ಹೊಕ್ಕುಳ ಮೇಲಿಂದ ಎದೆಯವರೆಗೆ ಹಬ್ಬಿದೆ 'ಕನ್ಯಾ' ಉನ್ಮಾದ
ಜ್ಯೋತಿಷ್ಯ ಶಾಸ್ತ್ರದ ಮಹತ್ವವನ್ನು ಪುರಾಣ ಕಾಲದಿಂದಲೂ ಕಾಣಬಹುದು. ಮುಹೂರ್ತ, ಫಲ ಜ್ಯೋತಿಷ್ಯ ಹೀಗೆ ಅದರಲ್ಲೂ ವಿವಿಧ ಭಾಗಗಳಿವೆ. ಇನ್ನು ಈಗಿನ ಕಾಲಘಟ್ಟದಲ್ಲಿ ಜ್ಯೋತಿಷ್ಯದ ಬಗ್ಗೆ ಎರಡೂ ಬಗೆಯ ಅಭಿಪ್ರಾಯವನ್ನೂ ನಾವು ಕೇಳಬಹುದು. ಕೆಲವರಂತೂ ತಮ್ಮ ಅನುಕೂಲಸಿಂಧುವಾಗಿ ಈ ಶಾಸ್ತ್ರವನ್ನು ಬಳಸುತ್ತಾರೆ.
ಬೇಕೆಂದಾಗ ನಂಬುವುದು, ಖಾಸಗಿಯಾಗಿ ಎಲ್ಲಕ್ಕೂ ಮುಹೂರ್ತ ಮತ್ತೊಂದು ಅನುಸರಿಸುವುದು, ಸಾರ್ವಜನಿಕವಾಗಿ ಅದನ್ನು ಹೀಗಳೆಯುವುದು...ಹೀಗೆ ತಮಗೆ ಬೇಕಾದಂತೆ ಮಾತನಾಡುತ್ತಾರೆ. ಆದರೆ ಈ ರೀತಿಯ ನಡವಳಿಕೆಯಿಂದ ಜ್ಯೋತಿಷ್ಯದ ಮಹತ್ವಕ್ಕೇನೂ ಕುಂದು ಉಂಟಾಗಿಲ್ಲ. ಪ್ರಾಮುಖ್ಯಕ್ಕೇನೂ ಮುಕ್ಕಾಗಿಲ್ಲ. ಈ ಶಾಸ್ತ್ರದ ವಿಸ್ತಾರ ಕೂಡ ಅಗಾಧವಾದದ್ದು.
ದಾಂಪತ್ಯದ ವಿಚಾರಕ್ಕೆ ಬಂದರೆ ಗಂಡು- ಹೆಣ್ಣಿನ ಜಾತಕದ ಹೊಂದಾಣಿಕೆ ಬಹಳ ಮುಖ್ಯ. ಸಂಸಾರದಲ್ಲಿ ಸಂತೋಷ ಮನೆ ಮಾಡಬೇಕು ಅಂದರೆ ಗಂಡು-ಹೆಣ್ಣು ಇಬ್ಬರ ಜಾತಕದ ಮಧ್ಯೆ ಅದ್ಭುತ ಎನಿಸುವಂಥ ಹೊಂದಾಣಿಕೆ ಇರಬೇಕು. ಅಶ್ಲೀಲದ ಸೋಂಕು ತಾಗದಂತೆ ದಂಪತಿ ಮಧ್ಯದ ಲೈಂಗಿಕ ಜೀವನಕ್ಕೆ ಪೂರಕ ಆಗಬಹುದಾದ ಲೇಖನ ಇದು.
ಯಾವ ರಾಶಿ ಸ್ತ್ರೀಯರ ಪ್ರಣಯ ಉತ್ತೇಜಕ ಯಾವುದು ಎಂಬುದರ ಸರಣಿಯ ಮುಂದುವರಿದ ಭಾಗವನ್ನು ಈ ದಿನ ಓದಲಿದ್ದೀರಿ. ಈ ತನಕ ಮೇಷದಿಂದ ಸಿಂಹ ರಾಶಿಯ ಸ್ತ್ರೀಯರ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ಕನ್ಯಾ ರಾಶಿಯ ಸ್ತ್ರೀಯರ ಆದ್ಯತೆಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಡಲಾಗುವುದು.

ಹಸು, ಎಮ್ಮೆ, ಹುಲಿ
ಉತ್ತರಾ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರದ ನಾಲ್ಕು ಪಾದ ಹಾಗೂ ಚಿತ್ತಾ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಸೇರಿ ಕನ್ಯಾ ರಾಶಿ ಆಗುತ್ತದೆ. ಇವುಗಳಿಗೆ ಯೋನಿ ಕೂಟವಾಗಿ ಉತ್ತರಾ ನಕ್ಷತ್ರಕ್ಕೆ ಹಸು, ಹಸ್ತಾಕ್ಕೆ ಎಮ್ಮೆ ಮತ್ತು ಚಿತ್ತಾಗೆ ಹುಲಿ ಬರುತ್ತದೆ.

ಸೂಕ್ಷ್ಮ ಹಾಗೂ ಭಾವನೆ ಕೆರಳಿಸುವ ಜಾಗ
ಕನ್ಯಾ ರಾಶಿಯ ಸ್ತ್ರೀಯ ಎದೆಯ ಕೆಳ ಭಾಗದಿಂದ ಆರಂಭವಾಗಿ ಸೊಂಟದವರೆಗೆ ತುಂಬ ಸೂಕ್ಷ್ಮವಾದ ಮತ್ತು ಭಾವನೆಗಳನ್ನು ಕೆರಳಿಸುವ ಜಾಗ. ಬೆರಳಿನಿಂದ ಸವರುತ್ತಾ ಇಷ್ಟಿಷ್ಟಾಗಿ ಉದ್ರೇಕಿಸುತ್ತಾ ಸಾಗಿದಂತೆ ಮುಂದಿನ ಕ್ರಿಯೆಗೆ ಸಿದ್ಧತೆ ಆರಂಭವಾದಂತೆಯೇ. ಹೊಕ್ಕಳು ಹಾಗೂ ಅದರ ಮೇಲ್ಭಾಗದಲ್ಲಿ ಎದೆಯವರೆಗೆ ಸ್ಪರ್ಶದಿಂದ ಸಂಗಾತಿಯನ್ನು ಸಿದ್ಧಗೊಳಿಸಿ.

ಸ್ವಚ್ಛತೆ, ಕ್ರಮ ಬದ್ಧತೆಗೆ ಆದ್ಯತೆ
ಕನ್ಯಾ ರಾಶಿಯ ಸ್ತ್ರೀಯರು ಪ್ರತಿ ವಿಚಾರದಲ್ಲೂ ಅದ್ಭುತವಾದದ್ದನ್ನೇ ಬಯಸುತ್ತಾರೆ. ಸ್ವಚ್ಛತೆ ಹಾಗೂ ಕ್ರಮಬದ್ಧ ಆಗಿರುವುದು ಈ ರಾಶಿಯವರ ಆದ್ಯತೆ. ಪಾಂಗಿತವಾಗಿ, ಸಮಾಧಾನವಾಗಿ ಕೆಲಸ ಆಗಬೇಕು ಹಾಗೂ ಅದರಿಂದ ತೃಪ್ತಿ ಸಿಗಬೇಕು ಅನ್ನೋದು ಇವರ ಗುರಿ.

ಏಕಾಂತ ಬಯಸುವ 'ಕನ್ಯೆ'
ಆದರೆ, ಈ ಸ್ತ್ರೀಯರು ಬಹಳ ಬೇಗ ನಿರಾಸೆಗೆ ಒಳಗಾಗುತ್ತಾರೆ. ಏಕಾಂತವನ್ನು ಬಯಸಿ ಚಿಪ್ಪಿನೊಳಗೆ ಸೇರಿಬಿಟ್ಟರೆ ಇವರನ್ನು ಮತ್ತೆ ಅದರಿಂದ ಆಚೆ ಕರೆತರುವುದು ತುಂಬ ಕಷ್ಟ. ಅದೇ ರೀತಿ, ನಾನು ಒಂಟಿಯಾಗಿ ಇರಲು ಬಯಸುತ್ತೇನೆ ಅನ್ನೋದನ್ನು ಅವರು ತಿಳಿಸಿದ ನಂತರವೂ ಮೇಲೆ ಬಿದ್ದು ಮಾತನಾಡಿಸಲು ಯತ್ನಿಸಬೇಡಿ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications