ಸಿಂಹ ರಾಶಿ: ರಹಸ್ಯಗಳನ್ನ ಕಾಪಾಡಿಕೊಳ್ಳಿ, ಗಾಸಿಪ್ ಬೇಡ
ಈ ತಿಂಗಳಲ್ಲಿ ಉತ್ತಮವಾದ ಫಾರ್ಮ್ ನಲ್ಲಿದ್ದೀರಿ. ಖುಷಿಯಾಗಿ, ಸಂತುಷ್ಟರಾಗಿ ಹಿಂದೆಂದಿಗಿಂತ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳುತ್ತೀರಿ. ಒಟ್ಟಾರೆ ನಿಮಗಿದು ಸಕಾರಾತ್ಮಕವಾದ ತಿಂಗಳು. ಆದರೆ ನಿಮ್ಮ ಮೇಲೆ ಕೆಲ ಆಪಾದನೆಗಳು ಬರಬಹುದು, ಹುಷಾರಾಗಿರಿ. ಅಥವಾ ನೀವಾಗಿಯೇ ಹಗರಣಗಳಲ್ಲಿ ಸಿಲುಕುವ ಸಾಧ್ಯತೆಗಳೂ ಇವೆ. ಅದ್ದರಿಂದ ನಿಮ್ಮ ರಹಸ್ಯಗಳು ಹಾಗೂ ಗಾಸಿಪ್ ಗಳ ಬಗ್ಗೆ ಎಚ್ಚರದಿಂದ ಇದ್ದರೆ ಒಳ್ಳೆಯದು.
ನಿಮಗೆ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ. ನಿಮ್ಮ ಏಕಾಗ್ರತೆಯೇ ಕೈ ಕೊಡುತ್ತದೆ. ಸೆ.16ರ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತದೆ. ಆ ನಂತರ ನಿಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ, ಬೇರೆಯವರಿಂದ ಶಹಭಾಷ್ ಗಿರಿ ಎಲ್ಲ ದೊರೆಯುತ್ತದೆ.[ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ!]

ವೃತ್ತಿ: ನಿಮ್ಮಿಂದ ಮಾಡಲು ಸಾಧ್ಯವಿಲ್ಲ ಎನಿಸಿದ ಕೆಲಸಕ್ಕೆ ಹೂಂ ಅನ್ನದಿರುವುದು ಒಳ್ಳೆಯದು. ನಿಮ್ಮ ನಿರ್ಧಾರಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸೀನಿಯರ್ಸ್, ಬಾಸ್, ಸಹೋದ್ಯೋಗಿಗಳು ಯಾರೂ ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಜತೆಗೆ ನೀವು ಆಡುವ ಮಾತೇ ಬೇರೆ, ಅದು ಧ್ವನಿಸುವುದೇ ಬೇರೆ ಎಂಬಂತಾಗುತ್ತದೆ. ನಿಮಗೆ ಗೊಂದಲ ಇರುವ ವಿಚಾರಗಳ ಬಗ್ಗೆ ಮಾತನಾಡುವಾಗ ವಿನಯವಂತಿಕೆ ಇರಲಿ. 22ರ ನಂತರ ಪರಿಸ್ಥಿತಿ ಸುಧಾರಿಸುತ್ತದೆ.
ಪ್ರೀತಿ, ಪ್ರೇಮ-ಮದುವೆ: ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ತುಂಬ ಅನುಕೂಲಕರವಾದ ಸಮಯವಲ್ಲ. ಆದರೆ ಭರವಸೆ ಕಳೆದುಕೊಳ್ಳಬೇಡಿ. ನಿಮ್ಮ ಗೆಳೆಯ ಅಥವಾ ಗೆಳತಿಯಿಂದ ಯಾವುದೇ ವಿಷಯ ಮುಚ್ಚಿಡಬೇಡಿ. ವಿವಾಹಿತರಿಗೆ ಭಿನ್ನಾಭಿಪ್ರಾಯ, ಅದರ ಮುಂದುವರಿದ ಭಾಗವಾಗಿ ಜಗಳದ ಸಾಧ್ಯತೆ ಇದೆ. 18ರ ನಂತರ ದಂಪತಿಯ ಪೈಕಿ ಒಬ್ಬರಿಗೆ ಅನುಕೂಲ-ಲಾಭವಾಗುವ ಸಾಧ್ಯತೆ ಇದೆ.[ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಇದು ತುಂಬ ಒಳ್ಳೆ ತಿಂಗಳು. ಈ ಹಿಂದಿಗಿಂತಲೂ ಕೀಟಲೆ ಜಾಸ್ತಿಯಾಗುತ್ತದೆ. ಸ್ವಲ್ಪ ಮಟ್ಟಿಗೆ ಸಂಯಮ, ಸಮಾಧಾನದಿಂದ ಇರುವುದು ಕೂಡ ಅಷ್ಟೇ ಮುಖ್ಯ. ಮಕ್ಕಳ ಜತೆಗೆ ಮಾತನಾಡುವಾಗ, ಬುದ್ಧಿ ಹೇಳುವಾಗ ಕೋಪ ಮಾಡಿಕೊಳ್ಳಬೇಡಿ. ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು.











Click it and Unblock the Notifications