಕೊಳ್ಳುವಂತೆ ಕೈ ಸನ್ನೆ ಮೂಲಕ ಕೇಳಿಕೊಂಡರು. ಇದನ್ನು ಕೇಳಿದ ತಕ್ಷಣವೇ ಶ್ರೀಲೀಲಾ ಅವರು ಅತ್ಯಂತ ಸೌಜನ್ಯದಿಂದಲೇ ಫೋಟೋ ಫ್ರೇಮ್‌ನಿಂದ ದೂರ ಸರಿದರು. ಆ ನಂತರ ಅಮೃತಾ ಮತ್ತು ಅವರ ಮಗಳು ದಿವಿಜಾ ಒಟ್ಟಾಗಿ ಫೋಟೋಗಳಿಗೆ ಪೋಸ್ ನೀಡಿದರು.
SHOCKING Maharashtra CM’s wife disrespects South Star @sreeleela14 😡
— Ustaad Veera Gambhira 🚩 (@PKYtrishira) June 22, 2026
During #YogaDay photo op, #AmrutaFadnavis allegedly pointed at #Sreeleela & asked her to move aside like she didn’t belong.
A top heroine & genuinely kind soul doesn’t deserve this treatment!
Where’s the… pic.twitter.com/GBbClGyl5t
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಈ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ. ಶ್ರೀಲೀಲಾ ಅವರ ಅಭಿಮಾನಿಗಳು ಅಮೃತಾ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೆಲುಗು ಹಾಗೂ ದಕ್ಷಿಣ ಭಾರತದಲ್ಲಿ ಇಷ್ಟೊಂದು ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿರುವ ಸ್ಟಾರ್ ನಟಿಗೆ ಕ್ಯಾಮೆರಾಗಳ ಮುಂದೆಯೇ ಪಕ್ಕಕ್ಕೆ ಹೋಗುವಂತೆ ಹೇಳಿದ್ದು ಅವರಿಗೆ ಮಾಡಿದ ಅಪಮಾನ ಮತ್ತು ಮುಜುಗರದ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ, ಹಲವರು ಅಮೃತಾ ಫಡ್ನವಿಸ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಫೋಟೋಗ್ರಾಫರ್ ಕೇಳಿಕೊಂಡಿದ್ದಕ್ಕಾಗಿಯೇ ಅವರು ಹಾಗೆ ಮಾಡಿದ್ದಾರೆಯೇ ಹೊರತು, ಶ್ರೀಲೀಲಾ ಅವರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶ ಅಮೃತಾ ಅವರಿಗೆ ಇರಲಿಲ್ಲ. ಅದೊಂದು ಸಾಮಾನ್ಯ ಸಂದರ್ಭ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಮೃತಾ ದೇವೇಂದ್ರ ಫಡ್ನವಿಸ್ ಅವರು ಪ್ರಸಿದ್ಧ ಬ್ಯಾಂಕರ್ ಮತ್ತು ಗಾಯಕಿಯಾಗಿದ್ದು, ಮಹಾರಾಷ್ಟ್ರದ ರಾಜಕೀಯ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದರೂ, ನಟಿ ಶ್ರೀಲೀಲಾ ಆಗಲಿ ಅಥವಾ ಅಮೃತಾ ಫಡ್ನವಿಸ್ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈ ವಿಚಾರವಾಗಿ ಪರ-ವಿರೋಧದ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.













Click it and Unblock the Notifications