ಗುಜರಾತ್‌ನಲ್ಲಿ ಕಡಿಮೆ-ಕಾರ್ಬನ್ ಸಿಮೆಂಟ್ ಯೋಜನೆ: ಲೀಲಾಕ್ ಸಂಸ್ಥೆ ಜೊತೆ ಅಂಬುಜಾ ಸಿಮೆಂಟ್ಸ್ ಪಾಲುದಾರಿಕೆ

ಅದಾನಿ ಗ್ರೂಪ್‌ನ ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿ ತಯಾರಿಕಾ ಸಂಸ್ಥೆಯಾದ ಅಂಬುಜಾ ಸಿಮೆಂಟ್ಸ್, ಗುಜರಾತ್‌ನ ಕಚ್ ಜಿಲ್ಲೆಯ ಸಂಘಿಪುರಂ ಕಾರ್ಖಾನೆಯಲ್ಲಿ ವಾಣಿಜ್ಯ ಮಟ್ಟದ ಕಡಿಮೆ-ಕಾರ್ಬನ್ ಸಿಮೆಂಟ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಬ್ರಿಟನ್ (UK) ಮೂಲದ ಕ್ಲೀನ್ ಟೆಕ್ನಾಲಜಿ ಸಂಸ್ಥೆಯಾದ ಲೀಲಾಕ್ ಲಿಮಿಟೆಡ್ (Leilac Limited) ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಸಿಮೆಂಟ್ ಉತ್ಪಾದನೆಯಿಂದ ಹೊರಹೊಮ್ಮುವ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಭಾರತದಲ್ಲಿ ಸುಸ್ಥಿರ ಸಿಮೆಂಟ್ ಉತ್ಪಾದನೆಗೆ ದಾರಿ ಮಾಡಿಕೊಡುವ ಸುಧಾರಿತ ಕಾರ್ಬನ್ ಕ್ಯಾಪ್ಚರ್ ಹಾಗೂ ಹೈಬ್ರಿಡ್ ವಿದ್ಯುದ್ದೀಕರಣ (electrification) ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡುವುದು ಈ ಸಹಭಾಗಿತ್ವದ ಮುಖ್ಯ ಉದ್ದೇಶ.

Ambuja Cements

ಈ ಪ್ರದರ್ಶನಾ ಯೋಜನೆಯನ್ನು ಅಂಬುಜಾ ಸಿಮೆಂಟ್ಸ್‌ನ ವಾರ್ಷಿಕ 66 ಲಕ್ಷ ಟನ್ (6.6 MTPA) ಉತ್ಪಾದನಾ ಸಾಮರ್ಥ್ಯದ ಸಂಘಿ ಸಿಮೆಂಟ್ ಕಾರ್ಖಾನೆಯಲ್ಲಿ ಜಾರಿಗೊಳಿಸಲಾಗುವುದು. ಇದು ಸಿಮೆಂಟ್ ತಯಾರಿಕಾ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿ ಹೊರಹೊಮ್ಮುವ ಕಾರ್ಬನ್ ಡೈಆಕ್ಸೈಡ್ ಅನ್ನು ಸಂಗ್ರಹಿಸುವುದರ ಜೊತೆಗೆ, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸಲು ಲೀಲಾಕ್ ಸಂಸ್ಥೆಯ ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನ ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ಹೀಟಿಂಗ್ ವ್ಯವಸ್ಥೆ ಹೇಗೆ ಸಂಯೋಜಿಸಬಹುದು ಎಂಬುದನ್ನ ಮೌಲ್ಯಮಾಪನ ಮಾಡುತ್ತದೆ.

ಸಂಸ್ಥೆಗಳ ಪ್ರಕಾರ ಈ ತಂತ್ರಜ್ಞಾನವು ಸಿಮೆಂಟ್ ಉತ್ಪಾದನೆಯಲ್ಲಿ ಕಲ್ಲಿದ್ದಲು ಬಳಕೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಪರ್ಯಾಯ ಇಂಧನಗಳ ಸುಲಭ ಬಳಕೆಗೆ ಅವಕಾಶ ಮಾಡಿಕೊಡುತ್ತದೆ. ಈ ಯೋಜನೆ ಯಶಸ್ವಿಯಾದರೆ, ಇದನ್ನು 7ರಿಂದ 8 ಪಟ್ಟು ವಿಸ್ತರಿಸಬಹುದಾಗಿದ್ದು, ವಾರ್ಷಿಕವಾಗಿ 10 ಲಕ್ಷ ಟನ್‌ಗಿಂತಲೂ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಅನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ. ಈ ಯೋಜನೆಯು ಜಗತ್ತಿನಲ್ಲೇ ಅತಿ ದೊಡ್ಡ ವಾಣಿಜ್ಯ ಮಟ್ಟದ ಕಡಿಮೆ-ಕಾರ್ಬನ್ ಸಿಮೆಂಟ್ ಯೋಜನೆಗಳಲ್ಲಿ ಒಂದಾಗಬಹುದು ಎಂದು ಕಂಪನಿಗಳು ತಿಳಿಸಿವೆ.

ಸಿಮೆಂಟ್ ಕ್ಷೇತ್ರವು ಕಡಿಮೆ-ಕಾರ್ಬನ್ ಭವಿಷ್ಯದತ್ತ ಸಾಗಲು ತಾಂತ್ರಿಕ ಆವಿಷ್ಕಾರ ಮತ್ತು ಬಲವಾದ ಉದ್ಯಮ ಸಹಭಾಗಿತ್ವದ ಅಗತ್ಯವಿದೆ ಎಂದು ಅಂಬುಜಾ ಸಿಮೆಂಟ್ಸ್‌ನ ನಿರ್ದೇಶಕರಾದ ಕರಣ್ ಅದಾನಿ ತಿಳಿಸಿದ್ದಾರೆ. "ಲೀಲಾಕ್ ಸಂಸ್ಥೆಯೊಂದಿಗಿನ ನಮ್ಮ ಪಾಲುದಾರಿಕೆಯು, ಉತ್ಪಾದನಾ ಪ್ರಕ್ರಿಯೆಯ ಹೊರಸೂಸುವಿಕೆಯನ್ನು ಕಡಿಮೆ ಮಾಡುವ, ಇಂಧನ ದಕ್ಷತೆಯನ್ನು ಸುಧಾರಿಸುವ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ಬೆಂಬಲ ನೀಡುವ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಅದಾನಿ ಹೇಳಿದ್ದಾರೆ.

ಈ ಉಪಕ್ರಮವು ಅಂಬುಜಾ ಸಿಮೆಂಟ್ಸ್‌ನ ವ್ಯಾಪಕ ಇಂಗಾಲ ಮುಕ್ತಗೊಳಿಸುವ (ಡಿಕಾರ್ಬನೈಸೇಶನ್) ಕಾರ್ಯತಂತ್ರದ ಒಂದು ಭಾಗವಾಗಿದೆ. ಇದು 2050ರ ವೇಳೆಗೆ 'ನೆಟ್-ಜೀರೋ' ಸಾಧಿಸುವ ಕಂಪನಿಯ ಗುರಿಗೆ ಬೆಂಬಲ ನೀಡುತ್ತದೆ, ಈ ಗುರಿಯನ್ನು 'ಸೈನ್ಸ್ ಬೇಸ್ಡ್ ಟಾರ್ಗೆಟ್ಸ್ ಇನಿಶಿಯೇಟಿವ್' ಸಹ ಮಾನ್ಯ ಮಾಡಿದೆ. ಕಂಪನಿಯು ಸುಮಾರು 1 ಗಿಗಾವ್ಯಾಟ್ ಸಾಮರ್ಥ್ಯದ ಸ್ವಂತ ಹಸಿರು ಇಂಧನ ಉತ್ಪಾದನೆಯ ಮೂಲಕ ನವೀಕರಿಸಬಹುದಾದ ಇಂಧನದ ಬಳಕೆಯನ್ನು ವಿಸ್ತರಿಸುತ್ತಿದೆ. ಈ ಸಹಭಾಗಿತ್ವವು ಕಾರ್ಬನ್ ಕ್ಯಾಪ್ಚರ್ ತಂತ್ರಜ್ಞಾನಗಳ ವಾಣಿಜ್ಯ ಬಳಕೆಯನ್ನು ಸುಧಾರಿಸಲಿದೆ ಮತ್ತು ಒಟ್ಟಾರೆ ಸಿಮೆಂಟ್ ಉದ್ಯಮದಾದ್ಯಂತ ದೊಡ್ಡ ಮಟ್ಟದಲ್ಲಿ ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪೂರಕವಾಗಲಿದೆ ಎಂದು ಹೇಳಿದೆ.

ಅಂಬುಜಾ ಸಿಮೆಂಟ್ಸ್ ಸಂಸ್ಥೆಯು ಜಗತ್ತಿನಲ್ಲೇ ಅತಿ ದೊಡ್ಡ ಮತ್ತು ಅತ್ಯಂತ ಸುಧಾರಿತ ಸಿಮೆಂಟ್ ಉತ್ಪಾದನಾ ಜಾಲಗಳಲ್ಲಿ ಒಂದನ್ನು ಮುನ್ನಡೆಸುತ್ತಿದೆ ಎಂದು ಲೀಲಾಕ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡೇನಿಯಲ್ ರೆನ್ನಿ ತಿಳಿಸಿದ್ದಾರೆ. "ಜಾಗತಿಕ ಸಿಮೆಂಟ್ ಉದ್ಯಮಕ್ಕಾಗಿ ಆರ್ಥಿಕವಾಗಿ ಲಾಭದಾಯಕವಾದ, ಸುಲಭವಾಗಿ ಅನುಕರಿಸಬಹುದಾದ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾದ ಪರಿಹಾರವನ್ನು ಪ್ರದರ್ಶಿಸುವ ಗುರಿಯನ್ನು ನಾವು ಒಟ್ಟಾಗಿ ಹೊಂದಿದ್ದೇವೆ" ಎಂದು ರೆನ್ನಿ ಹೇಳಿದ್ದಾರೆ.

ಅಂಬುಜಾ ಸಿಮೆಂಟ್ಸ್ ಪ್ರಸ್ತುತ ಭಾರತದಾದ್ಯಂತ 24 ಸಂಯೋಜಿತ ಉತ್ಪಾದನಾ ಘಟಕಗಳು ಮತ್ತು 22 ಗ್ರೈಂಡಿಂಗ್ ಯುನಿಟ್‌ಗಳ ಮೂಲಕ ವಾರ್ಷಿಕ 10.9 ಕೋಟಿ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. 2050 ರ ವೇಳೆಗೆ 'ನೆಟ್-ಜೀರೋ' ಸಾಧಿಸುವ ತನ್ನ ಬದ್ಧತೆಯ ಭಾಗವಾಗಿ ಕಂಪನಿಯು ನವೀಕರಿಸಬಹುದಾದ ಇಂಧನ, ವೇಸ್ಟ್ ಹೀಟ್ ರಿಕವರಿ ಸಿಸ್ಟಮ್ಸ್ ಮತ್ತು ಇತರ ಸುಸ್ಥಿರ ಉಪಕ್ರಮಗಳಲ್ಲಿ ಹೂಡಿಕೆ ಮಾಡುತ್ತಿದೆ.

ಆಸ್ಟ್ರೇಲಿಯಾದ ತಂತ್ರಜ್ಞಾನ ಸಂಸ್ಥೆಯಾದ ಕ್ಯಾಲಿಕ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಲೀಲಾಕ್, ಸಿಮೆಂಟ್ ಮತ್ತು ಸುಣ್ಣದ ಉತ್ಪಾದನೆಯಂತಹ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಷ್ಟಕರವಾಗಿರುವ ಉದ್ಯಮಗಳಿಗೆ ಕಾರ್ಬನ್ ಕ್ಯಾಪ್ಚರ್ ಮತ್ತು ವಿದ್ಯುದ್ದೀಕರಣದ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ. ಕೈಗಾರಿಕಾ ಇಂಗಾಲ ಮುಕ್ತಗೊಳಿಸುವ ಪ್ರಯತ್ನಗಳಿಗೆ ಬೆಂಬಲ ನೀಡಲು ಕಂಪನಿಯು ಪ್ರಸ್ತುತ ಯುರೋಪ್, ಅಮೆರಿಕ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶಗಳಾದ್ಯಂತ ಹಲವಾರು ಕೈಗಾರಿಕಾ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+