SWR: ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ
ಬೆಂಗಳೂರು: ಉತ್ತರ ಕರ್ನಾಟಕದಿಂದ ನಿತ್ಯ ಕರಾವಳಿಯ ಪ್ರಮುಖ ನಗರವಾರದ ಮಂಗಳೂರಿಗೆ ಸಂಚಾರ ಸೇವೆ ನೀಡುತ್ತಿದ್ದ 'ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು' ಸಂಚಾರ ಭಾಗಶಃ ರದ್ದಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಉಂಟಾದ ಈ ಅಡಚಣೆಗೆ ಗಮನದಲ್ಲಿಟ್ಟುಕೊಂಡು ಈ ಮಾರ್ಗದ ರೈಲು ಪ್ರಮಾಣಿಕರು ತಮ್ಮ ಪ್ರಯಾಣ ಯೋಜಿಸುವಂತೆ ಅವರು ಕೋರಿದ್ದಾರೆ.
ನೈಋತ್ಯ ರೈಲ್ವೆ (South Western Railway) ಹುಬ್ಬಳ್ಳಿ ಜಂಕ್ಷನ್ ವ್ಯಾಪ್ತಿಯಲ್ಲಿ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಮಂಗಳೂರು ಸೆಂಟ್ರಲ್ ಮತ್ತು ವಿಜಯಪುರ ನಡುವಿನ ರೈಲು ಸಂಚಾರದಲ್ಲಿ ಮಾರ್ಚ್ 25ರವರೆಗೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ರೈಲು (17378) ಮಾರ್ಚ್ 19ರಿಂದ ಮಾರ್ಚ್ 24ರವರೆಗೆ ವಿಜಯಪುರದ ಬದಲು ಬಾಗಲಕೋಟೆಯಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ಮೂಲಕ ಬಾಗಲಕೋಟೆ ಮತ್ತು ವಿಜಯಪುರ ಮಧ್ಯದ ಸಂಚಾರ ಭಾಗಶಃ ರದ್ದುಗೊಳಿಸಲಾಗಿದೆ.

ಇನ್ನೂ ಮರಳಿ ಅದೇ ದಿನಕ್ಕಿನಲ್ಲಿ ಬರುವ ವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು (17377) ಮಾರ್ಚ್ 20 ರಿಂದ ಮಾರ್ಚ್ 25ರವರೆಗೆ ವಿಜಯಪುರದ ಬದಲು ಬಾಗಲಕೋಟೆ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಸಂಜೆ 5 ಗಂಟೆಗೆ ಬಾಗಲಕೋಟೆ ರೈಲು ನಿಲ್ದಾಣದಿಂದ ಈ ರೈಲು ಮಂಗಳೂರಿನ ಕಡೆಗೆ ಪ್ರಯಾಣ ಆರಂಭಿಸುತ್ತದೆ. ವಿಜಯಪುರ ಮತ್ತು ಬಾಗಲಕೋಟೆ ನಡುವೆ ಈ ರೈಲಿನ ಸಂಚಾರ ಇರುವುದಿಲ್ಲ.
ಒಂದು ವೇಳೆ ಮಂಗಳೂರಿಗೆ ತೆರಳಬೇಕಾದರೆ ವಿಜಯಪುರ, ಬಸವನ ಬಾಗೇವಾಡಿ ರೋಡ್, ಆಲಮಟ್ಟಿ ನಿಲ್ದಾಣಗಳ ಪ್ರಯಾಣಿಕರು ಬಾಗಲಕೋಟೆಗೆ ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದು. ಉತ್ತರ ಕರ್ನಾಟಕದಿಂದ ಕರಾವಳಿಯ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಇದಾಗಿದೆ.
ಈ ಮಾರ್ಗದ ಪ್ರಯಾಣಿಕರಿಗೆ ಎಂದಿನಂತೆ ರೈಲು ಲಭ್ಯ
ವಿಜಯಪುರ-ಮಂಗಳೂರು ರೈಲು ಮೇಲಿನ ನಿಲ್ದಾಣಗಳ ಜೊತೆಗೆ ಗುಳೇದಗುಡ್ಡ ರಸ್ತೆ ಮೂಲಕ ಬಾದಾಮಿ, ಹೋಳೆ ಆಲೂರು, ಮಲ್ಲಾಪುರ, ಗದಗ ಜಂಕ್ಷನ್, ಅಣ್ಣಿಗೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ ಜಂಕ್ಷನ್, ಯಲವಿಗಿ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು ಜಂಕ್ಷನ್, ಬಿರೂರು ಜಂಕ್ಷನ್, ಕಡೂರು, ಅರಸೀಕೆರೆ ಜಂಕ್ಷನ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ ಮಾರ್ಗವಾಗಿ ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪುತ್ತದೆ. ಈ ಮೇಲಿನ ನಿಲ್ದಾಣಗಳ ಜನರಿಗೆ ಎಂದಿನಂತೆ ಈ ರೈಲಿನ ಸೇವೆ ಲಭ್ಯವಿದೆ ಎಂದು ರೈಲು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications