ಕರ್ಕಾಟಕ ರಾಶಿ: ಕಷ್ಟಪಟ್ಟ ಕೆಲಸ ಮಾಡಿ; ಸುಸ್ತಾಗದಂತೆ ನೋಡಿಕೊಳ್ಳಿ
ಕೌಟುಂಬಿಕ ವಿಚಾರ, ಸೋದರ-ಸೋದರಿಯರ ವಿಷಯ, ಮಕ್ಕಳಿಗೆ ಸಂಬಂಧಪಟ್ಟ ಸಂಗತಿಗಳು ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ನಿಮ್ಮ ಶಕ್ತಿಯೆಲ್ಲ ಈ ವಿಷಯಕ್ಕೆ ಮೀಸಲಾಗುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡುವುದಕ್ಕೇನೋ ಸಿದ್ಧರಿದ್ದೀರಿ. ಆದರೆ ಅಷ್ಟು ಶಕ್ತಿ ನಿಮ್ಮಲ್ಲಿ ಉಳಿಯುತ್ತದೆಯೇ ಎಂಬುದು ಪ್ರಶ್ನೆ. ಸಣ್ಣದೊಂದು ಪ್ರವಾಸ ಮಾಡುವ ಸಾಧ್ಯತೆ ಇದೆ. ಮುಖ್ಯವಾದ ಪರೀಕ್ಷೆಗಳನ್ನು ತೆಗೆದುಕೊಂಡವರು ಎಚ್ಚರವಾಗಿರಿ.
ಅಣ್ಣ-ತಮ್ಮ, ಅಕ್ಕ-ತಂಗಿಯರ ಜತೆಗಿನ ಬಾಂಧವ್ಯ ಮತ್ತೂ ಚೆನ್ನಾಗುತ್ತದೆ. ಅದರಿಂದ ಅನುಕೂಲಗಳನ್ನೂ ಪಡೆಯುತ್ತೀರಿ. ಮನಸ್ಸಿಗೆ ಸಮಾಧಾನ ತರುವ ಕೆಲವು ಕೆಲಸಗಳನ್ನು ಮಾಡುತ್ತೀರಿ.[ಕರ್ಕ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ವೃತ್ತಿ: ಮೊದಲ ಹದಿನೈದು ದಿನ ಕೆಲಸದಲ್ಲಿ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ. ಕೆಲಸದಲ್ಲಿ ಬದಲಾವಣೆಗಳು ಕೂಡ ಸಾಧ್ಯವಿದೆ. ಸೆ.18ರ ನಂತರ ಸಕಾರಾತ್ಮಕ ಬದಲಾವಣೆಗಳು ಕಾಣುತ್ತವೆ. ನಿಮ್ಮ ಸೀನಿಯರ್ಸ್ ಬೆಂಬಲಕ್ಕೆ ನಿಲ್ಲುತ್ತಾರೆ, ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಸಹೋದ್ಯೋಗಿಗಳ ನೆರವು ಸಹ ದೊರೆಯುತ್ತದೆ.
ಪ್ರೀತಿ, ಪ್ರೇಮ-ಮದುವೆ: ಪ್ರೇಮ ಜೀವನದಲ್ಲಿ ತೊಂದರೆ ಎದುರಿಸಬೇಕಾದೀತು. ಗೊಂದಲ-ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಅನುಮಾನಗಳು ಹುಟ್ಟಿಕೊಂಡರೆ ಅದನ್ನು ನಿವಾರಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ. ಗೆಳೆಯ ಅಥವಾ ಗೆಳತಿಯಿಂದ ತುಂಬ ನಿರೀಕ್ಷೆ ಬೇಡ. ಇನ್ನು ವಿವಾಹಿತರಿಗೆ ಸೆ.18ರ ನಂತರ ಒಳ್ಳೆ ಕಾಲ. ಯಾವುದೋ ಒಂದು ವಿಷಯ ಕೊರೆಯುತ್ತಿರುತ್ತದೆ, ಚಿಂತೆಗೀಡು ಮಾಡುತ್ತದೆ ಎಚ್ಚರ.[ಗುರುಫಲ : ಕರ್ಕ ರಾಶಿಗೆ ಹಣಕಾಸಿನ ತೊಂದರೆ, ಎಚ್ಚರ!]
ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಏಕಾಗ್ರತೆ ಕಡಿಮೆಯಾಗುತ್ತಿದೆ ಎಂಬುದು ಚಿಂತೆಗೆ ಕಾರಣವಾಗುತ್ತದೆ. ಈ ಎಲ್ಲ ಸೇರಿ ಬೇಸರಕ್ಕೆ ಕಾರಣವಾಗುತ್ತದೆ. ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಆದರೆ ಆರೋಗ್ಯದಲ್ಲಿ ತುಂಬ ಸುಧಾರಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications