• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ವರ್ಷ ಭವಿಷ್ಯ; ಮೇಷ ರಾಶಿಯಿಂದ ಕನ್ಯಾ ರಾಶಿವರೆಗೆ

By ದೈವಜ್ಞ ಲಕ್ಷ್ಮೀನಾರಾಯಣ ಭಟ್
|
Google Oneindia Kannada News

2019ನೇ ಇಸವಿಯು ನಿಮ್ಮ ಪಾಲಿಗೆ ಹೇಗಿರಲಿದೆ? ಅದನ್ನು ತಿಳಿಸುವ ಸಲುವಾಗಿ ದ್ವಾದಶ ರಾಶಿಗಳ ವರ್ಷ ಭವಿಷ್ಯವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತಿದೆ. ಮೊದಲ ಕಂತಿನಲ್ಲಿ ಮೇಷದಿಂದ ಕನ್ಯಾ ರಾಶಿಯವರೆಗೆ ಹಾಗೂ ಎರಡನೇ ಕಂತಿನಲ್ಲಿ ತುಲಾದಿಂದ ಮೀನ ರಾಶಿಯವರೆಗಿನ ಭವಿಷ್ಯವನ್ನು ತಿಳಿಸಲಾಗುತ್ತದೆ.

ವರ್ಷ ಭವಿಷ್ಯ ಎಂದಾಕ್ಷಣ ಕೆಲವರು ತಕರಾರು ಆರಂಭಿಸುತ್ತಾರೆ. ಜನವರಿ ಎಂಬುದು ಕ್ರೈಸ್ತರ ಹೊಸ ವರ್ಷದ ಆರಂಭ. ಅದು ಹೇಗೆ ವರ್ಷ ಭವಿಷ್ಯ ಎಂದು ಬರೆಯುತ್ತೀರಿ ಎಂಬುದು ಅವರ ತಕರಾರು. ಅಂತಹವರು ತಮ್ಮ ನಿತ್ಯದ ವ್ಯವಹಾರದಲ್ಲೂ ಬ್ಯಾಂಕ್ ಮತ್ತಿತರ ಕಡೆ ಕೂಡ ಇಂತಹ ಸಂವತ್ಸರ, ಮಾಸದ, ಇಂತಹ ತಿಥಿಯಂದು ಎಂದು ಬರೆಯುತ್ತಾರಾ ಎಂದು ಪ್ರಶ್ಸ್ನಿಸಿದರೆ ಹ್ಹೆ ಹ್ಹೆ ಹ್ಹೆ ಅದು ಹೇಗೆ ಸಾಧ್ಯ ಎನ್ನುತ್ತಾರೆ.

ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ

ಜನವರಿ ತಿಂಗಳು ಹಿಂದೂ ಸಂಪ್ರದಾಯದ ಅನ್ವಯ ಹೊಸ ವರ್ಷ ಅಲ್ಲ. ಯುಗಾದಿಯನ್ನೇ ಹೊಸ ಸಂವತ್ಸರ ಎಂದು ಪರಿಗಣಿಸಲಾಗುತ್ತದೆ. ಆದರೆ ಲೋಕಾರೂಢಿಯ ಪ್ರಕಾರ ಜನವರಿ ತಿಂಗಳಿಂದಲೇ ಹೊಸ ವರ್ಷದ ಆಚರಣೆ ಹಾಗೂ ಅನುಷ್ಠಾನ ಜಾರಿಯಲ್ಲಿ ಇರುವುದರಿಂದ ಈ ವರ್ಷ ಭವಿಷ್ಯವನ್ನು ನೀಡಲಾಗುತ್ತಿದೆ.

ಉತ್ತಮವಾದ ಫಲಗಳಿದ್ದರೆ ಅವಕಾಶಗಳನ್ನು ಬಳಸಿಕೊಳ್ಳಿ. ಎಚ್ಚರಿಕೆಯ ಮಾತುಗಳಿದ್ದರೆ ಮುಂಜಾಗ್ರತೆಯನ್ನು ವಹಿಸಿ. ಒಟ್ಟಾರೆಯಾಗಿ ಎಲ್ಲರಿಗೂ ಶುಭವಾಗಲಿ.

ಮೇಷ: ಸ್ಥಳ ಬದಲಾವಣೆ ಸಾಧ್ಯತೆ, ಸಿಟ್ಟು ಕಡಿಮೆ ಮಾಡಿಕೊಳ್ಳಿ

ಮೇಷ: ಸ್ಥಳ ಬದಲಾವಣೆ ಸಾಧ್ಯತೆ, ಸಿಟ್ಟು ಕಡಿಮೆ ಮಾಡಿಕೊಳ್ಳಿ

ಮೇಷ ರಾಶಿಯವರು ಗುದ್ದಾಡಿಯಾದರೂ ಗೆಲ್ಲುವ ಜಾಯಮಾನದವರು. ಆದರೆ ಈ ವರ್ಷ ಆರಕ್ಕೆ ಏರಿತು ಅನ್ನೋಷ್ಟರಲ್ಲಿ ಮೂರಕ್ಕೆ ಇಳಿಯಿತು ಎಂಬಂತಾಗುತ್ತದೆ. ಇಡೀ ವರ್ಷ ಹೀಗೇ ಆಗುತ್ತದೆ. ವರ್ಷದ ಆರಂಭದ ಕೆಲವು ತಿಂಗಳು ಸಿಟ್ಟಿನ ಸ್ವಭಾವ ನಿಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಸಣ್ಣ-ಪುಟ್ಟ ದೈನಂದಿನ ವಿಷಯದಲ್ಲೂ ಸಟಕ್ಕನೆ ಸಿಟ್ಟು ಬರುತ್ತದೆ.

ಕುಟುಂಬದ ಸದಸ್ಯ ಜತೆಗೆ ಅಂತರ ಬೆಳೆಯುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಅದರಲ್ಲೂ ತಂದೆ, ಸೋದರರ ಜತೆಗೆ ಭಿನ್ನಾಭಿಪ್ರಾಯ ಎದ್ದು ನಿಲ್ಲುತ್ತದೆ. ನಿಮ್ಮ ಸುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ಒಂದಲ್ಲ ಎರಡು ಕಣ್ಣು ಇಟ್ಟಿರಿ. ಅನುಮಾನದ ಘಟನೆಗಳು ನಡೆದಾಗ ಮೈಯೆಲ್ಲ ಕಣ್ಣಾಗಿರಬೇಕು. ಹಣಕಾಸಿನ ವಿಚಾರದಲ್ಲಿ ನಿಮಗೆ ದ್ರೋಹ ಆಗುವ ಸಾಧ್ಯತೆಗಳಿವೆ.

ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಚೇತರಿಕೆ ಕಾಣುವ ಅವಕಾಶಗಳು ದೊರೆಯುತ್ತವೆ. ಈಗಾಗಲೇ ಕೂಡಿಟ್ಟಿರುವ ಹಣದಲ್ಲಿ ಆಸ್ತಿ ಖರೀದಿಗೆ ಮನಸ್ಸು ಮಾಡುತ್ತೀರಿ. ಬಹು ಕಾಲದ ಬಯಕೆಗಳು ಈಡೇರುತ್ತವೆ. ಮನೆಯಲ್ಲಿನ ಶುಭ ಕಾರ್ಯಗಳಿಗೆ ಹಣ ಖರ್ಚಾಗಲಿದೆ. ಉದ್ಯೋಗ ಅಥವಾ ವ್ಯಾಪಾರದ ಸಲುವಾಗಿ ಸ್ಥಳ ಬದಲಾವಣೆ ಇದೆ. ಅಲ್ಲಿ ಹಣಕಾಸಿನ ಸ್ಥಿರತೆ ಜತೆಗೆ, ಅನುಭವ ದಕ್ಕಿಸಿಕೊಳ್ಳುತ್ತೀರಿ.

ವೃಷಭ: ಮಹತ್ತರವಾದುದನ್ನು ಸಾಧಿಸಲು ಸಾಕಷ್ಟು ಅವಕಾಶಗಳು

ವೃಷಭ: ಮಹತ್ತರವಾದುದನ್ನು ಸಾಧಿಸಲು ಸಾಕಷ್ಟು ಅವಕಾಶಗಳು

ಸಂತೋಷದ ಕ್ಷಣಗಳನ್ನು ಕಳೆಯಲು ಬೇಕಾದ ವಾತಾವರಣ ಸೃಷ್ಟಿಯಾಗುತ್ತದೆ. ನಿಮಗೆ ಹಾಗೂ ನೀವು ಬಹಳ ಇಷ್ಟಪಡುವ ವ್ಯಕ್ತಿಗಳಿಗೂ ಉತ್ತಮವಾದ ವರ್ಷ ಇದಾಗಲಿದೆ. ಉದ್ಯೋಗ ಸ್ಥಳದಲ್ಲಿ ಪದೋನ್ನತಿ ಹಾಗೂ ವೇತನ ಹೆಚ್ಚಳದ ಅವಕಾಶಗಳಿವೆ. ವ್ಯಾಪಾರ-ವ್ಯವಹಾರ, ಉದ್ಯಮದಲ್ಲಿ ಇರುವವರಿಗೆ ಉತ್ತಮ ಲಾಭವಿದೆ.

ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವವರಿಗೆ ಉತ್ತಮವಾದ ಅವಕಾಶ ದೊರೆಯಲಿದೆ. ಕೌಟುಂಬಿಕ ಹಾಗೂ ಪ್ರೀತಿ-ಪ್ರೇಮದ ಸಂಬಂಧಗಳು ಸಂತೋಷವನ್ನು ನೀಡುತ್ತವೆ. ಉದ್ಯೋಗ ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಮಹತ್ತರವಾದದ್ದನ್ನು ಸಾಧಿಸಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಬಾಕಿ ಉಳಿದಿದ್ದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ.

ಯಾವ ಕೆಲಸ ಯಾವಾಗ ಮಾಡಬೇಕು ಎಂಬ ವಿಚಾರದಲ್ಲಿ ಪ್ರಾಶಸ್ತ್ಯವನ್ನು ಮಾಡಿಕೊಂಡು, ಅದರ ಅನ್ವಯ ಕೆಲಸ ಪೂರೈಸುತ್ತಾ ಸಾಗುತ್ತೀರಿ. ನಿಮಗೆ ದೊರೆಯುವ ಸಂಪನ್ಮೂಲದಲ್ಲಿ ಏನು ಮಾಡಬೇಕು ಎಂದು ಸರಿಯಾಗಿ ಯೋಚಿಸಿ, ಯೋಜನೆಯನ್ನು ಕಾರ್ಯ ರೂಪಕ್ಕೆ ತರುವುದಕ್ಕೆ ಇದು ಬಹಳ ಸೂಕ್ತವಾದ ವರ್ಷ ಆಗಲಿದೆ. ನೂರರಷ್ಟು ಶ್ರಮ ಹಾಕಿ, ಅದರ ಫಲ ಅನುಭವಿಸಿ. ನಿಮ್ಮ ಸುತ್ತಲಿನ ವ್ಯಕ್ತಿಗಳ ಬೆಂಬಲ ಪಡೆಯಿರಿ.

ಉದ್ಯೋಗ ಬದಲಾವಣೆಗೆ ಸೂಕ್ತ ಕಾಲವೆ?: ಇಲ್ಲಿದೆ ಜ್ಯೋತಿಷ್ಯ ಸಲಹೆಉದ್ಯೋಗ ಬದಲಾವಣೆಗೆ ಸೂಕ್ತ ಕಾಲವೆ?: ಇಲ್ಲಿದೆ ಜ್ಯೋತಿಷ್ಯ ಸಲಹೆ

ಮಿಥುನ: ಆರೋಗ್ಯದ ಬಗ್ಗೆ ಅತಿ ಜಾಗ್ರತೆ ಅಗತ್ಯ

ಮಿಥುನ: ಆರೋಗ್ಯದ ಬಗ್ಗೆ ಅತಿ ಜಾಗ್ರತೆ ಅಗತ್ಯ

ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಹಾಗೂ ಸಕಾರಾತ್ಮಕ ಎರಡೂ ಬಗೆಯ ಬೆಳವಣಿಗೆಗಳು ಆಗುತ್ತವೆ. ವೈಯಕ್ತಿಕ ಜೀವನದ ಸುತ್ತ ಗಿರಕಿ ಹೊಡೆಯುತ್ತಾ ಕೆಲವು ಮಹತ್ತರವಾದ ಬೆಳವಣಿಗೆಗಳು ಆಗುತ್ತವೆ. ಆಶಾದಾಯಕ ಹಾಗೂ ಆತಂಕಕಾರಿ ಬೆಳವಣಿಗೆ ಎರಡನ್ನೂ ಎದುರುಗೊಳ್ಳಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಬಹಳ ಅಂದರೆ ಬಹಳ ಗಮನ ಕೊಡಬೇಕು.

ಹೊಟ್ಟೆ, ಮಂಡಿಯ ಆರೋಗ್ಯ ಸಮಸ್ಯೆ ಎದುರಾಗಬಹುದು. ಆದ್ದರಿಂದ ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲಿಸಿ. ಕೆಲವು ವ್ಯಾಯಾಮಗಳನ್ನು ಮಾಡಿದರೆ ಉತ್ತಮ. ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಹೆಚ್ಚಿನ ಒತ್ತಡ ಬೀಳಲಿದೆ. ಪ್ರೀತಿ-ಪ್ರೇಮ ಸಂಬಂಧಗಳಿಗೆ ಸಾಧಾರಣವಾದ ವರ್ಷ ಇದಾಗಲಿದೆ.

ಈ ವರ್ಷ ನಿಮ್ಮ ಬಾಳಸಂಗಾತಿಯು ಬೆಂಬಲಕ್ಕೆ ನಿಲ್ಲಲಿದ್ದಾರೆ. ಪ್ರೀತಿ-ಪ್ರೇಮದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳಲಿದೆ. ಇತರರ ಜತೆ ಮಾತನಾಡುವಾಗ ಹೇಳುವ ಧ್ವನಿ ಹೇಗಿದೆ ಎಂಬುದರ ಬಗ್ಗೆಯೂ ಗಮನ ಇರಲಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಹಳ ಬದಲಾವಣೆಗಳಿವೆ. ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ತಾಳ್ಮೆಯಿಂದ ಇರಬೇಕು. ಉದ್ಯೋಗದ ವಿಚಾರದಲ್ಲಿ ಮನಸೋ ಇಚ್ಛೆ ತೀರ್ಮಾನ ಬೇಡ.

ಕರ್ಕಾಟಕ: ವಾಹನ ಅಥವಾ ಆಸ್ತಿ ಖರೀದಿಗೆ ಅವಕಾಶಗಳಿವೆ

ಕರ್ಕಾಟಕ: ವಾಹನ ಅಥವಾ ಆಸ್ತಿ ಖರೀದಿಗೆ ಅವಕಾಶಗಳಿವೆ

ನಿಮ್ಮ ಸೂಕ್ಷ್ಮ ಸ್ವಭಾವಕ್ಕೆ ತಕ್ಕಂತೆ ಕೆಲವು ಬೆಳವಣಿಗೆಗಳು ಆಗುತ್ತವೆ. ಹಣಕಾಸು ವಿಚಾರ, ವೃತ್ತಿ ಹಾಗೂ ಉದ್ಯೋಗ ಬದುಕಿನಲ್ಲಿ ಸಕಾರಾತ್ಮಕವಾದ ಬದಲಾವಣೆಗಳು ಆಗುತ್ತವೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ನಿರೀಕ್ಷೆಗೆ ಮೀರಿ ದೊರೆಯುವ ಸಾಧ್ಯತೆ ಇದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಲಾಗುತ್ತದೆ.

ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ವಿಸ್ತರಣೆಗೆ ಅನೇಕ ಅನುಕೂಲ ಸನ್ನಿವೇಶಗಳು ಸೃಷ್ಟಿ ಆಗುತ್ತವೆ. ಆರ್ಥಿಕವಾಗಿ ಅದ್ಭುತವಾದ ಲಾಭ ಪಡೆಯುವ ಅವಕಾಶಗಳಿವೆ. ನೀವು ರೂಪಿಸುವ ಯೋಜನೆ ಹಾಗೂ ಅದರ ಅನುಷ್ಠಾನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಾತ್ರಿ ಪಡಿಸುವುದು ಬಹಳ ಮುಖ್ಯವಾಗುತ್ತದೆ.

ಜನವರಿಯಿಂದ ಮಾರ್ಚ್ ತನಕ ಹಾಗೂ ಅಕ್ಟೋಬರ್ ನಿಂದ ಡಿಸೆಂಬರ್ ತನಕ ವೈಯಕ್ತಿಕ ಸಂಬಂಧದಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ. ಪ್ರಾಪ್ತ ವಯಸ್ಕರಾಗಿದ್ದು, ಮದುವೆಗೆ ತಯಾರಿ ನಡೆಸುತ್ತಿದ್ದರೆ ವಿವಾಹ ಆಗುವ ಎಲ್ಲ ಸಾಧ್ಯತೆ ಇದೆ. ಈ ವರ್ಷ ಹೊಸ ವಾಹನ ಅಥವಾ ಮನೆ ಅಥವಾ ಎರಡನ್ನೂ ಖರೀದಿ ಮಾಡುವ ಸಾಧ್ಯತೆ ಇದೆ.

ಅಶ್ವಿನಿಯಿಂದ ಚಿತ್ತಾ ನಕ್ಷತ್ರದವರೆಗೆ ಜ್ಯೋತಿಷ್ಯ ರೀತ್ಯಾ ಗುಣ- ಸ್ವಭಾವಅಶ್ವಿನಿಯಿಂದ ಚಿತ್ತಾ ನಕ್ಷತ್ರದವರೆಗೆ ಜ್ಯೋತಿಷ್ಯ ರೀತ್ಯಾ ಗುಣ- ಸ್ವಭಾವ

ಸಿಂಹ: ವಿಪರೀತ ಖರ್ಚು ಮಾಡುವ ಸಾಧ್ಯತೆ ಇದೆ, ಮಾತಿನ ಮೇಲೆ ಹಿಡಿತವಿರಲಿ

ಸಿಂಹ: ವಿಪರೀತ ಖರ್ಚು ಮಾಡುವ ಸಾಧ್ಯತೆ ಇದೆ, ಮಾತಿನ ಮೇಲೆ ಹಿಡಿತವಿರಲಿ

ಈ ವರ್ಷ ಬಹಳ ಉತ್ಸಾಹ ಹಾಗೂ ಚೈತನ್ಯದಿಂದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ. ಈ ಹಿಂದಿನ ವರ್ಷ ನೀವು ಅಂದುಕೊಂಡಂಥ ಫಲ ನೀಡದಿರಬಹುದು. ಆದರೆ ಈ ವರ್ಷ ನಿಮ್ಮ ಜೀವನದಲ್ಲಿ ಸಕಾರಾತ್ಮಕವಾದ ಬೆಳವಣಿಗೆಗಳು ಆಗುತ್ತವೆ. ನಿಮ್ಮ ಶ್ರಮವೇ ಯಶಸ್ಸಿಗೆ ಆಧಾರವಾಗುತ್ತದೆ. ಗೌರವ, ಸ್ವಪ್ರತಿಷ್ಠೆ ಹಾಗೂ ಸ್ಥಾನಮಾನಗಳನ್ನು ತಂದುಕೊಡುತ್ತದೆ.

ಕೆಲಸದಲ್ಲಿನ ಒತ್ತಡ, ಅದರಲ್ಲಿ ನಿಮ್ಮ ತನ್ಮಯತೆ, ವಿಪರೀತ ನಿರೀಕ್ಷೆ ಇವ್ಯಾವೂ ನಿಮ್ಮ ವೈಯಕ್ತಿಕ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಇದರಿಂದ ನಿಮ್ಮ ತಾಕತ್ತು ಮತ್ತಷ್ಟು ಹೆಚ್ಚಾಗಿ, ಮಾಡುವ ಕೆಲಸವನ್ನು ಇನ್ನೂ ಚೆಂದವಾಗಿ ಮಾಡುತ್ತೀರಿ. ಈ ವರ್ಷ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಲೇಬೇಕು. ಕಾಯಿಲೆ ಬರುವ ಮುನ್ನ ಎಚ್ಚೆತ್ತುಕೊಳ್ಳುವುದು ಮುಖ್ಯವಾಗುತ್ತದೆ.

ದೂರದ ಪ್ರಯಾಣ ಹಾಗೂ ಖರ್ಚು-ವೆಚ್ಚದ ಸೂಚನೆ ಇದೆ. ಸೋದರರು ಹಾಗೂ ಸೋದರಿಯರಿಗೆ ಹೆಚ್ಚು ಖರ್ಚು ಮಾಡುತ್ತೀರಿ. ಒಟ್ಟಾರೆಯಾಗಿ ಈ ವರ್ಷ ಖರ್ಚಿನ ಮೇಲೆ ಹಿಡಿತವಿಟ್ಟುಕೊಳ್ಳಿ. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗುತ್ತದೆ. ತೀರ್ಥ ಕ್ಷೇತ್ರಗಳ ದರ್ಶನ ಸಾಧ್ಯತೆಯೂ ಇದೆ. ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಬೇರೆಯವರ ಮೇಲೆ ಹೊಟ್ಟೆಕಿಚ್ಚು ಪಡಬೇಡಿ. ಮಾತಿನ ಮೇಲೆ ಹಿಡಿತ ಇರಲಿ.

ಕನ್ಯಾ: ಒಳಿತು-ಕೆಡುಕು ಮಿಶ್ರಣವಾಗಿ ಎದುರಾಗಲಿದೆ

ಕನ್ಯಾ: ಒಳಿತು-ಕೆಡುಕು ಮಿಶ್ರಣವಾಗಿ ಎದುರಾಗಲಿದೆ

ಈ ವರ್ಷ ಒಳಿತು-ಕೆಡಕುಗಳ ಮಿಶ್ರಣವನ್ನು ಕಾಣುತ್ತೀರಿ. ಒಳಿತಿನಿಂದ ಸಂತೋಷವನ್ನು ಪಡೆದರೆ, ಕೆಡುಕಿನಿಂದ ಪಾಠವನ್ನು ಕಲಿಯುತ್ತೀರಿ. ವೃತ್ತಿ ನಿರತರಿಗೆ ಏಪ್ರಿಲ್ ತಿಂಗಳ ತನಕ ಯಶಸ್ಸು ಸಿಗಲಿದೆ. ಉದ್ಯೋಗಸ್ಥರಿಗೆ ವೇತನ ಹೆಚ್ಚಳ ಇದೆ. ದೂರ ಪ್ರಯಾಣ ಮಾಡುವ ಅವಕಾಶಗಳಿವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಿದ್ದಲ್ಲಿ ನಿವಾರಣೆ ಆಗುತ್ತದೆ.

ಜೀವನದ ಹಲವು ವಿಚಾರಗಳನ್ನು ವಿಶ್ಲೇಷಣಾತ್ಮಕವಾಗಿ ಚಿಂತಿಸುತ್ತೀರಿ. ಇರುವ ಸವಾಲುಗಳನ್ನು ಗುರುತಿಸಿ, ಬಗೆಹರಿಸಿಕೊಳ್ಳಲು ಯತ್ನಿಸುತ್ತೀರಿ. ನಿಮ್ಮ ಮಾನಸಿಕ ಧೋರಣೆಯು ದುರ್ಬಲವಾಗಿ ಕಂಡರೂ ಸೂಕ್ಷ್ಮ ವಿಚಾರಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಯಾವುದೇ ತೊಂದರೆ ಇಲ್ಲ. ಏಪ್ರಿಲ್ ನಿಂದ ಆಗಸ್ಟ್ ತನಕ ನಿಮ್ಮ ವೃತ್ತಿ ಬದುಕಿನಲ್ಲಿ ಬಹಳ ಎಚ್ಚರವಾಗಿ ಇರಬೇಕು.

ಹಣಕಾಸಿನ ವಿಚಾರದಲ್ಲಿ ಯಾವುದೇ ದೊಡ್ಡ ಅಪಾಯ ಮೈ ಮೇಲೆ ಎಳೆದುಕೊಳ್ಳಬೇಡಿ. ನೀವು ವಹಿಸಿಕೊಂಡ ಮುಖ್ಯವಾದ ಕೆಲಸಗಳಲ್ಲಿ ತಪ್ಪುಗಳು ಉಳಿದುಕೊಳ್ಳಲಿದ್ದು, ವಿಶ್ವಾಸಾರ್ಹತೆಗೆ ಕುಂದು ತಂದುಕೊಳ್ಳುತ್ತೀರಿ. ಆಪ್ತರ ಜತೆಗೆ ಮನಸ್ತಾಪ-ವಾಗ್ವಾದಗಳು ನಡೆಯುತ್ತವೆ. ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸುತ್ತೀರಿ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಉಲ್ಬಣ ಆಗಲಿದೆ. ಧ್ಯಾನ-ಪ್ರಾಣಾಯಮವು ಹಲವು ಸಮಸ್ಯೆಗೆ ಪರಿಹಾರ ಆಗಲಿದೆ.

ಜ್ಯೋತಿಷ್ಯ: ಸ್ವಾತಿಯಿಂದ ರೇವತಿ ನಕ್ಷತ್ರದವರೆಗೆ ಗುಣ- ಸ್ವಭಾವಜ್ಯೋತಿಷ್ಯ: ಸ್ವಾತಿಯಿಂದ ರೇವತಿ ನಕ್ಷತ್ರದವರೆಗೆ ಗುಣ- ಸ್ವಭಾವ

(ಮುಂದುವರಿಯಲಿದೆ)

English summary
Yearly prediction of 2019 Career, marriage, job, education, money, business etc... from Aries to Pisces zodiac sign. This is the first part. So, Aries to Virgo zodiac sign annual prediction by well known astrologer Lakshminarayan Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X