Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ
Gold Silver Price Today: ಜನರು ಯುಗಾದಿ ಹಬ್ಬದ (Ugadi 2026) ಸಂಭ್ರಮದಲ್ಲಿದ್ದಾರೆ. ಹೊಸ ವರ್ಷದ ಈ ಹಬ್ಬದ ವೇಳೆ ಚಿನ್ನ ಬೆಳ್ಳಿ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಸತತ ಎರಡನೇ ದಿನವೂ ಚಿನ್ನದ ಹಾಗೂ ಬೆಳ್ಳಿಯ ದರದಲ್ಲಿ ಭರ್ಜರಿ ಕುಸಿತವಾಗಿದೆ. ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿರುವ ಈ ಎರಡು ಲೋಹಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಇಂದು ಮಾರ್ಚ್ 19ರಂದು ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ನಗರಗಳಲ್ಲಿ ದರ ಎಷ್ಟಿದೆ, ಇಳಿಕೆ ಆಗಿದ್ದೆಷ್ಟು ಎಂಬ ವಿವರ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧಗಳು, ಡಾಲರ್ ಮೌಲ್ಯ ಇಳಿಕೆ ಹಾಗೂ ಇನ್ನಿತರ ಜಾಗತಿಕ ಕಾರಣಗಳಿಂದಾಗಿ ಚಿನ್ನ ಬೆಳ್ಳಿ ದರ ಏರಿಕೆ ಆಗಲಿದೆ ಎನ್ನಲಾಗಿತ್ತು. ಆದರೆ ವಿರುದ್ಧವೆಂಬಂತೆ ನಿರಂತರ ಇಳಿಕೆ ಆಗುತ್ತಿವೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 2,780 ರೂಪಾಯಿ ಇಳಿಕೆ ಆಗುವ ಮೂಲಕ ದರ 1,54,640 ರೂಪಾಯಿ ಮುಟ್ಟಿದೆ. ಇದೇ ರೀತಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು 2550 ರೂಪಾಯಿ ಇಳಿಕೆ ಆಗಿ 1,41,750 ರೂಪಾಯಿ ತಲುಪಿದೆ.

ವಾರದಲ್ಲಿ ಒಮ್ಮೆ ಮಾತ್ರ ದರ ಏರಿಕೆ
ಸತತ ಎರಡನೇ ದಿನವು ಇಳಿಕೆಯಾದ ಚಿನ್ನದ ಬೆಲೆ ನೆನ್ನೆ 24 ಕ್ಯಾರಟ್‌ಗೆ 660 ರೂಪಾಯಿ ಹಾಗೂ 22 ಕ್ಯಾರಟ್‌ಗೆ 600 ರೂಪಾಯಿಗೆ ಕುಸಿದಿದೆ. ಕಳೆದ ಒಂದು ವಾರದಲ್ಲಿ ಮಾರ್ಚ್ 17ರಂದು ಕೊಂಚ ಏರಿಕೆ ಆಗಿದ್ದ ಚಿನ್ನವು ದಿನೇ ದಿನೆ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ, ಖರೀದಿ ಹೆಚ್ಚಾಗುವ ನಿರೀಕ್ಷೆ ಇದೆ.
ಬೆಳ್ಳಿ ಬೆಲೆ 15,000 ರೂ. ಇಳಿಕೆ
ಇನ್ನೂ ಬೆಳ್ಳಿಯು ಸಹಿತ ಮಾರ್ಚ್ 17ರಂದು ಬಿಟ್ಟರೆ ಬೇರೆಲ್ಲ ದಿನ ನಿರಂತರವಾಗಿ ಇಳಿಕೆ ಕಂಡಿದೆ. ಇಂದು 1 ಕೆಜಿ ಬೆಳ್ಳಿ ದರ 5,000 ರೂಪಾಯಿ ಕುಸಿದಿದ್ದು 2,60,000 ರೂಪಾಯಿಗೆ ಮುಟ್ಟಿದೆ. ನೆನ್ನೆ ಇದೇ ಬೆಳ್ಳಿ ಬೆಲೆಯು 10,000 ಇಳಿಕೆ ಆಗಿತ್ತು. ಎರಡೇ ದಿನಕ್ಕೆ 15,000 ರೂ. ಇಳಿಕೆ ಆಗಿದ್ದು, ಒಂದು ವಾರದಿಂದ ಗಣನೀಯವಾಗಿ ಕುಸಿಯುತ್ತಿದೆ. ಇದು ಖರೀದಿದಾರರ ಹರ್ಷ ನೀಡಿದರೆ, ಲಾಭದ ಆಸೆಯಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರನ್ನು ಚಿಂತೆಗೆ ನೂಕಿದೆ.
ನಗರವಾರು 22k 10 ಗ್ರಾಂ ಚಿನ್ನದ ಮಾಹಿತಿ ಇಲ್ಲಿದೆ
ಬೆಂಗಳೂರು: 1,47,200 ರೂಪಾಯಿ
ಹೈದರಾಬಾದ್: 1,47,200 ರೂಪಾಯಿ
ಚೆನ್ನೈ: 1,49,000 ರೂಪಾಯಿ
ದೆಹಲಿ: 1,47,350 ರೂಪಾಯಿ
ಪಾಟ್ನಾ: 1,47,250 ರೂಪಾಯಿ
ಜೈಪುರ : 1,47,350 ರೂಪಾಯಿ
ಮುಂಬೈ: 1,47,200 ರೂಪಾಯಿ
ಕೋಲ್ಕತ್ತಾ: 1,47,200 ರೂಪಾಯಿ
ಅಹಮದಾಬಾದ್: 1,47,250 ರೂಪಾಯಿ
ಪುಣೆ: 1,47,200 ರೂಪಾಯಿ












Click it and Unblock the Notifications