ಭಾರತದ ಮೊದಲ ಬುಲೆಟ್ ರೈಲಿನಲ್ಲಿ ಕೆಲಸ ಮಾಡೋ ಅವಕಾಶ! 224 ಹುದ್ದೆಗಳಿಗೆ NHSRCL ಭರ್ಜರಿ ನೇಮಕಾತಿ
ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ (NHSRCL) ಭರ್ಜರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಒಟ್ಟು 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಜಿನಿಯರಿಂಗ್, ರೈಲು ಕಾರ್ಯಾಚರಣೆ, ಐಟಿ ಹಾಗೂ ಭದ್ರತಾ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಯಾವ ಹುದ್ದೆಗಳ ನೇಮಕಾತಿ?
ಒಟ್ಟು 224 ಹುದ್ದೆಗಳ ಪೈಕಿ 209 ಹುದ್ದೆಗಳು ನಾನ್ ಎಕ್ಸಿಕ್ಯೂಟಿವ್ ವಿಭಾಗಕ್ಕೆ ಸೇರಿದ್ದು 15 ಹುದ್ದೆಗಳು ಎಕ್ಸಿಕ್ಯೂಟಿವ್ ವಿಭಾಗದಲ್ಲಿವೆ.

ನೇಮಕಾತಿ ನಡೆಯುಲಿರುವ ಪ್ರಮುಖ ಹುದ್ದೆಗಳು:
ಜೂನಿಯರ್ ಎಂಜಿನಿಯರ್ (ವಿದ್ಯುತ್) - 47 ಹುದ್ದೆಗಳು
ಜೂನಿಯರ್ ಎಂಜಿನಿಯರ್ (ಸಿವಿಲ್/ಟ್ರ್ಯಾಕ್) - 31
ಸಿಗ್ನಲಿಂಗ್ ಮತ್ತು ಟೆಲಿಕಾಂ - 20
ರೋಲಿಂಗ್ ಸ್ಟಾಕ್ (ಎಲೆಕ್ಟ್ರಿಕಲ್) - 14
ರೋಲಿಂಗ್ ಸ್ಟಾಕ್ (ಮೆಕ್ಯಾನಿಕಲ್) - 3
ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಸಿಸ್ಟಂ - 5
ಇದರ ಜೊತೆಗೆ ಟ್ರೈನ್ ಮ್ಯಾನೇಜರ್, ಸ್ಟೇಷನ್ ಮ್ಯಾನೇಜರ್, ಡಿಪೋ ಕಂಟ್ರೋಲರ್ ಹಾಗೂ ಆಪರೇಷನ್ಸ್ ಕಂಟ್ರೋಲರ್ ಹುದ್ದೆಗಳಲ್ಲೇ ಒಟ್ಟು 55 ಖಾಲಿ ಹುದ್ದೆಗಳು ಇವೆ.
ಡೆಪ್ಯುಟಿ ಎಂಜಿನಿಯರ್ ಹುದ್ದೆಗಳಿಗೂ ಸುವರ್ಣಾವಕಾಶ
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಡೆಪ್ಯುಟಿ ಎಂಜಿನಿಯರ್ (Deputy Engineer) ಹುದ್ದೆಗಳು ಸಹ ಲಭ್ಯವಿವೆ. ಇಂಜಿನಿಯರಿಂಗ್ ಪದವೀಧರರು ಈ ಅತ್ಯುತ್ತಮ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಸಿವಿಲ್/ಟ್ರ್ಯಾಕ್ - 18
ಆಪರೇಷನ್ಸ್ - 4
ಎಲೆಕ್ಟ್ರಿಕಲ್ - 4
ಸಿಗ್ನಲಿಂಗ್ ಮತ್ತು ಟೆಲಿಕಾಂ - 5
ರೋಲಿಂಗ್ ಸ್ಟಾಕ್ - 3
ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಸುರಕ್ಷತೆ ಸಂಬಂಧಿತ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಜೊತೆಗೆ ಐಟಿ, ಡೇಟಾ ಅನಾಲಿಟಿಕ್ಸ್ ಹಾಗೂ ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ವಿಭಾಗಗಳ ಹಿರಿಯ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ?
ಅರ್ಜಿದಾರರ ವಯಸ್ಸು 2026ರ ಮೇ 31ರ ವೇಳೆಗೆ 45 ವರ್ಷ ಮೀರಿರಬಾರದು. ಜೊತೆಗೆ ಭಾರತೀಯ ರೈಲ್ವೆ, ಸರ್ಕಾರಿ ಮೆಟ್ರೋ ಸೇವೆ, ಅಥವಾ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂನಲ್ಲಿ ಕನಿಷ್ಠ ಮೂರು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಅನುಭವ ಹೊಂದಿರಬೇಕು.
ಶೈಕ್ಷಣಿಕ ಅರ್ಹತೆ ಹುದ್ದೆ ಅನುಸಾರ ಬದಲಾಗುತ್ತದೆ. ಕೆಲವು ಹುದ್ದೆಗಳಿಗೆ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಅಗತ್ಯವಿದ್ದರೆ, ಇನ್ನೂ ಕೆಲವು ಹುದ್ದೆಗಳಿಗೆ ಸಂಬಂಧಿತ ವಿಭಾಗದಲ್ಲಿ BE ಅಥವಾ B.Tech ಪದವಿ ಕಡ್ಡಾಯವಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅರ್ಹ ಅಭ್ಯರ್ಥಿಗಳನ್ನು ಈ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಮೊದಲ ಹಂತ: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಎರಡನೇ ಹಂತ: ದಾಖಲೆಗಳ ಪರಿಶೀಲನೆ
ಮೂರನೇ ಹಂತ: ವೈದ್ಯಕೀಯ ಪರೀಕ್ಷೆ
ಎಲ್ಲಾ ಮೂರು ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮಾತ್ರ ಅಂತಿಮವಾಗಿ ಹುದ್ದೆಗೆ ನಿಯೋಜಿಸಲಾಗುವುದು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು NHSRCL ನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೇ ತಮ್ಮ ಫಾರ್ಮ್‌ಗಳನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಜುಲೈ 9, 2026 ಕೊನೆಯ ದಿನವಾಗಿದ್ದರೆ, ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 14, 2026 ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ದಿನಾಂಕಗಳ ಬಳಿಕ ಬರುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.














Click it and Unblock the Notifications