Viral: ಭಾರತದ ಸಲೂನ್‌ನಲ್ಲಿ ಫೇಸ್‌ ಮಸಾಜ್ ಬಿಲ್‌ ನೋಡಿ ಬೆರಗಾದ ರಷ್ಯಾ ಸುಂದರಿ!

Viral News: ಭಾರತದಲ್ಲಿ ಬಹುತೇಕ ಎಲ್ಲ ವಸ್ತು, ಸೇವೆಗಳ ದರಗಳ ಹೆಚ್ಚಾಗಿವೆ ಎಂದು ನಾವು ಮಾತನಾಡುತ್ತೇವೆ. ವಿದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದ ಬೆಲೆ ಕೈಗೆಟುಕುವ ದರದಲ್ಲಿವೆ ಎಂದು ಸ್ವತಃ ವಿದೇಶಿ ಯುವತಿ ತಿಳಿಸಿದ್ದಾಳೆ. ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ರಷ್ಯಾ ದೇಶದ ಸ್ಪರದ್ರೂಪಿ ಯುವತಿಯೊಬ್ಬಳು ಪುರುಷನಿದ್ದ ಸಲೂನ್‌ ಹೋಗಿ ಫೇಸ್ ಮಸಾಜ್‌ ಮಾಡಿಸಿಕೊಂಡು ಬಳಿಕ ಅಚ್ಚರಿ ವ್ಯಕ್ತಪಡಿಸಿದ್ದಾಳೆ.

ದೇಶದಲ್ಲಿ ಈ ಭಾರಿ ಹೆಚ್ಚು ಬಿಸಿಲಿನ ವಾತಾವರಣವೇ ದಾಖಲಾಗುತ್ತಿದೆ. ಇಲ್ಲಿನ ಬಿಸಿಲಿನ ಮಧ್ಯೆ ಸುತ್ತಾಡಿ ಸುತ್ತಾಡಿ ಕಂಗೆಟ್ಟಿದ್ದ ರಷ್ಯಾದ ಪ್ರವಾಸಿ ಮಹಿಳೆ, ಪ್ರವಾಸದ ಸಮಯದಲ್ಲಿ ತ್ವರಿತ ಫೇಸ್‌ ಮಸಾಜ್ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಅವಳಿಗೆ ತಾವಿದ್ದ ಸ್ಥಳದಲ್ಲಿ ಮಹಿಳೆಯರು ಇರುವ ಸಲೂನ್ ಶಾಪ್ ಸಿಕ್ಕಿಲ್ಲ. ವಿಧಿ ಇಲ್ಲದೇ ಪುರುಷನಿದ್ದ ಸಲೋನ್‌ ಸಲೀಸಾಗಿ ಒಳಹೊಕ್ಕು ಫೇಸ್ ಮಸಾಜ್ ಮಾಡಿಕೊಂಡಿದ್ದಾಳೆ. ಬಳಿಕ ಬಿಲ್ ಕೇಳಿ ಒಂದು ಕ್ಷಣ ಆಶ್ಚರ್ಯಗೊಂಡಿದ್ದಾಳೆ.

Russian Tourist Girl

ಬಿಲ್ ಮೊತ್ತ ಪದೇ ಪದೇ ಕೇಳಿದ ಯುವತಿ!

ರಷ್ಯಾದಂತೆ ನೇರವಾಗಿ ಸಲೂನ್ ಒಳ ಪ್ರವೇಶಿಸಿದ ಬಳಿಕ ಈ ರಷ್ಯಾ ಸುಂದರಿಗೆ ಇದು ಪುರುಷರ ಸಲೂನ್ ಎಂದು ಗೊತ್ತಾಗಿದೆ. ಸಲೂನ್ ಸಿಬ್ಬಂದಿ ಆಕೆಗೆ ಫೇಸ್ ಮಸಾಜ್ ಮಾಡಿದ್ದು, ಬಿಲ್ 100 ರೂಪಾಯಿ ಕೊಡಿ ಎಂದಿದ್ದಾನೆ. ಈ ಯುವತಿ ಎಷ್ಟು?...ಎಷ್ಟು? ಎಂದು ಪದೇ ಪದೇ ಬಿಲ್ ಮೊತ್ತವನ್ನು ಆಚ್ಚರಿ ಎಂಬಂತೆ ಕೇಳಿದ್ದಾಳೆ.

ರಷ್ಯಾದಲ್ಲಾಗಿದ್ರೆ 5000 ರೂ, ದೇಶದಲ್ಲಿ 100 ರೂ.!

ರಷ್ಯಾದಲ್ಲಿ ಇದೇ ಫೇಸ್‌ ಮಸಾಜ್‌ಗೆ ಆಗಿದ್ದರೆ ಸುಮಾರು 5000 ರೂಪಾಯಿ ಬಿಲ್ ಆಗುತ್ತಿತ್ತು. ಭಾರತದಲ್ಲಿ ಆದರೆ ಕೇವಲ 100 ರೂ. ಬಿಲ್ ಆಗಿದ್ದನ್ನು ಕಂಡು ಆಕೆ ಆಘಾತಕ್ಕೊಳಗಾದಳು. ಈ ದೇಶದಲ್ಲಿ ಇಷ್ಟು ಕಡಿಮೆ ಬೆಲೆಗೆ ಇದೆಲ್ಲ ಸೇವೆ ಸಿಗುತ್ತಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾಳೆ. ಎರಡು ದೇಶಗಳ ನಡುವಿನ ವ್ಯತ್ಯಾಸ ಗಮನಿಸಿದ ಯುವತಿ, ಬಿಲ್ ಕೊಟ್ಟು ಸಂತಸದಿಂದಲೇ ಹೊರ ನಡೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾನದಲ್ಲಿ ಆಕೆ ವಿಡಿಯೋ ಹಂಚಿಕೊಂಡಿದ್ದಾರೆ. ಆಕೆ ಸಲೋನ್ ಒಳಗಿದ್ದ ಫೋಟೋಗಳು ಹರಿದಾಡುತ್ತಿವೆ.

ಮಸಾಜ್ ಬಳಿಕ ಯುವತಿ ಬಿಲ್ ಕೇಳಿದಾಗ ಸಾವಿರಾರು ರೂಪಾಯಿ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಒಟ್ಟು ಮೊತ್ತು ಇಷ್ಟು ಕಡಿಮೆ ಎಂದು ಗೊತ್ತಾಗುತ್ತಿದ್ದಂತೆ ಬೇಗ ನಂಬದೇ ಪದೇ ಪದೇ ಬಿಲ್ ಮೊತ್ತೆ ಕೇಳಿದ್ದಾರೆ. ಮೊದಲಿಗೆ ಬಿಲ್ ಮೊತ್ತವನ್ನು ನಂಬಿರಲಿಲ್ಲ ಎಂದು ಆರಾಧ್ಯ ಎಂಬುವವರು ಎಕ್ಸ್‌ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ, ಭಾರತದಲ್ಲಿನ ಈ ಭಾರಿ ಹಣದ ವ್ಯತ್ಯಾಸ ಬಗ್ಗೆ ಸತಃ ಯುವತಿ ವಿಡಿಯೋ ಮಾಡಿದ್ದಾರೆಂದು ಆರಾಧ್ಯ ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಈ ಪೋಟೋ, ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೆಲವು ಸೇವೆಗಳು ಎಷ್ಟು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ಇದು ನಮ್ಮ ಪುಣ್ಯ ಎಂಬಂತೆ ಎಂದು ಅನೇಕ ಬಳಕೆದಾರರು ಚರ್ಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+