Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ
ಬೆಂಗಳೂರು: ಯುಗಾದಿ ಹಬ್ಬ ಬೆನ್ನಲ್ಲೆ ರಂಜಾನ್ ಹಬ್ಬ ಎದುರಾಗಲಿದೆ. ಈ ಪ್ರಯುಕ್ತ ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆಯ ಬಿ.ಬಿ ಜಂಕ್ಷನ್ ಹತ್ತಿರದ ಮಸೀದಿ ಮತ್ತು ಚಾಮರಾಜಪೇಟೆ 1ನೇ ಮುಖ್ಯ ರಸ್ತೆಯ ಅಡ್ಡರಸ್ತೆ 7ನೇ ಕಟ್ಟಡದ ಮೈದಾನದಲ್ಲಿ ಮಾರ್ಚ್ 21ರಂದು ಮುಸ್ಲಿಂ ಬಾಂಧವರು ಸಾಮೂಹಿಕ "ಪ್ರಾರ್ಥನೆ' ಸಲ್ಲಿಸುತ್ತಾರೆ. ಈ ಪ್ರಯುಕ್ತ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಒಂದಷ್ಟು ಸಲಹೆ ನೀಡಿದ್ದಾರೆ.
ಅಂದು "ಪ್ರಾರ್ಥನೆ' ಸಲ್ಲಿಸಲು ಸುಮಾರು 15 ರಿಂದ 20 ಸಾವಿರ ಮುಸ್ಲಿಮರು ಸೇರುವ ಸಾಧ್ಯತೆ ಇದೆ. ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ. ಕೆಳಕಂಡಂತೆ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಇಲ್ಲಿ ವಾಹನಗಳ ಸಂಚಾರ ತಾತ್ಕಾಲಿಕ ನಿರ್ಬಂಧ
ಮಾರ್ಚ್ 21 ರಂದು ಬೆಳಗ್ಗೆ 08:00 ಗಂಟೆಯಿಂದ ಪ್ರಾರ್ಥನೆ ಮುಗಿಯುವವರೆಗೆ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೈಸೂರು ರಸ್ತೆಯ ಟೋಲ್‌ಗೇಟ್ ಜಂಕ್ಷನ್ ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಮೇಲ್ಸೇತುವೆ ಮೇಲ್ಭಾಗದಿಂದ ಟೌನ್‌ಹಾಲ್‌ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ಮೇಲ್ಸೇತುವೆ ಮೇಲೆ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್ ಗೇಟ್ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗಗಳು
ಮೈಸೂರು ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಬ್ಯಾಟರಾಯನಪುರ ಸಂಚಾರ ಠಾಣಾ ಸರಹದ್ದಿನ ಕಿಮ್ಕೋ ಜಂಕ್ಷನ್‌ನಲ್ಲಿ ಎಡ ತಿರುವು ಜೊತೆಗೆ ವೆಸ್ಟ್ ಆಫ್ ಕಾರ್ಡ್ ರಸ್ತೆ ಮುಖಾಂತರ ಟೋಲ್ ಗೇಟ್ ಬಲ ತಿರುವು ಮಾಗಡಿ ರಸ್ತೆ ಮುಖಾಂತರ ಸಾಗಿ, ಹುಣಸೇಮರ ಜಂಕ್ಷನ್ ಬಲ ತಿರುವು ಸಿರ್ಸಿ ವೃತ್ತದ ಬಳಿ ಎಡ ತಿರುವು ಪಡೆದು ಟೌನ್ ಹಾಲ್ ಕಡೆಗೆ ಸಾಗಬಹುದು.
ಟೌನ್‌ಹಾಲ್ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಫ್ಲೈಓವರ್ ಕೆಳಗಡೆ ಸರ್ವಿಸ್ ರಸ್ತೆ ಭಾರಿ ವಾಹನಗಳು ವೆಟರ್ನರಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂಡ್ ಶೆಡ್ ರಸ್ತೆ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್‌ನಲ್ಲಿ ಬಲ ತಿರುವು ಜೆ.ಜೆ ನಗರ-ಟ್ಯಾಂಕ್ ಬಂಡ್ ರಸ್ತೆ - ಬಿನ್ನಿಮಿಲ್ ಜಂಕ್ಷನ್ ಹುಣಸೇಮರ ಮೂಲಕ ಮಾಗಡಿ ರಸ್ತೆ, ಸಾಗಿ ಟೋಲ್‌ಗೇಟ್ ಬಳಿ ಎಡ ತಿರುವು ಪಡೆದು ವೆಸ್ಟ್ ಆಫ್ ಕಾರ್ಡ್ ರಸ್ತೆ ಮುಖಾಂತರ ಸಾಗಿ ಮೈಸೂರು ಕಡೆಗೆ ಸಾಗುವುದು.
ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವಂತಹ ವಾಹನಗಳು ಚಾಮರಾಜಪೇಟೆ 1ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ ಮೂಲಕ ಮೈಸೂರು ರಸ್ತೆ, ವೆಟರ್ನರಿ ಜಂಕ್ಷನ್ -ಗೂಡ್ ಶೆಡ್ ರಸ್ತೆ ಮೂಲಕ ಸಾಗುವಂತೆ ಚಾಮರಾಜಪೇಟೆ ಟ್ರಾಫಿಕ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications