ಸಿಂಹಿಣಿಯ ಬೆನ್ನು ತಾಗಿಸಿ ಉತ್ತೇಜನ ನೀಡಿದರೆ ಸುಖದ ಹಾದಿ
ಮದುವೆಯ ಸಂದರ್ಭದಲ್ಲಿ ಜ್ಯೋತಿಷಿಗಳ ಬಳಿಗೆ ಹೋಗಿ ಗಂಡು- ಹೆಣ್ಣಿನ ಜಾತಕ ತೋರಿಸಿ, ಇಬ್ಬರಿಗೂ ಹೊಂದಾಣಿಕೆ ಹೇಗಿರುತ್ತದೆ ಎಂದು ಕೇಳುವುದು ವಾಡಿಕೆ. ಅದೇ ರೀತಿ ಕೂಟಗಳು ಮತ್ತು ಗುಣ ಇಷ್ಟು ಎಂದು ಲೆಕ್ಕ ಹಾಕಿ ಜ್ಯೋತಿಷಿಗಳು ಬರೆದು ಕೊಟ್ಟು, ಮದುವೆ ಮಾಡಬಹುದೋ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ. ಈ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.
ಗುಣ-ಕೂಟ ಇವೆಲ್ಲ ಯಾಕೆ ನೋಡಬೇಕ್ರಿ, ಇಬ್ಬರು ಪರಸ್ಪರ ಒಪ್ಪಿದ ಮೇಲೆ ಪಂಚಾಂಗ ನೋಡಿಕೊಂಡು ಏನು ಹೇಳುವುದಕ್ಕೆ ಸಾಧ್ಯ ಎಂದು ಪ್ರಶ್ನೆ ಮಾಡುವವರೂ ಇದ್ದಾರೆ. ಖಂಡಿತಾ ಹೇಳಬಹುದು. ಗಂಡು-ಹೆಣ್ಣಿನ ಮಧ್ಯೆ ಸಾಮರಸ್ಯ ಸಾಧ್ಯವೇ ಎಂಬುದನ್ನು ತಿಳಿಯುವುದಕ್ಕೆ ಅಂತಲೇ ಈ ಗುಣ- ಕೂಟ ಎಂಬುದನ್ನೆಲ್ಲ ನೋಡುವುದು.
ಗ್ರಹಮೈತ್ರಿಕೂಟ, ನಾಡಿಕೂಟ, ಯೋನಿಕೂಟ ಎಂಬುದೆಲ್ಲ ಬಹಳ ಮುಖ್ಯವಾಗಿ ಗಮನಿಸಲೇಬೇಕು. ಇರಲಿ, ಇಂದಿನ ಲೇಖನದಲ್ಲಿ ಸಿಂಹ ರಾಶಿಯ ಸ್ತ್ರೀಯರ ಪ್ರಣಯದ ಆದ್ಯತೆಗಳು ಹೇಗಿರುತ್ತವೆ? ಅವರಿಗೆ ಯಾವ ಸ್ಪರ್ಶ ಹೆಚ್ಚು ಉದ್ದೀಪನಗೊಳಿಸುತ್ತದೆ ಮತ್ತಿತರ ವಿವರಗಳನ್ನು ನೋಡೋಣ. ಈ ಲೇಖನಕ್ಕೆ ಅಶ್ಲೀಲದ ಸೋಂಕಿಲ್ಲ. ಇದನ್ನು ಜ್ಯೋತಿಷ್ಯದ ಹಿನ್ನೆಲೆಯಲ್ಲೇ ಗಮನಿಸಬೇಕು.

ಇಲಿ ಹಾಗೂ ಹಸು
ಮಖಾ, ಪುಬ್ಬಾ ಹಾಗೂ ಉತ್ತರಾ ಫಲ್ಗುಣಿ ನಕ್ಷತ್ರದ ಒಂದು ಪಾದ ಸೇರಿ ಸಿಂಹರಾಶಿ ಆಗುತ್ತದೆ. ಇನ್ನು ಯೋನಿ ಕೂಟದ ವಿಚಾರಕ್ಕೆ ಬಂದರೆ, ಮಖಾ ಹಾಗೂ ಪುಬ್ಬಾ ನಕ್ಶ್ಶತ್ರ ಇಲಿಯಾದರೆ, ಉತ್ತರಾ ಫಲ್ಗುಣಿ ನಕ್ಷತ್ರಕ್ಕೆ ಹಸು ಆಗುತ್ತದೆ. ಇವುಗಳ ಆಧಾರದಲ್ಲಿ ಈ ರಾಶಿಯ ಸ್ತ್ರೀಯರ ಲೈಂಗಿಕ ಆದ್ಯತೆಗಳನ್ನು ತಿಳಿದುಕೊಳ್ಳಬಹುದು.

ಬೆನ್ನು ಭಾಗ ಭಾವನೆಗಳನ್ನು ಕೆರಳಿಸುತ್ತದೆ
ಸಿಂಹ ರಾಶಿ ಸ್ತ್ರೀಯರ ಬೆನ್ನು ಭಾಗ ಭಾವನೆಗಳನ್ನು ಕೆರಳಿಸುತ್ತದೆ. ಜವಾಬ್ದಾರಿ ನಿರ್ವಹಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡ ಈ ಮಹಿಳೆಯರ ಬೆನ್ನಿನ ಭಾಗದಲ್ಲಿ ಮೃದುವಾಗಿ ಓಡಾಡುವ ಕೈ ಮುಂದಿನ ಕ್ರಿಯೆಗೆ ಇವರನ್ನು ಸನ್ನದ್ಧಗೊಳಿಸುತ್ತದೆ. ಆದರೆ ಇವರು ಬಾಯಿ ಬಿಟ್ಟು ಏನನ್ನಾದರೂ ಹೇಳುವುದೇ ಅಪರೂಪ.

ಮೂಡ್ ಗಮನಿಸಿ
ಈ ರಾಶಿ ಹೆಣ್ಣುಮಕ್ಕಳು ಪತಿಯ ಮೇಲೆ ಸಂಸಾರದ ಹೆಚ್ಚಿನ ಒತ್ತಡ ಹಾಕಲು ಇಷ್ಟಪಡುವುದಿಲ್ಲ. ಆದರೆ ಎಲ್ಲಕ್ಕೂ ತನ್ನನ್ನು ಕೇಳಬೇಕು ಎಂದು ಬಯಸುತ್ತಾರೆ. ಪ್ರಣಯದ ವಿಷಯದಲ್ಲೂ ಅಷ್ಟೇ. ಅವರ ಭಾವನೆ ಹಾಗೂ ಮೂಡ್ ನ ನೋಡಿ ಪತಿ ರಾಯರು ವರ್ತಿಸದಿದ್ದರೆ ಸಿಂಹಿಣಿಯ ಕೋಪ ವಿಪರೀತವಾಗುತ್ತದೆ.

ಆಧುನಿಕ ಸೌಲಭ್ಯ ಇಷ್ಟ ಪಡುತ್ತಾರೆ
ವಿಪರೀತ ನೇರವಾಗಿ ಮಾತನಾಡುವ ಈ ರಾಶಿಯ ಸ್ತ್ರೀಯರಿಗೆ ಕೊಟ್ಟ ಮಾತು ಈಡೇರಿಸದಿದ್ದರಂತೂ ರಂಪ-ರಾಮಾಯಣ ಕಟ್ಟಿಟ್ಟ ಬುತ್ತಿ. ನಗರ ಪ್ರದೇಶ, ರೆಸಾರ್ಟ್, ಸ್ವಿಮಿಂಗ್ ಪೂಲ್...ಒಟ್ಟಾರೆ ಆಧುನಿಕ ಸೌಲಭ್ಯಗಳು ಇರುವಂಥ ಸ್ಥಳಗಳಲ್ಲಿ ಇವರು ಹೆಚ್ಚಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ಭವಿಷ್ಯದ ಬಗ್ಗೆಯೇ ವಿಪರೀತ ಯೋಚನೆ ಮಾಡುತ್ತಾರೆ. ಈ ವಿಷಯದಲ್ಲಿ ಉತ್ತರಾ ನಕ್ಷತ್ರದ ಸ್ತ್ರೀಯರು ಸ್ವಲ್ಪ ಭಿನ್ನ.












Click it and Unblock the Notifications