ಮೇಷ ರಾಶಿ ಮಹಿಳೆಯ ಪ್ರಣಯ ಕ್ಷಣ ಉದ್ದೀಪಿಸುವ ಕೇಶ

Posted By: ರಮಾಕಾಂತ್
Subscribe to Oneindia Kannada

ಜ್ಯೋತಿಷ್ಯದಲ್ಲಿ ಯಾವುದೆಲ್ಲ ವಿಚಾರಗಳನ್ನು ಹೇಳಲಾಗಿದೆ ಅಂದರೆ ಸಮುದ್ರದ ಮುಂದೆ ನಿಂತು ಅಗೋ ಅಲ್ಲಿಗೆ ಕೊನೆ ಎಂದು ಕೂಗಿದರೆ ಹೇಗೋ ಹಾಗಾಗುತ್ತದೆ. ಈ ದಿನದ ಲೇಖನದಲ್ಲಿ ದಾಂಪತ್ಯದ ಬಗ್ಗೆ ಅದರಲ್ಲೂ ಪತಿ ಮಹಾಶಯ ಪತ್ನಿ ಜತೆಗೆ ಉತ್ತುಂಗಕ್ಕೆ ಏರಬಹುದಾದ ಪ್ರಣಯ ಕ್ಷಣಗಳನ್ನು ತಿಳಿಸಲಾಗುತ್ತದೆ. ಇದು ಕೂಡ ಆಯಾ ರಾಶಿಗೆ ಅನ್ವಯ ಆಗುತ್ತದೆ.

ಮಕರ ರಾಶಿಯ ಮಕ್ಕಳ ಬಗ್ಗೆ ಇವೆಲ್ಲ ನಿಮಗೆ ಗೊತ್ತಿದೆಯೆ?

ಈ ದಿನ ಮೇಷ ರಾಶಿಯ ಸ್ತ್ರೀಯರ ಬಗ್ಗೆ ತಿಳಿಸಲಾಗುವುದು. ಈ ರಾಶಿಯ ಸ್ತ್ರೀಯರ ತಲೆ ಭಾಗದಲ್ಲಿ ಲೈಂಗಿಕತೆಯನ್ನು ಉದ್ದೀಪನ ಮಾಡುವ ಅವಕಾಶ ಹೆಚ್ಚು. ನೆನಪಿಡಿ, ಮುಖ ಹಾಗೂ ತಲೆಯ ಭಾಗದಲ್ಲಿ ನೇವರಿಸಿದರೆ ಈ ರಾಶಿಯ ಸ್ತ್ರೀಯರು ಹೆಚ್ಚು ಸಂತುಷ್ಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ನಂತರದ ಕ್ರಿಯೆಗೂ ಸನ್ನದ್ಧಗೊಳ್ಳುತ್ತಾರೆ.

ತುಟಿ ಬಿಟ್ಟುಕೊಡುವ ಗುಟ್ಟು, ಇದು ಹೆಣ್ಣುಮಕ್ಕಳ ಆಂತರ್ಯ

ಇದು ದಂಪತಿಯ ಮಧ್ಯದ ವಿಚಾರವಾದ್ದರಿಂದ ಈ ಲೇಖನವನ್ನು ಅಶ್ಲೀಲದ ಸೋಂಕಿಲ್ಲದೆ ರಸಿಕತೆಯ ದೃಷ್ಟಿಕೋನದಿಂದ ಗಮನಿಸಬೇಕು. ಮದುವೆ ಸಂದರ್ಭದಲ್ಲಿ ಗಮನಿಸುವ ದ್ವಾದಶ ಕೂಟದಲ್ಲಿ ಯೋನಿ ಕೂಟ ಎಂಬುದಿದೆ. ಗಂಡ-ಹೆಂಡತಿಯ ಮಧ್ಯೆ ಲೈಂಗಿಕ ಆಸಕ್ತಿ ಹಾಗೂ ಸಾಮರ್ಥ್ಯ, ಪರಸ್ಪರ ಮೇಲಿನ ಆಕರ್ಷಣೆಯನ್ನು ಆ ಮೂಲಕ ತಿಳಿಯಬಹುದು.

ಪ್ರಾಣಿಗಳೊಂದಿಗೆ ಸ್ನೇಹ ಇರುವಂಥದ್ದೇ ಇದ್ದರೆ ಒಳಿತು

ಪ್ರಾಣಿಗಳೊಂದಿಗೆ ಸ್ನೇಹ ಇರುವಂಥದ್ದೇ ಇದ್ದರೆ ಒಳಿತು

ಮೇಷ ರಾಶಿ ಅಂದರೆ ಅಶ್ವಿನಿ, ಭರಣಿ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಬರುತ್ತದೆ. ಕ್ರಮವಾಗಿ ಕುದುರೆ, ಆನೆ, ಆಡು ಈ ಮೂರು ನಕ್ಷತ್ರಗಳಿಗೆ ಬರುತ್ತವೆ. ಆಯಾ ಪ್ರಾಣಿಗಳಿಗೆ ಸ್ನೇಹದಲ್ಲಿರುವ ಪ್ರಾಣಿ ಕೂಟವನ್ನು ಹೊಂದಿರುವ ಪುರುಷರೊಂದಿಗಿನ ದಾಂಪತ್ಯ ಹೆಚ್ಚಿನ ಸಂತೋಷ ಹಾಗೂ ಸಾರ್ಥಕ್ಯವನ್ನು ಕೊಡುತ್ತದೆ.

ಪತಿಯಿಂದ ಜಡೆ ಹಾಕಿಸಿಕೊಳ್ಳುವ ಸಮಯ

ಪತಿಯಿಂದ ಜಡೆ ಹಾಕಿಸಿಕೊಳ್ಳುವ ಸಮಯ

ಮೇಷ ರಾಶಿಯ ಸ್ತ್ರೀಯರಿಗೆ ತಮ್ಮ ಪತಿಯಿಂದಲೇ ಜಡೆ ಹಾಕಿಸಿಕೊಳ್ಳಬೇಕು ಅಂತಲೂ ಬಹಳ ಸಲ ಅನಿಸುವುದುಂಟು. ಆದರೆ ಬಹುತೇಕ ಬಾಯಿ ಬಿಟ್ಟು ಹೇಳುವುದಿಲ್ಲ. ಆಯಾ ನಕ್ಷತ್ರಕ್ಕೆ ಬರುವ ಪ್ರಾಣಿಗಳ ರೀತಿಯಲ್ಲಿ ಆ ಸ್ತ್ರೀಯರ ಲೈಂಗಿಕ ಆಸಕ್ತಿ ಹಾಗೂ ಉದ್ದೀಪನಗೊಳ್ಳುವ ಸ್ಥಾನಗಳಿರುತ್ತವೆ.

ಕುದುರೆ, ಆನೆ, ಆಡು

ಕುದುರೆ, ಆನೆ, ಆಡು

ಅಶ್ವಿನಿ ನಕ್ಷತ್ರದವರ ಗುಣದಲ್ಲಿ ಕುದುರೆ, ಭರಣಿ ನಕ್ಷತ್ರದವರಲ್ಲಿ ಆನೆ ಹಾಗೂ ಕೃತ್ತಿಕಾದವರಲ್ಲಿ ಆಡಿನ ಸ್ವಭಾವ ಗಮನಿಸಬಹುದು. ಆವೇಗ, ಉತ್ಸಾಹ, ಆಕ್ರಮಣಕಾರಿ ಧೋರಣೆ, ತಾಳ್ಮೆ, ಸಮಾಧಾನ, ನಿಧಾನ ಗತಿ ಹೀಗೆ ವಿವಿಧ ಸ್ವಭಾವವನ್ನು ಗುರುತಿಸಿದರೆ ದಾಂಪತ್ಯ ಬಹಳ ಚೆನ್ನಾಗಿರುತ್ತದೆ.

ಸಿಟ್ಟು ಬರದಂತೆ ಎಚ್ಚರ ವಹಿಸಿ

ಸಿಟ್ಟು ಬರದಂತೆ ಎಚ್ಚರ ವಹಿಸಿ

ಮೇಷ ರಾಶಿಯ ಮಹಿಳೆಯರ ತುಟಿ, ಕಣ್ಣು, ಕಿವಿ, ಕೆನ್ನೆ, ತಲೆಗೂದಲು ಹಾಗೂ ಕತ್ತು ಭಾಗವು ಪ್ರಣಯ ಭಾವವನ್ನು ಉದ್ದೀಪಿಸುತ್ತದೆ. ಸ್ವಲ್ಪ ಮಟ್ಟಿಗೆ ಹಟದ ಸ್ವಭಾವದವರಾದ ಇವರಿಗೆ ಸಿಟ್ಟು ಬಂದ ನಂತರ ರಮಿಸುವ ಪ್ರಯತ್ನ ಮಾಡಿದರೆ ಒಲಿಸಿಕೊಳ್ಳುವುದು ಸಲೀಸಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is an article about Aries zodiac sign woman sensual behavior and tips to how to induce them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ