ಮಿಥುನ: ಬುದ್ಧಿವಂತಿಕೆ, ಏಕಾಗ್ರತೆಯಿಂದ ನೀವೇನು ತೋರಿಸಿ

ನೀವೇನು ಎಂಬುದನ್ನು ಎದುರಿನವರು ತಿಳಿದುಕೊಳ್ಳುವುದಕ್ಕೆ ಇದೇ ಸರಿಯಾದ ಸಮಯ. ಅದಕ್ಖಾಗಿ ನಿಮಗೆ ಸಾಕಷ್ಟು ಅವಕಾಶಗಳು ಸಹ ದೊರೆಯುತ್ತವೆ. ಈ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಅನುಕೂಲವಿದೆ. ಈ ತಿಂಗಳು ನಿಮ್ಮ ಬುದ್ಧಿವಂತಿಕೆ ಹಾಗೂ ಏಕಾಗ್ರತೆ ಸಾಣೆ ಹಿಡಿದಂತೆ ಚುರುಕಾಗುತ್ತವೆ. ನೀವು ಕೊಡುವ ಐಡಿಯಾಗಳು-ಸಲಹೆಗಳಿಗೆ ಎಲ್ಲರೂ ವಾಹ್, ವಾಹ್ ಎನ್ನುತ್ತಾರೆ.

ಎಲ್ಲವೂ ಸಲೀಸಾಗಿ ಸಾಗಿಹೋಗುತ್ತದೆ. ಕುಟುಂಬದಲ್ಲೂ ನೆಮ್ಮದಿಯಿದೆ. ಇದೆಲ್ಲದರ ಜತೆಗೆ ಮಾನಸಿಕ ಶಾಂತಿ ದೊರೆಯುತ್ತದೆ. ಇದರಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅವಕಾಶಗಳನ್ನು ಬಳಸಿಕೊಳ್ಳಿ, ನಿಮ್ಮ ಮೇಲಧಿಕಾರಿಗಳ ಮೆಚ್ಚುಗೆ ಪಡೆಯಿರಿ.[ಮಿಥುನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

Gemini monthly horoscope in Kannada for September 2016

ವೃತ್ತಿ: ವೃತ್ತಿಯಲ್ಲಿ ಭಾರಿ ಮುನ್ನಡೆ ಗೋಚರಿಸುತ್ತಿದೆ. ಪ್ರಮೋಶನ್ ಗಾಗಿ ಕಾಯುತ್ತಿರುವವರಿಗೆ ನಿರೀಕ್ಷೆ ಈಡೇರುವುದಕ್ಕೆ ಇದು ಸರಿಯಾದ ಸಮಯ. ನಿಮ್ಮ ಐಡಿಯಾ ಬಾಸ್ ಗೆ ಇಷ್ಟವಾಗುತ್ತದೆ. ಆದರೆ ಸೆ.18ರ ಮುಂಚೆ ನಿಮ್ಮ ನಡವಳಿಕೆ ಬಗ್ಗೆ ಎಚ್ಚರ ವಹಿಸಿ. ನಿಮ್ಮ ನಿರೀಕ್ಷೆಯಂತೆ ಸಹೋದ್ಯೋಗಿಗಳ ನೆರವು ಸಿಗುವುದು ಕಷ್ಟ. ಸ್ವಂತ ನಂಬಿಕೆ ಇಡಿ.

ಪ್ರೀತಿ, ಪ್ರೇಮ, ಮದುವೆ: ಪ್ರೀತಿ-ಪ್ರೇಮದ ವಿಷಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುತ್ತದೆ. ರೋಮ್ಯಾನ್ಸ್ ಅವಕಾಶಗಳು ಹೆಚ್ಚಾಗಿವೆ. ಪ್ರೀತಿಯ ವಿಚಾರವಾಗಿ ನಿಮಗಿರುವ ಎಲ್ಲ ನಿರೀಕ್ಷೆಗಳು ಸೆ.19ರ ನಂತರ ಈಡೇರುವ ಸಾಧ್ಯತೆಗಳಿವೆ. ಮದುವೆಯಾದ ಜೋಡಿಗಳ ಮಧ್ಯೆಯೂ ಸಮಾಧಾನ ನೆಲೆಸುತ್ತದೆ. ಗಂಡ ಅಥವಾ ಹೆಂಡತಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ, ಎಚ್ಚರವಾಗಿರಿ. ಇದರಷ್ಟೇ ಮುಖ್ಯವಾಗಿ, 18ರ ನಂತರ ವಾಗ್ವಾದ ಬೇಡ.[ಮಿಥುನ : ಎಷ್ಟೇ ಕಷ್ಟ ಬಂದರೂ ನಿಷ್ಠೆಯಿಂದ ಕೆಲಸ ಮಾಡಿ]

ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ತುಂಬ ಸಕಾರಾತ್ಮಕವಾದ ತಿಂಗಳಿದು. ಓದಿನ ಬಗ್ಗೆ ಆಸಕ್ತಿ ಜಾಸ್ತಿಯಾಗುತ್ತದೆ. ಫಲಿತಾಂಶವೂ ಚೆನ್ನಾಗಿದೆ. ಗೆಳೆಯ-ಗೆಳತಿಯರ ಜತೆಗೂ ಉತ್ತಮವಾದ ಸಮಯ ಕಳೆಯಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+